ಪಾಕಿಸ್ತಾನ ಡಾನ್ ಅಮೀರ್ ಟಿಪು ಮೇಲೆ ಅಪರಿಚಿತರ ಗುಂಡಿನ ದಾಳಿ, ಮದುವೆ ಸಮಾರಂಭದಲ್ಲಿ ಹತ್ಯೆ!

By Suvarna NewsFirst Published Feb 19, 2024, 5:17 PM IST
Highlights

ಪಾಕಿಸ್ತಾನದ ಭೂಗತ ಜಗತ್ತಿನ ಡಾನ್ ಅಮೀರ್ ಬಾಲಾಜ್ ಟಿಪು ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಘಟನೆ ನಡೆದಿದೆ. 

ಇಸ್ಲಾಮಾಬಾದ್(ಫೆ.19) ಪಾಕಿಸ್ತಾನದ ಡಾನ್ ಎಂದೇ ಗುರುತಿಸಿಕೊಂಡಿರುವ ಅಮೀರ್ ಬಾಲಾಜ್ ಟಿಪು ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿಸೆ ಹತ್ಯೆಗೈದ ಘಟನೆ ಪಾಕಿಸ್ತಾನ ಚುಂಗ್ ವಲಯದಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಏಕಾಏಕಿ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಅಮೀರ್ ಟಿಪು ಬೆಂಬಲಿಗರು ಪ್ರತಿ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅಮೀರ್ ಟಿಪುವನ್ನು ಆಸ್ಪತ್ರೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿನ ದಾಳಿಗೆ  ಉಗ್ರರು, ಡಾನ್‌ಗಳ ಹತ್ಯೆ ಟ್ರೆಂಡ್ ಮತ್ತೆ ಸದ್ದು ಮಾಡಲು ಆರಂಭಿಸಿದೆ.

ಆಪ್ತರ ಮದುವೆ ಕಾರ್ಯಕ್ರಮದಲ್ಲಿ ಅಮೀರ್ ಬಾಲಾಜ್ ಟಿಪು ಹಾಗೂ ಆತನ ಬೆಂಬಲಿಗರು ಪಾಲ್ಗೊಂಡಿದ್ದರು. ಅಮೀರ್ ಬಾಲಾಜ್ ಟಿಪು ಆಗಮನದ ಮಾಹಿತಿ ಪಡೆದ ಅಪರಿಚಿತರು ಭಾರಿ ಪ್ಲಾನ್‌ನೊಂದಿಗೆ ಚುಂಗ್ ವಲಯಕ್ಕೆ ಆಗಮಿಸಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿದ್ದ ಅಮೀರ್ ಬಾಲಾಜ್ ಮೇಲೆ ಸತತ ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಗುಂಡುಗಳು ಡಾನ್ ಟಿಪು ದೇಹ ಹೊಕ್ಕಿದೆ. ತಕ್ಷಣವೆ ಟಿಪು ಕುಸಿದು ಬಿದ್ದಿದ್ದಾನೆ.

ಪಾಕಿಸ್ತಾನಕ್ಕೆ ಸರ್ವಾಧಿಕಾರಿ ಆಡಳಿತ ದೇಶ ಪಟ್ಟ, ಈ ಕುಖ್ಯಾತಿಗೆ ಗುರಿಯಾದ ಏಷ್ಯಾದ ಏಕೈಕ ರಾಷ್ಟ್ರ!

ಇತ್ತ ಅಮಿರ್ ಟಿಪು ಬೆಂಬಲಿಗರು ರಿವಾಲ್ವರ್ ಮೂಲಕ ಪ್ರತಿ ದಾಳಿ ನಡೆಸಿದ್ದಾರೆ.ಅಷ್ಟರಲ್ಲೇ ಅಪರಿಚಿತರು ಪರಾರಿಯಾಗಿದ್ದಾರೆ. ಇತ್ತ ತೀವ್ರವಾಗಿ ಗಾಯಗೊಂಡ ಅಮೀರ್ ಟಿಪುವನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರೊಳಗೆ ಅಮಿರ್ ಮತಪಟ್ಟಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅಮೀರ್ ಟಿಪು ಬೆಂಬಲಿಗರು ಆಸ್ಪತ್ರೆಯಲ್ಲಿ ದೌಡಾಯಿಸಿದ್ದಾರೆ.

ಆಸ್ಪತ್ರೆ ಮುಂದೆ ಬೆಂಬಲಿಗರು ರೋದನ, ಆಕ್ರೋಶ ಹೆಚ್ಚಾಗಿತ್ತು. ಈ ಸಾವಿಗೆ ಸೇಡು ತೀರಿಸುವುದಾಗಿ ಘೋಷಿಸಿದ್ದಾರೆ. ಇತ್ತ ಘಟನೆ ನಡೆದ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದಾರೆ. ಅಪರಿಚಿತರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದುವರೆಗೂ ಅಪರಿಚಿತರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಷ್ಟೇ ಈ ಪ್ರಕರಣ ಸಂಬಂಧ ಯಾರನ್ನೂ ಅರೆಸ್ಟ್ ಮಾಡಿಲ್ಲ ಹಾಗೂ ಯಾರನ್ನೂ ವಶಕ್ಕೆ ಪಡೆದಿಲ್ಲ.

ಪಾಕ್‌ನಿಂದ ಮುಕ್ತಿಗೊಳಿಸಿ ಭಾರತದ ಜೊತೆ ವಿಲೀನಗೊಳಿಸಿ, ಹೆಚ್ಚಾಯ್ತು PoK ಜನರ ಬೇಡಿಕೆ!

ಅಮೀರ್ ಬಾಲಾಜ್ ಟಿಪು ಕುಟುಂಬಸ್ಥರು ಪಾಕಿಸ್ತಾನದ ಡಾನ್ ಆಗಿ ಗುರುತಿಸಿಕೊಂಡಿದ್ದಾರೆ.ಅಮೀರ್ ತಂದೆ ಆರೀಫ್ ಅಮೀರ್ 2010ರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅಮೀರ್ ಅಜ್ಜ ಕೂಡ ಪಾಕಿಸ್ತಾನದ ಡಾನ್ ಆಗಿ ಮೃತಪಟ್ಟಿದ್ದಾರೆ. ಬಹುತೇಕ ಕುಟುಂಬಸ್ಥರು ಗುಂಡಿನ ದಾಳಿಯಲ್ಲಿ ಅಂತ್ಯಗೊಂಡಿದ್ದಾರೆ.

click me!