'ಬಾಹುಬಲಿ - ದಿ ಎಪಿಕ್' ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ರೀ-ರಿಲೀಸ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಹಾದಿಯಲ್ಲಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸತ್ಯರಾಜ್, ರಮ್ಯಾ ಕೃಷ್ಣನ್ ತಾರಾಗಣವಿದೆ. ಮುಂದೆ ಹೆಚ್ಲಾಚಿನ ಗಳಿಕೆ ನಿರೀಕ್ಷಿಸಲಾಗುತ್ತಿದೆ.

ಶಾಕಿಂಗ್ ಎನ್ನಿಸಿದರೂ ಸತ್ಯ!

ಪ್ರಭಾಸ್ ನಟನೆ, ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ - ದಿ ಎಪಿಕ್' (Bahubali The Epic) ಹಿಂದಿಯಲ್ಲಿ ಹರ್ಷವರ್ಧನ್ ರಾಣೆಯ 'ಸನಮ್ ತೇರಿ ಕಸಮ್' ಚಿತ್ರದ ಆರಂಭಿಕ ದಿನದ ಗಳಿಕೆಯನ್ನು ಮೀರಿಸುವಲ್ಲಿ ವಿಫಲವಾಗಿದೆ! ಇದು ಶಾಕಿಂಗ್ ಎನ್ನಿಸಿದರೂ ಸತ್ಯ! ಯಾಕೆ ಹೀಗಾಯ್ತು? ಅದು ಹಿಂದಿ ಗಳಿಕೆಯಲ್ಲಿ ಮಾತ್ರವೇ? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ..

ಸಿನಿಪ್ರಿಯರೇ, ನಮಸ್ಕಾರ! ಬಾಕ್ಸ್ ಆಫೀಸ್ ಅಂಗಳದಲ್ಲಿ ಸದ್ಯಕ್ಕೊಂದು ರೋಚಕ ಕಥೆ ತೆರೆದುಕೊಂಡಿದೆ. ತೆಲುಗು ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್, ಯಂಗ್ ರೆಬಲ್ ಸ್ಟಾರ್ ಪ್ರಭಾಸ್ (Darling Prabhas) ಅವರ 'ಬಾಹುಬಲಿ - ದಿ ಎಪಿಕ್' ಚಿತ್ರ ರೀ-ರಿಲೀಸ್ ಆಗಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದ್ದರೂ, ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಅನಿರೀಕ್ಷಿತ ತಿರುವೊಂದು ಸಿಕ್ಕಿದೆ. ಹೌದು, ಎಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶನದ ಈ ಅದ್ಭುತ ಚಿತ್ರ, ಹಿಂದಿ ಬೆಲ್ಟ್‌ನಲ್ಲಿ ಹರ್ಷವರ್ಧನ್ ರಾಣೆ ಅಭಿನಯದ 'ಸನಮ್ ತೇರಿ ಕಸಮ್' ಚಿತ್ರದ ಓಪನಿಂಗ್ ಡೇ ಕಲೆಕ್ಷನ್ ಹಿಂದಿಕ್ಕುವಲ್ಲಿ ಎಡವಿದೆ!

ಇದು ನಿಜಕ್ಕೂ ಅಚ್ಚರಿ ಮೂಡಿಸುವ ವಿಷಯ. 'ಬಾಹುಬಲಿ - ದಿ ಎಪಿಕ್' ಮೊದಲ ದಿನವೇ ಬರೋಬ್ಬರಿ 9.25 ಕೋಟಿ ರೂ. ಗಳಿಕೆ ಮಾಡಿ ಧೂಳೆಬ್ಬಿಸಿದೆ. ಇದರಲ್ಲಿ ತೆಲುಗು ಆವೃತ್ತಿಯಿಂದ 7.5 ಕೋಟಿ ರೂ., ಹಿಂದಿ ಆವೃತ್ತಿಯಿಂದ 1.4 ಕೋಟಿ ರೂ. ಮತ್ತು ತಮಿಳು ಹಾಗೂ ಮಲಯಾಳಂ ಆವೃತ್ತಿಗಳಿಂದ ಉಳಿದ ಗಳಿಕೆ ಬಂದಿದೆ. ರೀ-ರಿಲೀಸ್ ಆದ ಚಿತ್ರಗಳ ಪೈಕಿ ಇದು ಭಾರತದಲ್ಲಿ 9ನೇ ಅತಿ ಹೆಚ್ಚು ಗಳಿಕೆ ಕಂಡ ಹಾಗೂ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರೊಂದಿಗೆ 'ಬಾಹುಬಲಿ' ಮತ್ತೊಮ್ಮೆ ತನ್ನ ಪವರ್ ಪ್ರೂವ್ ಮಾಡಿದೆ.

ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಮಾತ್ರ 'ಬಾಹುಬಲಿ'ಗೆ ಸಣ್ಣ ಹಿನ್ನಡೆ

ಆದರೆ, ಹಿಂದಿ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಮಾತ್ರ 'ಬಾಹುಬಲಿ'ಗೆ ಸಣ್ಣ ಹಿನ್ನಡೆಯಾಗಿದೆ. ಹರ್ಷವರ್ಧನ್ ರಾಣೆಯ 'ಸನಮ್ ತೇರಿ ಕಸಮ್' ಚಿತ್ರ ರೀ-ರಿಲೀಸ್ ಆದಾಗ, ಅದರ ಹಿಂದಿ ಆವೃತ್ತಿ 4.5 ಕೋಟಿ ರೂ. ಗಳಿಸಿತ್ತು. ಇದು ರೀ-ರಿಲೀಸ್ ಆದ ಹಿಂದಿ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ದಾಖಲಾಗಿದೆ. ಅಷ್ಟೇ ಅಲ್ಲ, ಇದು ತಳಪತಿ ವಿಜಯ್ ಅವರ 'ಘಿಲ್ಲಿ' ಚಿತ್ರದ ಹಿಂದಿ ರೀ-ರಿಲೀಸ್ ಗಳಿಕೆಯನ್ನೂ ಮೀರಿಸಿತ್ತು. 'ಬಾಹುಬಲಿ - ದಿ ಎಪಿಕ್' ಚಿತ್ರ ಸೋಹುಮ್ ಷಾ ಅಭಿನಯದ 'ತುಂಬ್ಬಾಡ್' ಚಿತ್ರದ ಹಿಂದಿ ರೀ-ರಿಲೀಸ್ ಮೊದಲ ದಿನದ ಗಳಿಕೆ 1.6 ಕೋಟಿ ರೂ. ಅನ್ನು ಕೂಡ ಮೀರಿಸಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ಸಂಪೂರ್ಣ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ

ಹೀಗಾಗಿ, ಪ್ರಭಾಸ್‌ನ ಬಾಹುಬಲಿ, ಹಿಂದಿ ಮಾರುಕಟ್ಟೆಯಲ್ಲಿ ಹರ್ಷವರ್ಧನ್ ರಾಣೆ ಮತ್ತು ತುಂಬ್ಬಾಡ್‌ಗೆ ಸೆಡ್ಡು ಹೊಡೆಯಲು ಸಣ್ಣದಾಗಿ ಎಡವಿದೆ. ಆದರೆ, ಬಾಹುಬಲಿಯ ಸಾಮರ್ಥ್ಯವನ್ನು ಯಾರೂ ಕಡೆಗಣಿಸುವಂತಿಲ್ಲ. ಆನ್‌ಲೈನ್ ಟಿಕೆಟಿಂಗ್ ವೆಬ್‌ಸೈಟ್‌ಗಳ ಮಾಹಿತಿ ಪ್ರಕಾರ, ಹಿಂದಿ ಆವೃತ್ತಿ ಶನಿವಾರ ಮತ್ತು ಭಾನುವಾರದಂದು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ನಿರೀಕ್ಷೆಯಿದೆ. ವೀಕೆಂಡ್‌ನಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ದೌಡಾಯಿಸಿದರೆ, ಈ ಚಿತ್ರದ ಸಂಪೂರ್ಣ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ.

ಒಟ್ಟಾರೆ, 'ಬಾಹುಬಲಿ - ದಿ ಎಪಿಕ್' ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ರೀ-ರಿಲೀಸ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಹಾದಿಯಲ್ಲಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸತ್ಯರಾಜ್, ರಮ್ಯಾ ಕೃಷ್ಣನ್ ಮತ್ತು ನಾಸರ್ ಅವರಂತಹ ದಿಗ್ಗಜ ತಾರಾಗಣವಿರುವ ಈ ಚಿತ್ರ, ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಇನ್ನೆಷ್ಟು ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕು.