ಫ್ರೆಶ್ ಆಹಾರ ತಿನ್ಬೇಕು ನಿಜ ಆದರೆ ಪ್ಲೇಟ್‌ನಲ್ಲಿ ಫುಡ್ ಹೊರಳಾಡುವಷ್ಟು ಫ್ರೆಶ್ ಇದ್ರೆ ಹೇಗೆ?

By Suvarna News  |  First Published May 21, 2024, 4:17 PM IST

ಈಗ ಕೊರಿಯಾದ ಆಹಾರಶೈಲಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಭಾರತೀಯ ಆಹಾರ ಪ್ರಿಯರ ಹೊಟ್ಟೆ ತೊಳೆಸುವುದಂತು ಪಕ್ಕಾ.


ಒಂದು ದೇಶದಿಂದ ದೇಶಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಆಹಾರ ಸಂಸ್ಖೃತಿ ತುಂಬ ವಿಭಿನ್ನ, ಭಾರತೀಯರು ಬಹುತೇಕ ಬೇಯಿಸಿದ ಆಹಾರವನ್ನಷ್ಟೇ ತಿಂದರೆ ಚೀನಾ ಸೇರಿದಂತೆ ಇತರ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹಸಿಬಿಸಿ ತಿನ್ನುವುದರಲ್ಲೇ ಏನೋ ಖುಷಿ. ಮೀನು, ಕೋಳಿ, ಹಂದಿ,  ಕುರಿಗಳನ್ನು ಬಹುತೇಕ ಮಾಂಸಹಾರಿ ಭಾರತೀಯರು ಆಹಾರವಾಗಿಸಿ ಸೇವಿಸುತ್ತಾರೆ. ಆದರೆ ಇಲಿ ಹೆಗ್ಗಣ ಎರೆಹುಳು, ಸೇರಿದಂತೆ ಕ್ರಿಮಿಕೀಟಗಳನ್ನು ತಿನ್ನುವ ಸಂಪ್ರದಾಯ ಭಾರತದಲ್ಲಿ ಇಲ್ಲ, ಆದರೆ ಚೀನಾ ಸೇರಿದಂತೆ ಕೆಲ ರಾಷ್ಟ್ರಗಳ ಜನರಿಗೆ ಇದು ಇಷ್ಟವಾದ ಆಹಾರ. ಅದೇ ರೀತಿ ಈಗ ಕೊರಿಯಾದ ಆಹಾರಶೈಲಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಭಾರತೀಯ ಆಹಾರ ಪ್ರಿಯರ ಹೊಟ್ಟೆ ತೊಳೆಸುವುದಂತು ಪಕ್ಕಾ.

ವೀಡಿಯೋದಲ್ಲಿ ಏನಿದೆ?
ಅಂದಹಾಗೆ ಈ ವೀಡಿಯೋವನ್ನು tahmina_aslanova ಎನ್ನುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದ ಜೊತೆಗೆ ಅವರು ಆಹಾರದ ಬಗ್ಗೆ ವಿವರಿಸಿದ್ದಾರೆ. ಇದು ಕೊರಿಯನ್ ಆಹಾರ ಸನ್ನಕ್ಜಿ(Sannakji)ಈ ಆಹಾರವೂ ಜೀವಂತವಾದ ಆಕ್ಟೋಪಸ್‌ಗಳನ್ನು ಹೊಂದಿದೆ. ಆಕ್ಟೋಪಸ್‌ಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕೂಡಲೇ ನಿಮಗೆ ಸರ್ವ್ ಮಾಡಲಾಗುತ್ತದೆ. ಹೀಗಾಗಿ ಆಕ್ಟೋಪಸ್ ಜೀವಂತವಾಗಿದ್ದು, ಪ್ಲೇಟ್‌ನಲ್ಲಿ ಹೊರಳಾಡುತ್ತಿರುತ್ತದೆ. ಎಳ್ಳಿನ ಎಣ್ಣೆ ಹಾಗೂ ಬೀಜದೊಂದಿಗೆ ಇದಕ್ಕೆ ಒಗ್ಗರಣೆ ನೀಡಿ ಸರ್ವ್ ಮಾಡಲಾಗುತ್ತದೆ. ಆಕ್ಟೋಪಸ್‌ನ ತಾಜಾತನದಿಂದಾಗಿ ಸನ್ನಕ್ಜಿಯನ್ನು ತಿನ್ನುವುದನ್ನು ಒಂದು ವಿಶೇಷ ಆಹಾರದ ಅನುಭವ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಈ ಸನ್ನಕ್ಜಿ ವೀಡಿಯೋದೊಂದಿಗೆ ವಿವರ ನೀಡಿದ್ದಾರೆ.  ಜೊತೆಗೆ ನೀವು ತಾಜಾವಾಗಿರುವ ಸಮುದ್ರ ಆಹಾರಗಳನ್ನು ತಿನ್ನುವುದಕ್ಕೆ ಕೊರಿಯಾಗೆ ಭೇಟಿ ನೀಡಿದರೆ ನೀವು ಇಷ್ಟು ತಾಜಾ ಎಂದು ನಿರೀಕ್ಷೆ ಕೂಡ ಮಾಡಿರಲ್ಲ ಎಂದು ಅವರು ಬರೆದಿದ್ದಾರೆ.

Tap to resize

Latest Videos

undefined

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

ವೀಡಿಯೋದಲ್ಲಿ ಕಾಣಿಸುವಂತೆ ಒಂದು ತಟ್ಟೆಯಲ್ಲಿ ಈ ಸನ್ನಕ್ಜಿಯನ್ನು ಸರ್ವ್ ಮಾಡಲಾಗಿದ್ದು, ಅದರಲ್ಲಿ ಆಕ್ಟೋಪಸ್ ಹೊರಳಾಡುವುದನ್ನು ಕೂಡ ನೀವು ನೋಡಬಹುದಾಗಿದೆ. ಆದರೆ ಭಾರತೀಯರು ಮಾತ್ರ ಈ ವೀಡಿಯೋ ನೋಡಿ ಶಾಕ್ ಆಗಿದ್ದು, ಹೇಗೆ ಜೀವಂತವಿರುವುದನ್ನು ತಿನ್ನುವಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೇ ಕಾರಣಕ್ಕೆ ನಾನು ಸಸ್ಯಾಹಾರಿ ಆಗಿದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ತಾಜಾ ಆಹಾರ ದೇಹಕ್ಕೆ ಒಳ್ಳೆಯದು ಎಂದು ಬಹುತೇಕರು ಹೇಳುತ್ತಾರೆ. ಆದರೆ ಪ್ಲೇಟ್‌ನಲ್ಲಿ ಹೊರಳಾಡುವಷ್ಟು ತಾಜಾತನವಿದ್ದರೆ ತಿನ್ನುವುದಾದರು ಹೇಗೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೂ ಈ ವಿಡಿಯೋ ನೋಡಿದ ಮೇಲೆ ಹೊಟ್ಟೆ ತೊಳೆಸುವುದು ಮಾತ್ರ ಪಕ್ಕಾ. 

ಬೀದಿಬದಿ ಪಾನಿಪುರಿ ತಿಂದ ಕೊರಿಯನ್‌ ಯೂಟ್ಯೂಬರ್ ಏನು ಹೇಳಿದ ನೋಡಿ: ವೈರಲ್

 

click me!