ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಪ್ರೆಗ್ನೆಂಟ್ ಎನ್ನುವ ಚರ್ಚೆ ಮಧ್ಯೆ ಜಹೀರ್ ಇಕ್ಬಾಲ್ ವರ್ತನೆ ಕುತೂಹಲ ಹೆಚ್ಚಿಸಿದೆ. ಇದು ಪ್ರ್ಯಾಂಕ್, ಟ್ರೋಲರ್ ಬಾಯಿ ಮುಚ್ಚಿಸಿದ್ದಾರೆ ಜಹೀರ್ ಅಂತ ಫ್ಯಾನ್ಸ್ ಹೇಳಿದ್ರೂ ಅನುಮಾನ ಬರ್ತಿದೆ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಮದುವೆಯಾಗಿ ಒಂದುವರೆ ವರ್ಷ ಕಳೆದಿದೆ. ಜೂನ್ 23, 2024ರಂದು ಸೋನಾಕ್ಷಿ, ಜಹೀರ್ ಇಕ್ಬಾಲ್ (Zaheer Iqbal) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಸೋನಾಕ್ಷಿ ಸಿನ್ಹಾ ಪ್ರೆಗ್ನೆಂಟ್ ಎನ್ನುವ ವದಂತಿ ಹಬ್ಬಿತ್ತು. ಅದಕ್ಕೆ ಸೋನಾಕ್ಷಿ ಉತ್ತರ ಕೂಡ ನೀಡಿದ್ದರು. ಈಗ ಮತ್ತೆ ಸೋನಾಕ್ಷಿ ಸಿನ್ಹಾ ಪ್ರೆಗ್ನೆಂಟ್ ಎನ್ನುವ ಮಾತುಗಳು ಕೇಳಿ ಬರ್ತಿವೆ. ಫ್ಯಾಷನ್ ಡಿಸೈನರ್ ವಿಕ್ರಮ್ ಫಡ್ನಿಸ್ ಕಾರ್ಯಕ್ರಮದಲ್ಲಿ ಸೋನಾಕ್ಷಿ ನೋಡಿದ್ದ ಫ್ಯಾನ್ಸ್, ಸೋನಾಕ್ಷಿ ಪ್ರೆಗ್ನೆಂಟ್ ಎನ್ನುವ ಸುದ್ದಿ ಹರಡಿದ್ದರು. ಈಗ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಬಾಲ್, ಪತ್ನಿ ಹೊಟ್ಟೆ ಮುಟ್ಟಿ ಕಾಲೆಳೆದಿದ್ದಾರೆ.
ಸೋನಾಕ್ಷಿ ಹೊಟ್ಟೆ ಮುಟ್ಟಿ ಏನು ಸಿಗ್ನಲ್ ನೀಡಿದ್ರು ಜಹೀರ್ ಇಕ್ಬಾಲ್? :
ಬಾಲಿವುಡ್ ನಲ್ಲಿ ಈಗ ದೀಪಾವಳಿ ಪಾರ್ಟಿ ಅಬ್ಬರ. ಸೆಲೆಬ್ರಿಟಿಗಳು ದೀಪಾವಳಿ ಪಾರ್ಟಿ ನೀಡ್ತಿದ್ದಾರೆ. ರಮೇಶ್ ತೌರಾನಿ ಕೂಡ ದೀಪಾವಳಿ ಪಾರ್ಟಿ ಏರ್ಪಡಿಸಿದ್ದರು. ಪಾರ್ಟಿಯಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಪಾಲ್ಗೊಂಡಿದ್ದರು. ಈ ಟೈಂನಲ್ಲಿ ಮೀಡಿಯಾ ಮುಂದೆ ಫೋಸ್ ನೀಡೋಕೆ ಮುಂದಾದ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ವಿಡಿಯೋ ವೈರಲ್ ಆಗಿದೆ. ಜಹೀರ್ ಇಕ್ಬಾಲ್, ಸೋನಾಕ್ಷಿಗೆ ಪ್ರ್ಯಾಂಕ್ ಮಾಡಿದ್ದಾರೆ. ಸೋನಾಕ್ಷಿ ಹೊಟ್ಟೆ ಮುಟ್ಟಿ ತಮಾಷೆ ಮಾಡಿದ್ದಾರೆ. ಸೋನಾಕ್ಷಿ ಹೊಟ್ಟೆ ಮುಟ್ಟಿದ ಜಹೀರ್, ಅಸಲಿ ಚಿನ್ನ ಎಂದಿದ್ದಾರೆ. ಏನಾಗ್ತಿದೆ ಎಂಬುದು ಗೊತ್ತಾಗ್ತಿದ್ದಂತೆ ಸೋನಾಕ್ಷಿ, ಜಹೀರ್ ಅಂತ ಕಿರುಚಿಕೊಂಡಿದ್ದಲ್ದೆ ನಕ್ಕಿದ್ದಾರೆ. ಇಷ್ಟಕ್ಕೆ ಜಹೀರ್ ಬಿಡ್ಲಿಲ್ಲ, ಮತ್ತೊಮ್ಮೆ ಸೋನಾಕ್ಷಿ ಹೊಟ್ಟೆ ಟಚ್ ಮಾಡಿದ್ದಾರೆ.
ಅಮ್ಮನ ಪಿಂಡದಾನಕ್ಕೆ ಬಿಹಾರಕ್ಕೆ ಹೋದ Kiccha Sudeep: ಎಂಥೆಂಥೋ ಪ್ರಶ್ನೆ ಕೇಳಿ ಮರ್ಯಾದೆ ಕಳ್ಕೊಂಡ ಪತ್ರಕರ್ತರು
ಪ್ರ್ಯಾಂಕ್ ಮಾಡೋದ್ರಲ್ಲಿ ಜಹೀರ್ ಮುಂದಿದ್ದಾರೆ. ಇದೊಂದೇ ಟೈಂ ಅಲ್ಲ, ಅನೇಕ ಬಾರಿ ಸೋನಾಕ್ಷಿಗೆ ಪ್ರ್ಯಾಂಕ್ ಮಾಡಿದ್ದಿದೆ. ಇಬ್ರು ವಿದೇಶ ಸುತ್ತಲು ಹೋದಾಗ ಸೋನಾಕ್ಷಿ ಬ್ಯಾಗ್ ತೆಗೆದಿಟ್ಟುಕೊಂಡಿದ್ದ ಜಹೀರ್ ಇಕ್ಬಾಲ್, ಅಡಗಿ ನಿಂತು ಸೋನಾಕ್ಷಿ ಅವ್ರನ್ನು ಹೆದರಿಸ್ತಾರೆ. ಸೋನಾಕ್ಷಿ ಹಾಗೂ ಜಹೀರ್ ಇಕ್ಬಾಲ್, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡ್ತಾ ಫ್ಯಾನ್ಸ್ ಗೆ ಮನರಂಜನೆ ನೀಡ್ತಿರುತ್ತಾರೆ. ಬೇರೆ ಧರ್ಮದ ಜೋಡಿ, ಕೆಲವೇ ದಿನಗಳಲ್ಲಿ ಡಿವೋರ್ಸ್ ಆಗುತ್ತೆ ಅಂತ ಮದುವೆ ಟೈಂನಲ್ಲಿ ಜನ ಮಾತನಾಡ್ಕೊಂಡಿದ್ದರು. ಆದ್ರೀಗ ಇಬ್ಬರು ಖುಷಿಯಾಗಿರೋದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.
ವಿಡಿಯೋ ನೋಡಿ ಫ್ಯಾನ್ಸ್ ಹೇಳಿದ್ದೇನು? :
ಜಹೀರ್ ಇಕ್ಬಾಲ್ ಪ್ರ್ಯಾಂಕ್ ಮಾಡ್ತಿದ್ದೇನೆ ಅಂದ್ರೂ ಫ್ಯಾನ್ಸ್ ನಂಬೋಕೆ ಸಿದ್ಧ ಇಲ್ಲ. ಜಹೀರ್, ತಮಾಷೆ ಮೂಲಕವೇ ಸತ್ಯ ಹೇಳಿದ್ದಾರೆ. ಸೋನಾಕ್ಷಿ ಪ್ರೆಗ್ನೆಂಟ್ ಎಂಬುದನ್ನು ಅವರು ಈ ಮೂಲಕ ಫ್ಯಾನ್ಸ್ ಗೆ ತಿಳಿಸಿದ್ದಾರೆ ಅಂತ ಜನ ಕಮೆಂಟ್ ಮಾಡ್ತಿದ್ದಾರೆ. ಮತ್ತೆ ಕೆಲವರು ಇವ್ರ ಸಂತೋಷದಲ್ಲೂ ನೆಗೆಟಿವ್ ಹುಡುಕುವ ಪ್ರಯತ್ನ ಮಾಡಿದ್ದಾರೆ. ಮೀಡಿಯಾ ಮುಂದೆ, ಜನರ ಮುಂದೆ ಖುಷಿಯಾಗಿರುವ ವ್ಯಕ್ತಿ ಒಳಗೆ ಸಿಕ್ಕಾಪಟ್ಟೆ ನೋವಿನಲ್ಲಿರ್ತಾನೆ ಎನ್ನುವ ಕಮೆಂಟ್ ಕೂಡ ಮಾಡಿದ್ದಾರೆ. ಜಹೀರ್ ಇಕ್ಬಾಲ್ ಗೆ ಮಗು ಬೇಕಾಗಿದೆ. ಹಾಗಾಗಿಯೇ ಸಿಗ್ನಲ್ ನೀಡ್ತಿದ್ದಾರೆ ಅಂತ ಕೆಲವರು ಹೇಳಿದ್ರೆ ಮತ್ತೆ ಕೆಲವರು ಕ್ಯೂಟ್ ಕಪಲ್, ಜಹೀರ್ ಬೆಸ್ಟ್ ಹಸ್ಬೆಂಟ್ ಎನ್ನುವ ಕಮೆಂಟ್ ಮಾಡಿದ್ದಾರೆ.
ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾದ 'ಕೆಡಿ' ಡೈರೆಕ್ಟರ್: ಅಜಯ್ ದೇವಗನ್ ಜೊತೆಗೆ ಜೋಗಿ ಪ್ರೇಮ್ ಸಿನಿಮಾ!
ಇನ್ನು ಸೋನಾಕ್ಷಿ ಸಿನ್ಹಾ ಸಿನಿಮಾ ಬಗ್ಗೆ ಹೇಳೋದಾದ್ರೆ, ಸೋನಾಕ್ಷಿ ಸದ್ಯ ಸಿನಿಮಾದಿಂದ ದೂರವಿದ್ದಾರೆ. ನಿಕಿತಾ ರಾಯ್ ಸೋನಾಕ್ಷಿ ಅವರ ಕೊನೆಯ ಸಿನಿಮಾ. ಈಗ ಡಾ-ಬ್ಯಾಂಗ್: ದಿ ಟೂರ್ ರೀಲೋಡೆಡ್ ಟು ಕತಾರ್ ಗೆ ಸೋನಾಕ್ಷಿ ತಯಾರಿ ನಡೆಸ್ತಿದ್ದಾರೆ. ಈ ಭವ್ಯ ಬಾಲಿವುಡ್ ಸಂಗೀತ ಕಚೇರಿ ನವೆಂಬರ್ 14, 2025 ರಂದು ದೋಹಾದ ಏಷ್ಯನ್ ಟೌನ್ ಆಂಫಿಥಿಯೇಟರ್ನಲ್ಲಿ ನಡೆಯಲಿದೆ.
