ಫಿಲ್ಮ್ ಫೇರ್ ಅವಾರ್ಡ್ ನಲ್ಲಿ ಎಲ್ಲರನ್ನು ಅಟ್ರ್ಯಾಕ್ಟ್ ಮಾಡಿದ್ದು ಮತ್ತ್ಯಾರೂ ಅಲ್ಲ ಕಿಂಗ್ ಖಾನ್ ಶಾರುಖ್ ಖಾನ್. ನಿರೂಪಣೆ ಹೊಣೆ ಹೊತ್ತಿದ್ದ ಶಾರುಖ್, ಜಂಟಲ್ ಮ್ಯಾನ್ ಹೇಗಿರ್ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬಾಲಿವುಡ್ ಬಾದ್ ಶಾ (Bollywood Bad Shah) ಅಂತ ಹೆಸರು ಪಡೆಯೋದು ಸುಲಭವಲ್ಲ. ಬರೀ ನಟನೆಯಿಂದ ಇಂಥ ಬಿರುದು ಬರೋಕೆ ಸಾಧ್ಯವೇ ಇಲ್ಲ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shahrukh Khan) ತಮ್ಮ ಅದ್ಭುತ ನಟನೆ ಜೊತೆ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ. ಶನಿವಾರ ಸಂಜೆ ನಡೆದ 70ನೇ ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್ ನಲ್ಲಿ ಪ್ರಶಸ್ತಿ ಗೆದ್ದ ಆಕ್ಟರ್ಸ್ ಗಿಂತ ಹೋಸ್ಟ್ ಶಾರುಖ್ ಖಾನ್ ಎಲ್ಲರ ಗಮನ ಸೆಳೆದಿದ್ದಾರೆ. ಜಂಟಲ್ ಮ್ಯಾನ್ ಶಾರುಖ್ ಖಾನ್, ಬರೀ ನಿರೂಪಣೆ ಹೊಣೆ ಹೊತ್ತಿರಲಿಲ್ಲ. ವೇದಿಕೆ ಮೇಲೆ ಬರೋ ನಟಿಯರ ಡ್ರೆಸ್, ಹೀಲ್ಸ್ ಸಂಭಾಳಿಸ್ತಾ ಅವರನ್ನು ಸುರಕ್ಷಿತವಾಗಿ ವೇದಿಕೆ ಮೇಲೆ ಕರೆತಂದಿದ್ದು ಕಿಂಗ್ ಖಾನ್.
ಜಂಟಲ್ ಮ್ಯಾನ್ ಕಿಂಗ್ ಖಾನ್ :
ಗುಜರಾತಿನ ಅಹಮದಾಬಾದ್ ನಲ್ಲಿ ಶನಿವಾರ 70ನೇ ಫಿಲ್ಮ್ ಫೇರ್ ಅವಾರ್ಡ್ ಫಂಕ್ಷನ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ದಂಡೇ ಹರಿದು ಬಂದಿತ್ತು. ಶಾರುಕ್ ಖಾನ್ ನಿರೂಪಣೆ ಹೊಣೆ ಹೊತ್ತಿದ್ರೂ, ನಟಿಯರಿಗೆ ಸಹಾಯ ಮಾಡಿದ್ದು ಅದೇ ಕಿಂಗ್ ಖಾನ್. ಪ್ರಶಸ್ತಿ ಪಡೆಯಲು ನಿತಾಂಶಿ ಗೋಯಲ್ ವೇದಿಕೆ ಮೇಲೆ ಬಂದಿದ್ದಾರೆ. ಆದ್ರೆ ಸ್ಟೆಪ್ಸ್ ಹತ್ತೋಕೆ ಅವ್ರಿಗೆ ಸಾಧ್ಯ ಆಗ್ಲಿಲ್ಲ. ತಕ್ಷಣ ವೇದಿಕೆ ಕೆಳಗೆ ಹೋದ ಶಾರುಖ್ ಖಾನ್, ಬೀಳ್ತಿದ್ದ ನಿತಾಂಶಿಯನ್ನು ಹಿಡಿದಿದ್ದಾರೆ. ಅಷ್ಟೇ ಅಲ್ಲ ಅವ್ರ ಕೈ ಹಿಡಿದು ವೇದಿಕೆ ಮೇಲೆ ಕರೆದುಕೊಂಡು ಬಂದಿದ್ದಾರೆ. ನಂತ್ರ ಅವ್ರ ಡ್ರೆಸ್ ಎತ್ತಿ ವೇದಿಕೆ ಮೇಲೆ ಆರಾಮವಾಗಿ ನಡೆಯಲು ನೆರವಾಗಿದ್ದಾರೆ. ಬರೀ ನಿತಾಂಶಿ ಗೋಯಲ್ ಗೆ ಮಾತ್ರವಲ್ಲ ಪ್ರತಿಭಾ ರಂಟಾ ಅವರಿಗೂ ಹೆಲ್ಪ್ ಮಾಡಿದ್ದು ಶಾರುಖ್ ಖಾನ್. ವೇದಿಕೆ ಮೇಲೆ ಬಂದ ಪ್ರತಿಭಾ ರಂಟಾ ತಲೆ ಮೇಲೆ ಕೈ ಇಟ್ಟು ಹರಸಿದ ಶಾರುಖ್ ಖಾನ್ ತಮ್ಮ ವರ್ತನೆಯಿಂದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವಾರ್ಡ್ ಪಡೆದ ನಟಿಯರಿಗಿಂತ ಶಾರುಕ್ ಖಾನ್ ಕೆಲ್ಸಕ್ಕೆ ಫುಲ್ ಮಾರ್ಕ್ಸ್ ಬಿದ್ದಿದೆ. ಫ್ಯಾನ್ಸ್ ಶಾರುಖ್ ಕೆಲ್ಸವನ್ನು ಹಾಡಿ ಹೊಗಳಿದ್ದಾರೆ. ಮಹಿಳೆಯರಿಗೆ ರಿಸ್ಪೆಕ್ಟ್ ಕೊಡೋದ್ರಿಂದ್ಲೇ ಅವರಿಗೆ ಇಷ್ಟೊಂದು ರಿಸ್ಪೆಕ್ಟ್ ಸಿಗ್ತಿದೆ ಅಂತ ಫ್ಯಾನ್ಸ್ ಹೇಳಿದ್ದಾರೆ.
ಮಾಜಿ ಪ್ರೇಯಸಿ ಜೊತೆ ಮತ್ತೆ ನಾಗಾರ್ಜುನ ರೊಮ್ಯಾನ್ಸ್? ಕಿಂಗ್ 100ನೇ ಸಿನಿಮಾದ ಹೀರೋಯಿನ್ ಯಾರು?
ಕಾಜೋಲ್ ಜೊತೆ ಶಾರುಖ್ ಡಾನ್ಸ್ :
ಬಾಲಿವುಡ್ ಎವರ್ ಗ್ರೀನ್ ಜೋಡಿ ಶಾರುಖ್ ಖಾನ್ ಹಾಗೂ ಕಾಜೋಲ್. ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಇಬ್ಬರು ಕುಚ್ ಕುಚ್ ಹೋತಾ ಹೈ ಸೇರಿದಂತೆ ತಮ್ಮ ಸಿನಿಮಾ ಹಾಡಿಗೆ ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ. ವೇದಿಕೆ ಮೇಲೆ ಕಾಜೋಲ್ – ಶಾರುಖ್ ಜೋಡಿ ನೋಡಿದ ಫ್ಯಾನ್ಸ್ ಹಳೆ ನೆನಪು ಮೆಲುಕು ಹಾಕಿದ್ದಾರೆ.
ಕಾಕತಾಳೀಯವೇ..? 'ಕಾಂತಾರ ಚಾಪ್ಟರ್ 1' ನೋಡಿ ಅಟ್ಲಿ ಹೇಳಿದ್ದು & ರಾಜಮೌಳಿ ಹೇಳಿದ್ದೂ ಅದನ್ನೇ!
ಜಯಾ ಬಚ್ಚನ್ ಆಶೀರ್ವಾದ ಪಡೆದ ಶಾರುಕ್ ಖಾನ್ :
ಸಿನಿಮಾ ರಂಗದ ಮಾಡಿದ ಸಾಧನೆಯನ್ನು ಪರಿಗಣಿಸಿ ಜಯಾ ಬಚ್ಚನ್ ಅವರಿಗೆ ಸಿನಿ ಐಕಾನ್ ಅವಾರ್ಡ್ ನೀಡಿ ಸನ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ವೇದಿಕೆಗೆ ಬಂದ ಜಯಾ ಬಚ್ಚನ್ ಅವರಿಗೆ ಅವಾರ್ಡ್ ನೀಡಿದ ಶಾರುಕ್ ಖಾನ್ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲರಿಗಿಂತ ಹೈಲೈಟ್ ಆಗಿದ್ದು ಶಾರುಖ್ ಖಾನ್ ಅಂದ್ರೆ ತಪ್ಪಾಗೋದಿಲ್ಲ. ಆಯಾ ಸಮಯಕ್ಕೆ ಹೇಗೆ ವರ್ತಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿರುವ ಶಾರುಖ್ ಖಾನ್ ಜನ ಮೆಚ್ಚಿನ ನಟನಾಗಿದ್ದು ಇದೇ ಕಾರಣಕ್ಕೆ.
