ಛಾವಾ ಚಿತ್ರದ ಮೂಲಕ ನಂಬರ್ ಒನ್ ಸ್ಥಾನದಲ್ಲಿರುವ ರಶ್ಮಿಕಾ ಅವರು ತಮ್ಮ 'ಕಿರಿಕ್ ಪಾರ್ಟಿ' ಗುರು ರಿಷಬ್ ಅವರಿಗೇ ಸದ್ಯ   ಟಕ್ಕರ್ ಕೊಟ್ಟಂತಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಸುತ್ತತೊಡಗಿದೆ. ರಶ್ಮಿಕಾ ನಟನೆಯ ಮುಂಬರುವ ‘ಥಮ’ ಚಿತ್ರವು ಕಾಂತಾರ 1 ಕಲೆಕ್ಷನ್ ಬೀಟ್ ಮಾಡಬಹುದೇ? 

ಕಾಂತಾರ 1 ಗೆ ಟಕ್ಕರ್ ಕೊಡಲಿದೆಯಾ ಥಮ?

ರಿಷಬ್ ಶೆಟ್ಟಿ (Rishab Shetty) ನಿರ್ದೇಶನ-ನಟನೆಯ 'ಕಾಂತಾರ ಚಾಪ್ಟರ್ 1' ಸಿನಿಮಾ ಜಗತ್ತಿನ ತುಂಬಾ ಸೌಂಡ್ ಮಾಡುತ್ತಿರೋದು ಗೊತ್ತೇ ಇದೆ. ಈಗಾಗಲೇ 717.50 ಕೋಟಿ ರೂಪಾಯಿ ಗಳಿಸಿ ಕಾಂತಾರ 1 (Kantara Chapter 1) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಳೆಯ ಹಲವು ದಾಖಲೆಗಳನ್ನು ಪುಡಿಪುಡಿ ಮಾಡುತ್ತಿದೆ. 2025ರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಲು ಕಾಂತಾರ ಚಾಪ್ಟರ್ 1 ಸಿನಿಮಾ ದಾಪುಗಾಲು ಹಾಕುತ್ತಿದೆ. ಸದ್ಯಕ್ಕೆ 807 ಕೋಟಿ ಗಳಿಕೆ ಮಾಡುವ ಮೂಲಕ ರಶ್ಮಿಕಾ ಮಂದಣ್ಣ-ವಿಕ್ಕಿ ಕೌಶಲ್ ಜೋಡಿಯ ಛಾವಾ (Chhaava) ಚಿತ್ರವು ಈ ವರ್ಷ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರದ ಪಟ್ಟಿಯಲ್ಲಿ 'ಟಾಪ್‌ 1' ಸ್ಥಾನದಲ್ಲಿದೆ.

ಆದರೆ, ಇಲ್ಲೊಂದು ವಿಷಯವಿದೆ. ರಶ್ಮಿಕಾ ಮಂದಣ್ಣ ನಟನೆಯ 'ಛಾವಾ' ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಬದಲಿಗೆ ಅದು ಕೇವಲ ಹಿಂದಿ ಸಿನಿಮಾ. ಆದರೆ ಇಡೀ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಛಾವಾ ಬಿಡುಗಡೆ ಕಂಡಿತ್ತು. ಆದರೆ ಕಾಂತಾರ ಚಾಪ್ಟರ್ 1 ಚಿತ್ರವು ಪ್ರಪಂಚದ 7 ಭಾಷೆಗಳಲ್ಲಿ ಬಿಡುಗಡೆ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಎರಡು ಸಿನಿಮಾ ಹೋಲಿಕೆ ಅಸಾಧ್ಯ ಎನ್ನಬಹುದು. ಆದರೂ ಕೂಡ 2025ರಲ್ಲಿ ಭಾರತದ ನಂಬರ್ ಒನ್ ಸಿನಿಮಾ ಯಾವುದು ಅನ್ನೋ ವಿಷಯ ಬಂದಾಗ, ಸದ್ಯ ಛಾವಾ ಸಿನಿಮಾ ಟಾಪ್ ಸ್ಥಾನದಲ್ಲಿದೆ. ರಶ್ಮಿಕಾ-ರಿಷಬ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಈಗ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, ಇನ್ನೂ ಕೂಡ ಹಲವು ಸಿನಿಮಾ ಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ, ಛಾವಾ ಸಿನಿಮಾ ಥಿಯೇಟರ್ ಬಿಟ್ಟು ಬಹಳ ಕಾಲವಾಗಿದೆ. ಹೀಗಾಗಿ, ರಶ್ಮಿಕಾ ಮಂದಣ್ಣ ಅವರ ಛಾವಾ ಚಿತ್ರವನ್ನು ಹಿಮ್ಮೆಟ್ಟಿಸುವ ಎಲ್ಲಾ ಸಾಧ್ಯತೆಗಳೂ ರಿಷಬ್ ಶೆಟ್ಟಿಯವರ 'ಕಾಂತಾರ 1'ಗೆ ಓಪನ್ ಆಗಿವೆ. ಆದರೆ, ರಶ್ಮಿಕಾ ನಟನೆಯ ಇನ್ನೊಂದು ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅದೇ ಸದ್ಯಕ್ಕಿರುವ ಕುತೂಹಲದ ಮ್ಯಾಟರ್!

ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಬರ್ತಿದೆ, ಜಾಗ ಬಿಡಿ!

ಹೌದು, ರಶ್ಮಿಕಾ ನಟನೆಯ ಛಾವಾ ಸಿನಿಮಾ ಕಾಂತಾರ ಅಬ್ಬರಕ್ಕೆ ಎರಡನೇ ಸ್ಥಾನಕ್ಕೆ ಜಾರಬಹುದು. ಆದರೆ, ಸದ್ಯದ ಮಟ್ಟಿಗೆ 'ಬಾಕ್ಸ್‌ ಆಫೀಸ್ ಕ್ವೀನ್' ಎಂದೇ ಕರೆಸಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ನಟನೆಯ 'ಥಮ' ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಆದಿತ್ಯ ಸರಪೋತದಾರ್ ನಿರ್ದೇಶನದ ಥಮ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣಾವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ಮೇಲ್ ಲೀಡ್‌ ಆಗಿ ಆಯುಷ್ಮಾನ್ ಖುರಾನಾ ಇದ್ದಾರೆ. ಈ ಚಿತ್ರವು ನಾಳೆ ಅಂದರೆ, 21 ಅಕ್ಟೋಬರ್ 2025 (21 October 2025) ರಂದು ಬಿಡುಗಡೆ ಆಗಲಿದೆ. ಈ ಮೂಲಕ ಕಾಂತಾರ ಚಾಪ್ಟರ್ 1 ಸಿನಿಮಾಗೆ ಸ್ಪರ್ಧೆ ನೀಡಿದರೂ ಅಚ್ಚರಿಯಲ್ಲ.

ಒನ್ಸ್‌ ಅಗೇನ್, ನಾಳೆ ರಶ್ಮಿಕಾ ನಟನೆಯ ಮುಂಬರುವ 'ಥಮ' ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಬದಲಿಗೆ ಅದು ಕೇವಲ ಹಿಂದಿ ಭಾಷೆಯ ಸಿನಿಮಾ. ಆದರೂ ಕೂಡ ರಶ್ಮಿಕಾ ನಟನೆಯ ಸಿನಿಮಾ ಅಂದರೆ, ಅದು ಸಾಕಷ್ಟು ನಿರೀಕ್ಷೆ ಸೃಷ್ಟಿಸುವುದು ಸಹಜ. ಆದ್ದರಿಂದ ನಾಳೆ ಬಿಡುಗಡೆ ಆಗಲಿರುವ ರಶ್ಮಿಕಾ-ಆಯುಷ್ಮಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದರೆ ಅಚ್ಚರಿಯೇನಿಲ್ಲ. ಈ ಮೂಲಕ ರಶ್ಮಿಕಾ ಮಂದಣ್ಣ ನಟನೆಯ 'ಥಮ' ಚಿತ್ರವು ರಿಷಬ್ ಶೆಟ್ಟಿಯವರ 'ಕಾಂತಾರ 1' ಚಿತ್ರಕ್ಕೆ ಪೈಪೋಟಿ ನೀಡಿ ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ 'ಟಾಪ್ ಒನ್‌' ಸ್ಥಾನಕ್ಕೆ ಏರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ರಿಷಬ್‌ ಸೋಲಿಸ್ತಾರಾ ರಶ್ಮಿಕಾ?

ಒಮ್ಮೆ ಹೀಗಾದರೆ, ಈಗಾಗಲೇ ಟಾಪ್ ಒನ್ ಚಿತ್ರದ ಮೂಲಕ ಈಗಾಗಲೇ ನಂಬರ್ ಒನ್ ಸ್ಥಾನದಲ್ಲಿರುವ ನಟಿ ರಶ್ಮಿಕಾ ಅವರು ತಮ್ಮ 'ಕಿರಿಕ್ ಪಾರ್ಟಿ' ಗುರು ರಿಷಬ್ ಅವರಿಗೇ ಟಕ್ಕರ್ ಕೊಟ್ಟಂತಾಗುತ್ತದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಸುದ್ದಿ ಸುತ್ತತೊಡಗಿದೆ. ಸದ್ಯಕ್ಕೆ ನಟಿ ರಶ್ಮಿಕಾ ನಟನೆಯ ಛಾವಾ ಚಿತ್ರವು ರಿಷಬ್ ನಟನೆಯ ಕಾಂತಾರ 1 ಚಿತ್ರಕ್ಕಿಂತ ಹೆಚ್ಚು ಗಳಿಕೆ ಮಾಡಿದೆ. ಮುಂಬರುವ ಥಮ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ, ಕಾಂತಾರ ಚಾಪ್ಟರ್ 1 ಚಿತ್ರದ ಗಳಿಕೆ ಮುಂದೆ ಎಷ್ಟಾಗಲಿದೆ ಎಂಬುದೀಗ ತೀವ್ರ ಕುತೂಹಲ ಸೃಷ್ಟಿಸಿದೆ. ಎನೇ ಆಗಲಿ, ನಟಿ ರಶ್ಮಿಕಾ ಹಾಗೂ ರಿಷಬ್ಇಬ್ಬರೂ ಕೂಡ ತಮ್ಮದೇ ಆದ ರೀತಿಯಲ್ಲಿ ಭಾರತದ 'ದೈತ್ಯ ಪ್ರತಿಭೆ'ಗಳಾಗಿ ಜಗತ್ತೇ ಅಚ್ಚರಿ ಪಡುವಂತೆ ಬೆಳೆದುನಿಂತಿದ್ದಾರೆ.