ಇದೆಂಥಾ ಸೆಲೆಬ್ರೇಷನ್? ಬ್ಯಾಟ್‌ನಿಂದ ಹಿಂಭಾಗಕ್ಕೆ ಹೊಡೆಸಿಕೊಂಡ ಯುವತಿ

By Mahmad Rafik  |  First Published May 21, 2024, 10:32 AM IST

ಬ್ಯಾಟ್‌ನಿಂದ ಹಿಂಭಾಗಕ್ಕೆ ಹೊಡೆಸಿಕೊಂಡ ಯುವತಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ. ಇದೊಂದು ರೀತಿಯ ಸಂಭ್ರಮಾಚರಣೆ ಆಗಿದೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ರೆ ಪಾರ್ಟಿ ಮಾಡೋದು ಕಾಮನ್.  ಪಾರ್ಟಿ ಅಂದ್ರೆ ಕೇಕ್ ಕಟ್ಟಿಂಗ್, ಕುಣಿತ, ಬಾಡೂಟ ಜೊತೆಗೆ ಕೆಲವು  ಆಕ್ಟಿವಿಟಿಗಳು ಇರುತ್ತವೆ. ಇನ್ನು ವಯಸ್ಕರ ಪಾರ್ಟಿ ಆಗಿದ್ರೆ  ಅಲ್ಲಿ  ಮದ್ಯ ಇರುತ್ತದೆ. ಸಾಮಾನ್ಯವಾಗಿ ಬರ್ತ್ ಡೇ ಪಾರ್ಟಿಗಳು  ಹೆಚ್ಚು ನಡೆಯುತ್ತಿರುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. 

ಈ ವಿಡಿಯೋದಲ್ಲಿ ಯುವತಿ ತನ್ನ ತರಬೇತಿಯ ಅವಧಿ ಮುಕ್ತಾಯವಾಗಿರೋದನ್ನು ವಿಚಿತ್ರವಾಗಿ ಆಚರಿಸಿಕೊಂಡಿದ್ದಾರೆ. ಇದು ಕೊಲಂಬಿಯಾದ ವಿಡಿಯೋ  ಎಂದು ಹೇಳಲಾಗುತ್ತಿದೆ. ಇಲ್ಲಿಯ ಪೈಲಟ್‌ಗಳು ತಮ್ಮ ಹಾರಾಟದ  ತರಬೇತಿ ಮುಕ್ತಾಯವಾದ ಕೂಡಲೇ ಈ ರೀತಿ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡುತ್ತಾರೆ ಎಂದು ಬರೆದುಕೊಳ್ಳಲಾಗಿದೆ.

Tap to resize

Latest Videos

undefined

ಕೊಲಂಬಿಯಾದ ಪೈಲಟ್‌ಗಳು ತಮ್ಮ ಹಾರಾಟದ ತರಬೇತಿ ಯಶಸ್ಸನ್ನು ಈ ರೀತಿ ಆಚರಿಸುತ್ತಾರೆ. ಸೈನ್ಸ್ ಗರ್ಲ್ (@gunsnrosesgirl3) ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇ 19ರಂದು ಸಂಜೆ ಆರು ಗಂಟೆಗೆ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ.ಇದುವರೆಗೂ ಈ ವಿಡಿಯೋ 30 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. 

ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ನೆಗೆತ ಕಂಡ ರಿಷಿ ಸುನಕ್ ದಂಪತಿ, ಪತ್ನಿಯ ಆಸ್ತಿಯೇ ಜಾಸ್ತಿ!

ವೈರಲ್ ವಿಡಿಯೋದಲ್ಲಿ ಏನಿದೆ?

ಮಹಿಳಾ ಪೈಲಟ್ ಮೊದಲಿಗೆ ತನ್ನ ಕೂದಲನ್ನು ಕತ್ತರಿಸೋದನ್ನ ಕಾಣಬಹುದು. ಆನಂತರ ಆ ಮಹಿಳಾ ಪೈಲಟ್ ತನ್ನ ಎಲ್ಲಾ ಸಿಬ್ಬಂದಿ ಬಳಿ ತೆರಳಿ ಬ್ಯಾಟ್‌ನಿಂದ  ಹಿಂಬದಿಗೆ ಹೊಡೆಸಿಕೊಂಡು ಸಂತಸಪಡುತ್ತಾಳೆ.

Colombian Pilots celebrate their flight training success like this
pic.twitter.com/dJRRrFVOWv

— Science girl (@gunsnrosesgirl3)

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

9.8 ಸಾವಿರ  ಲೈಕ್ಸ್, 210 ಕಮೆಂಟ್ ಮತ್ತು 416  ಬಾರಿ ಈ ವಿಡಿಯೋ ರೀಪೋಸ್ಟ್ ಆಗಿದೆ. ಇದೊಂದು ತಮಾಷೆಯ ಸೆಲೆಬ್ರೇಷನ್ ಆಗಿದೆ. ವಿಡಿಯೋ ನೋಡಿದಾಗ ನನಗೆ ಇದು ಶಿಕ್ಷೆ ಅಂತ ತಿಳಿದಿದ್ದೆ. ಆನಂತರ ಮೇಲಿನ ಸಾಲುಗಳನ್ನು ನೋಡಿದಾಗ ಶಾಕ್ ಆಯ್ತು ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ. ಮತ್ತೋರ್ವ ನೆಟ್ಟಿಗ ಈ  ರೀತಿ ಕೇವಲ ಮಹಿಳಾ ಪೈಲಟ್ ಆಚರಿಸುತ್ತಾರಯೇ ಎಂದು ಕೇಳಿದ್ದಾರೆ.

ಉದ್ಯೋಗಿಗಳಿಗೆ 8 ತಿಂಗಳ ಬೋನಸ್ ನೀಡಲು ಮುಂದಾದ ಕಂಪನಿ

ಇದೊಂದು  ವಿಚಿತ್ರ ಆಚರಣೆಯಾಗಿದೆ. ಯಾವುದೇ ವೃತ್ತಿ ಇರಲಿ ಅಲ್ಲಿ ಸಂಸ್ಕೃತಿ ಅನ್ನೋದು ಇರಬೇಕಾಗುತ್ತದೆ ಎಂದು ಕೆಲ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!