ಸುಲೈಮಾನಿ ಅಂತಿಮ ಕ್ಷಣ ವಿವರಿಸಿದ ಟ್ರಂಪ್‌!

By Suvarna NewsFirst Published Jan 20, 2020, 9:51 AM IST
Highlights

ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್‌ ಖಾಸಿಂ ಸುಲೈಮಾನಿ ಹತ್ಯೆ ಕಾರ್ಯಾಚರಣೆ| ಸುಲೈಮಾನಿ ಅಂತಿಮ ಕ್ಷಣ ವಿವರಿಸಿದ ಟ್ರಂಪ್‌| 

ವಾಷಿಂಗ್ಟನ್‌[ಜ.20]: ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್‌ ಖಾಸಿಂ ಸುಲೈಮಾನಿ ಹತ್ಯೆ ಕಾರ್ಯಾಚರಣೆಯ ಕ್ಷಣ ಕ್ಷಣಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಸವತ್ತಾಗಿ ವಿವರಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ದೇಣಿಗೆ ಸಂಗ್ರಹಕ್ಕಾಗಿ ರಿಪಬ್ಲಿಕನ್‌ ಪಕ್ಷದ ನಾಯಕರನ್ನು ಔತಣಕ್ಕೆ ಆಹ್ವಾನಿಸಿದ್ದ ಟ್ರಂಪ್‌ ಈ ವೇಳೆ ಕಾರ್ಯಾಚರಣೆ ವಿವರಗಳನ್ನು ನೀಡಿದ್ದಾರೆ.

ನಾಲಿಗೆ ಹಿಡಿತದಲ್ಲಿರಲಿ: ಇರಾನ್ ಪರಮೋಚ್ಛ ನಾಯಕನಿಗೆ ಟ್ರಂಪ್ ಎಚ್ಚರಿಕೆ!

ಸುಲೈಮಾನಿ ಕಾರ್ಯಾಚರಣೆ ವೇಳೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದರು. ಸುಲೈಮಾನಿ ಹತ್ಯೆಗೆ ಕೇವಲ 2.11 ನಿಮಿಷ ಮಾತ್ರ ಬಾಕಿ ಇದೆ, ಅವರೆಲ್ಲಾ ಕಾರಿನಲ್ಲಿದ್ದಾರೆ. ಇನ್ನೊಂದು ನಿಮಿಷ ಮಾತ್ರ ಬದುಕುಳಿದಿರುತ್ತಾರೆ ಎಂದು ಅಧಿಕಾರಿಗಳು ಹೇಳಿದರು.

ಕೊನೆಗೆ ಕ್ಷಿಪಣಿ ದಾಳಿಯಾಯಿತು. ಅದರ ಶಬ್ದ ಕಿವಿಯ ತಮಟೆ ಹೊಡೆದುಹೋಗುವಷ್ಟುಭೀಕರವಾಗಿತ್ತು. ಇದಾದ ಕೆಲವೇ ಸೆಕೆಂಡುಗಳಲ್ಲಿ ಸುಲೈಮಾನಿ ಸೇರಿ ಎಲ್ಲರೂ ಸತ್ತರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು ಎಂದು ಟ್ರಂಪ್‌ ವಿವರಿಸಿದ್ದಾರೆ.

ಮತ್ತೊಬ್ಬರ ಉಸಾಬರಿ ಬೇಡ: ಇರಾನ್-ಯುಎಸ್ ಯುದ್ಧದಲ್ಲಿ ಭಾಗಿಯಾಗಲ್ಲ ಎಂದ ಇಮ್ರಾನ್!

click me!