Naga Chaitanya Shobhita Love Story : ನಟ ನಾಗ ಚೈತನ್ಯ ಹಾಗೂ ಶೋಭಿತಾ ಮಧ್ಯೆ ಪ್ರೀತಿ ಹೇಗಾಯ್ತು? ಇಬ್ಬರು ಭೇಟಿಯಾಗಿದ್ದು ಎಲ್ಲಿ? ನಾಗ ಚೈತನ್ಯ ಬಿಗ್ ಸಪೋರ್ಟ್ ಯಾರು? ಈ ಎಲ್ಲ ಪ್ರಶ್ನೆಗೆ ನಟ ಉತ್ತರ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಹೆಚ್ಚು ಸುದ್ದಿ ಮಾಡಿದ್ದು ನಾಗ ಚೈತನ್ಯ (Naga Chaitanya) ಹಾಗೂ ಶೋಭಿತಾ ಧುಲಿಪಾಲ (Shobhita Dhulipala) ಮದುವೆ. ಸಮಂತಾಗೆ ಡಿವೋರ್ಸ್ ನೀಡಿದ ನಂತ್ರ ನಾಗ ಚೈತನ್ಯ, ಶೋಭಿತಾ ಪ್ರೀತಿಗೆ ಬಿದ್ದಿದ್ದರು. ಹಿಂದಿನ ವರ್ಷ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಅವ್ರ ವಿಡಿಯೋ, ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಾಗ ಚೈತನ್ಯ ಹಾಗೂ ಶೋಭಿತಾ ಮಧ್ಯೆ ಪ್ರೀತಿ ಚಿಗುರಿದ್ದು ಹೇಗೆ ಎನ್ನುವ ಪ್ರಶ್ನೆಗೆ ಈಗ ನಾಗ ಚೈತನ್ಯ ಉತ್ತರ ನೀಡಿದ್ದಾರೆ. ಇಬ್ಬರ ಪ್ರೀತಿಗೆ ಕಾರಣವಾಗಿದ್ದು ಸೋಶಿಯಲ್ ಮೀಡಿಯಾ ಅಂತ ನಾಗ ಚೈತನ್ಯ ಹೇಳಿದ್ದಾರೆ.
ನಾಗ ಚೈತನ್ಯ – ಶೋಭಿತಾ ಲವ್ ಸ್ಟೋರಿ :
ನಾಗ ಚೈತನ್ಯ ಹಾಗೂ ಶೋಭಿತಾ ಪ್ರೀತಿ, ಯಾವುದೇ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಶುರುವಾಗ್ಲಿಲ್ಲ. ಇಬ್ಬರನ್ನು ಒಂದು ಮಾಡಿದ್ದು ಇನ್ಸ್ಟಾಗ್ರಾಮ್. ಒಂದೇ ಒಂದು ಎಮೋಜಿ ಇಬ್ಬರನ್ನು ಹತ್ತಿರ ಮಾಡಿತ್ತು. ಇಬ್ಬರು ಮಾತನಾಡಿ ಒಂದಾಗಲು ಎಮೋಜಿ ಕಾರಣವಾಯ್ತು ಎಂದು ನಾಗ ಚೈತನ್ಯ ಹೇಳಿದ್ದಾರೆ.
ನಾಯಕಿಯರೇ ವಿಲನ್: ಸುಂದರವಾಗಿದ್ದಾರೆಂದು ಪ್ರೀತಿಸಿದ್ರೆ, ಹೀರೋಗಳಿಗೇ ಶಾಕ್ ಕೊಟ್ಟ ನಟಿಯರಿವರು!
ನಾಗ ಚೈತನ್ಯ ಪ್ರಕಾರ, ನಾವು ಇನ್ಸ್ಟಾಗ್ರಾಮ್ನಲ್ಲಿ ಮೊದಲು ಭೇಟಿಯಾದ್ವಿ. ನಾನು ನನ್ನ ಸಂಗಾತಿಯನ್ನು ಅಲ್ಲಿ ಭೇಟಿಯಾಗ್ತೇನೆ ಅಂದ್ಕೊಂಡಿರಲಿಲ್ಲ. ಶೋಭಿತಾ ಕೆಲ್ಸದ ಬಗ್ಗೆ ನನಗೆ ತಿಳಿದಿತ್ತು. ಒಂದು ದಿನ, ನಾನು ಶೋಯು ಅವರ ಕ್ಲೌಡ್ ಕಿಚನ್ ಬಗ್ಗೆ ಪೋಸ್ಟ್ ಮಾಡಿದಾಗ, ಅವರು ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದರು. ನಾನು ಅವರೊಂದಿಗೆ ಚಾಟ್ ಮಾಡಲು ಶುರು ಮಾಡ್ದೆ. ಶೀಘ್ರದಲ್ಲಿಯೇ ಇಬ್ಬರು ಭೇಟಿಯಾದ್ವಿ ಎಂದು ನಾಗ ಚೈತನ್ಯ ಹೇಳಿದ್ದಾರೆ.
ನಾಗ ಚೈತನ್ಯ ದೊಡ್ಡ ಸಪೋರ್ಟ್ ಯಾವ್ದು? :
ಜೀ 5 ಟಾಕ್ ಶೋನಲ್ಲಿ ನಾಗ ಚೈತನ್ಯ ತಮ್ಮ ಖಾಸಗಿ ವಿಷ್ಯವನ್ನು ಹಂಚಿಕೊಂಡಿದ್ದಾರೆ. ನೀವು ಯಾರಿಲ್ದೆ ಬದುಕಲು ಸಾಧ್ಯವಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ನಾಗ ಚೈತನ್ಯ, ನನ್ನ ಹೆಂಡ್ತಿ ಶೋಭಿತಾ ಎಂದಿದ್ದಾರೆ. ಅವರು ನನ್ನ ದೊಡ್ಡ ಸಪೋರ್ಟ್ ಸಿಸ್ಟಂ ಎಂದು ನಾಗ ಚೈತನ್ಯ ಹೇಳಿದ್ದಾರೆ. ಇದಲ್ದೆ ಶೋಭಿತಾ ಕೋಪಕ್ಕೆ ಕಾರಣವಾಗಿದ್ದು ಯಾವ ವಿಷ್ಯ ಎಂಬುದನ್ನು ನಾಗ ಚೈತನ್ಯ ಹೇಳಿದ್ದಾರೆ. 100 ಕೋಟಿ ಚಿತ್ರ ಥಂಡೆಲ್ ಚಿತ್ರದ ಬುಜ್ಜಿ ತಲ್ಲಿ ಹಾಡು ಕೇಳಿದ್ದ ಶೋಭಿತಾ ಕೋಪಗೊಂಡಿದ್ದರಂತೆ. ಇದು ಶೋಭಿತಾ ಇಟ್ಟಿದ್ದ ನಿಕ್ ನೇಮ್ ಆಗಿತ್ತು. ನಿರ್ದೇಶಕರಿಗೆ ಈ ಹೆಸ್ರು ಬಳಸುವಂತೆ ನಾನು ಹೇಳಿದ್ದೇನೆ ಅಂತ ಶೋಭಿತಾ ಭಾವಿಸಿದ್ರು. ಇದೇ ಕಾರಣಕ್ಕೆ ನನ್ನ ಹತ್ರ ಮಾತನಾಡ್ತಿರಲಿಲ್ಲ. ನಾನ್ಯಾಕೆ ಹಾಗೆ ಮಾಡ್ಲಿ ಎಂದು ನಾಗ ಚೈತನ್ಯ ಕೇಳಿದ್ದಾರೆ.
ಚಿರಂಜೀವಿ ಮಾತ್ರವಲ್ಲ.. ರಾಘವೇಂದ್ರ ರಾವ್‌ರಿಂದ ಫಸ್ಟ್ ನೈಟ್ ವ್ಯವಸ್ಥೆ ಮಾಡಿಸಿಕೊಂಡ ಇನ್ನೊಬ್ಬ ಸ್ಟಾರ್ ಯಾರು?
ನಾಗ ಚೈತನ್ಯ ಹಾಗೂ ಶೋಭಿತಾ ಪ್ರೀತಿ ಬಗ್ಗೆ ಜನರಿಗೆ ಮಾಹಿತಿ ಇರ್ಲಿಲ್ಲ. ಮದುವೆಯವರೆಗೂ ಪ್ರೀತಿ ಬಗ್ಗೆ ಇಬ್ಬರೂ ಗುಟ್ಟು ಬಿಟ್ಟಿರಲಿಲ್ಲ. ಮದುವೆ ಆದ್ಮೇಲೆ ಒಂದೊಂದೇ ವಿಷ್ಯವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಗ ಚೈತನ್ಯ, ಶೋಭಿತಾ ತೆಲುಗು ಮಾತನಾಡ್ತಾರೆ. ನನ್ನ ತೆಲುಗಿಗೂ, ಅವರ ತೆಲುಗಿಗೂ ಸಾಕಷ್ಟು ವ್ಯತ್ಯಾಸ ಇದೆ. ಈಗ ನಾನು ಶೋಭಿತಾ ಬಳಿ ತೆಲುಗು ಕಲಿಯಬೇಕು ಎಂದಿದ್ದರು.ಶೋಭಿತಾ ಹಾಗೂ ನಾಗ ಚೈತನ್ಯ ಬಗ್ಗೆ ಸಾಕಷ್ಟು ಟ್ರೋಲ್ ಆಗಿತ್ತು. ಇಬ್ಬರು ಜೋಡಿಯಾಗಲು ಸೂಕ್ತವಿಲ್ಲ, ಸಮಂತಾ ಬಿಟ್ಟು ನಾಗಚೈತನ್ಯಾಗೆ ಯಾರೂ ಉತ್ತಮ ಜೋಡಿ ಆಗಲ್ಲ ಎಂಬೆಲ್ಲ ಕಮೆಂಟ್ ಕೇಳಿ ಬಂದಿತ್ತು.
