ಸೊಸೆಯೊಬ್ಬಳು ತನ್ನ ಮಾವನನ್ನೇ ಮದುವೆಯಾದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ತಾನು ಮಾವನಿಂದಲೇ ಗರ್ಭಿಣಿಯಾಗಿದ್ದು, ಈ ಕಾರಣಕ್ಕೆ ಮದುವೆಯಾಗಿದ್ದಾಗಿ ಆಕೆ ಯಾವುದೇ ಅಂಜಿಕೆ ಇಲ್ಲದೆ ಹೇಳಿಕೊಂಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಎನ್ನುವ ಶಬ್ದದ ಕಲ್ಪನೆಯೇ ಬದಲಾಗುತ್ತಿದೆ ಎನ್ನುವ ಆತಂಕದ ನಡುವೆಯೇ ಇಲ್ಲೊಂದು ಶಾಕಿಂಗ್ ವರದಿ ಬಂದಿದೆ. ಅಪ್ಪ-ಮಗಳನ್ನೇ ಮದುವೆಯಾಗಿರುವ, ಅಜ್ಜ ಮೊಮ್ಮಗಳನ್ನೇ ವರಿಸಿರುವ ಅತ್ಯಂತ ಹೀನಾಯ ಎನ್ನುವಂಥ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಈಚೆಗೆ, ಇವಳು ಹುಟ್ಟಿದಾಗಿನಿಂದಲೂ ಇವಳ ಮೇಲೆ ಲವ್ ಆಗಿತ್ತು ಎಂದು ಅಜ್ಜನೊಬ್ಬ ಮೊಮ್ಮಗಳನ್ನೇ ಮದುವೆಯಾಗಿದ್ದ. ಕೆಲವು ಸಂಪ್ರದಾಯಗಳಲ್ಲಿ ಇದು ಮಾಮೂಲು ಎನ್ನುವಂತಾಗಿದೆ. ಹೆಣ್ಣು ಎನ್ನುವುದು ಕೇವಲ ಕಾಮದ ವಸ್ತುವೆಂದು ಪರಿಗಣಿಸುವ, ಆಕೆ ಇರುವುದೇ ಮಕ್ಕಳನ್ನು ಹೆರಲು ಎಂದು ಅಂದುಕೊಳ್ಳುವ ವರ್ಗ ಬಹಳಷ್ಟು ಇರುವ ಕಾರಣದಿಂದ, ಅಂಥ ಕಡೆಗಳಲ್ಲಿ ಇಂಥ ಅಮಾನವಿಯ ಎನ್ನುವಂಥ ಘಟನೆಗಳು ನಡೆಯುತ್ತಲೇ ಇವೆ.
ಮಾವನ ಜೊತೆ ಮದುವೆ
ಅದಕ್ಕಿಂತ ಸ್ವಲ್ಪ ಭಿನ್ನ ಎನ್ನುವಂಥ ಘಟನೆಯೊಂದು ಇದೀಗ ವರದಿಯಾಗಿದೆ. ಅದರಲ್ಲಿ ಸೊಸೆಯೊಬ್ಬಳು ಮಾವನನ್ನು ಮದುವೆಯಾಗಿದ್ದಾಳೆ. ಹಣೆ ತುಂಬ ದೊಡ್ಡ ತಿಲಕ ಇಟ್ಟುಕೊಂಡು ಹೂವಿನ ಹಾರ ಹಾಕಿಕೊಂಡು ಈಗತಾನೇ ಮದುವೆಯಾಗಿ ಬಂದಿರೋ ಮದುಮಗಳನ್ನು ಯಾರೋ ಪ್ರಶ್ನೆ ಮಾಡಿದ್ದಾರೆ. ಆಕೆ ಚಿಕ್ಕವಳು ಹಾಗೂ ವರ ವಯಸ್ಸಾದವ ಎಂದು ತೋರುತ್ತಿರುವ ಕಾರಣ, ಅವಳಿಗೆ ಪ್ರಶ್ನೆ ಮಾಡಲಾಗಿದೆ.
ಗರ್ಭಿಣಿಯಾಗಿದ್ದೇನೆ ಎಂದಳು!
ಆಗ ಆ ಯುವತಿ ಯಾವುದೇ ನಾಚಿಕೆ, ಅಂಜಿಕೆ ಇಲ್ಲದೆಯೇ ಇವರು ನನ್ನ ಮಾವ, ನಾನು ಅವರ ಸೊಸೆ. ಈಗ ತಾನೇ ಮದುವೆಯಾಗಿದೆ ಎಂದಿದ್ದಾಳೆ. ಅದಕ್ಕೆ ಅವಳು ಕೊಟ್ಟಿರೋ ಕಾರಣ ಎಂದರೆ, ನಾನು ಈಗ ಗರ್ಭಿಣಿ. ಇವರಿಂದಲೇ ನಾನು ಗರ್ಭ ಧರಿಸಿದ್ದೇನೆ. ಗರ್ಭಿಣಿ ಎಂದು ತಿಳಿದಿದ್ದರಿಂದ ತರಾತುರಿಯಲ್ಲಿ ಮದುವೆಯಾಗಿದೆ ಎಂದಿದ್ದಾಳೆ! ಅಲ್ಲಿದ್ದ ಪುಣ್ಯಾತ್ಮ ಈ ಮಗು ಹೇಗೆ ಆಯಿತು ಎಂದು ಪ್ರಶ್ನಿಸಿದಾಗ, ಮಾವ ವಿಚಿತ್ರವಾಗಿ ಪ್ರಶ್ನೆ ಕೇಳಿದವರನ್ನು ನೋಡುತ್ತಾ, ಮಗು ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದು ಯಾವ ಊರಿನದ್ದು, ಎಲ್ಲಿಯದ್ದು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಖುದ್ದು ಮದುಮಗಳೇ ಈ ಬಗ್ಗೆ ಹೇಳಿದ್ದಾಳೆ. ಅವಳು ಹೀಗೆ ಹೇಳುವಾಗ ಯಾವುದೇ ಅಂಜಿಕೆ ಇಲ್ಲ ಎನ್ನುವುದನ್ನು ನೋಡಬಹುದಾಗಿದೆ.

