ಪಾಕಿಸ್ತಾನದಲ್ಲಿ ಮೇಕೆ ಮೇಲೆ ಗ್ಯಾಂಗ್‌ರೇಪ್‌!

By Suvarna NewsFirst Published Jul 30, 2021, 10:42 AM IST
Highlights

* ಪಾಕಿಸ್ತಾನದಲ್ಲಿ ಮೇಕೆ ಮೇಲೆ ಗ್ಯಾಂಗ್‌ರೇಪ್, ಬಳಿಕ ಕೊಂದು ಹಾಕಿದ್ರು

* ಕೃತ್ಯ ಎಸಗಿದ ಎಲ್ಲರನ್ನೂ ಬಂಧಿಸಿದ ಪೊಲೀಸರು

* ಕಾರ್ಮಿಕರೊಬ್ಬರ ಮೇಕೆಯನ್ನು ಅಪಹರಿಸಿದ ಐವರು ಆರೋಪಿಗಳು

ಇಸ್ಲಾಮಾಬಾದ್‌(ಜು.30): ಎಂಥಾ ಜನ ಇರುತ್ತಾರೆ ನೋಡಿ. ಪಾಕಿಸ್ತಾನ ಒಕಾರಾ ಎಂಬಲ್ಲಿ ಐದು ಜನರು ಮೇಕೆಯ ಮೇಲೆ ಅತ್ಯಾಚಾರ ಮಾಡಿ ಅದನ್ನು ಕೊಂದು ಹಾಕಿದ್ದಾರೆ. ಕೃತ್ಯ ಎಸಗಿದ ಎಲ್ಲರನ್ನೂಪೊಲೀಸರು ಬಂಧಿಸಿದ್ದಾರೆ.

ಕಾರ್ಮಿಕರೊಬ್ಬರ ಮೇಕೆಯನ್ನು ಅಪಹರಿಸಿದ ಐವರು ಆರೋಪಿಗಳು ಅದರ ಮೇಲೆ ಅತ್ಯಾಚಾರ ಮಾಡಿ ಅದನ್ನು ಕೊಂದು ಓಡಿಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇವರ ಹೇಳಿಕೆ ಆಧರಿಸಿ ಬಂಧನ ನಡೆದಿದೆ.

ಕಳೆದ ತಿಂಗಳು ‘ಎಚ್‌ಬಿಒ’ ನಡೆಸಿದ ಸಂದರ್ಶನದಲ್ಲಿ ಹೆಣ್ಣುಮಕ್ಕಳು ತುಂಡು ಬಟ್ಟೆಗಳನ್ನು ಹಾಕುತ್ತಿರುವುದು ಗಂಡಸರನ್ನು ಉದ್ರೇಕೊಳಿಸುತ್ತಿದೆ. ಅವರೇನು ರೋಬೋಟ್‌ಗಳಲ್ಲ ಹಾಗಾಗಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ ಹೇಳಿದ್ದರು. ಈಗ ಮೇಕೆಯ ಮೇಲೆ ಅತ್ಯಾಚಾರ ನಡೆದಿರುವನ್ನು ಇಮ್ರಾನ್‌ಖಾನ್‌ ಹೇಳಿಕೆಗೆ ಪ್ರತಿಯಾಗಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದಾರೆ.

‘ಬಟ್ಟೆಧರಿಸದ ಪ್ರಾಣಿಗಳೂ ಗಂಡಸರನ್ನು ಉದ್ರೇಕಿಸುತ್ತವೆಯೇ? ಪ್ರಾಣಿಗಳೂ ಬಟ್ಟೆಧರಿಸಬೇಕೆ?’ಎಂದು ಪಾಕಿಸ್ತಾನಿ ನಟ ಮಥಿರಾ ಟ್ವೀಟ್‌ ಮಾಡಿದ್ದಾರೆ.

click me!