'ಕರ್ನಾಟಕದ ಕ್ರಶ್' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ರಶ್ಮಿಕಾ ಮಂದಣ್ಣ ಅವರು ಈಗ 'ನ್ಯಾಷನಲ್ ಕ್ರಶ್' ಎಂಬಷ್ಟು ಬೆಳೆದಿರುವುದು ಸಿಕ್ಕ ಸಾಧನೆಯೇನೂ ಅಲ್ಲ. ಮುಂದೆ 'ಇಂಟರ್‌ನ್ಯಾಷನಲ್ ಕ್ರಶ್' ಅಗಿ ರಶ್ಮಿಕಾ ಬೆಳದರೂ ಅಚ್ಚರಿಯೇನಿಲ್ಲ. ಟ್ರೋಲರ್ಸ್‌ಗಳೂ ಸೈಲೆಂಟ್ ಆಗುವಷ್ಟು ಬೆಳೆದಿದ್ದಾರೆ ರಶ್ಮಿಕಾ!
ಟ್ರೋಲರ್ಸ್‌ಗಳೂ ಬಾಯಿಮುಚ್ಚಿಕೊಂಡಿರುವಷ್ಟು ಬೆಳೆದ ನಟಿ ರಶ್ಮಿಕಾ ಮಂದಣ್ಣ!
ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಈಗ ಯಾರಿಗೂ ಹೇಳೋದೇ ಬೇಡ. ಅವರೀಗ ಇಡೀ ಇಂಡಿಯಾ ಮೀಡಿಯಾ ಇಡೀ ಜಗತ್ತಿನ ಹೆಚ್ಚಿನ ಜನರಿಗೆ ಚಿರಪರಿಚಿತರು. ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಅವರು ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿ 'ನ್ಯಾಷನಲ್ ಕ್ರಶ್' ಆಗಿ ಬೆಳೆದಿದ್ದಾರೆ. ಸದ್ಯ ಅವರು ಹೆಚ್ಚಾಗಿ ಬಾಲಿವುಡ್ ಸಿನಿಮಾಗಳ ಅವಕಾಶಗಳನ್ನೇ ಪಡೆಯುತ್ತಿದ್ದು ಆ ಸಾಲಿಗೆ ಇತ್ತೀಚಿನ 'ಥಮ' ಕೂಡ ಸೇರಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಹೃತಿಕ್ ರೋಶನ್ ಜೋಡಿಯಾಗಿಯೂ ನಟಿಸುತ್ತಿದ್ದಾರೆ.
ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಬಹುಮುಖ ನಟನೆಗೆ ಹೆಸರುವಾಸಿಯಾದ ರಶ್ಮಿಕಾ ಮಂದಣ್ಣ, ಅಭಿಮಾನಿಗಳು ಮತ್ತೆ ಮತ್ತೆ ನೋಡಲು ಇಷ್ಟಪಡುವ ಹಲವಾರು ಸ್ಮರಣೀಯ ಚಿತ್ರಗಳನ್ನು ನೀಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿಗಳಿಂದ ಹಿಡಿದು ಗಂಭೀರ ನಾಟಕದಂತಹ ಸಿನಿಮಾಗಳವರೆಗೆ, ಅವರ ವೃತ್ತಿಜೀವನವು ಹಲವು ವೈವಿಧ್ಯಮಯ ಪಾತ್ರಗಳಿಂದ ತುಂಬಿದೆ.
'ಕರ್ನಾಟಕದ ಕ್ರಶ್' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ರಶ್ಮಿಕಾ ಮಂದಣ್ಣ ಅವರು ಈಗ 'ನ್ಯಾಷನಲ್ ಕ್ರಶ್' ಎಂಬಷ್ಟು ಬೆಳೆದಿರುವುದು ಸಿಕ್ಕ ಸಾಧನೆಯೇನೂ ಅಲ್ಲ. ಮುಂದೆ 'ಇಂಟರ್‌ನ್ಯಾಷನಲ್ ಕ್ರಶ್' ಅಗಿ ರಶ್ಮಿಕಾ ಬೆಳದರೂ ಅಚ್ಚರಿಯೇನಿಲ್ಲ. ಭಾರತೀಯ ಚಿತ್ರರಂಗದ ಭರವಸೆಯ ತಾರೆಯರಲ್ಲಿ ಒಬ್ಬರಾಗಿ ಈಗ ತಮ್ಮನ್ನು ತಾವು ರಶ್ಮಿಕಾ ಗುರುತಿಸಿಕೊಂಡಿದ್ದಾರೆ.
ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿನ ವಿವಿಧ ಸಂವೇದನಾಶೀಲ ಚಿತ್ರಗಳಿಗೆ ಸಂಬಂಧಿಸಿದಂತೆ ರಶ್ಮಿಕಾ ಮಂದಣ್ಣ ತಮ್ಮ ಅಭಿವ್ಯಕ್ತಿಶೀಲ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಜನಪ್ರಿಯರಾಗಿದ್ದಾರೆ. 'ಥಮ' ಟ್ರೈಲರ್ ರಿಲೀಸ್ ಆದ ಕ್ಷಣದಿಂದ, ಅಭಿಮಾನಿಗಳು ಈ ನಟಿಯ ಹಿಂದಿನ ಕೃತಿಗಳನ್ನು ಮರುವೀಕ್ಷಿಸಲು ಪ್ರಾರಂಭಿಸಿದ್ದಾರೆ, ಅವರ ಬಹುಮುಖ ಪ್ರತಿಭೆಯನ್ನು ಹಾಗೂ ಸೌಂದರ್ಯವನ್ನು ಬೆರಗುಗಣ್ಣಿನಿಂದ ನೋಡತೊಡಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೆ ನೋಡಬೇಕಾದ ಅತ್ಯುತ್ತಮ ಸಿನಿಮಾಗಳು:
1. ಗೀತ ಗೋವಿಂದಂ (2018)
ಈ ರೊಮ್ಯಾಂಟಿಕ್ ಕಾಮಿಡಿ ಮೂಲಕವೇ ರಶ್ಮಿಕಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ಬಲವಾದ ಇಚ್ಛಾಶಕ್ತಿಯುಳ್ಳ ಮತ್ತು ಸ್ವತಂತ್ರ ಮನೋಭಾವದ ಗೀತಾ ಪಾತ್ರದಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಅದ್ಭುತವಾಗಿತ್ತು. ಅವರ ಸಹಜ ಸೌಂದರ್ಯ, ಕಾಮಿಕ್ ಟೈಮಿಂಗ್ ಮತ್ತು ಭಾವನಾತ್ಮಕ ಆಳವಾದ ಅಭಿನಯದಿಂದಾಗಿ ಈ ಚಿತ್ರವು ಸೂಪರ್‌ಹಿಟ್ ಆಯಿತು ಮತ್ತು ಸಾರ್ವಜನಿಕ ಮನ್ನಣೆಯನ್ನು ಗಳಿಸಿತು.
2. ಡಿಯರ್ ಕಾಮ್ರೇಡ್ (2019)
ಈ ಭಾವನಾತ್ಮಕ ನಾಟಕದಲ್ಲಿ, ರಶ್ಮಿಕಾ ಅವರು ಪ್ರೀತಿ, ದ್ರೋಹ ಮತ್ತು ಜೀವನವನ್ನು ಎದುರಿಸುವ ಕ್ರಿಕೆಟರ್ 'ಲಿಲ್ಲಿ' ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿನ ಅವರ ಪಾತ್ರವು ಹಿಂದಿನ ಎಲ್ಲಾ ಪಾತ್ರಗಳ ಅಭಿನಯಗಳಲ್ಲಿ ಅತ್ಯಂತ ಸ್ಪಷ್ಟ ಮತ್ತು ಸೂಕ್ಷ್ಮವಾಗಿತ್ತು, ಸಂಕೀರ್ಣ ಭಾವನಾತ್ಮಕ ದೃಶ್ಯಗಳನ್ನು ಪ್ರೇಕ್ಷಕರಿಗೆ ಸುಲಭವಾಗಿ ತಲುಪಿಸುವಲ್ಲಿ ನಟಿ ರಶ್ಮಿಕಾ ಮಂದಣ್ಣ ಯಶಸ್ವಿಯಾದರು.
3. ಪುಷ್ಪ: ದಿ ರೈಸ್ (2021)
ಈ ಬೃಹತ್ ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್‌ನಲ್ಲಿ ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿದ ರಶ್ಮಿಕಾ, ಆಕ್ಷನ್ ಮತ್ತು ಸೆಂಟಿಮೆಂಟ್ ಎರಡನ್ನೂ ಒಂದೇ ಫ್ರೇಮ್‌ನಲ್ಲಿ ಸಂಯೋಜಿಸಿ, ಅವುಗಳ ನಡುವೆ ಸಲೀಸಾಗಿ ಸಾಗಿದರು. ಅವರ ಪಾತ್ರ ನಿರೂಪಣೆಯು ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿತು, ಇದು ಪ್ರೇಕ್ಷಕರ ಮೇಲೆ ಭಾವನಾತ್ಮಕ ಪರಿಣಾಮ ಬೀರಲು ಆಧಾರವಾಯಿತು.
4. ಅನಿಮಲ್ (2023)
ಈ ಆಕ್ಷನ್ ಡ್ರಾಮಾದಲ್ಲಿ, ರಶ್ಮಿಕಾ ಅತ್ಯಂತ ಕ್ರಿಯಾತ್ಮಕ ಕಥಾಹಂದರವನ್ನು ಹಾಗೂ ಪಾತ್ರ ಪೋಷಣೆ ಹೊಂದಿದ್ದರು. ಬೆರಗುಗೊಳಿಸುವ ಶಾಂತತೆ ಮತ್ತು ಶಕ್ತಿಯುತವಾದ ಪಾತ್ರದಿಂದ ಆ ಚಿತ್ರಕ್ಕೆ ಭಾರೀ ಘನತೆ ತಂದರು. ಅವರ ಅಭಿನಯವು ಚಿತ್ರಕ್ಕೆ ಭಾವನಾತ್ಮಕ ಸಮತೋಲನವನ್ನು ಸೇರಿಸಿತು, ಹೊಂದಾಣಿಕೆ ಮತ್ತು ಶಕ್ತಿಯ ಅಗತ್ಯವಿರುವ ಕಠಿಣ ಪಾತ್ರಗಳನ್ನು ತೆಗೆದುಕೊಳ್ಳುವಲ್ಲಿ ಅವರ ಸಾಮರ್ಥ್ಯವನ್ನು ಸಾಬೀತುಪಡಿಸಿತು.
5. ಥಮ (2025)
ಮುಂದೆ ಬಿಡುಗಡೆಯಾಗಲಿರುವ 'ಥಮ'ದಲ್ಲಿ, ನಟಿ ರಶ್ಮಿಕಾ ಅವರು ಈ ಹಿಂದಿನ ಎಲ್ಲಾ ಪಾತ್ರಗಳಿಗಿಂತ ತುಂಬಾ ಭಿನ್ನ ಹಾಗೂ ವಿಶೇಷ ಪಾತ್ರವನ್ನು ಮಾಡಿದ್ದಾರೆ. ಈ ಸಂಗತಿಯನ್ನು ಟ್ರೈಲರ್ ಹಾಗೂ ಟೀಸರ್ ಸಾಂಗ್ ಮೂಲಕವೇ ಗುರುತಿಸಬಹುದು. ಅವರು ಹಿಂದೆಂದಿಗಿಂತಲೂ ಹೆಚ್ಚಾಗಿ, ಈಗ ನಟಿಯಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಶುರುಮಾಡಿದ್ದಾರೆ ಎನ್ನಬಹುದು.
6. ರಶ್ಮಿಕಾ ಮಂದಣ್ಣ ನಟನೆಯ ಗಮನಾರ್ಹ ಚಿತ್ರಗಳು
ಕನ್ನಡದ ಕಿರಿಕ್ ಪಾರ್ಟಿ (2016) ಚಲೋ (2018) ಮತ್ತು ಸರಿಲೇರು ನೀಕೆವ್ವರು (2020) ನಂತಹ ಸಾಕಷ್ಟು ಹಿಟ್ ಸಿನಿಮಾಗಳೂ ಕೂಡ ರಶ್ಮಿಕಾ ಲಿಸ್ಟ್‌ನಲ್ಲಿ ಇವೆ. ಇವೆಲ್ಲಾ ನಟಿ ರಶ್ಮಿಕಾ ಹಿಡಿತ ಸಾಧಿಸಿರುವ ಪ್ರಾಯೋಗಿಕ ಚಿತ್ರಗಳ ಪಟ್ಟಿಗೆ ಸೇರುತ್ತವೆ.
ರೊಮ್ಯಾಂಟಿಕ್ ಕಾಮಿಡಿಗಳಿಂದ ಹಿಡಿದು ಅತ್ಯಂತ ತೀವ್ರವಾದ ನಾಟಕ ಬೇಸ್ಡ್ ಕಥೆಗಳವರೆಗೆ, ಪ್ರತಿಯೊಂದು ಪಾತ್ರವೂ ಕೂಡ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಈ ಮೂಲಕ ರಶ್ಮಿಕಾ ಮಂದಣ್ಣ ಅವರು ತಾವು ಲಕ್ಕೀ ಹೀರೋಯಿನ್ ಮಾತ್ರವಲ್ಲ, ಪ್ರತಿಭಾನ್ವಿತ ನಟಿ ಎಂಬುದನ್ನು ಕೂಡ ಸಾಬೀತು ಪಡಿಸಿದ್ದಾರೆ. ಬಾಲಿವುಡ್‌ನಲ್ಲಿ ಇಷ್ಟೊಂದು ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯದಲ್ಲೇ ಹಾಲಿವುಡ್‌ಗೆ ಹಾರಿದರೂ ಆಶ್ಚರ್ಯವೇನೂ ಇಲ್ಲ ಎನ್ನಲಾಗುತ್ತಿದೆ.
