'ಲಹರಿ ವೇಲು' ಅವರು ಇದೀಗ 'ಶರನ್ನವರಾತ್ರಿ'ಯ ಸಮಯದಲ್ಲಿ ತಮಗಾಗಿರುವ ವಿಶೇಷವಾದ ಹಾಗೂ ಅಪಾರ ಸಂತಸವನ್ನು ಹಂಚಿಕೊಂಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ , ಎಸ್ ಜಾನಕಿ, ಲಹರಿ ಸಂಸ್ಥೆ ಹಾಗೂ ತಮ್ಮ ಬಗ್ಗೆ ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ.
ವೈರಲ್ ಆಯ್ತು ಲಹರಿ ವೇಲು ವಿಡಿಯೋ!
ಕನ್ನಡದ ಸಂಗೀತ ಹಾಗೂ ಮನರಂಜನಾ ಉದ್ಯಮದಲ್ಲಿ ಲಹರಿ ಸಂಸ್ಥೆಯ ವೇಲು (Lahari Velu) ಅವರದು ಮರೆಯಲಾಗದ ಹೆಸರು. 'ಲಹರಿ ವೇಲು ಎಂದೇ ಖ್ಯಾತಿ ಪಡೆದಿರುವ ಅವರು ಇದೀಗ 'ಶರನ್ನವರಾತ್ರಿ'ಯ ಸಮಯದಲ್ಲಿ ಹಬ್ಬದ ಶುಭಾಶಯ ತಿಳಿಸುತ್ತ, ತಮಗಾಗಿರುವ ವಿಶೇಷವಾದ ಹಾಗೂ ಅಪಾರ ಸಂತಸವನ್ನು ಹಂಚಿಕೊಂಡಿದ್ದಾರೆ. ಲಹರಿ ವೇಲು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi), ಎಸ್ ಜಾನಕಿ (S Janaki), ಲಹರಿ ಸಂಸ್ಥೆ ಹಾಗೂ ತಮ್ಮ ಬಗ್ಗೆ ಬರೆದುಕೊಂಡಿದ್ದಾರೆ. ಹಾಗಿದ್ದರೆ ಅದೇನು ಅಂತ ತಿಳಿಯಲು ಮುಂದೆ ನೋಡಿ..
ಎತ್ತಣ ಮಾಮರ ಎತ್ತಣ ಕೋಗಿಲೆ?
ಹೌದು, ಲಹರಿ ವೇಲು ಅವರ ಸಂತಸಕ್ಕೆ ಕಾರಣವೇ ಇದು.. ಅಗಿದ್ದಿಷ್ಟು.. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರಿಗೆ ಶರನ್ನವರಾತ್ರಿ ಶುಭಾಶಯ ತಿಳಿಸಿ ತಮ್ಮ ಎಕ್ಸ್ (X) ಖಾತೆಯಲ್ಲಿ ಶುಭಾಶಯವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಕನ್ನಡಿಗರಿಗೆ ತಮ್ಮ ಹೃತ್ಪೂರ್ವಕ ಶುಭಾಶಯ ತಿಳಿಸಲು ಭಾರತದ ಹಿರಿಯ ಖ್ಯಾತ ಗಾಯಕಿ ಎಸ್ ಜಾನಕಿಯವರು ಹಾಡಿರುವ 'ಕಮಲದಾ ಮೊಗದೋಳೆ..' ಹಾಡನ್ನು ಬಳಸಿಕೊಂಡಿದ್ದಾರೆ. ಈ ಹಾಡು ಕನ್ನಡದ ಎಂಆರ್‌ಟಿ (MRT) ಸಂಸ್ಥೆಯದು.
ಇದೀಗ 50 ವರ್ಷದ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿರುವ ಲಹರಿ ವೇಲು ಹಾಗೂ ಲಹರಿ ಸಂಸ್ಥೆಗೆ ಈ ಸಂಗತಿ ಭಾರೀ ಖುಷಿ ಕೊಟ್ಟಿದೆ. ದೇಶದ ಪ್ರಧಾನಿ ಮಂತ್ರಿ ತಮ್ಮ ಸಂಸ್ಥೆಯ ಹಾಡಿನ ಮೂಲಕ ಕನ್ನಡಿಗರಿಗೆ ಹಾರೈಸಿರುವುದನ್ನು ಲಹರಿ ವೇಲು ಖುಷಿ ಹಾಗೂ ಕೃತಜ್ಞತೆಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಆ ಬಗ್ಗೆ ಲಹರಿ ವೇಲು ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಗೂ ಮಾಧ್ಯಮಕ್ಕೆ ಸ್ವಂತ ವಿಡಿಯೋ ಕಳಿಸಿಕೊಡುವ ಮೂಲಕ ತಮ್ಮ ಅಪಾರ ಖುಷಿಯನ್ನು ಈ ಮುಂದಿನಂತೆ ಹಂಚಿಕೊಂಡಿದ್ದಾರೆ...
ಲಹರಿ - MRT ಮ್ಯೂಸಿಕ್ ಸಂಸ್ಥೆಯು 50 ವರುಷಗಳ ಸಂತಸದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಹೊಸ್ತಿಲಲ್ಲಿ ಮತ್ತೊಂದು ಸಿಹಿ ಸುದ್ದಿ...
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಮ್ಮ MRT ಸಂಸ್ಥೆಯಲ್ಲಿರುವ ಎಸ್ ಜಾನಕಿ ಅವರು ಹಾಡಿರುವ ಕಮಲದ ಮೊಗದೋಳೆ ಹಾಡಿಗೆ ಮನಸೋತು ತಮ್ಮ x ಖಾತೆಯಲ್ಲಿ ಹಂಚಿಕೊಂಡು ದೇಶದ ಜನತೆಗೆ ನವರಾತ್ರಿಯ ಶುಭಾಶಯವನ್ನು ಕೋರಿದ್ದಾರೆ.
ಲಹರಿ MRT ಮ್ಯೂಸಿಕ್ ಸಂಸ್ಥೆಗೆ ದೇಶದ ಮಾನ್ಯ ಪ್ರಧಾನಿಯವರು ಗುರುತಿಸಿರುವುದು ಹಿರಿಮೆ!
ನಾಡು ನುಡಿ ಸಂಸ್ಕೃತಿ ಮತ್ತು ಕಲೆಗಳನ್ನು ,ಕಲಾವಿದರನ್ನೂ ಸದಾ ಪೋಷಿಸುತ್ತಿರುವ ಲಹರಿ MRT ಮ್ಯೂಸಿಕ್ ಸಂಸ್ಥೆಗೆ ದೇಶದ ಮಾನ್ಯ ಪ್ರಧಾನಿಯವರು ಗುರುತಿಸಿರುವುದು ಹಿರಿಮೆ.
ವಿಶ್ವಗುರು ಎಂದೇ ಪ್ರಖ್ಯಾತಿಯಾಗಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಮ್ಮ ಕನ್ನಡದ MRT Music ಸಂಸ್ಥೆಯ ಹಾಡನ್ನು ಮೆಚ್ಚಿ ಭಕ್ತಿಪೂರ್ವಕವಾದ ಸಂದೇಶವನ್ನು ಇಡೀ ದೇಶಕ್ಕೆ ನೀಡಿರುವುದು ನಮ್ಮ ಕನ್ನಡದ ಸಂಸ್ಥೆಗೆ ಹಾಗೂ ಕನ್ನಡದ ಜನತೆಯ ಹಿರಿಮೆ ಕೂಡ ಹೌದು.

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮೂಲಕ ನವರಾತ್ರಿಯ ಶುಭಾಶಯ!
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಲಹರಿ MRT ಮ್ಯೂಸಿಕ್ ಸಂಸ್ಥೆ ಈ ಮೂಲಕ ನವರಾತ್ರಿಯ ಶುಭಾಶಯವನ್ನು ಕೋರುತ್ತಿದ್ದೇವೆ.
ದೇವಿಯು ಪ್ರಧಾನಿಯರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ, ಸ್ಥೈರ್ಯ ಆರೋಗ್ಯವನ್ನು ಸದಾ ಕಾಲ ನೀಡಿ , ದೇಶದ ಸೇವೆಗೆ ,ರಕ್ಷಣೆಗೆ, ಶತ್ರುಗಳ ಸಂಹಾರಕ್ಕೆ ತಾಯಿ ಚಾಮುಂಡಿಯ ಶ್ರೀರಕ್ಷೆ ಸದಾ ಅವರ ಜೊತೆಯಿರಲು ಎಂದು ಹಾರೈಸುತ್ತೇವೆ.
ಇಂತಿ ನಿಮ್ಮ ಪ್ರೀತಿಯ
ಲಹರಿ ವೇಲು.
ನಿರ್ದೇಶಕರು
ಲಹರಿ -MRT ಮ್ಯೂಸಿಕ್ ಸಂಸ್ಥೆ.
ಎಂದು ಲಹರಿ ವೇಲು ಅವರು ತಮ್ಮ ಖುಷಿಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡು, ಹಿರಿಯ ಗಾಯಕಿ ಎಸ್. ಜಾನಕಿ ಹಾಗೂ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.
