ಕುಡಿದ ಮತ್ತಲ್ಲಿ ಐಶ್ವರ್ಯ ಮನೆಗೆ ಮಧ್ಯರಾತ್ರಿ ಸಲ್ಮಾನ್ ಖಾನ್ ಹೋಗಿದ್ದು ನಿಜನಾ? ಅಲ್ಲಿ ಹೋಗಿ ಗಲಾಟೆ ಮಾಡಿ ಗ್ಲಾಸ್ ಒಡೆದು ಮಾಡಬಾರದ್ದೆಲ್ಲಾ ಮಾಡಿದ್ದರಾ? ಕೊನೆಗೂ ಬಾಯ್ಬಿಟ್ಟ ನಟ!
ಸಲ್ಮಾನ್ ಖಾನ್ ಜೊತೆಗೆ ನಟಿ ಐಶ್ವರ್ಯ ರೈ ಅವರ ಕುಚ್ ಕುಚ್ ಬಾಲಿವುಡ್‌ನಲ್ಲಿ ಹೊಸ ವಿಷಯವೇನಲ್ಲ. ಇವರ ಲವ್ ಸ್ಟೋರಿ ಒಂದು ಹಂತ ಮುಂದಕ್ಕೆ ಹೋಗಿತ್ತು. ಐಶ್ವರ್ಯ ಅವರು, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್ ಖಾನ್ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. 90ರ ದಶಕದಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್ ಹೆಚ್ಚು ಚರ್ಚೆಯಾಗಿತ್ತು. ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು.
ಇವರಿಬ್ಬರು ಬೇರ್ಪಟ್ಟಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್ ಖಾನ್ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ. ಐಶ್ವರ್ಯ ರೈ ಕೈಕೊಟ್ಟ ಹಿನ್ನೆಲೆಯಲ್ಲಿ, ಒಮ್ಮೆ ಸಲ್ಮಾನ್ ಖಾನ್ ಕುಡಿದ ಅಮಲಿನಲ್ಲಿ ಐಶ್ವರ್ಯಾ ರೈ ಅವರ ಮನೆಗೆ ಬಂದು ಜೋರಾಗಿ ಬಾಗಿಲು ಬಡಿಯಲು ಪ್ರಾರಂಭಿಸಿದರು. ಗ್ಲಾಸ್ ಒಡೆದು ಹಾಕಿದ್ದರು ಎಂದು ಅಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ನಿಜನೋ, ಸುಳ್ಳೋ ಎಂದು ರಜತ್ ಶರ್ಮಾ ಷೋನಲ್ಲಿ ಸಲ್ಮಾನ್ ಖಾನ್ ಅವರಿಗೆ ಪ್ರಶ್ನೆ ಕೇಳಲಾಗಿದೆ.
ಅದಕ್ಕೆ ಸಲ್ಮಾನ್ ಖಾನ್ ಅವರು, ಐಶ್ವರ್ಯ ಈಗ ಒಳ್ಳೆಯ, ದೊಡ್ಡ ಕುಟುಂಬದ ಸೊಸೆಯಾಗಿದ್ದಾಳೆ. ಅಭಿಷೇಕ್ ತುಂಬಾ ಒಳ್ಳೆಯ ವ್ಯಕ್ತಿ. ಎಕ್ಸ್ ಗರ್ಲ್ಫ್ರೆಂಡ್ ಖುಷಿಯಿಂದ ಇರುವ ಸಮಯದಲ್ಲಿ ಎಕ್ಸ್ ಆಕೆಯ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರು ಚೆನ್ನಾಗಿ ಇರುವುದು ಅಷ್ಟೇ ನಮಗೆ ಮುಖ್ಯವಾಗುತ್ತದೆ, ಹಳೆಯದ್ದನ್ನು ಕೆದಕಿ ಪ್ರಯೋಜನ ಇಲ್ಲ ಎನ್ನುವ ಮೂಲಕ, ತಮ್ಮಿಬ್ಬರ ನಡುವಿನ ಸಂಬಂಧ ಹಾಗೂ ತಾವು ಗಲಾಟೆ ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅಭಿಷೇಕ್ ಮತ್ತು ಐಶ್ವರ್ಯ ನಡುವೆ ಬ್ರೇಕಪ್ ಬಹುತೇಕ ಫಿಕ್ಸ್ ಆದಂತಿದೆ. ಈ ಸುದ್ದಿಯನ್ನು ಅಲ್ಲಗಳೆಯಲು ಹಾಗೂ ಪ್ಯಾಚಪ್ ಎಂಬಂತೆ ಆಗೀಗ ಈ ಜೋಡಿ ಜೊತೆಯಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಈಗ ನಡೆಯುತ್ತಿರುವ ಹಲವಾರು ಘಟನೆಗಳನ್ನು ನೋಡಿದರೆ ಜೋಡಿ ಬ್ರೇಕಪ್ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ, ಐಶ್ವರ್ಯ ರೈ, ತಮಗೆ ಸಲ್ಮಾನ್ ಮೇಲೆ ಇದ್ದ ಪ್ರೀತಿ ಎಷ್ಟು ಎಂಬುದರ ಬಗ್ಗೆ ಈ ಹಿಂದೆ ಹೇಳಿದ್ದ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ.
ಸಿಮಿ ಗ್ರೇವಾಲ್ ಅವರ ಪಾಡ್ಕಾಸ್ಟ್ನಲ್ಲಿ ಐಶ್ವರ್ಯ ರೈ ಈ ಸಂದರ್ಶನ ನೀಡಿದ್ದರು. ಬಹುಶಃ ಇದು ಅಭಿಷೇಕ್ ಅವರನ್ನು ಮದುವೆಯಾಗುವುದಕ್ಕಿಂತಲೂ ಮುಂಚಿನದ್ದೆ ಇರಬಹುದು ಎಂದು ಊಹಿಸಲಾಗುತ್ತಿದೆ. ಆದರೂ ಸಲ್ಮಾನ್ ಮೇಲಿನ ತಮ್ಮ ಪ್ರೀತಿಯನ್ನು ಈ ಷೋನಲ್ಲಿ ಅವರು ತೆರೆದಿಟ್ಟಿದ್ದರು. ಇದರಲ್ಲಿ ಸಿಮಿ ಅವರು, ಬಾಲಿವುಡ್‌ನಲ್ಲಿ ಅತ್ಯಂತ ಸೆಕ್ಸಿಸ್ಟ್ ಮತ್ತು ಅತ್ಯಂತ ಸುಂದರ ವ್ಯಕ್ತಿ ಯಾರು ಎಂದು ಕೇಳಿದ್ದರು. ಐಶ್ವರ್ಯ ರೈ ಮನಸ್ಸಿನಲ್ಲಿ ಸಲ್ಮಾನ್ ಹೆಸರು ಇದ್ದರೂ, ಅದನ್ನು ಹೇಳಲು ಸ್ವಲ್ಪ ಟೈಮೇ ತೆಗೆದುಕೊಂಡರು. ಹೇಳಲೋ, ಬೇಡವೋ ಎಂದು ಹಿಂಜರಿಯುತ್ತಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಕೊನೆಗೂ ಅವರು ನಾಚುತ್ತಲೇ ಅದೇ ಅಳುಕಿನಲ್ಲಿಯೇ ಸಲ್ಮಾನ್ ಖಾನ್ ಹೆಸರು ತೆಗೆದುಕೊಂಡಿದ್ದಾರೆ. ಇದರ ಅರ್ಥ ಐಶ್ವರ್ಯ ಅವರಿಗೆ ಸಲ್ಮಾನ್ ಮೇಲಿನ ಪ್ರೀತಿ ಒಂದು ಹಂತವನ್ನು ಮೀರಿತ್ತು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಮದುವೆ ಮಾತ್ರ ಆಗಿದ್ದ ಅಭಿಷೇಕ್ ಬಚ್ಚನ್ ಜೊತೆ ಎನ್ನುವುದು ಈ ವಿಡಿಯೋದಿಂದ ಸ್ಪಷ್ಟವಾಗಿ ತಿಳಿದುಬರುತ್ತಿದೆ ಎಂದು ಕಮೆಂಟಿಗರು ಹೇಳುತ್ತಿದ್ದಾರೆ.
1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಬ್ರೇಕಪ್ ನಂತರ, 2002 ರಲ್ಲಿ, ಐಶ್ವರ್ಯಾ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು, ಅದು ಆಘಾತಕಾರಿಯಾಗಿತ್ತು. 'ನನ್ನ ಯೋಗಕ್ಷೇಮ, ನನ್ನ ವಿವೇಕ, ನನ್ನ ಘನತೆ ಮತ್ತು ನನ್ನ ಕುಟುಂಬದ ಘನತೆಯನ್ನು ಪರಿಗಣಿಸಿ, ಇದು ಸಾಕು. ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿಲ್ಲ,'ಎಂದು ಐಶ್ವರ್ಯಾ ಹೇಳಿದ್ದರು. ಸಲ್ಮಾನ್ ಖಾನ್ ಅವರೊಂದಿಗಿನ ಅಧ್ಯಾಯ ನನಗೆ ದುಃಸ್ವಪ್ನವಾಗಿತ್ತು ಮತ್ತು ಅದು ಮುಗಿದಿದೆ ಎಂದು ನಾನು ದೇವರಿಗೆ ಕೃತಜ್ಞನಾಗಿದ್ದೇನೆ' ಎಂದು ಐಶ್ವರ್ಯಾ ಬಹಿರಂಗಪಡಿಸಿದ್ದರು. ನಾನು ಸಲ್ಮಾನ್ ಖಾನ್ ರ ಮದ್ಯದ ಚಟ, ನಿಂದನೆಯಿಂದ ಬೇಸತ್ತಿದ್ದೆ. ಇದರ ಹೊರತಾಗಿಯೂ, ನಾನು ಅವರ ಬೆಂಬಲಕ್ಕೆ ನಿಂತಿದ್ದೆ. ಪ್ರತಿಯಾಗಿ ನನಗೆ ಸಿಕ್ಕಿದ್ದು ಸಲ್ಮಾನ್ರ ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ ಹಾಗೂ ದ್ರೋಹ ಮತ್ತು ಅವಮಾನ ಎಂದು ಈ ಸಂದರ್ಶನದಲ್ಲಿ ಹೇಳಿದ್ದರು. ಆದರೂ ಸಲ್ಮಾನ್ ಮೇಲೆ ನಟಿಗೆ ಇದ್ದ ವ್ಯಾಮೋಹ ಆಗ್ಗಾಗ್ಗೆ ರಿವೀಲ್ ಆಗುತ್ತಲೇ ಇತ್ತು. ಎಷ್ಟೆಂದರೂ ಮೊದಲ ಲವ್ ಮರೆಯಲು ಸಾಧ್ಯವಿಲ್ಲ ಅಲ್ಲವೆ?
