ಇದು ಸ್ವತಃ ನಟಿ ರಶ್ಮಿಕಾ ಮಂದಣ್ಣರ ಮನಸಿನ ಮಾತು' ಎಂದಿವೆ ಹಲವು ಕಾಮೆಂಟ್‌ಗಳು. ಈ ವಿಡಿಯೋದಲ್ಲಿ ರಶ್ಮಿಕಾ ಹೇಳಿರುವ ಮಾತಿಗೆ ಕೆಲವರು ಅವರ ಪರವಾಗಿ ನಿಂತಿದ್ದರೆ ಹಲವರು ಅವರ ವಿರುದ್ಧವಾಗಿ ನಿಂತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಹಜ. ನೀವೇನಂತೀರಾ?
ರಶ್ಮಿಕಾರ ಮೊದಲ ಬ್ರೇಕಪ್‌ಗೆ ಇದೇನಾ ಕಾರಣ?
ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಈಗ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿಡಿಯೋವೊಂದು ಈಗ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರೋ ಈ ವಿಡಿಯೋದಲ್ಲಿ ಸ್ವತಃ ನಟಿ ರಶ್ಮಿಕಾ ಅವರು ಕೆಲವು ಮಾತುಗಳಲ್ಲಿ ಸೂಚ್ಯವಾಗಿ ಕೆಲವು ಸಂಗತಿಗಳನ್ನು ಹೇಳಿದ್ದಾರೆ. ಆದರೆ, ಅದು ತಮ್ಮದೇ ಬ್ರೇಕಪ್‌ಗೆ ಸಂಬಂಧಿಸಿದ ವಿಷ್ಯ ಹೇಳಿದ್ದಾ ಅಥವಾ ಜನರಲ್ ಆಗಿ ಹೇಳಿದ್ದಾ ಎಂಬುದನ್ನು ನಿಖರವಾಗಿ ಹೇಳೋದು ಕಷ್ಟ ಎನ್ನಬಹುದು. ಆದರೆ, ಆ ವಿಡಿಯೋ ನೋಡಿದರೆ ಏನೋ ಒಂದು ವಿಷಯ ಅರ್ಥವಾಗುವಂತಿದೆ..
ಈ ವಿಡಿಯೋದಲ್ಲಿ ನಟಿ ರಶ್ಮಿಕಾ 'ಅವಳು ಹೇಳಿದ್ದಾಳೆ'- ಕೆಲವೊಂದು ಮಹಿಳೆಯರು ತಮಗೆ ಇಷ್ಟವಿಲ್ಲದಿದ್ದರೂ ಸುತ್ತಲಿನ ಸಮಾಜಕ್ಕೋಸ್ಕರ ಕೆಲವು ಸಂಬಂಧಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಅವರ ಸುತ್ತಮುತ್ತಲೂ ಇರುವ ಮನೆಯವರು, ಸಮಾಜ ಹಾಗೂ ಆಪ್ತರ ಕಾರಣಕ್ಕಾಗಿ ಆ ಸಂಬಂಧವನ್ನು ಒಪ್ಪಿಕೊಂಡು ಮುಂದುವರಿಸುತ್ತಾ ಇರಿತ್ತಾರೆ. ಆದರೆ, ಅವರು ಮಾತ್ರ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆತನ ಜೊತೆ ಕಮಿಟ್ ಆಗಿರೋದಿಲ್ಲ.
ಯಾವಾಗ ಆ ಹೆಣ್ಣುಮಗಳು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ 'ನನಗೆ ಈ ಸಂಬಂಧ ಇಷ್ಟವಿಲ್ಲ, ನಾನು ಈ ಸಂಬಂಧದಲ್ಲಿ ಮುಂದುವರಿಯಲಾರೆ' ಎಂದು ಹೇಳಿದಾಗ ಆ ವ್ಯಕ್ತಿಗೆ ಅದು ಆಕಸ್ಮಿಕ ಎನ್ನಿಸಿ ಶಾಕ್ ಆಗಬಹುದು. ಆದರೆ, ಹೇಳಿದವರಿಗೆ ಅದು ಅಚ್ಚರಿ ಎನ್ನಿಸುವುದಿಲ್ಲ. ಕಾರಣ, ಅವರ ಮಟ್ಟಿಗೆ ಅದು ಶುರುವಿನಿಂದಲೂ ಸಂಬಂಧವೇ ಆಗಿರುವುದಿಲ್ಲ. ಹೊರಗಡೆ ಅದೇನೇ ನಡೆಯುತ್ತಿದ್ದರೂ ಒಳಗಡೆ ಆ ಹುಡುಗಿ ಈ ಸಂಬಂಧದಲ್ಲಿ ತೊಡಗಿಸಿಕೊಂಡಿರುವುದೇ ಇಲ್ಲ, ಆಕೆಯ ಮಟ್ಟಿಗೆ ಅದು ಸಂಬಂಧವೇ ಆಗಿರುವುದಿಲ್ಲ.
ಆದರೆ ಬಹಳಷ್ಟು ಸಾರಿ ಇಂಥ ಮಹಿಳೆಯರು ಹೇಳಿಕೊಳ್ಳಲು ಧೈರ್ಯ ಸಾಲದೇ ಅದೇ ರಿಲೇಶನ್‌ಶಿಪ್ ಬಲೆಯಲ್ಲಿ ಜೀವನವಿಡೀ ಬಿದ್ದು ಒದ್ದಾಡುತ್ತಾರೆ. ಆದರೆ, ಎದುರಿಗಿರುವ ಜೀವನವನ್ನು ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ನಡೆಸಲು ಬಯಸುವ ಮಹಿಳೆಯರು ಇಂಥ ಬೇಸರದ, ಒಪ್ಪಿಕೊಳ್ಳಲಾಗದ ಸಂಬಂಧದ ಬಲೆಯಿಂದ ಬಿಡಿಸಿಕೊಂಡು ಹೊರಗೆ ಬರುತ್ತಾರೆ' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ
ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಬಗ್ಗೆ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. 'ಇದು ಯಾರೋ 'ಅವಳು' ಹೇಳಿದ್ದಲ್ಲ, ಬದಲಿಗೆ ಇದು ಸ್ವತಃ ನಟಿ ರಶ್ಮಿಕಾ ಮಂದಣ್ಣರ ಮನಸಿನ ಮಾತು' ಎಂದಿವೆ ಹಲವು ಕಾಮೆಂಟ್‌ಗಳು. ಈ ವಿಡಿಯೋದಲ್ಲಿ ರಶ್ಮಿಕಾ ಹೇಳಿರುವ ಮಾತಿಗೆ ಕೆಲವರು ಅವರ ಪರವಾಗಿ ನಿಂತಿದ್ದರೆ ಹಲವರು ಅವರ ವಿರುದ್ಧವಾಗಿ ನಿಂತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಹಜ. ಆ ಬಗ್ಗೆ ಯಾರೂ ಏನೂ ಒಪಿನಿಯನ್ ಹೊಂದಬೇಕಾಗಿಲ್ಲ.
ನಗುಮೊಗದಿಂದ ಸಂವಹನ ನಡೆಸುವ ಪರ್ಸನ್ ನನಗೆ ಇಷ್ಟವಾಗುತ್ತಾರೆ
ಆದರೆ, ಮತ್ತೊಂದು ಕಡೆ ಸಂದರ್ಶನದಲ್ಲಿ ನಟಿ ರಶ್ಮಿಕಾ ಅವರು 'ನನಗೆ ಸೀರಿಯಸ್ಸಾಗಿ ಇರುವ ವ್ಯಕ್ತಿಗಿಂತ ಜಾಲಿಯಾಗಿ ನಗುತ್ತ ಮಾತನಾಡುವ ವ್ಯಕ್ತ ಇಷ್ಟ. ನನ್ನ ಬಳಿ ಮಾತ್ರವಲ್ಲ, ಎಲ್ಲರೊಂದಿಗೆ ನಗುಮೊಗದಿಂದ ಸಂವಹನ ನಡೆಸುವ ಪರ್ಸನ್ ನನಗೆ ಇಷ್ಟವಾಗುತ್ತಾರೆ. ಅದೇ ಕಾರಣಕ್ಕೆ ನನಗೆ ವಿಜಯ್ ದೇವರಕೊಂಡ (Vijay Deverakonda) ಇಷ್ಟವಾಗುತ್ತಾರೆ' ಎಂದಿದ್ದಾರೆ. ಅಂದರೆ, ರಶ್ಮಿಕಾ ಹೇಳಿದಂತೆ, ನಟ ವಿಜಯ್ ಅವರಲ್ಲಿ ಇರುವ ಆ ಕ್ವಾಲಿಟಿ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರಲ್ಲಿ ಇಲ್ಲವೇ? ಹಾಗಂತ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವರು ಪ್ರಶ್ನಿಸಿ ಕಾಮೆಂಟ್ ಮಾಡುತ್ತಿದ್ದಾರೆ.
ಹೌದು, ನಟ ರಕ್ಷಿತ್ ಶೆಟ್ಟಿಯವರು ಮಾತು ಕಡಿಮೆ, ಅಗತ್ಯವಿದ್ದರೆ ಮಾತ್ರ ಹಿತಮಿತವಾಗಿ ಮಾತನ್ನಾಡುವ ಸ್ವಭಾವದವರು. ಅವರಿಗೂ ನಟಿ ರಶ್ಮಿಕಾಗೂ ಎಂಗೇಜ್ಮೆಂಟ್ ಆದಾಗ ವಯಸ್ಸಿನಲ್ಲಿ ಬಹಳಷ್ಟು ಅಂತರವಿತ್ತು. ಈ ಕಾರಣಕ್ಕೆ ರಶ್ಮಿಕಾ ಬಯಸುವ ಗುಣ ಅವರಿಗಿಂತ ಸಾಕಷ್ಟು ಹಿರಿಯರಾಗಿರುವ ರಕ್ಷಿತ್ ಅವರಲ್ಲಿ ಇರಲಿಕ್ಕಿಲ್ಲ. ಅದೇ ಕಾರಣಕ್ಕೆ ರಶ್ಮಿಕಾ ಅವರು ಅದರಿಂದ ಹೊರಗೆ ಬಂದಿರಬಹುದು ಎನ್ನುತ್ತಾರೆ ಹಲವರು. ಕೆಲವರು ಈ ಬಗ್ಗೆ 'ಮದುವೆ ಮಾಡಿಕೊಂಡು ಆ ಬಳಿಕ ಡಿವೋರ್ಸ್ ಮಾಡೋ ಬದಲು ಈ ನಿರ್ಧಾರವೇ ಎಷ್ಟೊ ಒಳ್ಳೆಯದು' ಎಂದಿದ್ದಾರೆ. ಯಾರ ಭಾವನೆ ಸರಿ ಯಾರದು ತಪ್ಪು? ನಿಮಗೆ ಏನೆನ್ನಿಸುತ್ತೆ?
