ಜಾತಿ ಜನಗಣತಿ ಗೊಂದಲದ ಗೂಡಾಗಿದೆ. ಜನಗಣತಿ ಯಾವ ಪ್ರಕಾರ ನಡೆಯಬೇಕೋ ಆ ರೀತಿ ನಡಿತಿಲ್ಲ. ಒಬ್ಬ ವ್ಯಕ್ತಿಗೆ ಒಂದು ತಾಸು ಆಗ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬೆಂಗಳೂರು (ಅ.07): ಜಾತಿ ಜನಗಣತಿ ಗೊಂದಲದ ಗೂಡಾಗಿದೆ. ಜನಗಣತಿ ಯಾವ ಪ್ರಕಾರ ನಡೆಯಬೇಕೋ ಆ ರೀತಿ ನಡಿತಿಲ್ಲ. ಒಬ್ಬ ವ್ಯಕ್ತಿಗೆ ಒಂದು ತಾಸು ಆಗ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಂತರ ಮಾತನಾಡಿದ ಅವರು, ನಿನ್ನೆಗೆ ಜಾತಿ ಜನಗಣತಿ 75%ಆಗಿದೆ ಅಂತಿದ್ದಾರೆ. ಸರ್ಕಾರ ತಪ್ಪು ಅಂಕಿಅಂಶ ಕೊಡ್ತಿದೆ. ಬೆಂಗಳೂರಲ್ಲಿ ಇನ್ನೂ ಸರಿಯಾಗಿ ಗಣತಿ ಶುರುವಾಗಿಯೇ ಇಲ್ಲ. ಇವತ್ತಿನಿಂದ ಅಪಾರ್ಟ್ ಮೆಂಟ್ ಗಳಲ್ಲಿ ಪ್ರಾರಂಭ ಆಗುತ್ತಂತೆ. ಜನರ ದಾರಿ ತಪ್ಪಿಸುವ ಕೆಲಸ ಆಗ್ತಿದೆ ಎಂದು ತಿಳಿಸಿದರು.
ದಲಿತ ಮೀಸಲಾತಿ ವಿಚಾರವಾಗಿ, ಮೋದಿ ಸರ್ಕಾರ ಈ ಹಿಂದೆ ಮಾಡಿದೆ. ಪರಿಶಿಷ್ಟ ಜಾತಿ ವರ್ಗದವರಿಗೆ ನಾವೇ ಅನುಕೂಲ ಮಾಡ್ತಿದ್ದೇವೆ ಎಂದು ಬಿಂಬಿಸಿ ನೆನ್ನೆ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಕೊಟ್ಟಿರುವುದನ್ನ ನಾವೇ ಕೊಟ್ಟಿದ್ದೇವೆ ಅಂತ ಹೇಳ್ತಿದ್ದೀರಿ. ಮೀಸಲಾತಿ ಮೊದಲಿಂದಲೂ ಚಾಲ್ತಿಯಲ್ಲಿದೆ ಅದು ಹಾಗೆ ಮುಂದುವರೆಯಲಿದೆ ಎಂದರಲ್ಲದೇ ದೇಶವ್ಯಾಪಿ ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದಾರೆ. ಸರ್ಕಾರ ಕೂಡ ಮಾಡ್ತಿದೆ. ಪ್ರಸನ್ನಾನಂದ ಸ್ವಾಮಿಗೆ ಆಹ್ವಾನ ಕೊಟ್ಟಿದ್ರು ಆದ್ರೆ ಅವರು ಬಂದಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಣ ಕದ್ದಿದ್ದಾರೆ.
ಅದರಲ್ಲಿ ಸಿಎಂ ಕೈವಾಡ ಇದೆ ಅಂತ ಗೊತ್ತು. ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ. ಎಸ್ಟಿ ಸಮುದಾಯದ ರಾಜಣ್ಣ ಅವರನ್ನ ಉಚ್ಚಾಟನೆ ಮಾಡಿದ್ರಿ. ಇಡೀ ವಾಲ್ಮೀಕಿ ಸಮುದಾಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬುದ್ದಿಸ್ಟ್ ಆಗಿದ್ರೆ ಮೀಸಲಾತಿ ಕೊಡ್ತೇವೆ ಅಂತ ರಾಜ್ಯ ಸರ್ಕಾರ ಹೇಳಿದೆ. ಈಗಾಗಲೇ ಕೇಂದ್ರದ ಮೋದಿ ಸರ್ಕಾರ ಮೀಸಲಾತಿ ಕೊಟ್ಟಿದೆ. ಈಗ ನಾವು ಕೊಟ್ಟಿದ್ದೇವೆ ಅಂತ ಹೇಳಿಕೊಳ್ತಿದ್ದಾರೆ ಸಿದ್ದರಾಮಯ್ಯ ಹೇಳಿಕೊಳ್ತಿದ್ದಾರೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಯಾರು ಪರಿಶಿಷ್ಟರಿದ್ದಾರೆ ಅವರು ಬೌದ್ಧ ಧರ್ಮದಲ್ಲಿದ್ದರೆ ಅವರಿಗೆ ಮೀಸಲಾತಿ ಸಿಗಲಿದೆ ಅಂತ ಹೇಳಿದೆ.
ಸಿದ್ದರಾಮಯ್ಯ ಸುಳ್ಳು ಹೇಳ್ತಿಲ್ಲವಾ.?
ಮೊದಲಿಂದಲೂ ಕೇಂದ್ರ ಕೊಡ್ತಿದೆ, ರಾಜ್ಯ ಸರ್ಕಾರ ಹೊಸದಾಗಿ ಏನೂ ಮಾಡಿಲ್ಲ. ಎಸ್ಟಿಗಳಿಗೆ 3%-7%ಗೆ ಮೀಸಲಾತಿ ಹೆಚ್ಚಳ ಮಾಡಿದ್ದೆವು. ಸಿದ್ದರಾಮಯ್ಯ ಇದನ್ನ ನಂಬಬೇಡಿ ಅಂತ ಹೇಳಿದ್ರು. ಈಗ 7% ಮೀಸಲಾತಿ ನಡೆಯುತ್ತಿದೆ. ಈಗ ಸಿದ್ದರಾಮಯ್ಯ ಸುಳ್ಳು ಹೇಳ್ತಿಲ್ಲವಾ.? ಈಗ ಎಸ್ಟಿಗಳಿಗೆ 7% ಕೊಟ್ಟು, ಬೇರೆ ಜಾತಿಗಳನ್ನ ಸೇರಿಸಲು ಹೊರಟಿದ್ದಾರೆ. ಅವರಿಗೆ ಅನ್ಯಾಯ ಮಾಡಲು ಬಿಡೋದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
