Packing work : ಮನೆಯಲ್ಲೇ ಪ್ಯಾಕಿಂಗ್ ಜಾಬ್ ಮಾಡೋದು ಹೇಗೆ? ಎಲ್ಲಿ ಸಿಗುತ್ತೆ ಕೆಲ್ಸ? ಇದಕ್ಕೆ ಏನೆಲ್ಲ ಅರ್ಹತೆ ಇರ್ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕೆಲ್ಸ ಮಾಡೋ ಆಸಕ್ತಿ ಇದೆ, ಅಲ್ಲಿ ಇಲ್ಲಿ ಒಂದರಿಂದ ಎರಡು ಗಂಟೆ ಸಮಯ ಸಿಗುತ್ತೆ ಅನ್ನೋರು ನಮ್ಮಲ್ಲಿ ಸಿಕ್ಕಾಪಟ್ಟೆ ಜನರಿದ್ದಾರೆ. ವಿಶೇಷವಾಗಿ ಮಹಿಳೆಯರು. ಮಕ್ಕಳು, ಮನೆ ಕಾರಣಕ್ಕೆ ಕೆಲ್ಸಕ್ಕೆ ಅಂತ ಮನೆಯಿಂದ ಹೊರಗೆ ಹೋಗೋಕೆ ಅವ್ರಿಗೆ ಸಾಧ್ಯವಿಲ್ಲ. ಮಕ್ಕಳು ಸ್ಕೂಲಿಗೆ ಹೋದ್ಮೇಲೆ ಮನೆಯಲ್ಲಿ ಮಾಡೋಕೆ ಹೆಚ್ಚಿನ ಕೆಲ್ಸ ಇರೋದಿಲ್ಲ. ಈ ಬಿಡುವಿನ ಸಮಯದಲ್ಲಿ ಏನಾದ್ರೂ ಕೆಲ್ಸ ಮಾಡ್ಬೇಕು ಅಂತ ಅನೇಕರು ಹುಡುಕಾಟ ನಡೆಸ್ತಿರ್ತಾರೆ. ಸೋಶಿಯಲ್ ಮೀಡಿಯಾದಲ್ಲಿ, ʻಮನೆಯಲ್ಲೇ ಕುಳಿತು ಪ್ಯಾಕಿಂಗ್ ಕೆಲ್ಸ ಮಾಡಿ ʼ ಎನ್ನುವ ಜಾಹೀರಾತುಗಳು ಬರ್ತಿರುತ್ತವೆ. ಆದ್ರೆ ಅದನ್ನು ನಂಬೋದು ಒಂದ್ಕಡೆ ಕಷ್ಟವಾದ್ರೆ ಇನ್ನೊಂದು ಕಡೆ ನಿಜವಾಗ್ಲೂ ಇಂಥ ಕೆಲ್ಸ ಇರುತ್ತಾ ಎನ್ನುವ ಪ್ರಶ್ನೆ ಕಾಡುತ್ತದೆ. ನಾವಿಂದು ಈ ಪ್ಯಾಕಿಂಗ್ ಜಾಬ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಪ್ಯಾಕಿಂಗ್ ಕೆಲ್ಸ (Packing work) ಅಂದ್ರೇನು? : ಪ್ರೊಡಕ್ಟ್ ತಯಾರಿಸಿದ್ರೆ ಆಗ್ಲಿಲ್ಲ ಅದನ್ನು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸಬೇಕು. ಇದ್ರಲ್ಲಿ ಪ್ಯಾಕಿಂಗ್ ಇಂಪಾರ್ಟೆಂಟ್ ಆಗುತ್ತೆ. ಕಂಪನಿ, ಚಾಕೊಲೇಟ್ (Chocolate), ಕ್ಯಾಂಡಿ, ತಿಂಡಿ ಅಥವಾ ಸಣ್ಣ FMCG ವಸ್ತುಗಳನ್ನು ತಯಾರಿಸಿದಾಗ ಅವುಗಳ ಪ್ಯಾಕಿಂಗ್ ಗೆ ಹೆಚ್ಚಿನ ಗಮನ ನೀಡುತ್ತೆ. ಈ ಕೆಲ್ಸಕ್ಕೆ ಕಂಪನಿಗಳು ಔಟ್ ಸೋರ್ಸ್ ಮಾಡುತ್ವೆ. ಮನೆಯಿಂದಲೇ ಕೆಲ್ಸ ಮಾಡುವವರಿಗೆ ಪ್ಯಾಕಿಂಗ್ ಕೆಲ್ಸ ನೀಡುತ್ವೆ. ಕೆಲ್ಸ ಸುಲಭ ಹಾಗೇ ಹೆಚ್ಚಿನ ಟ್ರೈನಿಂಗ್ ಅಗತ್ಯ ಇಲ್ಲ.
ಎಷ್ಟೇ ಸಂಬಳ ದುಡಿದ್ರೂ ಹಣ ಉಳಿಸಲು ಆಗುತ್ತಿಲ್ಲವೇ? ಹಾಗಾದರೆ 30-30-30-10 ನಿಯಮ ಪಾಲಿಸಿ ನೋಡಿ!
ಯಾರು ಈ ಕೆಲ್ಸ ಮಾಡ್ಬಹುದು? : ಈ ಪ್ಯಾಕಿಂಗ್ ಕೆಲ್ಸವನ್ನು ಯಾರು ಮಾಡ್ಬಹುದು ಎನ್ನುವ ಪ್ರಶ್ನೆಗೆ ಉತ್ತರ ಸರಳ. ಇದನ್ನು ಯಾರು ಬೇಕಾದ್ರೂ ಮಾಡ್ಬಹುದು. ಮನೆಯಲ್ಲಿರುವ ಮಹಿಳೆಯರು, ನಿವೃತ್ತಿ ಹೊಂದಿದವರು ಇಲ್ಲವೆ ಪಾರ್ಟ್ ಟೈಂ ಕೆಲ್ಸ ಬಯಸುವವರು ಇದನ್ನು ಮಾಡ್ಬಹುದು. ದಿನಕ್ಕೆ ಒಂದೆರಡು ಗಂಟೆ ಅಗತ್ಯವಿರುತ್ತದೆ.
ಎಲ್ಲಿ ಸಿಗುತ್ತೆ ಪ್ಯಾಕಿಂಗ್ ಕೆಲ್ಸ? : ಸಾಮಾನ್ಯವಾಗಿ ಎಲ್ಲರನ್ನು ಕಾಡುವ ದೊಡ್ಡ ಪ್ರಶ್ನೆ ಇದು. ನಿಮಗೆ ಪ್ಯಾಕಿಂಗ್ ಕೆಲ್ಸದಲ್ಲಿ ಆಸಕ್ತಿ ಇದ್ರೆ ಎಫ್ಎಂಸಿಜಿ ಕಂಪನಿ ಅಥವಾ ಲೋಕಲ್ ಡಿಸ್ಟ್ರಿಬ್ಯೂಟರ್ ಕಾಂಟೆಕ್ಟ್ ಮಾಡಿ. ಕೆಲ ಕಂಪನಿಗಳು ಆನ್ಲೈನ್ ನಲ್ಲಿ ಇದ್ರ ಬಗ್ಗೆ ಅಡ್ವಟೈಸ್ ನೀಡುತ್ವೆ. ಫ್ರೀಲಾನ್ಸ್ ವೆಬ್ ಸೈಟ್ (Freelance Websites), ಜಾಬ್ ಪೋರ್ಟಲ್ (Job Portals), ನೌಕ್ರಿ (Naukri), ಇಂಡೀಡ್ (Indeed), ಲಿಂಕ್ಡ್ ಇನ್ (LinkedIn) ವೆಬ್ಸೈಟ್ ಗಳಲ್ಲಿಯೂ ವರ್ಕ್ ಫ್ರಂ ಹೋಮ್ ಬಗ್ಗೆ ಮಾಹಿತಿ ಇರುತ್ತದೆ. ನೀವು ಈ ಕೆಲ್ಸಕ್ಕೆ ವೆಬ್ ಸೈಟ್ ಮೂಲಕ ಅಪ್ಲೈ ಮಾಡ್ಬಹುದು.
ಏನೆಲ್ಲ ಅಗತ್ಯ ವಸ್ತುಗಳು ಬೇಕು? : ಪ್ಯಾಕಿಂಗ್ ಕೆಲ್ಸ ಮಾಡಲು ಹೆಚ್ಚಿನ ಯಾವುದೇ ವಸ್ತುಗಳು ಅಗತ್ಯವಿರುವುದಿಲ್ಲ. ಮನೆಯಲ್ಲಿಯೇ ನೀವು ಸ್ವಚ್ಛವಾದ ಜಾಗದಲ್ಲಿ ಇದನ್ನು ಮಾಡ್ಬಹುದು. ಉಳಿದ ವಸ್ತುಗಳನ್ನು ಕಂಪನಿ ನಿಮಗೆ ನೀಡುತ್ತದೆ. ತಿಂಡಿ ಪ್ಯಾಕಿಂಗ್ ಆಗಿದ್ದಲ್ಲಿ ಅದಕ್ಕೆ ಸ್ವಚ್ಛತೆಯ ಅಗತ್ಯವಿರುತ್ತದೆ. ಕೆಲ ಕಂಪನಿಗಳು ಕೆಲ್ಸ ನೀಡುವ ಮುನ್ನ ವಿಶೇಷ ಸೂಚನೆ ನೀಡುತ್ತದೆ. ಅದನ್ನು ಪಾಲಿಸಬೇಕು.
ವರ್ಷಕ್ಕೆ 520 ರೂ. ಕಟ್ಟಿ 10 ಲಕ್ಷ ವಿಮೆ ಜೊತೆ ಹಲವು ಫ್ರೀ ಕೊಡುಗೆ ಪಡೆಯಿರಿ! ಏನಿದು Post Office ಸ್ಕೀಮ್?
ಪ್ಯಾಕಿಂಗ್ ಕೆಲ್ಸದಿಂದ ಗಳಿಕೆ ಎಷ್ಟು? : ನೀವು ಯಾವ ವಸ್ತುವನ್ನು ಪ್ಯಾಕ್ ಮಾಡ್ತಿದ್ದೀರಿ ಮತ್ತು ಎಷ್ಟು ಮಾಡ್ತಿದ್ದೀರಿ ಎಂಬುದನ್ನು ಇದು ಅವಲಂಭಿಸಿದೆ. ಬಹುತೇಕ ಕಂಪನಿಗಳು ಡೇಲಿ ನಿಮಗೆ ಪೇಮೆಂಟ್ ಮಾಡುತ್ತವೆ. ನೀವು ಹೆಚ್ಚಿನ ಸಮಯ ನೀಡಿದ್ರೆ ದಿನಕ್ಕೆ 1500 ರೂಪಾಯಿಯಿಂದ 2000 ರೂಪಾಯಿ ಗಳಿಸಬಹುದು. ಅಂದ್ರೆ ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿ ಸಂಪಾದನೆ ಮಾಡ್ಬಹುದು.
ಅಗತ್ಯ ಮಾಹಿತಿ : ಪ್ಯಾಕಿಂಗ್ ಹೆಸರಿನಲ್ಲಿ ಈಗ ಮೋಸ ನಡೆಯುತ್ತಿದೆ. ನೀವು ಕೆಲ್ಸ ಒಪ್ಪಿಕೊಳ್ಳುವ ಮುನ್ನ ಅದ್ರ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿ. ಜೊತೆಗೆ ಅಗ್ರಿಮೆಂಟನ್ನು ಸರಿಯಾಗಿ ಓದಿ. ಯಾವುದೇ ಕಾರಣಕ್ಕೂ ಕಂಪನಿ ನಿಮ್ಮಿಂದ ಹಣ ಕೇಳಿದ್ರೆ ಅಂಥ ಕೆಲ್ಸವನ್ನು ಒಪ್ಪಿಕೊಳ್ಳಬೇಡಿ.
