ಶಾಲೆಗೆ ನಿಮ್ಮ ಮಕ್ಕಳನ್ನು ಶಾಲಾ ವಾಹನ ಅಥವಾ ಖಾಸಗಿ ವಾಹನದಲ್ಲಿ ಕಳುಹಿಸುತ್ತಿದ್ದರೆ, ಮೈಯೆಲ್ಲಾ ಕಣ್ಣಾಗಿ ಇರಬೇಕು. ನಿಜಕ್ಕೂ ಏನಾಗ್ತಿದೆ? ಮಾಸ್ಟರ್​ ಆನಂದ್ ನೀಡಿದ ಎಚ್ಚರಿಕೆ ಕೇಳಿ... 

ಇಂದು ಮಹಾನಗರ, ನಗರ ಪ್ರದೇಶಗಳ ಮಕ್ಕಳು ಮಾತ್ರವಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಬಹುತೇಕ ಎಲ್ಲ ಮಕ್ಕಳು ಶಾಲೆಗಳಿಗೆ ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಇದು ಅನಿವಾರ್ಯ ಕೂಡ. ಮನೆ ಎಲ್ಲೋ, ಶಾಲೆ ಇನ್ನೆಲ್ಲೋ ಇರುವ ಕಾರಣದಿಂದ ವಾಹನಗಳಲ್ಲಿ ಕಳುಹಿಸಲೇಬೇಕು. ಆದರೆ ಇದೀಗ ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್​ ಒಂದು ಈ ವಾಹನದ ನೆಪದಲ್ಲಿ ಮಕ್ಕಳನ್ನು ಕಿಡ್​ನ್ಯಾಪ್​ ಮಾಡುತ್ತಿದೆ. ಇಂಥ ಘಟನೆಗಳ ಬಗ್ಗೆ ಮಾಸ್ಟರ್​ ಆನಂದ್ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ವಾಹನದಲ್ಲಿ ಕಳುಹಿಸುವ ಮುನ್ನ ಸರಿಯಾಗಿ ಯೋಚನೆ ಮಾಡುವಂತೆ ಅವರು ಹೇಳಿದ್ದಾರೆ.

ಹಿಂದಿಯಲ್ಲಿ ಬಂದಿರುವ ಸುದ್ದಿಯೊಂದನ್ನು ಉಲ್ಲೇಖಿಸಿರುವ ಮಾಸ್ಟರ್​ ಆನಂದ್ (Master Anand) ಅವರು, ಈ ಜಾಲ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ವಿವರಿಸಿದ್ದಾರೆ. ಶಾಲೆಗೆ ಹೋಗುವ ಮಕ್ಕಳ ಮನೆಗಳನ್ನು ಈ ಗ್ಯಾಂಗ್​ ಗುರುತಿಸುತ್ತದೆ. ಸಾಮಾನ್ಯವಾಗಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯಾನ್​ಗಳು ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚೂ ಕಡಿಮೆ ಬರುವುದು ಸಾಮಾನ್ಯ. ಈ ಗ್ಯಾಂಗ್​ನವರಿಗೆ ಇದೇ ಬಂಡವಾಳ. ನಿಗದಿತ ವಾಹನ ಬರುವುದಕ್ಕಿಂತ ಸ್ವಲ್ಪ ಮುಂಚೆ ಬರುತ್ತದೆ ಈ ವಾಹನ. ಇದರಲ್ಲಿ ಇರುವ ಡ್ರೈವರ್​, ಇವತ್ತು ಮಾಮೂಲು ಡ್ರೈವರ್​ ಬಂದಿಲ್ಲ, ಅವರಿಗೆ ಅನಾರೋಗ್ಯನೋ ಅಥವಾ ಇನ್ನೇನೋ ನೆಪ ಹೇಳಿ ನಾನು ಬಂದಿದ್ದೇನೆ ಎಂದು ಹೇಳಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.

ಗಿಳಿಯಿಂದ ಬಯಲಾಯ್ತು ಅಕ್ರಮ ಸಂಬಂಧದ ಗುಟ್ಟು: ಪತಿಗೆ ಕೋರ್ಟ್​ ಕೊಟ್ಟಿತು ಶಿಕ್ಷೆ!

ಮೋಸ ನಡೆಯುವುದು ಹೇಗೆ?

ಅಷ್ಟಕ್ಕೂ ನಿಗದಿತ ಚಾಲಕ ಯಾವುದಾದರೂ ಕಾರಣಕ್ಕೆ ಬರದೇ ಹೋದರೆ ಬೇರೆಯವರು ಬರುವುದು ಸಾಮಾನ್ಯ. ಆದ್ದರಿಂದ ಪಾಲಕರಿಗೂ ಇದು ತಿಳಿಯುವುದಿಲ್ಲ. ಶಾಲಾ ವಾಹನ ಎಂದುಕೊಂಡೇ ಅದರಲ್ಲಿ ಮಕ್ಕಳನ್ನು ಕಳಿಸುತ್ತಾರೆ. ಕೊನೆಗೆ ನಿಜವಾದ ವಾಹನ ಬಂದಾಗಲೇ ತಾವು ಮೋಸ ಹೋಗಿರುವುದು ತಿಳಿಯುತ್ತದೆ. ಆದರೆ ಆ ವಾಹನಗಳ ನಂಬರ್​, ಡ್ರೈವರ್​ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಕಾರಣ, ಅಷ್ಟೊತ್ತಿಗಾಗಲೇ ಸಮಯ ಮೀರಿ ಹೋಗಿರುತ್ತದೆ. ಕೊನೆಗೆ ಪೊಲೀಸ್​ ಠಾಣೆ ಅಲೆದಾಟ, ಅದೂ ಇದೂ.

ಇಂಥದ್ದೇ ಘಟನೆ ನಡೆದಿರುವ ಬಗ್ಗೆ ಮಾಸ್ಟರ್​ ಆನಂದ್​ ಹೇಳಿದ್ದಾರೆ. ಮಕ್ಕಳನ್ನು ತುಂಬಿಸಿಕೊಂಡು ಶಾಲೆಯ ವಾಹನ ಬಂದ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಡೌಟ್ ಬಂದು ನಿಜವಾದ ಡ್ರೈವರ್​ಗೆ ಕರೆ ಮಾಡಿದಾಗ, ಆತ ತಾನು ಬರುತ್ತಿರುವುದಾಗಿ ಹೇಳಿದ್ದರಿಂದ ಮೋಸದಾಟ ಬಯಲಾಗಿದೆ. ಆದರೆ ಈ ರೀತಿ ನಿಮ್ಮ ಮಕ್ಕಳಿಗೂ ಆಗಬಹುದು. ಆದ್ದರಿಂದ ಚಾಲಕರು ಬೇರೆ ಬಂದಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಸಂದೇಹ ಬಂದರೆ ಕ್ರಮ ತೆಗೆದುಕೊಳ್ಳಿ. ಮಕ್ಕಳನ್ನು ಬೇರೆ ವಾಹನಗಳಿಗೆ ಕಳುಹಿಸುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಮಾಸ್ಟರ್​ ಆನಂದ್​ ಹೇಳಿದ್ದಾರೆ.

ಅಂಕವೇ ಮುಖ್ಯ ಎನ್ನುವ ಪೋಷಕರಿಗೆ ಹೆದರಿ ಓಡಿ ಬಂದ 12ರ ಬಾಲೆ! 200 ಮಂದಿಯಿಂದ ರೇ*ಪ್​

View post on Instagram