ಡಾ ವಿಷ್ಣುವರ್ಧನ್ ಕನ್ನಡ ಸಿನಿಮಾಲೋಕದಲ್ಲಿ ಮೇರುನಟ ಎಂಬ ಬಿರುದು ಪಡೆದವರು, ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು. ಈ ಸ್ಟಾರ್ ಪಡೆದ ಪ್ರಶಸ್ತಿ, ಗಳಿಸಿದ ಹಣ ಯಾವುದೂ ಕಡಿಮೆಯೇನೂ ಅಲ್ಲ. ಆದರೆ, ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಅವರು ಅಪಾರ ಹಿಂಸೆ ಅನುಭವಿಸಿದ್ದಾರೆ.

ಕನ್ನಡದ ಮೇರು ನಟ ಡಾ/ ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ; ಸೂಪರ್ ಹಿಟ್ ಸಿನಿಮಾಗಳ ಇಣುಕುನೋಟ:

ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Dr Vishnuvardhn) ಅವರಿಗೆ ಇದೀಗ ಕರ್ನಾಟಕ ಸರ್ಕಾರ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೊಷಿಸಿದೆ. ಇತ್ತೀಚೆಗೆ ನಮ್ಮನ್ನಗಲಿದ ಬಿ ಸರೋಜಾದೇವಿ ಅವರಿಗೂ ಕೂಡ ಇದೇ ವೇಳೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇನ್ನು ಈ ಪ್ರಶಸ್ತಿ ಸಮಾರಂಭವನ್ನು ಯಾವಾಗ ನಡೆಸಲಾಗುವುದು ಎಂಬ ಸಂಗತಿ ಇನ್ನಷ್ಟೇ ತಿಳಿದುಬರಬೇಕಿದೆ.

ಡಾ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ನೀಡಲಾಗುವ 'ಕರ್ನಾಟಕ ರತ್ನ' ಪ್ರಶಸ್ತಿಯ ಈ ಸಮಯದಲ್ಲಿ, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಸೂಪರ್ ಹಿಟ್ ಸಿನಿಮಾಗಳು ನೆನಪಾಗುವುದು ಸಹಜ. ವಿಷ್ಣು ನಟನೆಯ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ದಾಖಲಿಸಿವೆ. ಅವುಗಳಲ್ಲಿ ಮುಖ್ಯವಾಗಿ 'ನಾಗರಹಾವು', 'ಆಪ್ತಮಿತ್ರ', 'ಬಂಧನ' ಹಾಗೂ 'ಯಜಮಾನ' ಸಿನಿಮಾಗಳು ಎದ್ದು ಕಾಣಿಸುತ್ತವೆ.

ಸುಪ್ರಭಾತ, ಲಾಲಿ, ಹೊಂಬಿಸಿಲು, ಲಯನ್ ಜಗಪತಿರಾವ್, ಹಾಲುಂಡ ತವರು, ಲಾಲಿ, ವೀರಪ್ಪ ನಾಯಕ, ಆಪ್ತ ರಕ್ಷಕ, ದಿಗ್ಗಜರು, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಜಮೀನ್ದಾರು, ಲಾಲಿ ಹೀಗೆ ಹೇಳಹೊರಟರೆ ಲೆಕ್ಕಕ್ಕೆ ಸಿಗದಷ್ಟು. ಅವುಗಳಲ್ಲಿ ಕೆಲವು ಬಾಕ್ಸ್ ಆಫೀಸ್ ಸೂಪರ್ ಹಿಟ್ ಸಿನಿಮಾಳಾಗಿದ್ದು, ಕೆಲವು ವಿಮರ್ಶಕರ ಹಾಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾ ನಟ ಸಂಪತ್‌ಕುಮಾರ್ ಅವರನ್ನು ರಾತ್ರೋರಾತ್ರಿ 'ವಿಷ್ಣುವರ್ಧನ್' ಅನ್ನೋ ಹೆಸರಲ್ಲಿ ಸ್ಟಾರ್ ನಟರನ್ನಾಗಿ ಮಾಡಿತ್ತು.

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ದಂಪತಿಗೆ ಗಂಡು ಮಗು ಜನನ: ಪ್ರೀತಿಯನ್ನು ರಹಸ್ಯವಾಗಿಟ್ಟಿದ್ದೇಕೆ?

ಏನೇ ಆದರೂ ನಟ ಡಾ ವಿಷ್ಣುವರ್ಧನ್ ಅವರನ್ನು 'ನತದೃಷ್ಟ' ನಟ ಎನ್ನಬಹುದೇನೋ! ಈ ಮಾತಿಗೆ ಬೇಕಾದಷ್ಟು ಕಾರಣಗಳಿವೆ. ಕನ್ನಡ ಸಿನಿಮಾಲೋಕದಲ್ಲಿ ಮೇರುನಟ ಎಂಬ ಬಿರುದು ಪಡೆದವರು, ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು. ಈ ಸ್ಟಾರ್ ಪಡೆದ ಪ್ರಶಸ್ತಿ, ಗಳಿಸಿದ ಹಣ ಯಾವುದೂ ಕಡಿಮೆಯೇನೂ ಅಲ್ಲ. ಆದರೆ, ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಅವರು ಅನುಭವಿಸಿದ ಹಿಂಸೆ, ಅವಮಾನಗಳು ಅಪಾರ ಎನ್ನಬಹುದು. ಜೊತೆಗೆ, ನಿಧನರಾಗಿ ಇಷ್ಟು ವರ್ಷಗಳ ಬಳಿಕ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದೆ.

ಭಾರತೀಯ ಮಹಾಕಾವ್ಯಗಳು, ಇತಿಹಾಸ ಮತ್ತು ಪುರಾಣಕಥೆಗಳ ಬಗ್ಗೆ ನಟ ತೇಜಾ ಸಜ್ಜಾ ಹೇಳಿದ್ದೇನು?

ನಟ ವಿಷ್ಣುವರ್ಧನ್ ಅವರು ಬದುಕಿದ್ದಾಗ ಬಹಳಷ್ಟು ಬಹುಮಾನ ಹಾಗೂ ಅವಮಾನ ಎರಡನ್ನೂ ಅನುಭವಿಸಿದ್ದಾರೆ. ಇದು ಬಹಳಷ್ಟು ಜನರಿಗೆ ಗೊತ್ತು. ಆದರೆ, ಅವರು ನಿಧನರಾಗಿ ಇಷ್ಟು ವರ್ಷ ಕಳೆದರೂ ಅವರಿಗೆ ಈಗಲೂ ಮತ್ತೆಮತ್ತೆ ಅವಮಾನಗಳು ಆಗುತ್ತಲೇ ಇವೆ. ಅಭಿಮಾನ್ ಸ್ಟೂಡಿಯೋದಲ್ಲಿ ಇದ್ದ ಡಾ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ನೆಲಸಮ ಮಾಡಲಾಯ್ತು. ಆ ಮೂಲಕ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ನಟ ವಿಷ್ಣುವರ್ಧನ್ ಸಮಾಧಿ ಇಲ್ಲದಂತಾಗಿದೆ.

ಮೈಸೂರಿನಲ್ಲಿ ನಟ ಡಾ ವಿಷ್ಣುವರ್ಧನ್ ಸಮಾಧಿಯನ್ನು 5 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ನಟ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗ ಅಭಿಮಾನ್ ಸ್ಟುಡಿಯೋದಲ್ಲಿ ಈಗ ಸಮಾಧಿಯೇ ಇಲ್ಲ. ಬೆಂಗಳೂರಿನಲ್ಲಿ ನಟ ವಿಷ್ಣು ಅಭಿಮಾನಿಗಳು ಅವರ ಹುಟ್ಟುಹಬ್ಬದಂದು ಅಥವಾ ಪುಣ್ಯಸ್ಮರಣೆ ದಿನದಂದು ಹೋಗಲು ಒಂದು ಜಾಗವೂ ಗತಿಯಿಲ್ಲ ಎಂಬಂತಾಗಿತ್ತು.

ನಟ ವಿಷ್ಣುವರ್ಧನ್ ಕನ್ನಡದ ಮೇರು ನಟ ಎಂಬುದಕ್ಕೆ ಹೊಸ ಸಾಕ್ಷಿಯೇನೂ ಬೇಕಾಗಿಲ್ಲ. 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರು ಸೇರಿದಂತೆ ದೇಶಾದ್ಯಂತ ಇರುವ ಸಿನಿಮಾಪ್ರೇಮಿಗಳಿಗೆ ಮನರಂಜನೆ ನೀಡಿದ್ದಾರೆ ನಟ ವಿಷ್ಣುವರ್ಧನ್. ಅವರಿಗೆ ಸಿಕ್ಕ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ಅವರು ಸಮಾಜಕ್ಕೆ ಹಾಗೂ ವೈಯಕ್ತಿಕವಾಗಿ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ, ವ್ಯಕ್ತಿ ಹಾಗೂ ವ್ಯಕ್ತಿತ್ವದಲ್ಲೂ ವಿಷ್ಣುವರ್ಧನ್ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಹಲವು ಸಿನಿಮಾಗಳು ಒಂದು ವರ್ಷಗಳಿಗೂ ಹೆಚ್ಚು ಪ್ರದರ್ಶನ ಕಂಡಿವೆ.

ಆದರೆ, ಇದೀಗ ನಟ ಕಿಚ್ಚ ಸುದೀಪ್, ವೀರಕಪುತ್ರ ಶ್ರೀನಿವಾಸ್ ಹಾಗೂ ನಿರ್ಮಾಪಕ ಕೆ. ಮಂಜು ಇವರೆಲ್ಲರ ಪ್ರಯತ್ನದಿಂದ ನಟ ವಿಷ್ಣುವರ್ಧನ್ ಅವರಿಗೆ ಕೆಂಗೇರಿಯಲ್ಲಿ 'ಸ್ಮಾರಕ ನಿರ್ಮಾಣ' ಆಗಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲ, ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟೂಡಿಯೋದಲ್ಲಿ ಕೂಡ ಸ್ವಲ್ಪ ಜಾಗದಲ್ಲಿ ಅವರ ಸ್ಮಾರಕ ಮತ್ತೆ ತಲೆಎತ್ತಲಿದೆ ಎನ್ನಲಾಗುತ್ತಿದೆ. ಆದರೆ ಸದ್ಯಕ್ಕೆ ಇವೆಲ್ಲಾ ಮಾತುಕತೆ ಹಂತದಲ್ಲಿದೆ. ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ!