- Home
- Entertainment
- News
- ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ ದಂಪತಿಗೆ ಗಂಡು ಮಗು ಜನನ; ಪ್ರಿಯಾಂಕಾ ಪ್ರತಿಕ್ರಿಯೆಗೆ ಕಾಯುತ್ತಿರುವ ಫ್ಯಾನ್ಸ್
ಪರಿಣಿತಿ ಚೋಪ್ರಾ, ರಾಘವ್ ಛಡ್ಡಾ ದಂಪತಿಗೆ ಗಂಡು ಮಗು ಜನನ; ಪ್ರಿಯಾಂಕಾ ಪ್ರತಿಕ್ರಿಯೆಗೆ ಕಾಯುತ್ತಿರುವ ಫ್ಯಾನ್ಸ್
Parineeti Chopra-Raghav Chadha: ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಪರಿ ಮತ್ತು ರಾಘವ್ ಅವರನ್ನು ಅಭಿನಂದಿಸುತ್ತಿದ್ದಾರೆ.

ಬಾಲಿವುಡ್‌ನ ನೆಚ್ಚಿನ ಜೋಡಿ
ಬಾಲಿವುಡ್ ಜಗತ್ತಿನ ನೆಚ್ಚಿನ ಜೋಡಿಗಳಲ್ಲಿ ಒಬ್ಬರಾದ ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಸಕ್ರಿಯವಾಗಿರುವ ಈ ಜೋಡಿ, ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ತಿಳಿಸಿದ್ದಾರೆ.
ವಿಶ್ ಮಾಡಿದ ಫ್ಯಾನ್ಸ್
ಹೌದು, ಈ ದಂಪತಿ ಗಂಡು ಮಗುವಿಗೆ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಪರಿ ಮತ್ತು ರಾಘವ್ ಅವರನ್ನು ಅಭಿನಂದಿಸುತ್ತಿದ್ದಾರೆ.
ದೆಹಲಿ ಆಸ್ಪತ್ರೆಗೆ ದಾಖಲು
ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ದಂಪತಿಯನ್ನು ಅಭಿನಂದಿಸುತ್ತಿರುವುದು ಕಂಡುಬಂದಿದೆ. ಪರಿ ಅವರನ್ನು ಇಂದು ಬೆಳಗ್ಗೆ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟಿ ಕೆಲವು ದಿನಗಳ ಹಿಂದೆ ಮುಂಬೈನಿಂದ ದೆಹಲಿಗೆ ತೆರಳಿದರು.
ದೊಡ್ಡಮ್ಮನಾದ ಪ್ರಿಯಾಂಕಾ ಚೋಪ್ರಾ
ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದಾರೆ, ಏಕೆಂದರೆ ಅವರೀಗ ದೊಡ್ಡಮ್ಮನಾಗುತ್ತಿದ್ದಾರೆ. ಅಲ್ಲಿಗೆ ಪ್ರಿಯಾಂಕಾ ಅವರ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನ್ಸ್ ಜೊತೆ ಆಟವಾಡಲು ಈಗ ಕಿರಿಯ ಸಹೋದರ ಬಂದಾಯ್ತು.
2023 ರಲ್ಲಿ ಅದ್ದೂರಿಯಾಗಿ ನಡೆದ ವಿವಾಹ
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹವು 2023 ರಲ್ಲಿ ಅದ್ದೂರಿಯಾಗಿ ನಡೆಯಿತು. ಮದುವೆಯಾಗಿ ಮೂರು ವರ್ಷಗಳ ನಂತರ ಈಗ ಇವರು ಪೋಷಕರಾಗಿದ್ದಾರೆ.
ಮಗುವನ್ನು ನೋಡಲು ಎಲ್ಲರೂ ಉತ್ಸುಕ
ಪರಿಣಿತಿ ಚೋಪ್ರಾ ಗರ್ಭಿಣಿಯಾದ ನಂತರ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರೂ, ನಟಿ ತಮ್ಮ ಅಭಿಮಾನಿಗಳಿಗಾಗಿ ಯೂಟ್ಯೂಬ್ ಚಾನೆಲ್ ಅನ್ನು ಕ್ರಿಯೇಟ್ ಮಾಡಿದರು. ಅವರ ಅಭಿಮಾನಿಗಳ ಸಂತೋಷಕ್ಕಾಗಿ ಪರಿಣಿತಿ ಚೋಪ್ರಾ ವ್ಲಾಗ್‌ಗಳನ್ನು ಮಾಡಲು ಪ್ರಾರಂಭಿಸಿದರು. ಸದ್ಯ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಗಂಡು ಮಗುವನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ.