Samantha Diganth : ಬಹುಭಾಷಾ ನಟಿ ಸಮಂತಾ ನಟನೆ ಜೊತೆ ನಿರ್ಮಾಣಕ್ಕೆ ಇಳಿದಿದ್ದಾರೆ. ಅವರ ಎರಡನೇ ಸಿನಿಮಾ ಶೂಟಿಂಗ್ ಶುರುವಾಗಿದೆ. ಈ ಸಿನಿಮಾದಲ್ಲಿ ಸ್ಯಾಂಡಲ್ವುಡ್ ನಟರಿಬ್ಬರಿಗೆ ಅವಕಾಶ ಸಿಕ್ಕಿದೆ.

ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಋತು ಪ್ರಭು (Samantha Ritu Prabhu) ಜೊತೆ ಸ್ಯಾಂಡಲ್ ವುಡ್ ನಟ ದೂದ್ ಪೇಡಾ ದಿಗಂತ್ (Dood Peda Digant) ಕಾಣಿಸಿಕೊಳ್ತಿದ್ದಾರೆ. ದಿಗಂತ್, ಸಮಂತಾ ನಟನೆಯ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಚ್ಛೇದನದ ನಂತ್ರ ಆರೋಗ್ಯ ಸಮಸ್ಯೆ ಹೇಳಿ ಸಿನಿಮಾದಿಂದ ದೂರವಿದ್ದ ಸಮಂತಾ ಈಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಬರೀ ಬಣ್ಣ ಹಚ್ಚುತ್ತಿಲ್ಲ ಬದಲಿಗೆ ನಿರ್ಮಾಣದ ಹೊಣೆಯನ್ನೂ ಸಮಂತಾ ಹೊತ್ತಿದ್ದಾರೆ. ಸಮಂತಾ ತೆಲುಗು ಚಿತ್ರವನ್ನು ಮಾಡ್ತಿದ್ದು, ಮಾ ಇಂಟಿ ಬಂಗಾರಂ ಅವರ ಮುಂದಿನ ಸಿನಿಮಾ. ಈ ಸಿನಿಮಾದಲ್ಲಿ ಸಮಂತಾ ಜೊತೆ ಕನ್ನಡಿಗರಿಬ್ಬರು ನಟಿಸ್ತಿದ್ದಾರೆ. ದೂದ್ ಪೇಡಾ ದಿಗಂತ್ ಹಾಗೂ ಕಾಂತಾರಾ ಚಾಪ್ಟರ್ 1 ಖ್ಯಾತಿಯ ಗುಲ್ಶನ್ ದೇವಯ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಮಂತಾ ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್ : 

ಸ್ಯಾಂಡಲ್ ವುಡ್ ನ ದೂದ್ ಪೇಡಾ ಎಂದೇ ಪ್ರಸಿದ್ಧಿ ಪಡೆದಿರುವ ದಿಗಂತ್ ಸದ್ಯ ಬ್ಯುಸಿ. 2022ರಲ್ಲಿ ಸಮರ್ ಶೂಟ್ ವೇಳೆ ಕುತ್ತಿಗೆಗೆ ಪೆಟ್ಟು ಮಾಡ್ಕೊಂಡು ವಿಶ್ರಾಂತಿಯಲ್ಲಿದ್ದ ದಿಗಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ. ಇದೇ ವರ್ಷ ದಿಗಂತ್ ಅಭಿನಯದ ಮೂರು ಸ್ಯಾಂಡಲ್ ವುಡ್ ಸಿನಿಮಾಗಳು ತೆರೆಗೆ ಬಂದಿವೆ. ಕುಲದಲ್ಲಿ ಕೀಳ್ಯಾವುದು, ಉತ್ತರಕಾಂಡ ಮತ್ತು ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಈ ವರ್ಷ ತೆರೆಗೆ ಬಂದಿದೆ. 2024ರಲ್ಲಿ ಮಾರಿಗೋಲ್ಡ್ ಸಿನಿಮಾದಲ್ಲಿ ನಟಿಸಿದ್ದ ದಿಗಂತ್ ಈಗ ಸಮಂತಾ ಜೊತೆ ನಟಿಸ್ತಿದ್ದಾರೆ. ಸಮಂತಾ ಪ್ರೊಡಕ್ಷನ್ ನಲ್ಲಿ ತಯಾರಾಗ್ತಿರುವ ಎರಡನೇ ಸಿನಿಮಾ ಮಾ ಇಂಟಿ ಬಂಗಾರಂ. ಇದು ತೆಲುಗು ಸಿನಿಮಾ. ಇದ್ರಲ್ಲಿ ಸಮಂತಾ ನಟಿಸುತ್ತಿದ್ದು, ದಿಗಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದ ರಾಜಮೌಳಿ, 'ಬಾಹುಬಲಿ: ದಿ ಎಪಿಕ್' ಸಲುವಾಗಿ ಮಾಡಿದ್ದೇನು?

ಸಮಂತಾಗೆ ಸಿಗುತ್ತಾ ಬ್ರೇಕ್? : 

ಸಮಂತಾ ರುತ್ ಪ್ರಭು ತಮ್ಮ ಹೊಸ ಚಿತ್ರ 'ಮಾ ಇಂಟಿ ಬಂಗಾರಂ ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಚಿತ್ರದ ಮುಹೂರ್ತ ಅಕ್ಟೋಬರ್ 2 ರಂದು ನಡೆದಿದೆ. ಸಮಂತಾ ಈಗ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಮಂತಾ ಹಂಚಿಕೊಂಡಿರುವ ಇನ್ಸ್ಟಾ ಫೋಸ್ಟ್ ನಲ್ಲಿ ಅವರ ಗೆಳೆಯ ರಾಜ್ ನಿಡಿಮೋರು ಮೊದಲ ಕ್ಲಾಪ್ ನೀಡಿದ್ದಾರೆ. ಈ ಸಿನಿಮಾಕ್ಕೆ ರಾಜ್ ನಿಡಿಮೋರು ಹಣಕಾಸಿನ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಸಮಂತಾ ಹಾಗೂ ರಾಜ್ ರಿಲೇಶನ್ಶಿಪ್ ನಲ್ಲಿದ್ದಾರೆ ಎನ್ನುವ ಸುದ್ದಿ ಇದ್ದು, ಈ ಫೋಟೋಗಳು ಇನ್ನಷ್ಟು ಅನುಮಾನ ಹುಟ್ಟಿಸಿವೆ. ಮಾ ಇಂಟಿ ಬಂಗಾರಂ ಜೊತೆಗೆ, ಸಮಂತಾ ರುತ್ ಪ್ರಭು ನೆಟ್ಫ್ಲಿಕ್ಸ್ಗೆ ಬರುತ್ತಿರುವ ರಕ್ತ ಬ್ರಹ್ಮಂದ್: ದಿ ಬ್ಲಡಿ ಕಿಂಗ್ಡಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ತಮ್ಮ ಮೊದಲ ನಿರ್ಮಾಣ ಶುಭಂ ನಲ್ಲಿಯೂ ಕಾಣಿಸಿಕೊಂಡಿದ್ದು, ಸಮಂತಾ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಅದಿತಿ ರಾವ್ ಹೈದರಿ ಹುಟ್ಟುಹಬ್ಬ: Romantic Photos ಜೊತೆ ಕವನ ಗೀಚಿದ ಸಿದ್ಧಾರ್ಥ್

ಗುಲ್ಶನ್ ದೇವಯ್ಯಗೆ ಡಿಮ್ಯಾಂಡ್ : 

ಕೊಡಗಿನ ಕುವರ ಗುಲ್ಶನ್ ದೇವಯ್ಯಗೆ ಈಗ ಬೇಡಿಕೆ ಹೆಚ್ಚಾಗಿದೆ. ಕಾಂತಾರಾ ಚಾಪ್ಟರ್ 1 ರಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ಗುಲ್ಶನ್ ದೇವಯ್ಯ ಬಗ್ಗೆ ದೇಶವೇ ಮಾತನಾಡ್ತಿದೆ. ಈ ಮಧ್ಯೆ ಸಮಂತಾ ತಮ್ಮ ಸಿನಿಮಾದಲ್ಲಿ ಗುಲ್ಶನ್ ದೇವಯ್ಯಗೂ ಅವಕಾಶ ನೀಡಿದ್ದಾರೆ. ಸಮಂತಾ ನಿರ್ಮಾಣದ ಈ ಸಿನಿಮಾದಲ್ಲಿ ಸಮಂತಾ, ದಿಗಂತ್, ಗುಲ್ಶನ್ ದೇವಯ್ಯ ಜೊತೆ ಗೌತಮಿ ಹಾಗೂ ಮಂಜುಷಾ ನಟಿಸುತ್ತಿದ್ದಾರೆ.