'ಶಾರುಖ್ ಖಾನ್ ಅವರು ತಮಾಷೆಗೆ ಕೂಡ ಮದುವೆಯಾಗಿರುವ ಒಬ್ಬರು ನಟಿಗೆ ಹಾಗೆ ಹೇಳಿರುವುದು ಸಮಂಜಸವಲ್ಲ' ಎಂದಿದ್ದಾರೆ. ಅಷ್ಟಕ್ಕೂ ನಟಿಯೊಬ್ಬರಿಗೆ ನೀವು ಪ್ರಗ್ನಂಟಾ ಎಂದು ಕೇಳಿರುವುದೇ ಸೂಕ್ತವಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ನಾನು ಅದೊಂದು ವಿಷಯ ಕೇಳಿಲಿಕ್ಕೆ ಬಯಸ್ತೀನಿ!
'ಕಲ್ ಹೋ ನ ಹೋ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಹಾಗೂ ನಟಿ ಪ್ರೀತಿ ಜಿಂಟಾ (Preity Zinta) ಅವರಿಬ್ಬರಿಗೆ ಸಂಬಂಧಿಸಿದ ಸ್ಟೋರಿ ಇದು. ಒಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಎದುರಿಗೆ ಕುಳಿತಿದ್ದ ನಟಿ ಪ್ರೀತಿ ಜಿಂಟಾ ಅವರಿಗೆ ನಟ ಶಾರುಖ್ ಖಾನ್ ಅವರು 'ಯ ಟಿವಿ ನಿಮ್ಗೆ ಸಿನಿಮಾ ನಿರ್ಮಾಣ ಮಾಡುತ್ತಿದೆ. ಆದರೆ, ನಾನು ಅದೊಂದು ವಿಷಯ ಕೇಳಿಲಿಕ್ಕೆ ಬಯಸ್ತೀನಿ, ಏನಂದ್ರೆ.. ನೀವು ಈಗಾಗ್ಲೇ ಪ್ರಗ್ನಂಟ್ ಆಗಿದೀರಾ?
ಅನಿರೀಕ್ಷಿತವಾಗಿ ನಟ ಶಾರುಖ್ ಖಾನ್ ಅವರು ಕೇಳಿದ ಈ ಪ್ರಶ್ನೆಗೆ ತಬ್ಬಿಬ್ಬಾದ ನಟಿ ಪ್ರೀತಿ ಜಿಂಟಾ ಅವರು 'ಸ್ವಲ್ಪ ತಡವರಿಸುತ್ತಾ ನಗುಲು ಪ್ರಾರಂಭಿಸುತ್ತಾರೆ. ಕೈನಲ್ಲಿದ್ದ ಪ್ರೋಗ್ರಾಂ ಪಾಸ್ ಕಾರ್ಡ್ ಮೂಲಕ ಪ್ರೀತಿ ಜಿಂಟಾ ನಗುತ್ತಾ ತಮ್ಮ ಬಾಯಿಯನ್ನು ಮುಚ್ಚಿಕೊಳ್ಳುತ್ತಾರೆ. ಬಳಿಕ, ಶಾರುಖ್ ಅವರು ಮುಂದುವರೆದು 'ಆಗಿಲ್ಲ ಅಂದ್ರೆ, ನಾನು ಆ ಕೆಲಸ ಮಾಡಬಲ್ಲೆ..' ಎಂದು ಹೇಳುತ್ತಾರೆ. ಅವರಿಬ್ಬರೂ ಒಟ್ಟಿಗೇ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವುದರಿಂದ ಶಾರುಳ್ ಮಾತನ್ನು ನಟಿ ಪ್ರೀತಿ ಜಿಂಟಾ ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ.
ನಟಿಯೊಬ್ಬರಿಗೆ ನೀವು ಪ್ರಗ್ನಂಟಾ ಎಂದು ಕೇಳಿರುವುದೇ ಸೂಕ್ತವಲ್ಲ!
ಆದರೆ, ಆ ವಿಡಿಯೋ ನೋಡಿದ ನೆಟ್ಟಿಗರು, 'ಶಾರುಖ್ ಖಾನ್ ಅವರು ತಮಾಷೆಗೆ ಕೂಡ ಮದುವೆಯಾಗಿರುವ ಒಬ್ಬರು ನಟಿಗೆ ಹಾಗೆ ಹೇಳಿರುವುದು ಸಮಂಜಸವಲ್ಲ' ಎಂದಿದ್ದಾರೆ. ಅಷ್ಟಕ್ಕೂ ನಟಿಯೊಬ್ಬರಿಗೆ ನೀವು ಪ್ರಗ್ನಂಟಾ ಎಂದು ಕೇಳಿರುವುದೇ ಸೂಕ್ತವಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ತುಂಬಾ ಹಳೆಯದು. ಜೊತೆಗೆ, ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಲೂ ಈಗಲೂ.. ಹೋಗ್ಲಿ ಬಿಡಿ ಅದು ಅವರಿಷ್ಟ..' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಆ ಸಂದರ್ಶನದ ಬಳಿಕವೂ ಕೂಡ ನಟಿ ಪ್ರೀತಿ ಜಿಂಟಾ ಹಾಗೂ ನಟ ಶಾರುಖ್ ನಡುವೆ ಯಾವುದೇ ಮನಸ್ತಾಪ ಮೂಡಿಲ್ಲ. ಅವರಿಬ್ಬರೂ ಮೊದಲಿನಂತೆ ಚೆನ್ನಾಗುಯೇ ಇದ್ದಾರೆ. ಅಷ್ಟೇ ಅಲ್ಲ, ಪ್ರೀತಿ ಹಾಗೂ ಶಾರುಖ್ ಇಬ್ಬರೂ ಈಗ ಕ್ರಿಕೆಟ್ ಪ್ರಾಂಚೈಸಿ ತೆಗೆದುಕೊಂಡು, ಮ್ಯಾಚ್ ಸ್ಥಳದಲ್ಲಿ ಒಂದೇ ಕ್ಯಾಮೆರಾಗೆ ಆಗಾಗ ಫೋಟೋ, ವಿಡಿಯೋಗೆ ಫೋಸ್ ಕೊಡುತ್ತಾರೆ. ಅಂದು ಅದು ಜಸ್ಟ್ ಜೋಕ್ ಸಲುವಾಗಿ ಹೇಳಿದ್ದು ಎಂಬುದು ಅವರಿಬ್ಬರಿಗೆ ಹಾಗೂ ಇಬ್ಬರ ಸಂಬಂಧಪಟ್ಟ ಆಪ್ತರಿಗೆ ಅಂಡರ್‌ಸ್ಟುಡ್. ಆದರೆ, ಆಗ ಹೇಳಿರುವ ಮಾತನ್ನು ಈಗ ನೋಡಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ರಿಯಲ್ ಲೈಫ್‌ನಲ್ಲಿ ಕೂಡ ಅವರಿಬ್ಬರೂ ಗುಡ್ ಫ್ರೆಂಡ್ಸ್!
ದಿಲ್ ಸೇ, ರಬ್ ನೇ ಬನಾ ದೀ ಜೋಡಿ, ವೀರ್ ಝರಾ, ಹರ್ ದಿ ಜೋ ಪ್ಯಾರ್ ಕರೇಗಾ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ನಟಿ ಪ್ರೀತಿ ಜಿಂಟಾ ಹಾಗೂ ನಟ ಶಾರುಖ್ ಖಾನ್ ಜೋಡಿ ಒಟ್ಟಿಗೇ ನಟಿಸಿದ್ದಾರೆ. ಅಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲಿ ಕೂಡ ಅವರಿಬ್ಬರೂ ಗುಡ್ ಫ್ರೆಂಡ್ಸ್. ಆದರೆ, ಈಗ ಸೋಷಿಯಲ್ ಮೀಡಿಯಾ ಮೂಲಕ ಮತ್ತೆ ವೈರಲ್ ಆಗಿರುವ ಈ ತಮಾಷೆಯ ಈ ವಿಡಿಯೋ ಮಾತ್ರ ಕೆಲವರಿಗೆ ಸಿಟ್ಟು ತರಿಸಿದ್ದು, ಶಾರುಖ್ ಖಾನ್ ಮೇಲೆ ಕೆಲವರು ಸಿಟ್ಟಾಗಿ ಕಾಮೆಂಟ್ ಹಾಕುತ್ತಿದ್ದಾರೆ.
