ಮೇಕೆ ಹತ್ಯೆ ಮಾಡುವ ಕನಸು ಕಾಣುತ್ತ ಶಿಶ್ನ ಕತ್ತರಿಸಿಕೊಂಡ ಭೂಪ..!

By Suvarna NewsFirst Published Aug 23, 2022, 1:57 PM IST
Highlights

ಮಟನ್‌ ತಿನ್ನುವ ಆಸೆಯಾಗಿ ತನ್ನ ಹೆಂಡತಿಗೆ ಮೇಕೆ ಕತ್ತರಿಸುವ ಕನಸು ಕಂಡು ಆ ವೇಳೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿರುವ ಘಟನೆ ಘಾನಾದಲ್ಲಿ ವರದಿಯಾಗಿದೆ. 42 ವರ್ಷದ ರೈತ ಈ ರೀತಿ ಮಾಡಿಕೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ನಾವು ನಿದ್ದೆ ಮಾಡುತ್ತಿರುವಾಗ ಕನಸು ಕಾಣುವುದು ಸಹಜ. ಆದರೆ, ಆ ಕನಸಿನಿಂದ ಒಮ್ಮೊಮ್ಮೆ ಏನಾದರೂ ಹಲವರು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾರೆ. ಉದಾಹರಣೆಗೆ ಕನಸಿನಲ್ಲಿ ಯಾರಿಗೋ ಹೊಡೆಯುತ್ತಿರುತ್ತೇವೆ ಅನ್ಕೊಳ್ಳಿ, ಆ ವೇಳೆ, ನಮಗೇ ಅರಿವಿಲ್ಲದೆ ನಾವು ಪಕ್ಕದಲ್ಲಿ ಮಲಗಿರುವ ವ್ಯಕ್ತಿಗೂ ಹೊಡೆದ ಉದಾಹರಣೆ ಇರುತ್ತದೆ. ಆದರೆ, ಇಲ್ಲೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ಕುಳಿತಲ್ಲೇ ಕನಸು ಕಂಡಿದ್ದು, ಮಾಂಸದೂಟ ತಿನ್ನುವ ಆಸೆಯಾಗಿ ಮೇಕೆ ವಧೆ ಮಾಡುವಂತಹ ಕನಸು ಕಂಡಿದ್ದಾರೆ. ಆದರೆ, ಪಾಪ ಈ ವೇಳೆ ಆತ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾರೆ. 

ಹೌದು, ಘಾನಾದಲ್ಲಿ ಒಬ್ಬ ವ್ಯಕ್ತಿ ಮೇಕೆಯನ್ನು ಕೊಲ್ಲುವ ಕನಸು ಕಾಣುತ್ತಿರುವಾಗ ಆಕಸ್ಮಿಕವಾಗಿ ತನ್ನ ಶಿಶ್ನ ಮತ್ತು ವೃಷಣಗಳನ್ನು ಕತ್ತರಿಸಿಕೊಂಡಿದ್ದಾರೆ. ಆಗಸ್ಟ್ 12 ರಂದು ಘಾನಾದ ಅಸ್ಸಿನ್ ಫೋಸು ಎಂಬಲ್ಲಿ ಈ ಭೀಕರ ಘಟನೆ ಸಂಭವಿಸಿದ್ದು, ಕೋಫಿ ಅಟ್ಟಾ ಎಂದು ಗುರುತಿಸಲಾದ ರೈತನು ನಿದ್ರೆಯಿಂದ ಎಚ್ಚರವಾದಾಗ "ತನ್ನ ಶಿಶ್ನವನ್ನು ಕತ್ತರಿಸಿಕೊಂಡಿರುವುದನ್ನು ನೋಡಿದ್ದಾರೆ. ಹಾಗೆ, ಆತ ಕೂತಿದ್ದಾಗ ರಕ್ತಸ್ರಾವವೂ ಉಂಟಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Sexual Health: ಸಂಗಾತಿ ಜೊತೆ ಸಂಭೋಗದ ವೇಳೆ ಶಿಶ್ನ ಮುರಿತ, ವಿಚಿತ್ರ ನಡೆಯಲು ಇದೇ ಕಾರಣ

42 ವರ್ಷ ವಯಸ್ಸಿನ ಕೋಫಿ ಅಟ್ಟಾ ಎಂಬ ರೈತ ನಿದ್ದೆಯಲ್ಲಿದ್ದಾಗ ವೃಷಣ ಕೋಶದ ಭಾಗವನ್ನು ಕತ್ತರಿಸಿದ ನಂತರ ಉಂಟಾದ ಗಾಯಗಳಿಗೆ ಚಿಕಿತ್ಸೆ ಪಡೆಯಲು ಘಾನಾದ ಮಧ್ಯ ಪ್ರದೇಶದ ಆಸ್ಪತ್ರೆಯಲ್ಲಿದ್ದಾರೆ. ಆದರೆ, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ ಎಂದು ವೈದ್ಯರು ಹೇಳುತ್ತಿದ್ದು, ಈ ಹಿನ್ನೆಲೆ ಅದಕ್ಕಾಗಿ ರೈತ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಪರೇಷನ್‌ ಮಾಡಿಸಿಕೊಳ್ಳಲು ಕೋಮ್ಫೋ ಅನೋಕ್ಯೆ ಟೀಚಿಂಗ್ ಆಸ್ಪತ್ರೆಗೆ ಅವರು ಹೋಗಬೇಕಿದ್ದು, ಇದಕ್ಕೆ ಹೆಚ್ಚುವರಿ ಹಣ ಬೇಕಾಗಿದೆಯಂತೆ. ಆಸ್ಪತ್ರೆಯಲ್ಲಿ ಸದ್ಯ ಇಂಜೆಕ್ಷನ್ ಹಾಗೂ ಚಿಕಿತ್ಸೆ ಮಾಡುತ್ತಿದ್ದರೂ, ಆಪರೇಷನ್‌ ಮಾಡಿಸಲೇಬೇಕಿದೆ ಎಂದೂ ಘಾನಾದ ರೈತ ಕೋಫಿ ಅಟ್ಟಾ ಹೇಳಿಕೊಂಡಿದ್ದಾರೆ.

ಘಾನಾದ ರೈತ ತನ್ನ ಹೆಂಡತಿಗೆ ರಾತ್ರಿಯ ಊಟವನ್ನು ತಯಾರಿಸಲು ಸಹಾಯ ಮಾಡಲು ಮೇಕೆಯನ್ನು ಹತ್ಯೆ ಮಾಡುವ ಬಗ್ಗೆ ಕನಸು ಕಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. “ನಾನು ನಿದ್ರಿಸಿದಾಗ ನನ್ನ ಕುರ್ಚಿಯಲ್ಲಿ ಕುಳಿತಿದ್ದೆ. ನನ್ನ ನಿದ್ರೆಯಲ್ಲಿ, ನಾನು ನನ್ನ ಮುಂದೆ ಸ್ವಲ್ಪ ಮಾಂಸವನ್ನು ಕತ್ತರಿಸುತ್ತಿದ್ದೇನೆ ಎಂದು ಕನಸು ಕಂಡೆ, ”ಎಂದು ಕೋಫಿ ಅಟ್ಟಾ ಬಿಬಿಸಿ ಪಿಡ್ಜಿನ್‌ಗೆ ಮಾಹಿತಿ ನೀಡಿದ್ದಾರೆ. ಕೋಫಿ ಅಟ್ಟಾ ನಂತರ ನಿಜ ಜೀವನದಲ್ಲಿ ತನ್ನ ಕನಸನ್ನು ಅಭಿನಯಿಸಿದ್ದಾರೆ. ಆದರೆ ತನ್ನ ಜನನಾಂಗಗಳಿಗೆ ಹೇಗೆ ಚಾಕು ಹಾಕಿಕೊಂಡೆ ಎಂಬುದರ ಬಗ್ಗೆ ಯಾವುದೇ ನೆನಪಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇನ್ನು, ಆ ವ್ಯಕ್ತಿಯ ಕಿರುಚಾಟಕ್ಕೆ ಅವರ ನೆರೆಹೊರೆಯವರು ದೌಡಾಯಿಸಿದ್ದು ಮತ್ತು ಅವರ ಕುರ್ಚಿಯಲ್ಲಿ ಕೂತಿದ್ದಾಗ ಆ ರೈತ ರಕ್ತಸ್ರಾವವಾಗಿರುವುದನ್ನು ಕಂಡುಕೊಂಡರು. ಇನ್ನು, ಈ ಘಟನೆ ಸಂಭವಿಸಿದಾಗ ಅವರ ಪತ್ನಿ ಅಡ್ವೋವಾ ಕೋನಾಡು ಅವರು ಈ ಸಮಯದಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಅವರನ್ನು ಸಂಪರ್ಕಿಸಿದ ನೆರೆಹೊರೆಯವರ ಮೂಲಕ ಘಟನೆ ಬಗ್ಗೆ ತಿಳಿದುಕೊಂಡರು. ಆಕೆಯ ಗಂಡನ ಮರ್ಮಂಗದಿಂದ ರಕ್ತಸ್ರಾವವಾಗುತ್ತಿರುವುದನ್ನು ಪತ್ನಿ ಚೇಂಬರ್ ಮಡಿಕೆ ಮೇಲೆ ಕಂಡುಕೊಂಡರು ಮತ್ತು ಆಕೆ ಮನೆಗೆ ಹಿಂದಿರುಗಿದಾಗ ಪತಿ ಶಿಶ್ನವನ್ನು ಹಿಡಿದುಕೊಂಡಿದ್ದರು ಎಂದು GHOne TV ವರದಿ ಮಾಡಿದೆ. ನಂತರ ಪತ್ನಿ ರಕ್ತದ ಹರಿವು ಕಡಿಮೆ ಮಾಡಲು ಡಯಾಪರ್ ಹಿಡಿದಿದ್ದಾರೆ ಎನ್ನಲಾಗಿದೆ.

ಅಸ್ಸಾಂ: ತನ್ನ ಶಿಶ್ನವನ್ನೇ ಕತ್ತರಿಸಿದ ಗಾಂಜಾ ವ್ಯಸನಿ: ಕಾರಣವೇನು ಗೊತ್ತಾ?

ಈ ಮಧ್ಯೆ, ಘಾನಾದ ಸ್ಥಳೀಯ ಸುದ್ದಿ ಮಾಧ್ಯಮದ ನಿರೂಪಕಿಯೊಬ್ಬರು ಆಗಸ್ಟ್ 15, 2022 ರಂದು ಈ ಸಂಬಂಧ ಟ್ವೀಟ್‌ ಅನ್ನು ಹಂಚಿಕೊಂಡಿದ್ದು, ಘಾನಾದ ರೈತ ಕೋಫೀ ಅಟ್ಟಾ ಚೇತರಿಸಿಕೊಳ್ಳುತ್ತಿರುವ ಚಿತ್ರಗಳನ್ನು ಇದು ತೋರಿಸುತ್ತದೆ. 

click me!