- Home
- Entertainment
- Amruthadhaare: ಒಂಟಿ ಜೈದೇವ್ಗೆ ಹೆಣ್ಮಕ್ಕಳ ಕಾಟ- ಮದ್ವೆ ಬಿಡಿ, ಇದೆಲ್ಲಾ ಕೇಳ್ತಾರೆ ಎಂದು ವಿವರಿಸಿ ನಾಚಿಕೊಂಡ ನಟ!
Amruthadhaare: ಒಂಟಿ ಜೈದೇವ್ಗೆ ಹೆಣ್ಮಕ್ಕಳ ಕಾಟ- ಮದ್ವೆ ಬಿಡಿ, ಇದೆಲ್ಲಾ ಕೇಳ್ತಾರೆ ಎಂದು ವಿವರಿಸಿ ನಾಚಿಕೊಂಡ ನಟ!
ಅಮೃತಧಾರೆಯಲ್ಲಿ ಇಬ್ಬರು ಹೆಂಡ್ತಿ ಇದ್ರೂ ನಿಜ ಜೀವನದಲ್ಲಿ ಸಿಂಗಲ್ ಆಗಿರೋ ಜೈದೇವ್ ಪಾತ್ರಧಾರಿ ರಾಣವ್ ಗೌಡ ಅವರಿಗೆ ಹೆಣ್ಮಕ್ಕಳ ಕಾಟವಂತೆ. ಅದರ ಬಗ್ಗೆ ಏನು ಹೇಳಿದ್ದಾರೆ ನೋಡಿ...

ವಿಲನ್ ಆದ್ರೂ ಹೆಣ್ಮಕ್ಕಳ ಫೆವರೆಟ್
ವಿಲನ್ ಆದ್ರೂ ವೀಕ್ಷಕರು ಸಕತ್ ಇಷ್ಟಪಡುವ ಕ್ಯಾರೆಕ್ಟರ್ಗಳಲ್ಲಿ ಒಂದು ಅಮೃತಧಾರೆಯ ಜೈದೇವ್ದು. ಸಾಮಾನ್ಯವಾಗಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುವವರನ್ನು ವೀಕ್ಷಕರು ಇಷ್ಟಪಡುವುದಿಲ್ಲ. ಅದು ಸೀರಿಯಲ್ ಎಂದು ತಿಳಿದಿದ್ದರೂ, ವೈಯಕ್ತಿಕವಾಗಿಯೂ ಹೇಟ್ ಮಾಡುವವರೇ ಹೆಚ್ಚು. ಆದರೆ ಅತ್ಯಂತ ಕೆಟ್ಟ ಕ್ಯಾರೆಕ್ಟರ್ ಆಗಿದ್ರೂ, ಕೊ*ಲೆ ಮಾಡಲು ಪ್ರಯತ್ನ ಮಾಡಿದ್ರೂ, ಹೆಂಡ್ತಿಯನ್ನು ಬಿಟ್ಟು ಬೇರೊಬ್ಬಳನ್ನು ಕಟ್ಟಿಕೊಂಡಿದ್ದರೂ, ಜೈದೇವ್ ಕ್ಯಾರೆಕ್ಟರ್ ಅನ್ನು ವೀಕ್ಷಕರು ಬೈದರೂ, ಅದರ ಪಾತ್ರಧಾರಿಯ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಬಾಲನಟನಾಗಿ ಎಂಟ್ರಿ
ಅಂದಹಾಗೆ ಜೈದೇವ್ JD ಪಾತ್ರದಲ್ಲಿ ನಟಿಸ್ತಿರೋ ನಟನ ಹೆಸರು ರಾಣವ್ ರಾವ್. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ಬಾಲ್ಯದಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಣವ್ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿವಹಿಸಿದ್ದೇ ಹೆಚ್ಚು. ಅದೇ ಕಾರಣದಿಂದ ಇವರು ಇಂಜಿನಿಯರಿಂಗ್ ಅರ್ಧದಲ್ಲೇ ಬಿಟ್ಟು, ಮತ್ತೆ ನಟನೆಯತ್ತ ಮುಖ ಮಾಡಿದರು.
ಸೀರಿಯಲ್ನಲ್ಲಿ ಮನಗೆದ್ದ ರಾಣವ್
ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಣವ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ಒಂದಾದ ಮೇಲೆ ಒಂದರಂತೆ ಹಲವು ಧಾರಾವಾಹಿಗಳಲ್ಲಿ ಇವರು ನಟಿಸಿದರು. ಬಿ.ಸುರೇಶ್ ಅವರ 'ಜೀವನದಿ’, ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಕುಮಾರಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ , ಮತ್ತೆ ವಸಂತ, ಝೀ ಕನ್ನಡದ ಕಮಲಿ ಧಾರಾವಾಹಿಯಲ್ಲೂ ನಟಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದರು.
ಹಿರಿತೆರೆಗೂ ಎಂಟ್ರಿ
ಕಿರುತೆರೆಯಲ್ಲಿ ಮಾತ್ರವಲ್ಲ ಇವರು ಹಿರಿತೆರೆಯಲ್ಲೂ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಮತ್ತೆ ಬಾ ಉಪೇಂದ್ರ, ಶೀಕಂಠ, ವಿರಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಲ್ಲಿ ನೆಗೆಟಿವ್ ಮತ್ತು ಪಾಸೀಟಿವ್ ಎರಡೂ ಪಾತ್ರಗಳಿಗೂ ರಾಣವ್ ಜೀವ ತುಂಬಿ ನಟಿಸುತ್ತಾರೆ ಅನ್ನೋದು ಸುಳ್ಳಲ್ಲ.
ಪ್ರಪೋಸ್ ಬಗ್ಗೆ ಹೇಳಿದ ರಾಣವ್
ಇಂತಿಪ್ಪ ರಾಣವ್ ಅವರು ಇದೀಗ ಬಾಸ್ ಟಿವಿಗೆ ಕೊಟ್ಟಿರೋ ಸಂದರ್ಶನದಲ್ಲಿ ಹೆಣ್ಣುಮಕ್ಕಳು ಪ್ರಪೋಸ್ ಮಾಡುವುದು, ಏನೆಲ್ಲಾ ಕೇಳುವ ಬಗ್ಗೆ ನಟ ವಿವರಿಸಿದ್ದಾರೆ. ಎಷ್ಟೊಂದು ಪ್ರಪೋಸಲ್ ಬರುತ್ತವೆ, ಮೆಸೇಜ್ ಬರುತ್ತವೆ. ಮದುವೆ ಪ್ರಪೋಸಲ್ ಬಿಡಿ, ಇನ್ನೂ ಏನೇನೋ ಪ್ರಪೋಸಲ್ ಮಾಡ್ತಾರೆ ಎಂದು ಹೇಳುತ್ತಲೇ ಸುಸ್ತಾಗಿದ್ದಾರೆ ನಟ ರಾಣವ್. ಅದು ಯಾವ ರೀತಿಯ ಪ್ರಪೋಸಲ್ ಎನ್ನುವುದು ಅವರು ಹೇಳಿದ ಪರಿಯಲ್ಲಿಯೇ ತಿಳಿಯುತ್ತದೆ. ಅವರೆಲ್ಲಾ ಕಳಿಸ್ತಾರೆ, ಅದು ಅವರ ಪ್ರೀತಿಯನ್ನು ತೋರಿಸುತ್ತದೆ. ಆದರೆ ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ನಟ.
ನೆಗೆಟಿವ್ ರೋಲ್ ಇಷ್ಟ ಎಂದ ನಟ
ಇದೇ ವೇಳೆ ನಟ, ನೆಗೆಟಿವ್ ರೋಲ್ ಎಂದ್ರೆ ಇಷ್ಟ ಎಂದಿದ್ದಾರೆ. ವಿಲನ್ ರೋಲ್ಗೆ ಇರುವಷ್ಟು ಸ್ವಾತಂತ್ರ್ಯ ಹೀರೋಗೆ ಇರುವುದಿಲ್ಲ ಎನ್ನುವುದು ಅವರ ಅನಿಸಿಕೆ. ಹೀರೋ ಆದವ ಒಂದೇ ರೀತಿ ಇರಬೇಕು. ಆದರೆ ವಿಲನ್ ಆದವ ಕೆಟ್ಟವನಂತೆ, ಒಳ್ಳೆಯವನ ಸೋಗಿನಲ್ಲಿ... ಹೀಗೆ ಏನು ಬೇಕಾದರೂ ಮಾಡಬಹುದಾಗಿದೆ. ಅದಕ್ಕಾಗಿಯೇ ನನಗೆ ವಿಲನ್ ರೋಲ್ ಇಷ್ಟ ಎಂದಿದ್ದಾರೆ ರಾಣವ್. ಅಷ್ಟಕ್ಕೂ, ಇವರನ್ನು ಪ್ರೀತಿಸುವ ದೊಡ್ಡ ವರ್ಗವೇ ಇದೆ. ವಿಲನ್ ಅಂದ್ರೆ ಹೀಗೆ ಇರಬೇಕು ಎನ್ನುವಷ್ಟು, ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ರಾಣವ್ ಗೌಡಾಗೆ (Raanav Gowda) ಸಿಕ್ಕಾಪಟ್ಟೆ ಅಭಿಮಾನಿಗಳು ಕೂಡ ಇದ್ದಾರೆ.
ಹೀರೋ ಆಗಿ ಎಂಟ್ರಿ
ಇವರು ಹೀರೋ ಅಗುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಹೇಳಿದವರು ಇದ್ದಾರೆ. ಆ ಸಂದರ್ಭ ಇದೀಗ ಕೂಡಿ ಬಂದಿದೆ. ಇದೇ 23ರಂದು ಉದ್ಘಾಟನೆಗೊಳ್ಳಲಿರುವ ಹೊಸ ಚಾನೆಲ್ ಝೀ ಪವರ್ ನಲ್ಲಿ ಶುಭಸ್ಯ ಶೀಘ್ರಂನಲ್ಲಿ ರಾಣವ್ ಗೌಡ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೊಮೊ ಬಿಡುಗಡೆಯಾಗಿದ್ದು, ಸಖತ್ ಆಗಿ ಮೂಡಿ ಬಂದಿದೆ.