Ott Movie Release This Week: ಈ ವಾರ ವಿವಿಧ ರೀತಿಯ ಕಂಟೆಂಟ್ ಇರುವ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಯಾವ ಒಟಿಟಿ ವೇದಿಕೆಯಲ್ಲಿ ಯಾವ ಸಿನಿಮಾ ರಿಲೀಸ್ ಆಗುತ್ತಿದೆ?
ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಲಿರುವ ಅತ್ಯುತ್ತಮ ಸಿನಿಮಾಗಳಿವು ( Best Movies On Ott ). ಹಾಗಾದರೆ ಎಲ್ಲಿ? ಯಾವಾಗ? ಯಾವ ಸಿನಿಮಾವನ್ನು ನೋಡಬಹುದು.
ತೆಹರಾನ್ ( tehran Movie ) Zee5
ಜಾನ್ ಆಬ್ರಹಾಂ ಅವರ ಗೂಢಚಾರ ಥ್ರಿಲ್ಲರ್ ತೆಹರಾನ್ ಸಿನಿಮಾವು ಆಗಸ್ಟ್ 14 ರಂದು Zee5 ನಲ್ಲಿ ಬಿಡುಗಡೆಯಾಗಲಿದೆ. ಇದು ರೋಮಾಂಚನಕಾರಿಯಾಗಿದ್ದು, ಟ್ವಿಸ್ಟ್ ಹಾಗೂ ಗೂಢಚಾರಿಕೆಯಿಂದ ಕೂಡಿದೆ. ನಟಿ ಮಾನುಷಿ ಚಿಲ್ಲರ್, ನೀರು ಬಜ್ವಾ, ಮಧುರಿಮಾ ತುಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇರಾನ್, ಇಸ್ರೇಲ್, ಭಾರತದ ನಡುವೆ ಸಿಲುಕಿಕೊಂಡ ಒಬ್ಬ ವ್ಯಕ್ತಿಯ ಕಥೆ ಇಲ್ಲಿದೆ. ಇದು 2012 ರ ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಸ್ಫೋಟದಂತಹ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ.

ಹೌಸ್‌ಫುಲ್ 5 ( housefull 5 Movie )— Prime Videoನಲ್ಲಿ ಸ್ಟ್ರೀಮಿಂಗ್
ಹೌಸ್‌ಫುಲ್ 5 ಸಿನಿಮಾದಲ್ಲಿ ಕಾಮಿಡಿಯಿದೆ. ತರುಣ್ ಮನ್ಸುಖಾನಿ ನಿರ್ದೇಶನದ ಸಿನಿಮಾವಿದು. ಸಾಜಿದ್ ನದಿಯಾಡ್ವಾಲಾ, ವಾರ್ದಾ ನದಿಯಾಡ್ವಾಲಾ, ಫಿರುಜಿ ಖಾನ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವು ತನ್ನ ವಿಶಿಷ್ಟ ಗೊಂದಲವು, ಹೊಸ ಟ್ವಿಸ್ಟ್ ಜೊತೆಗೆ ತೆಗೆದುಕೊಳ್ಳುವುದು. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ಸಂಜಯ್ ದತ್, ರಿತೇಶ್ ದೇಶಮುಖ್, ಫರ್ದೀನ್ ಖಾನ್ ನಟಿಸಿದ್ದಾರೆ. ಇದು ಜೂನ್ 6ರಂದು ಮೊದಲು ರಿಲೀಸ್ ಆಯ್ತು, ಈಗ Prime Videoನಲ್ಲಿ ರಿಲೀಸ್ ಆಗಲಿದೆ.

ಸಾರೆ ಜಹಾನ್ ಸೆ ಅಚ್ಛಾ ( saare jahan se acha movie ) — JioHotstar
ತೀವ್ರ ಗೂಢಚಾರ ಥ್ರಿಲ್ಲರ್ ನೋಡುವ ಆಸೆ ಇದ್ದರೆ ಪಕ್ಕಾ ನೀವು ಸಾರೆ ಜಹಾನ್ ಸೆ ಅಚ್ಛಾ ಸಿನಿಮಾ ನೋಡಿ. ಗೌರವ್ ಶುಕ್ಲಾರ ಈ ಸಿನಿಮಾದಲ್ಲಿ ಭಾರತೀಯ ಗೂಢಚಾರ, ಗಡಿಯಾಚೆಗಿನ ಶತ್ರುವಿನ ನಡುವಿನ ಬುದ್ಧಿಮತ್ತೆಯ ಕಾದಾಟ ಇದೆ. ಒಂದು ಪರಮಾಣು ಕಾರ್ಯಕ್ರಮವನ್ನು ಧ್ವಂಸಗೊಳಿಸುವ ತೀವ್ರ ಒತ್ತಡದ ಕಾರ್ಯಾಚರಣೆಯೇ ಈ ಸಿನಿಮಾದ ಕೇಂದ್ರಬಿಂದುವಾಗಿದೆ. ಪ್ರತೀಕ್ ಗಾಂಧಿ, ಸನ್ನಿ ಹಿಂದುಜಾ, ಸುಹೈಲ್ ನಯ್ಯರ್, ತಿಲೋತ್ತಮಾ ಶೋಮ್, ಕೃತಿಕಾ ಕಾಮ್ರಾ, ರಜತ್ ಕಪೂರ್, ಅನುಪ್ ಸೋನಿ ನಟನೆಯ ಈ ಸಿನಿಮಾವು ಆಗಸ್ಟ್ 13 ರಂದು JioHotstarನಲ್ಲಿ ರಿಲೀಸ್ ಆಗಲಿದೆ.

ಸಲಾಕಾರ್ — ( salakaar Movie ) JioHotstar
1978 ರಿಂದ 2025 ರವರೆಗಿನ ರೋಮಾಂಚಕ ಭೌಗೋಳಿಕ ರಾಜಕೀಯ ಥ್ರಿಲ್ಲರ್ ಈ ಸಿನಿಮಾದಲ್ಲಿದೆ. ಇದರಲ್ಲಿ ಮೌನಿ ರಾಯ್ ನಟಿಸಿದ್ದಾರೆ. ನವೀನ್ ಕಸ್ತೂರಿಯಾ, ಮುಕೇಶ್ ರಿಷಿ, ಸೂರ್ಯ ಶರ್ಮಾ ಈ ಸಿನಿಮಾದಲ್ಲಿ ನಟಿಸಿದ್ದಾರೆ.

