ಫೇಸ್‌ಬುಕ್‌ನಲ್ಲಿ ಪರಿಚಯವಾದ ಡಿವೋರ್ಸಿ ಮಹಿಳೆ ಮತ್ತು ಶಿಕ್ಷಕನ ಪ್ರೇಮವು ಮದುವೆಯ ಒತ್ತಾಯದಿಂದಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಪ್ರಿಯಕರನೇ ಆಕೆಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದು, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದಾನೆ. ಆದರೆ, ಆದದ್ದೇ ಬೇರೆ.
ಅವಳು ಡಿವೋರ್ಸಿ, ಈತನ ಡಿವೋರ್ಸ್ ಕೇಸ್ ಕೋರ್ಟ್ನಲ್ಲಿ ಬಾಕಿ ಇದೆ. ಫೇಸ್‌ಬುಕ್‌ನಲ್ಲಿ ಇಬ್ಬರೂ ಪರಿಯಚವಾಗಿ, ಪರಿಚಯವು ಸ್ನೇಹಕ್ಕೆ ತಿರುಗಿ, ಸ್ನೇಹವು ಪ್ರೇಮಕ್ಕೆ ತಿರುಗಿ, ಪ್ರೇಮವು ಕಾಮಕ್ಕೂ ತಿರುಗಿತು. ಇದಾದ ಬಳಿಕ ನಡೆದದ್ದು ಮಾತ್ರ ಘನಘೋರ ದುರಂತ. ಈಗ ಆಕೆ ಶವವಾಗಿದ್ದರೆ, ಈಗ ಕಂಬಿಯ ಹಿಂದೆ ಹೋಗಲು ಅಣಿಯಾಗುತ್ತಿದ್ದಾನೆ! ಈ ಸ್ಟೋರಿ ಶುರುವಾಗುವುದು ರಾಜಸ್ಥಾನದ ಬಾರ್ಮರ್‌ನಿಂದ. ಮಹಿಳೆ, ಜುಂಜುನುವಿನ ಅಂಗನವಾಡಿ ಮೇಲ್ವಿಚಾರಕಿ ಮುಖೇಶ್ ಕುಮಾರಿ. ಈತನ ಹೆಸರು ಮನರಾಮ್. ವೃತ್ತಿಯಲ್ಲಿ ಶಿಕ್ಷಕ. ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್. ಅದೊಂದು ದಿನ ಅಂದರೆ ಅಕ್ಟೋಬರ್ 2024 ರಲ್ಲಿ ಇವರಿಬ್ಬರ ಪರಿಚಯ ಫೇಸ್ಬುಕ್ನಲ್ಲಿಯೇ ಆಯಿತು. ಹೀಗೆ ಮಾತುಕತೆಯೂ ನಡೆಯಿತು. ಆಕೆ ಡಿವೋರ್ಸಿ ಎನ್ನುವುದು ತಿಳಿಯಿತು, ಈಗ ಹಾಫ್ ಡಿವೋರ್ಸಿ ಎನ್ನುವುದು ಗೊತ್ತಾಯಿತು!
ಕನಸು ಕಂಡ ಮಹಿಳೆ
ಇನ್ನೇನು, ಎರಡೂ ಕಡೆಗಳಿಂದ ಲವ್ಗೆ ಗ್ರೀನ್ ಸಿಗ್ನಲ್ ಸಿಕ್ಕೇ ಬಿಟ್ಟಿತು. ಚಾಟ್ನಲ್ಲಿಯೇ ಶುರುವಾದ ಲವ್, ಫೋನ್ ಎಕ್ಸ್ಚೇಂಜ್ವರೆಗೂ ಬಂದಿತು. ಫೋನ್ನಲ್ಲಿ ಪ್ರೇಮ ಶುರುವಾಯಿತು. ಇಷ್ಟಾದ ಮೇಲೆ ಇನ್ನೇನು? ಮುಖೇಶ್ ಕುಮಾರಿ ಆಗಾಗ್ಗೆ ಮನರಾಮ್ನನ್ನು ಭೇಟಿಯಾಗಲು ಜುಂಜುನುವಿನಿಂದ ಬಾರ್ಮರ್‌ಗೆ ಆಗ್ಗಾಗ್ಗೆ ಪ್ರಯಾಣಿಸುತ್ತಿದ್ದಳು. ಭೇಟಿ ಆಗುತ್ತಿದ್ದರು ಎಂದ ಮೇಲೆ ಅವರ ನಡುವೆ ಏನು ನಡೆದಿದೆ ಎನ್ನುವುದು ತಿಳಿದಿಲ್ಲ. ಆದರೆ ಭೇಟಿ ಹೆಚ್ಚಾದಾಗೆಲ್ಲಾ, ಮುಖೇಶ್ ಕುಮಾರಿಗೆ ಆತಂಕ ಶುರುವಾಗಿರಬೇಕು. ಮದುವೆ ಆಗುವಂತೆ ಒತ್ತಾಯ ಮಾಡತೊಡಗಿದಳು.
ಮನರಾಮ್ಗೆ ಕಿರಿಕಿರಿ
ಮದುವೆಯ ವಿಷಯ ಎತ್ತುತ್ತಿದ್ದಂತೆಯೇ ಮನರಾಮ್ಗೆ ಕಿರಿಕಿರಿ ಶುರುವಾಗಿದೆ. ಏನೇನೋ ಹೇಳಿ ತಪ್ಪಿಸಿಕೊಳ್ಳಲು ನೋಡಿದ. ಆದರೆ, ಸಂಬಂಧದಲ್ಲಿ ತುಂಬಾ ದೂರ ಬಂದಿರುವಾಗ ಹಿಂದೆ ಸರಿಯುವ ಮಾತೇ ಎಲ್ಲ ಎಂದ ಮುಖೇಶ್ ಕುಮಾರಿ ಮದುವೆಯಾಗುವಂತೆ ಒತ್ತಡ ಹೇರತೊಡಗಿದಳು. ಕೊನೆಗೊಂದು ದಿನ ಆತ ಆಕೆಯನ್ನು ಕರೆಸಿಕೊಂಡಿದ್ದಾನೆ. ಪ್ರಿಯಕರನಿಗಾಗಿ ತನ್ನ ಕಾರನ್ನು ಚಲಾಯಿಸಿಕೊಂಡು ಮಹಿಳೆ 600 ಕಿಲೋ ಮೀಟರ್ ದೂರ ಬಂದಿದ್ದಾಳೆ.
ಮದುವೆಯಾಗುವ ಆಸೆ ಇಟ್ಟು ಬಂದಳು
ಮನಸ್ಸಿನಲ್ಲಿ ಏನೋ ಆಸೆ. ಹೊಸ ಜೀವನದ ಆರಂಭದ ಕನಸು. ಮದುವೆಯಾಗುವ ಹಂಬಲದಿಂದ ಬಂದಿದ್ದಾಳೆ. ಆಗಲೂ ಮದುವೆಯ ವಿಷಯವಾಗಿ ಮಾತಿಗೆ ಮಾತು ನಡೆದಿದೆ. ಕೊನೆಗೆ ಆಕೆ ಇದ್ಯಾಕೋ ಸರಿ ಬರುತ್ತಿಲ್ಲ ಎಂದು ಆತನ ಮನೆಯವರನ್ನು ಮದುವೆಗೆ ಒಪ್ಪಿಸಲೇ ಬೇಕು ಎಂದು ಚಾವಾ ಪೊಲೀಸ್ ಠಾಣೆಗೂ ಹೋಗಿದ್ದಾಳೆ. ಪೊಲೀಸರು ಇಬ್ಬರನ್ನೂ ಕರೆಯಿಸಿ ಮಾತುಕತೆ ನಡೆಸಿದ್ದಾರೆ. ಇದರಿಂದ ಆತನ ಕೋಪ ನೆತ್ತಿಗೇರಿದೆ. ಈಕೆಯನ್ನು ಮುಗಿಸಬೇಕು ಎಂದು ಮನರಾಮ್ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದನೋ ಗೊತ್ತಿಲ್ಲ. ಆದರೆ, ಇಷ್ಟೆಲ್ಲಾ ಘಟನೆ ಆಗುತ್ತಿದ್ದಂತೆಯೇ ಇನ್ನು ಮದುವೆ ಆಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಪೊಲೀಸರ ಎದುರು ಮದುವೆಗೆ ಒಪ್ಪಿಕೊಂಡಂತೆ ನಾಟಕವಾಡಿದ್ದರಿಂದ ತನ್ನ ಮೇಲೆ ಅನುಮಾನ ಬರುವುದಿಲ್ಲ ಎಂದು ಅಂದುಕೊಂಡಿದ್ದನಿರಬೇಕು.
ಇದನ್ನೂ ಓದಿ: ಕಮೆಂಟ್ ಹಾಕುವಾಗ ಎಚ್ಚರ ಎಚ್ಚರ! ಜೈಲೂಟ ಫಿಕ್ಸ್- ಡಿಲೀಟ್ ಮಾಡಿದ್ರೂ, ಫೇಕ್ ಐಡಿ ಆದ್ರೂ ಶಿಕ್ಷೆ ಗ್ಯಾರೆಂಟಿ!
ರಾಡ್‌ನಿಂದ ಹೊಡೆದು ಕೊ*ಲೆ
ಆಕೆಯನ್ನು ಬಳಿಗೆ ಕರೆಯಿಸಿ ಕಬ್ಬಿಣದ ರಾಡ್‌ನಿಂದ ಅವಳನ್ನು ಇರಿದು ಕೊಂದು, ಅವಳದ್ದೇ ಕಾರಿನಲ್ಲಿ ಶವ ಇರಿಸಿ ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆ. ಮುಂದಿನ ಸೀಟಿನಲ್ಲಿ ಆಕೆಯ ಶವ ಇಟ್ಟು, ಆ್ಯಕ್ಸಿಡೆಂಟ್ ಆದಂತೆ ಬಿಂಬಿಸುವ ಪ್ರಯತ್ನ ಮಾಡಿದ್ದ. ಆದರೆ ಅಲ್ಲೇ ಎಲ್ಲಾ ಬುಡಮೇಲಾಗಿದ್ದು. ಆತ ಈ ವಿಷಯವನ್ನು ವಕೀಲರಿಗೆ ತಿಳಿಸಿ ತನ್ನನ್ನು ಬಚಾವ್ ಮಾಡುವಂತೆ ಕೇಳಿದ್ದ. ವಕೀಲರ ಕೆಲಸ ತಮ್ಮ ಕಕ್ಷಿದಾರರು ಕೊ*ಲೆಗಾರ ಆಗಿದ್ದರೂ, ಅದೆಂಥ ಕ್ರೂರ ಪಾತಕಿ ಆಗಿದ್ದರೂ ಅವರು ಅಂಥವರಲ್ಲ ಎಂದು ಸಾಬೀತು ಮಾಡುವುದೇ ಅಲ್ಲವೆ, ಹಾಗೆಯೇ ಅಂದುಕೊಂಡು ಎಲ್ಲವನ್ನೂ ವಕೀಲರಿಗೆ ಹೇಳಿದ್ದ ಮನರಾಮ್.
ಪೊಲೀಸರಿಗೆ ತಿಳಿಸಿದ ವಕೀಲ
ಆದರೆ, ಆ ವಕೀಲರ ಬೇರೆಯವರ ರೀತಿ ಆಗಿರಲಿಲ್ಲವೇನೋ. ಕೊ*ಲೆಯ ವಿಷಯ ಕೇಳಿ ಶಾಕ್ ಆಗಿ ಅದನ್ನು ಪೊಲೀಸರಿಗೆ ಹೇಳಿಬಿಟ್ಟಿದ್ದಾರೆ. ಪೊಲೀಸರು ಮುನಾರಾಮ್ನನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಆಕೆಯ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ವೈದ್ಯಕೀಯ ಮಂಡಳಿಯು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.
ಇದನ್ನೂ ಓದಿ: Prajwal Revanna ಪೆನ್ಡ್ರೈವ್ನಲ್ಲಿ ಏನೇನಿತ್ತು? ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ
