ಕೆನಡಾದಲ್ಲಿ ನ್ಯೂರಾಲಿಂಕ್‌ನ ಮೆದುಳಿನ ಚಿಪ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮಾನವ ಪ್ರಯೋಗದ ಯಶಸ್ಸಿನ ನಂತರ, ಈ ತಂತ್ರಜ್ಞಾನವು ಪಾರ್ಶ್ವವಾಯು ಮತ್ತು ದೃಷ್ಟಿ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ಮೂಡಿಸಿದೆ.
ತಂತ್ರಜ್ಞಾನ ಜಗತ್ತಿನಲ್ಲಿ ಪ್ರತಿದಿನ ಹೊಸ ಆವಿಷ್ಕಾರಗಳು ಸೃಷ್ಟಿಯಾಗುತ್ತಿವೆ, ಆದರೆ ಎಲೋನ್ ಮಸ್ಕ್ ಅವರ ಕಂಪನಿ ನ್ಯೂರಾಲಿಂಕ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಕೆನಡಾದಲ್ಲಿ ಮೊದಲ ಬಾರಿಗೆ ಮೆದುಳಿನ ಚಿಪ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ, ಇದು ವಿಜ್ಞಾನ ಜಗತ್ತಿಗೆ ಮಾತ್ರವಲ್ಲ, ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಹೊಸ ಭರವಸೆಯ ಕಿರಣವಾಗಿದೆ. ವಿಶೇಷವೆಂದರೆ, ಈ ಸಾಧನೆಯನ್ನು ಅಮೆರಿಕದ ಸಹಾಯವಿಲ್ಲದೆ ಸಾಧಿಸಲಾಗಿದೆ.
ಕೆನಡಾದಲ್ಲಿ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ: ವೈ ಕಾಂಬಿನೇಟರ್ ಜೊತೆಗಿನ ಫೈರ್‌ಸೈಡ್ ಚಾಟ್‌ನಲ್ಲಿ ಎಲೋನ್ ಮಸ್ಕ್, 'ನಾವು ಕೆನಡಾದಲ್ಲಿ ಎರಡು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ್ದೇವೆ. ಅಮೆರಿಕದ ಸಹಾಯವಿಲ್ಲದೆ ಈ ಮೈಲಿಗಲ್ಲನ್ನು ಸಾಧಿಸಿದ್ದೇವೆ' ಎಂದು ಹೇಳಿದ್ದಾರೆ. ಕಂಪನಿಯ ಸಹ-ಸಂಸ್ಥಾಪಕ ಡೊಂಗ್ಜಿನ್ 'ಡಿಜೆ' ಸಿಯೋ, ಕಳೆದ ಕೆಲವು ವಾರಗಳಲ್ಲಿ ಒಟ್ಟು ಮೂರು ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಎಕ್ಸೈಟಿಂಗ್ ಅಪ್ಡೇಟ್ಸ್ ಬರಲಿವೆ ಎಂದು ಅವರು ಭರವಸೆ ನೀಡಿದ್ದಾರೆ. ಎಲಾನ್ ಮಸ್ಕ್‌ರ ಈ ಘೋಷಣೆಯು ಜಾಗತಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬ್ರೈನ್ ಚಿಪ್ ಅಂತರರಾಷ್ಟ್ರೀಯ ವಿಸ್ತರಣೆ: ನ್ಯೂರಾಲಿಂಕ್ ತನ್ನ ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ (BCI) ತಂತ್ರಜ್ಞಾನವನ್ನು ಜಾಗತಿಕವಾಗಿ ವಿಸ್ತರಿಸುವ ಗುರಿಯನ್ನು ಹೊಂದಿದೆ. ಕೆನಡಾದ ಜೊತೆಗೆ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೂ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವೇಗದ ವಿಸ್ತರಣೆಯು ನ್ಯೂರಾಲಿಂಕ್‌ನ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡುವ ದೃಷ್ಟಿಕೋನವನ್ನು ತೋರಿಸುತ್ತದೆ.
ನ್ಯೂರಾಲಿಂಕ್ ಶಸ್ತ್ರಚಿಕಿತ್ಸೆ: ಸಾಧನೆಗೆ ನೆಟಿಜೆನ್ಸ್ ಮೆಚ್ಚುಗೆ:
ಕಂಪನಿಯ ಮುಖ್ಯಸ್ಥ ಅಲನ್ ಮೇಸನ್ ತಂಡದ ಸಾಧನೆಯನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸಾಧನೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು, 'ನ್ಯೂರಾಲಿಂಕ್ ನರವೈಜ್ಞಾನಿಕ ದೃಷ್ಟಿ ನಷ್ಟವನ್ನು ಗುಣಪಡಿಸಬಹುದೇ?' ಎಂದು ಪ್ರಶ್ನಿಸಿದರೆ, ಮತ್ತೊಬ್ಬರು, 'ಕೆನಡಾದಲ್ಲಿ ಅಲ್ಟ್ರಾಸೌಂಡ್‌ಗಾಗಿ ಎರಡು ವರ್ಷ ಕಾಯಬೇಕಾಗಿದೆ, ಆದರೆ ಈಗ ಮೆದುಳಿನ ಇಂಪ್ಲಾಂಟ್‌ಗಳು ಶೀಘ್ರದಲ್ಲೇ ಲಭ್ಯವಾಗಬಹುದು' ಎಂದು ವ್ಯಂಗ್ಯವಾಡಿದ್ದಾರೆ.
ಮೊದಲ ಮಾನವ ಪ್ರಯೋಗ: ನ್ಯೂರಾಲಿಂಕ್ ತನ್ನ ಮೊದಲ ಮಾನವ ಪ್ರಯೋಗವನ್ನು ಸೆಪ್ಟೆಂಬರ್ 2023 ರಲ್ಲಿ ಆರಂಭಿಸಿತು. ಜನವರಿ 2024 ರಲ್ಲಿ, 31 ವರ್ಷದ ನೋಲ್ಯಾಂಡ್ ಅರ್ಬಾಗ್ ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಅನುಭವಿಸಿದರು. 2016 ರ ಕಾರು ಅಪಘಾತದಿಂದ ಕುತ್ತಿಗೆಯಿಂದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವರು, ಶಸ್ತ್ರಚಿಕಿತ್ಸೆಯ ನಂತರ ಚಿಪ್ 99% ನಿಖರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಭವಿಷ್ಯದ ಭರವಸೆ: ನ್ಯೂರಾಲಿಂಕ್‌ನ ಈ ತಂತ್ರಜ್ಞಾನವು ಭವಿಷ್ಯದಲ್ಲಿ ಹಲವು ಸಾಧ್ಯತೆಗಳನ್ನು ತೆರೆಯಬಹುದು. ಪಾರ್ಶ್ವವಾಯು ರೋಗಿಗಳಿಗೆ ಸ್ವಾವಲಂಬನೆ: ಚಿಪ್‌ಗಳು ರೋಗಿಗಳಿಗೆ ಮತ್ತೆ ಸ್ವತಂತ್ರ ಜೀವನ ನಡೆಸಲು ಸಹಾಯ ಮಾಡಬಹುದು.
ದೃಷ್ಟಿ ನಷ್ಟಕ್ಕೆ ಪರಿಹಾರ: ನರವೈಜ್ಞಾನಿಕ ದೃಷ್ಟಿ ಸಮಸ್ಯೆಗಳಿಗೆ ಚಿಕಿತ್ಸೆಯಾಗಬಹುದು. ಅಲ್ಲದೆ ಬ್ರೈನ್-ಚಿಪ್ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದೆ.
ಕೆನಡಾದಲ್ಲಿ ನಡೆದ ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಹೊಸ ದಿಕ್ಕನ್ನು ತೋರಿಸುತ್ತದೆ. ಎಲೋನ್ ಮಸ್ಕ್ ಮತ್ತು ಅವರ ತಂಡದ ಈ ಸಾಧನೆಯು ಕತ್ತಲೆಯಲ್ಲಿರುವ ರೋಗಿಗಳಿಗೆ ಬೆಳಕಿನ ಭರವಸೆ
