ಬಿಗ್ಬಾಸ್ ಕನ್ನಡದ ಸೀಸನ್ 12ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆಯೇ ಆ್ಯಂಕರ್ ಅನುಪಮಾ ಗೌಡ ಅವರು ವೀಕ್ಷಕರು ಕುಣಿದು ಕುಪ್ಪಳಿಸುವಂಥ ಬಿಗ್ ಅಪ್ಡೇಟ್ ನೀಡಿದ್ದಾರೆ. ಏನದು?
ಬಿಗ್ಬಾಸ್ ಕನ್ನಡದ ಸೀಸನ್ 12ಕ್ಕೆ (Bigg Boss 12) ಕ್ಷಣಗಣನೆ ಆರಂಭವಾಗಿದೆ. ವೀಕ್ಷಕರು ಇದನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ 28ರಿಂದು ಬಿಗ್ಬಾಸ್ ಕನ್ನಡ ಆರಂಭವಾಗಲಿರುವ ಬಗ್ಗೆ ಇದಾಗಲೇ ಘೋಷಿಸಲಾಗಿದೆ. ಬಿಗ್ಬಾಸ್ ಮನೆಯೊಳಕ್ಕೆ ಹೋಗುವವರು ಯಾರು ಎನ್ನುವುದು ವೀಕ್ಷಕರಿಗೆ ತಿಳಿಯಬೇಕಿದೆಯಷ್ಟೇ. ಅಷ್ಟಕ್ಕೂ ಇದಾಗಲೇ ಸ್ಪರ್ಧಿಗಳು ಕೂಡ ಅಂತಿಮಗೊಂಡಿದ್ದು, ಎಲ್ಲರ ಹೆಸರುಗಳೂ ರಿವೀಲ್ ಆಗಿಲ್ಲ. ಅಂತೆ-ಕಂತೆ ಅಡಿ ಕೆಲವರ ಹೆಸರು ರಿವೀಲ್ ಆಗಿವೆ ಅಷ್ಟೇ. ಆದ್ದರಿಂದ ಯಾರು ಮನೆಯೊಳಕ್ಕೆ ಹೋಗುತ್ತಾರೆ ಎಂದು ನೋಡಲು 28ರ ವರೆಗೆ ಕಾಯಲೇಬೇಕಿದೆ.
ಜನಸಾಮಾನ್ಯರಿಗೆ ಅವಕಾಶ:
ಬಿಗ್ಬಾಸ್ ವೀಕ್ಷಕರ ಪೈಕಿ ಹಲವರಿಗೆ ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಹಂಬಲ. ಸ್ಪರ್ಧಿಯಾಗಿ ಅಲ್ಲದಿದ್ದರೂ ಕೊನೆಯ ಪಕ್ಷ ಆ ಮನೆಯನ್ನು ಕಣ್ತುಂಬಿಸಿಕೊಳ್ಳುವ ಕಾತರ. ಕಳೆದ ಸೀಸನ್ನಲ್ಲಿಯೂ ಕೆಲವು ಜನಸಾಮಾನ್ಯರಿಗೆ ಅವಕಾಶ ನೀಡಲಾಗಿತ್ತು. ಅಷ್ಟಕ್ಕೂ ಸ್ಪರ್ಧಿಗಳಾಗಿ ಹೋಗಲು ಜನಸಾಮಾನ್ಯರಿಗೆ ಅವಕಾಶವೇ ಇಲ್ಲ. ಏಕೆಂದರೆ ಎಲ್ಲರಿಗೂ ತಿಳಿದಿರುವಂತೆ ಅಲ್ಲಿಗೆ ಹೋಗುವ ಅವಕಾಶ ಸಿಗುವುದು ಸೆಲೆಬ್ರಿಟಿಗಳಿಗೆ ಇಲ್ಲವೇ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮಾತ್ರ. ಆದ್ದರಿಂದ ಈ ಮನೆಯನ್ನು ಒಮ್ಮೆಯಾದರೂ ನೋಡಬೇಕು ಎನ್ನುವವರಿಗೆ ಅದು ಕನಸಿನ ಮಾತೇ ಎನ್ನುವಂತಾಗಿತ್ತು. ಆದರೆ ಇದೀಗ ವಾಹಿನಿ ರಿವೀಲ್ ಮಾಡಿರುವಂತೆ ಅದೃಷ್ಟಶಾಲಿಗಳಿಗೆ ಮನೆಯೊಳಕ್ಕೆ ಹೋಗುವ ಅವಕಾಶವಿದೆ.
ಬಿಗ್ಬಾಸ್ ಬಿಗ್ ಅಪ್ಡೇಟ್
ಇದಾಗಲೇ ಈ ಬಗ್ಗೆ ಕಲರ್ಸ್ ಕನ್ನಡ (Colors Kannada) ವಾಹಿನಿ ಪ್ರೊಮೋ ಬಿಡುಗಡೆ ಮಾಡಿತ್ತು. ಅದರ ಪ್ರಕಾರ, ಪ್ರತಿದಿನ ಸಂಜೆ 6ರಿಂದ ರಾತ್ರಿ 10.30ರ ವರೆಗೆ ಕಲರ್ಸ್ ಕನ್ನಡದಲ್ಲಿ ಬರುವ ಸೀರಿಯಲ್ಗಳನ್ನು ನೋಡಿ, ಪ್ರತಿ ಸೀರಿಯಲ್ನ ಕೊನೆಯಲ್ಲಿ ಬರುವ ಪ್ರಶ್ನೆಗಳಿಗೆ ಜೀಯೋ ಸ್ಟಾರ್ನಲ್ಲಿ ಉತ್ತರಿಸಬೇಕು. ಅದೃಷ್ಟವಂತರಿಗೆ ಬಿಗ್ಬಾಸ್ ಮನೆಗೆ ಹೋಗಲು ಅವಕಾಶ ಸಿಗುತ್ತದೆ ಎಂದು ಹೇಳಲಾಗಿತ್ತು. ಇದರ ಬಗ್ಗೆ ಇದೀಗ ಆ್ಯಂಕರ್ ಅನುಪಮಾ ಗೌಡ (Anchor Anupama Gowda) ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ.
ಇದನ್ನೂ ಓದಿ: ಜನರಿಗೆ ಬೇಡವಾಯ್ತಾ Bigg Boss? ಟಾಪ್ 10 ನಲ್ಲಿ ಒಂದೂ ಸ್ಥಾನ ಗಿಟ್ಟಿಸಿಕೊಳ್ಳದ ರಿಯಾಲಿಟಿ ಷೋ
8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ದೃಷ್ಟಿಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮಿ, ಮುದ್ದುಸೊಸೆ, ನಿನಗಾಗಿ, ಭಾರ್ಗವಿ LLb, ನಂದಗೋಕುಲ, ಯಜಮಾನ, ರಾಮಚಾರಿ ಸೀರಿಯಲ್ಗಳನ್ನು ನೋಡಬೇಕು. ಸೀರಿಯಲ್ ಮಧ್ಯೆ ಪ್ರಶ್ನೆ ಕೇಳಲಾಗುತ್ತದೆ. ಆ ಪ್ರಶ್ನೆಗಳಿಗೆ ಜಿಯೋ ಸ್ಟಾರ್ ಆ್ಯಪ್ನಲ್ಲಿ ಹೋಗಿ ಉತ್ತರ ಕೊಡಬೇಕಾಗುತ್ತದೆ. 100 ಮಂದಿ ಅದೃಷ್ಟಶಾಲಿಗಳಿಗೆ ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಅವಕಾಶ ಕಲ್ಪಿಸಲಾಗುತ್ತದೆ, ಅಲ್ಲಿ ಭಾಗವಹಿಸಲೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅನುಪಮಾ ಅವರು ತಿಳಿಸಿದ್ದಾರೆ.
100 ಮಂದಿಗೆ ಅವಕಾಶ
ಈ ಮೂಲಕ ವಾಹಿನಿಯು ತನ್ನ ಸೀರಿಯಲ್ TRP ಹೆಚ್ಚಿಸುವ ಪ್ಲ್ಯಾನ್ ಮಾಡಿರುವ ಜೊತೆಗೆ, ಆ್ಯಪ್ಗೂ ಪ್ರಮೋಷನ್ ಮಾಡಿಕೊಳ್ಳುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಗ್ಬಾಸ್ಗೆ ಜನಸಾಮಾನ್ಯರಿಗೂ ಅವಕಾಶ ನೀಡಲು ಹೊರಟಿದೆ.ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ (Bigg Boss) ಮನೆ ಹೇಗೆ ಇರಲಿದೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಇದಾಗಲೇ ಟ್ವೀಟ್ನಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಮೊದಲು ಬಿಗ್ ಬಾಸ್ ಮನೆ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇತ್ತು. ಆದರೆ ಅದನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿತ್ತು. ಕಳೆದ ಬಾರಿ ಕೆಲವರು ಈ ಮನೆಯ ವಿಚಾರಕ್ಕೆ ಅಪಸ್ವರ ತೆಗೆದಿದ್ದರು. ಈ ವಿಚಾರ ಕೋರ್ಟ್ಗೂ ಹೋಗಿತ್ತು. ಈಚೆಗೆ ಸುದೀಪ್ ಅವರು, ಶೇರ್ ಮಾಡಿರುವ ವಿಡಿಯೋದಲ್ಲಿ 'ಈ ಬಾರಿ ದೊಡ್ಡ ಮತ್ತು ಉತ್ತಮ ವೇದಿಕೆ, ಮತ್ತು ಹೆಚ್ಚು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಬಿಗ್ ಬಾಸ್ ಮನೆ. ಈ ಸೀಸನ್ನಲ್ಲಿ ಬಹಳ ವಿಷಯಗಳಿವೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bigg Boss-12 ಸ್ಪರ್ಧಿಗಳು ರೆಡಿ: ಹೊಸ ಮನೆಯೂ ರೆಡಿ... ರಿಲೀಸ್ ಆಯ್ತು ಹೊಸ ಪ್ರೊಮೋ: ಫ್ಯಾನ್ಸ್ ಫುಲ್ ಖುಷ್
