Salman Aishwarya break up : ಬಾಲಿವುಡ್ ಪ್ರಸಿದ್ಧ ಜೋಡಿಯಾಗಿದ್ದ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಬ್ರೇಕ್ ಅಪ್ ವಿಷ್ಯ ಈಗ್ಲೂ ಚರ್ಚೆಯಲ್ಲಿದೆ. ಐಶ್ ದೂರವಾದ್ಮೇಲೆ ಸಲ್ಮಾನ್ ಹೇಗೆಲ್ಲ ಆಡ್ತಿದ್ದರು ಅನ್ನೋದನ್ನು ಪ್ರಹ್ಲಾದ್ ಕಕ್ಕರ್ ಬಹಿರಂಗಪಡಿಸಿದ್ದಾರೆ.
ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ (Salman Khan) ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ (Aishwarya Rai) ಬ್ರೇಕ್ ಅಪ್ ಆಗಿ ತಮ್ಮ ಜೀವನ ಮುಂದುವರಿಸಿ ಅದೆಷ್ಟೋ ವರ್ಷ ಆಯ್ತು. ಆದ್ರೂ ಅವರ ಪ್ರೀತಿ, ಬ್ರೇಕ್ ಅಪ್ ವಿಷ್ಯ ಆಗಾಗ ಸುದ್ದಿಯಲ್ಲಿರುತ್ತೆ. ಸಲ್ಮಾನ್ ಖಾನ್ ಮತ್ತು ಐಶ್ವರ್ಯ, ಬ್ರೇಕ್ ಅಪ್ ನಂತ್ರ ಎದುರು ಬದುರಾಗಿಲ್ಲ. ಒಂದ್ವೇಳೆ ಒಂದೇ ಪಂಕ್ಷನ್ ನಲ್ಲಿ ಅಪ್ಪಿತಪ್ಪಿ ಕಾಣಿಸಿಕೊಂಡ್ರೆ ಕಥೆ ಮುಗೀತು. ಐಶ್ವರ್ಯ, ಅಭಿಷೇಕ್ ಬಚ್ಚನ್ ರಿಂದ ದೂರವಾಗಿದ್ದು, ಸಲ್ಮಾನ್ ಖಾನ್ ಜೊತೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಚರ್ಚೆಯಾಗಿತ್ತು. ಐಶ್ವರ್ಯ ರೈ, ಸಲ್ಮಾನ್ ಖಾನ್ ಮದುವೆ ಆಗಿದ್ರೆ ಖುಷಿಯಾಗಿರ್ತಾ ಇದ್ರು ಎನ್ನುವ ಚರ್ಚೆ ಕೂಡ ಮತ್ತೆ ಶುರುವಾಗಿತ್ತು. ಈ ಮಧ್ಯೆ ಐಶ್ವರ್ಯ ಜೊತೆ ಬ್ರೇಕ್ ಅಪ್ ಆದ್ಮೇಲೆ ಸಲ್ಮಾನ್ ಖಾನ್ ಹೇಗೆಲ್ಲ ಆಡ್ತಿದ್ರು ಎಂಬ ವಿಷ್ಯ ಈಗ ಬಹಿರಂಗವಾಗಿದೆ. ಆಡ್ ಗುರು ಪ್ರಹ್ಲಾದ್ ಕಕ್ಕರ್ ಈ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದಾರೆ.
ಐಶ್ವರ್ಯ ರೈ ಮೇಲೆ ಗೀಳು ಹೊಂದಿದ್ದ ಸಲ್ಮಾನ್ ಖಾನ್ : ವಿಕ್ಕಿ ಲಾಲ್ವಾನಿ ಜೊತೆ ನಡೆದ ಇಂಟರ್ವ್ಯೂನಲ್ಲಿ ಆಡ್ ಗುರು ಎಂದೇ ಪ್ರಸಿದ್ಧಿ ಪಡೆದಿರುವ ನಿರ್ದೇಶಕ ಪ್ರಹ್ಲಾದ್ ಕಕ್ಕರ್, ಸಲ್ಮಾನ್ ಖಾನ್, ಬ್ರೇಕ್ ಅಪ್ ನಂತ್ರ ಏನೆಲ್ಲ ಮಾಡಿದ್ರು ಎಂಬುದನ್ನು ಹೇಳಿದ್ದಾರೆ. ಸಲ್ಮಾನ್ ಖಾನ್ ಹಾಗೂ ಪ್ರಹ್ಲಾದ್ ಕಕ್ಕರ್ ಒಂದೇ ಬಿಲ್ಡಿಂಗ್ ನಲ್ಲಿ ಇದ್ದಿದ್ದರಿಂದ ಅವ್ರಿಗೆ ಇದ್ರ ಬಗ್ಗೆ ತಿಳಿದಿದೆ. ಪ್ರಹ್ಲಾದ್ ಕಕ್ಕರ್ ಪ್ರಕಾರ, ಸಲ್ಮಾನ್ ಖಾನ್, ಐಶ್ವರ್ಯ ರೈ ಮೇಲೆ ದೈಹಿಕವಾಗಿ ಗೀಳು ಹೊಂದಿದ್ರು. ಐಶ್ವರ್ಯ ರೈ ಅವರನ್ನು ಮಿತಿಮೀರಿ ಪ್ರೀತಿ ಮಾಡ್ತಿದ್ದರು. ಅಂಥ ವ್ಯಕ್ತಿ ಜೊತೆ ಹೇಗೆ ಜೀವನ ಮಾಡಲು ಸಾಧ್ಯ ಎಂದು ಪ್ರಹ್ಲಾದ್ ಕಕ್ಕರ್ ಕೇಳಿದ್ದಾರೆ.
ನನ್ನ- ನಿನ್ನ ಪ್ರೇಮಗೀತೆ ಚಿನ್ನ... ಎನ್ನುತ್ತಲೇ ಪ್ರೀತಿಯ ಕಿಚ್ಚು ಹೊತ್ತಿಸಿದ Namruta Gowda- ಕಿಶನ್ ಬಿಳಗಲಿ
ತಲೆ ಬಡಿದುಕೊಳ್ತಿದ್ರು ಸಲ್ಮಾನ್ ಖಾನ್ : ಮಾತು ಮುಂದುವರೆಸಿದ ಪ್ರಹ್ಲಾದ್ ಕಕ್ಕರ್, ಸಲ್ಮಾನ್ ಖಾನ್ ಪ್ರೀತಿ ಮಿತಿಮೀರಿತ್ತು. ಅವರು ತಲೆಯನ್ನು ಗೋಡೆಗೆ ಬಡಿದುಕೊಳ್ತಿದ್ರು. ನಾನದನ್ನು ನೋಡಿದ್ದೇನೆ. ಸಂಬಂಧ ಅಧಿಕೃತವಾಗಿ ಕೊನೆಗೊಳ್ಳುವ ಎಷ್ಟೋ ದಿನ ಮೊದಲೇ ಇಬ್ಬರು ಬೇರೆಯಾಗಿದ್ದರು ಎಂದು ಕಕ್ಕರ್ ಹೇಳಿದ್ದಾರೆ. ಇದು ಎಲ್ಲರಿಗೂ ನೆಮ್ಮದಿ ವಿಷ್ಯವಾಗಿತ್ತು. ಸಲ್ಮಾನ್ ಖಾನ್ ರಿಂದ ಹಿಡಿದು ಅವರ ತಂದೆ- ತಾಯಿಗೂ ಸೇರಿದಂತೆ ಇಡೀ ಜಗತ್ತಿಗೆ ಇದು ಸಮಾಧಾನಕರ ಸಂಗತಿಯಾಗಿತ್ತು ಎಂದು ಪ್ರಹ್ಲಾದ್ ಕಕ್ಕರ್ ಹೇಳಿದ್ದಾರೆ.
ಐಶ್ವರ್ಯ ರೈಗೆ ಸಿಗಲಿಲ್ಲ ಬೆಂಬಲ : ಆ ಸಂದರ್ಭದಲ್ಲಿ ಇಂಡಸ್ಟ್ರಿ ಐಶ್ವರ್ಯ ಅವರನ್ನು ತಪ್ಪಿತಸ್ಥರನ್ನಾಗಿ ನೋಡಿತ್ತು. ಎಲ್ಲರೂ ಸಲ್ಮಾನ್ ಪರ ನಿಂತಿದ್ದರು. ಬ್ರೇಕ್ ಅಪ್ ನೋವು ಐಶ್ವರ್ಯಗೆ ಕಾಡಲಿಲ್ಲ ಎನ್ನುವ ಮಾತುಗಳೇ ಕೇಳಿ ಬಂದಿದ್ವು. ಆದ್ರೆ ನ್ಯಾಯ ಐಶ್ವರ್ಯ ಪರ ಇತ್ತು. ಉದ್ಯಮದ ನಿರ್ಧಾರ ಐಶ್ವರ್ಯ ಮನಸ್ಸನ್ನು ಘಾಸಿಗೊಳಿಸಿದೆ. ಐಶ್ವರ್ಯ ಇದ್ರಿಂದ ಬೇಸರಗೊಂಡಿದ್ದಾರೆ. ಉದ್ಯಮದ ಮೇಲಿದ್ದ ಅವರ ನಂಬಿಕೆಗೆ ಧಕ್ಕೆಯಾಗಿದೆ ಎಂದು ಪ್ರಹ್ಲಾದ್ ಕಕ್ಕರ್ ಹೇಳಿದ್ದಾರೆ. ಇದೇ ಕಾರಣಕ್ಕೆ ಐಶ್ವರ್ಯ ರೈ ಸಿನಿಮಾಗಳಿಂದ ದೂರವಾಗ್ತಾ ಬಂದ್ರು. ಮೊದಲಿನಷ್ಟು ಕೆಲ್ಸ ಮಾಡಲಿಲ್ಲ. ಈ ಘಟನೆ ನಂತ್ರ ಅವರು ಉದ್ಯಮವನ್ನು ನಂಬ್ಲಿಲ್ಲ ಎನ್ನುತ್ತಾರೆ ಪ್ರಹ್ಲಾದ್ ಕಕ್ಕರ್.
ಇವ್ರು ನಾನು ನೋಡಿದ ದೊಡ್ಡ ಸಿನಿಮಾ ಹುಚ್ಚರು; 'ಈ ನಿರ್ದೇಶಕ'ರಿಗೆ ರಾಗಿಣಿ ಸ್ಟೇಟ್‌ಮೆಂಟ್!
ಐಶ್ವರ್ಯ ರೈ – ಸಲ್ಮಾನ್ ಖಾನ್ ಲವ್ ಸ್ಟೋರಿ : 1999 ರ ಬಿಡುಗಡೆಯಾದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾ ನಂತ್ರ ಐಶ್ವರ್ಯ ಮತ್ತು ಸಲ್ಮಾನ್ ಖಾನ್ ಮಧ್ಯೆ ಪ್ರೀತಿ ಚಿಗುರಿತ್ತು. 2002 ರಲ್ಲಿ ಇಬ್ಬರೂ ಬೇರ್ಪಟ್ಟರು. ಐಶ್ವರ್ಯಾ, ಬಚ್ಚನ್ ಕುಟುಂಬದ ಸೊಸೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ರೂ ಐಶ್ ಸದಾ ಸುದ್ದಿಯಲ್ಲಿರ್ತಾರೆ. ಇನ್ನು ಐಶ್ ನಂತ್ರ ಸಲ್ಮಾನ್ ಖಾನ್ ಹೆಸರು ಅನೇಕ ನಟಿಯರ ಜೊತೆ ಥಳುಕು ಹಾಕಿಕೊಂಡಿತ್ತು. ಆದ್ರೆ ಸಲ್ಮಾನ್ ಖಾನ್ ಇನ್ನೂ ಬ್ಯಾಚ್ಯುಲರ್.
