Asia Cup : ನಿನ್ನೆ ನಡೆದ ಏಷ್ಯಾಕಪ್ ಮ್ಯಾಚ್ ನಲ್ಲಿ ಭಾರತ ಗೆಲುವು ಸಾಧಿಸಿದೆ. ಪಾಕಿಸ್ತಾನ ನೀಡಿದ ಗುರಿ ಬೆನ್ನು ಹತ್ತಿದ್ದ ಭಾರತ ಗೆಲುವಿಗೆ ಹತ್ತಿರವಾಗ್ತಿದ್ದರೆ ಕ್ರಿಕೆಟ್ ನೋಡ್ತಾ ಕುಳಿತಿದ್ದ ಪಾಕಿಸ್ತಾನಿಗಳು ಗೂಗಲ್ ಸರ್ಚ್ ನಲ್ಲಿ ಬ್ಯುಸಿ ಆಗಿದ್ರು.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಏಷ್ಯಾಕಪ್ (Asia Cup) ಪಂದ್ಯದಲ್ಲಿ ಭಾರತ (India), ಪಾಕ್ ತಂಡವನ್ನು ಮಣಿಸಿ ಗೆಲುವಿನ ಪತಾಕೆ ಹಾರಿಸಿದೆ. 7 ವಿಕೆಟ್ ಗಳ ಸುಲಭ ಜಯ ಗಳಿಸಿದ ಭಾರತ ಬರೀ ಗೆಲುವಿನ ಕಾರಣಕ್ಕೆ ಮಾತ್ರವಲ್ಲ ಪಂದ್ಯ ಮುಗಿದ ನಂತ್ರ ಪಾಕ್ ಆಟಗಾರರನ್ನು ನಿರ್ಲಕ್ಷಿಸಿದ ವಿಷ್ಯಕ್ಕೆ ಚರ್ಚೆಯಲ್ಲಿದೆ. ಆದ್ರೆ ಪಂದ್ಯದ ವೇಳೆ ಕ್ರಿಕೆಟ್ ನೋಡ್ತಿದ್ದ ಪಾಕಿಸ್ತಾನಿಗಳು ಗೂಗಲ್ ನಲ್ಲಿ ಕೆಲ ವಿಷ್ಯ ಸರ್ಚ್ ಮಾಡಿದ್ದಾರೆ. ಆ ವೇಳೆ ಗೂಗಲ್ ನಲ್ಲಿ ಯಾವ ವಿಷ್ಯ ಹೆಚ್ಚು ಸರ್ಚ್ ಆಗಿದೆ ಎಂಬುದನ್ನು ಗೂಗಲ್ ಸರ್ಚ್ ಡೇಟಾ ಬಹಿರಂಗಪಡಿಸಿದೆ.
ಏಷ್ಯಾಕಪ್ ಮ್ಯಾಚ್ ವೇಳೆ ಪಾಕಿಗಳು ಸರ್ಚ್ ಮಾಡಿದ್ದು ಏನನ್ನು? : ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡ್ಕೊಂಡಿದ್ದ ಪಾಕಿಸ್ತಾನ, 9 ವಿಕೆಟ್ ಕಳೆದುಕೊಂಡು ಕೇವಲ 127 ರನ್ ಗಳಿಸಿತ್ತು. ಗುರಿ ಬೆನ್ನು ಹತ್ತಿದ ಭಾರತಕ್ಕೆ ಆಸರೆಯಾಗಿದ್ದು ನಾಯಕ ಸೂರ್ಯಕುಮಾರ್ ಯಾದವ್. ಸೂರ್ಯಕುಮಾರ್ ಯಾದವ್ 47 ರನ್ ಪೇರಿಸಿ, ಭಾರತಕ್ಕೆ ಗೆಲುವು ತಂದುಕೊಟ್ರು. ಸೂರ್ಯಕುಮಾರ್ ಯಾದವ್ ಬ್ಯಾಟ್ ಹಿಡಿದು ಪಾಕ್ ಆಟಗಾರರ ಬೆವರಳಿಸ್ತಿದ್ದಂತೆ ಪಾಕಿಸ್ತಾನಿಗಳು ಗೂಗಲ್ ಮೊರೆ ಹೋಗಿದ್ದಾರೆ. ಗೂಗಲ್ ನಲ್ಲಿ ಸೂರ್ಯಕುಮಾರ್ ಯಾದವ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಪಾಕ್ ಮಾನ ಕಳೆದ ಭಾರತ! ನಾಯಕ ಸೂರ್ಯ 'ಬಿಗ್' ಸಂದೇಶ!
ಗೂಗಲ್ ಸರ್ಚ್ ಇಂಜಿನ್ ಡೇಟಾ ಪ್ರಕಾರ, ರಾತ್ರಿ 8 ಗಂಟೆಯಿಂದ ರಾತ್ರಿ 12 ಗಂಟೆ ಅಂದ್ರೆ ಪಂದ್ಯ ಮುಗಿಯುವವರೆಗೂ ಪಾಕಿಸ್ತಾನಿಗಳು ಸೂರ್ಯಕುಮಾರ್ ಯಾದವ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
1.ಸೂರ್ಯಕುಮಾರ್ ಯಾದವ್ ಪತ್ನಿ ಯಾರು ಎಂಬ ಬಗ್ಗೆ ನೆರೆ ದೇಶ ಪಾಕ್ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸ್ತಾ ಇದ್ರು.
2.ಅಷ್ಟೇ ಅಲ್ಲ, 47 ರನ್ ಕಲೆ ಹಾಕಿದ್ದ ಸೂರ್ಯಕುಮಾರ್ ವಯಸ್ಸು ಎಷ್ಟು ಎನ್ನುವ ಪ್ರಶ್ನೆ ಪಾಕಿಸ್ತಾನಿಗಳನ್ನು ಕಾಡಿತ್ತು. ಸೂರ್ಯಕುಮಾರ್ ಯಾದವ್ ವಯಸ್ಸಿನ ಬಗ್ಗೆ ಮಾಹಿತಿ ಪಡೆಯಲು ಪಾಕ್ ಕ್ರಿಕೆಟ್ ಪ್ರೇಮಿಗಳು ಮುಂದಾಗಿದ್ದರು.
3.ಇಷ್ಟಕ್ಕೆ ಅವ್ರ ಕುತೂಹಲ ತಣಿಯಲಿಲ್ಲ. ಸೂರ್ಯಕುಮಾರ್ ಬಗ್ಗೆ ಇನ್ನಷ್ಟು ತಿಳಿಯಲು ಪಾಕಿಗಳು ಮುಂದಾಗಿದ್ದಾರೆ. ಟಿ -20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಶತಕ ಸಿಡಿಸಿದ್ರಾ ಇಲ್ವಾ ಎಂಬುದನ್ನು ಕೂಡ ಅವರು ಸರ್ಚ್ ಮಾಡಿದ್ದಾರೆ.
ಏಷ್ಯಾಕಪ್ ಹ್ಯಾಂಡ್‌ಶೇಕ್ ವಿವಾದ: ಭಾರತದ ಮೇಲೆ ಅಧಿಕೃತ ದೂರು ದಾಖಲಿಸಿದ ಪಾಕಿಸ್ತಾನ!
ಬರ್ತ್ ಡೇ ದಿನ ಬಿಗ್ ಗಿಫ್ಟ್ : ನಿನ್ನೆ ಸೂರ್ಯಕುಮಾರ್ ಯಾದವ್ ಬರ್ತ್ ಡೇ. ಸೂರ್ಯಕುಮಾರ್ ಯಾದವ್ 1990ರಲ್ಲಿ ಜನಿಸಿದ್ದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಪತ್ನಿ ಹೆಸ್ರು ದೇವಿಷಾ ಶೆಟ್ಟಿ. ಸೂರ್ಯಕುಮಾರ್ ಯಾದವ್ ಹುಟ್ಟುಹಬ್ಬದ ದಿನದಂದು ದೇವಿಷಾ ಶೆಟ್ಟಿ, ಪತಿಗೆ ವಿಶ್ ಮಾಡಿ ಸುಂದರ ಪೋಸ್ಟನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಬರ್ತ್ ಡೇ ದಿನವೇ ಸೂರ್ಯಕುಮಾರ್ ಅಬ್ಬರಿಸಿದ್ದಾರೆ. ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ, 47 ರನ್ ಗಳಿಸಿ, ಭಾರತಕ್ಕೆ ಜಯ ನೀಡಿದ್ದಲ್ಲದೆ, ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನಾವಿದ್ದೇವೆ ಎಂಬ ಸಂದೇಶ ಸಾರುವ ಮೂಲಕ, ಪಾಕ್ ಆಟಗಾರರನ್ನು ಮೈದಾನದಲ್ಲಿಯೇ ಕಡೆಗಣಿಸುವ ದಿಟ್ಟತನ ತೋರಿದ್ದಾರೆ. ಸೂರ್ಯಕುಮಾರ್ ಯಾದವ್ ಇದೇ ವೇಳೆ ಹೊಸ ದಾಖಲೆ ಮಾಡಿದ್ದಾರೆ. ಟಿ -20 ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧೋನಿ ಹಾಗೂ ರೋಹಿತ್ ಶರ್ಮಾ ಪಟ್ಟಿಗೆ ಸೂರ್ಯಕಾಂತ್ ಯಾದವ್ ಹೆಸರು ಸೇರಿದೆ.
