Bigg Bossನಿಂದ ಸ್ನೇಹಿತ್ಗೆ 20 ಲಕ್ಷ ಸಂಭಾವನೆ ಸಿಕ್ತಾ? ಈ ಬಗ್ಗೆ ನಟ ಹೇಳಿದ್ದೇನು?
ಬಿಗ್ಬಾಸ್ 10ರಲ್ಲಿ ಭಾಗವಹಿಸಿದ್ದ ಸ್ನೇಹಿತ್ ಅವರಿಗೆ 20 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದ್ದು ನಿಜನಾ? ಈ ಕುರಿತು ನಟ ಹೇಳಿದ್ದೇನು?

ಬಹುಮುಖ ಪ್ರತಿಭೆ ಸ್ನೇಹಿತ್
ರಂಗಭೂಮಿ ಕಲಾವಿದ, ಕನ್ನಡ ಕಿರುತೆರೆಯ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ ಅವರು ಸದ್ಯ ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. ಬಿಗ್ಬಾಸ್ ಸೀಸನ್ 11 ಕಳೆದ 12ನೇ ಸೀಸನ್ ಬಂದರೂ, ಸೀಸನ್ 10 (Bigg Boss) ಮಾತ್ರ ಸಕತ್ ಸದ್ದು ಮಾಡುತ್ತಲೇ ಇದೆ. ಇದರಲ್ಲಿ ಸಕತ್ ಸದ್ದು ಮಾಡಿದವರಲ್ಲಿ ಸ್ನೇಹಿತ್ ಕೂಡ ಒಬ್ಬರು
10-20 ಲಕ್ಷ ಸಿಗೋದು ನಿಜನಾ?
ಬಿಗ್ಬಾಸ್ನಲ್ಲಿ ಸ್ಪರ್ಧಿಗಳಿಗೆ 10-20 ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ಮಾತು ಕೇಳಿಬರುತ್ತಲೇ ಇರುತ್ತದೆ. ಅದೇ ರೀತಿ ಸ್ನೇಹಿತ್ ಅವರು ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ 20 ಲಕ್ಷ ರೂಪಾಯಿ ಸಂಭಾವನೆ ಪಡೆದಿರುವುದಾಗಿ ಎಲ್ಲೆಡೆ ಸುದ್ದಿಯಾಗಿತ್ತು.
ಬಿಗ್ಬಾಸ್ಗೆ ದುಡ್ಡು ಎಷ್ಟು?
ಇದೀಗ ಸ್ನೇಹಿತ್ ಅವರು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಿಗ್ಬಾಸ್ಗೆ ಹೋಗಿ ಬಂದ ಮೇಲೆ ಸಕತ್ ದುಡ್ಡು ಮಾಡಿದ್ದಾರೆ ಎಂದು ಹೇಳುತ್ತಾರೆ. ಅದನ್ನು ಕೇಳಿ ನನಗೂ ಅಚ್ಚರಿಯಾಗಿತ್ತು. ನಾನು ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ 20 ಲಕ್ಷ ತಗೊಂಡಿರುವುದಾಗಿ ಹೇಳಿದ್ದರು. ಯುಟ್ಯೂಬ್ನಲ್ಲಿಯೂ ಹಾಕಿಕೊಂಡಿದ್ದರು ಎಂದಿದ್ದಾರೆ.
ರಿಯಲ್ ಸ್ಥಿತಿ ಕುರಿತು ಸ್ನೇಹಿತ್
ಆದರೆ, ರಿಯಲ್ ಆಗಿ ನಮ್ಮ ಸ್ಥಿತಿ ಏನು ಎನ್ನುವುದು ನಮಗೆ ಗೊತ್ತಿರುತ್ತದೆ. ಅಲ್ಲಿಂದ ಬಂದ ಮೇಲೆ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಹೇಳಲು ಆಗುವುದಿದಲ್ಲ. ಆದರೆ ನನಗೆ ಆ ನಿಟ್ಟಿನಲ್ಲಿ ಅವಕಾಶ ಸಿಕ್ಕಿದೆ ಎನ್ನುವ ಮೂಲಕ ಬಿಗ್ಬಾಸ್ ಸ್ಪರ್ಧಿಗಳ ಬಗ್ಗೆ ಸಾಮಾನ್ಯ ಜನರು ಅಂದುಕೊಳ್ಳುವಷ್ಟು ಹಣ ಸಿಗುವುದಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಸೆಲೆಬ್ರಿಟಿಗಳ ಬಗ್ಗೆ ಮಾತು
ಸೆಲೆಬ್ರಿಟಿಗಳು ಚಾಲ್ತಿಯಲ್ಲಿ ಇದ್ದರೆ ಮಾತ್ರ ಅವರನ್ನು ಜನ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ನಾವು ಜೀವನದಲ್ಲಿ ಸ್ಟೇಬಲ್ ಆಗಿರಬೇಕು. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅವಕಾಶ ಕಳೆದುಕೊಳ್ಳುತ್ತೇವೆ ಎಂದಿದ್ದಾರೆ. ಆದರೆ, ಬಿಗ್ಬಾಸ್ನಿಂದ ತಮಗೆ ಸಿಕ್ಕ ಸಂಭಾವನೆ ಬಗ್ಗೆ ರಿವೀಲ್ ಮಾಡಲಿಲ್ಲ.
ನಮ್ರತಾ ಗೌಡ ಜೊತೆ ಬಾಂಡಿಂಗ್
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ನೇಹಿತ್ ಮತ್ತು ನಮ್ರತಾ ಗೌಡ ಬಾಂಡಿಂಗ್ ಚೆನ್ನಾಗಿತ್ತು. ಒಂದು ಹಂತದಲ್ಲಿ, ಸ್ನೇಹಿತ್ ಅವರು ನಮ್ರತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರೂ, ನಮ್ರತಾ ಗೌಡ (Namratha Gowda ) ಅದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಮನೆಯೊಳಗೆ ನಿಜವಾದ ಪ್ರೀತಿ ಹುಟ್ಟುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಸ್ನೇಹಿತ್ ಮತ್ತು ನಮತ್ರಾ ಸ್ನೇಹವನ್ನು ಅನೇಕರು ಅಪಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆಯೂ ಸ್ನೇಹಿತ್ ಮಾತನಾಡಿದ್ದಾರೆ.
ಸ್ನೇಹಿತ್ ಬೇಸರದ ನುಡಿ
ಅದರಂತೆ ಹಲವರು ಇವರಿಬ್ಬರಿಗೆ ಏನೋ ಇದೆ ಎಂದೇ ಹೇಳುತ್ತಿದ್ದರು. ಇಂದಿಗೂ ಕೆಲವರು ಆ ವಿಷಯವನ್ನು ಮಾತನಾಡುವುದು ಇದೆ. ಇದೀಗ ಬಾಸ್ಟಿವಿಗೆ ಸ್ನೇಹಿತ್ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ನೇಹಿತ್ ಅವರು, ಅವರ ಪಾಡಿಗೆ ಅವರು ಖುಷಿಯಾಗಿದ್ದಾರೆ, ನನ್ನ ಪಾಡಿಗೆ ನಾನು ಖುಷಿಯಾಗಿದ್ದೇನೆ. ಈಗ ಡಿಸ್ಕಷನ್ ಮಾಡುವವರೂ ನಿಲ್ಲಿಸಿದ್ದಾರೆ. ನೀವ್ಯಾಕೆ ಅದನ್ನೇ ಹೇಳುತ್ತೀರೋ ಗೊತ್ತಿಲ್ಲ ಎಂದು ಸ್ವಲ್ಪ ಬೇಸರದಿಂದಲೇ ನುಡಿದಿದ್ದಾರೆ.