Woman with Saree ರಸ್ತೆಯಲ್ಲಿ ಸೀರೆಯುಟ್ಟ ನಾರಿಯ ಲಾಂಗ್‌ಬೋರ್ಡ್ ಸವಾರಿ!

By Suvarna NewsFirst Published Jun 7, 2022, 9:14 PM IST
Highlights
  • ಲಾಂಗ್‌ಬೋರ್ಡ್‌ನಲ್ಲಿ ಸಾರಿಯುಟ್ಟ ಮಹಿಳೆಯ ಸವಾರಿ
  • ವಾಹನಗಳಿಂದ ತುಂಬಿದ ರಸ್ತೆಯಲ್ಲಿ ಸಲೀಸಾಗಿ ಸಾಗಿದ ಮಹಿಳೆ
  • ಇತರ ವಾಹನ ಸವಾರರಿಗೆ ನಮಸ್ತೆ ಎಂದು ಸ್ವಾಗತ

ಕೇರಳ(ಜೂ.07): ಲಾಂಗ್‌ಬೋರ್ಡ್‌ನಲ್ಲಿ ಸವಾರಿ ಮಾಡುವುದು ಸವಾಲಿನ ಕೆಲಸ. ಅಭ್ಯಾಸ ಅತೀ ಅಗತ್ಯ. ಇಷ್ಟು ಮಾತ್ರ ಸಾಲಲ್ಲ. ಸವಾರಿ ಮಾಡುವಾಗ ಅದಕ್ಕೆ ತಕ್ಕಂತೆ ಉಡುಪು ಧರಿಸಬೇಕು. ಇಲ್ಲದಿದ್ದರೆ ಮತ್ತೂ ಕಷ್ಟ. ಆದರೆ ಕೇರಳದಲ್ಲಿ ಯುವತಿ ಸೀರೆಯುಟ್ಟ ಸಲೀಸಾಗಿ ಲಾಂಗ್‌ಬೋರ್ಡ್‌ನಲ್ಲಿ ಸಾವರಿ ಮಾಡಿದ್ದಾಳೆ.

ವಾಹನಗಳು ಸಂಚರಿಸುವ ರಸ್ತೆಯಲ್ಲಿ ಯುವತಿ ಲಾಂಗ್‌ಬೋರ್ಡ್‌ ಮೂಲಕ ತೆರಳಿದ್ದಾಳೆ. ಇತರ ವಾಹನ ಸವಾರರು, ಪಾದಾಚಾರಿಗಳಿಗೆ ನಮಸ್ತೆ ಎಂದು ಸ್ವಾಗತಿಸುತ್ತಾ, ಸುಂದರ ನಗುವ ಚೆಲ್ಲುತ್ತಾ ರಸ್ತೆಯುದ್ದಕ್ಕೂ ಸಾಗಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ.

ಜಗತ್ತು ಸುತ್ತುವ ಈ ಯುವತಿ ಆಸೆಗೆ ಆಸರೆಯಾಗಿದ್ದು ಷೇರು ಮಾರುಕಟ್ಟೆ

ಯುವಿ ಕೇರಳದ ಸಂಪ್ರದಾಯಿಕ ಕಸವು ಸಾರಿಯುಟ್ಟಿದ್ದಾಳೆ. ಹಚ್ಚ ಹಸುರಿನ ಪರಿಸರ, ಕೇರಳದ ಹಿನ್ನೀರು, ತೆಂಗಿನ ಮರಗಳಿಂದ ಕೂಡಿದ ಸುಂದರ ಪರಿಸರ. ಇದರ ನಡುವೆ ನಾರಿಯ ಜಡೆಯಂತಿರುವ ಸುಂದರವಾದ ರಸ್ತೆ. ಈ ರಸ್ತೆಯಲ್ಲಿ ನಗುಮುಖದ ಚೆಲವೆಯ ಲಾಂಗ್‌ಬೋರ್ಡ್ ಸವಾರಿ ರಸ್ತೆಯಲ್ಲಿ ಸಾಗಿದ ಸವಾರರಿಗೆ ಹೊಸ ಥ್ರಿಲ್ ನೀಡಿದರೆ, ವಿಡಿಯೋ ನೋಡಿದವರಿಗೂ ಥ್ರಿಲ್ ಆಗಿದ್ದಾರೆ.

ಲಾರಿಸ್ಸಾ ಡಿ ಸಾ ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಈ ರೀತಿ ಲಾಂಗ್‌ಬೋರ್ಡ್‌ನಲ್ಲಿ ಸಾಗಿರುವುದು ಹೊಸ ಅನುಭವ. ಹಲವರು ಸೆಲ್ಫಿ ತೆಗೆದುಕೊಂಡಿದ್ದಾರೆ. ಆದರೆ ಸಾರಿಯುಟ್ಟು ಲಾಂಗ್‌ಬೋರ್ಡ್‌ನಲ್ಲಿ ಸವಾರಿ ಮಾಡುವುದು ಸುಲಭದ ಮಾತಲ್ಲ ಎಂದು ಬರೆದುಕೊಂಡಿದ್ದಾರೆ.

ಹಲವರು ಸೀರೆಯುಟ್ಟು ಅಸಾಧ್ಯವಾಗಿರುವದನ್ನು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ಭಾರತೀಯ ನಾರಿ ಅದೆಂತಾ ಸವಾಲನ್ನು ಯಶಸ್ವಿಯಾಗಿ ಎದುರಿಸಬಲ್ಲಳು ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ.

 

 

ಸೀರೆಯುಟ್ಟು ಬ್ಯಾಟ್‌ ಮಾಡಿದ್ದ ಮಿಥಾಲಿ ರಾಜ್‌!
ಭಾರತ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಸೀರೆಯುಟ್ಟು ಬ್ಯಾಟ್‌ ಮಾಡುವ ಮೂಲಕ, ಟಿ20 ವಿಶ್ವಕಪ್‌ ಫೈನಲ್‌ಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದರು.. ಜತೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಮಹಿಳೆಯರು ಬಲಿಷ್ಠರು ಎನ್ನುವ ಸಂದೇಶವನ್ನೂ ನೀಡಿದ್ದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ್ತು.

ಸಮುದ್ರದಲ್ಲಿ ಕಂದನಿಗೆ ಜನ್ಮ ನೀಡಿದ ತಾಯಿ : ವಿಡಿಯೋ ವೈರಲ್

ಮೈಸೂರಿನಲ್ಲಿ ಸೀರೆಯಲ್ಲಿ ವಾಕ್‌ಥಾನ್ ಮಾಡಿದ್ದ ಮಹಿಳೆಯರು
ಇನ್ನರ್‌ ವ್ಹೀಲ್‌ ಕ್ಲಬ್‌ ಮೈಸೂರು ಸೆಂಟ್ರಲ್‌ ಸಂಸ್ಥೆಯಿಂದ ಆಯೋಜಿಸಿದ್ದ ಸುಮಾರು 2.5 ಕಿ.ಮೀ. ದೂರದ ನಡಿಗೆಯಲ್ಲಿ ನೂರೂರು ಮಹಿಳೆಯರು ಸೀರೆಯುಟ್ಟು ವಾಕ್‌ಥಾನ್ ಮಾಡಿದ್ದರು.  ಜಿಲ್ಲಾಧಿಕಾರಿ ಕಚೇರಿಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಿಂದ ಆರಂಭವಾದ ನಡಿಗೆಯು ಎಂಜಿನಿಯರುಗಳ ಸಂಸ್ಥೆ, ರೋಟರಿ ಶಾಲೆ, ಕೃಷ್ಣವಿಲಾಸ ಸಸ್ತೆ, ಶಿವಾಯನ ಮಠದ ರಸ್ತೆ, ದೇವರಾಜು ಅರಸು ಮುಖಾಂತರ ಸ್ವಸ್ಥಾನಕ್ಕೆ ಮರಳಿದ್ದರು. 

ಈ ನಡಿಗೆಯಲ್ಲಿ 83 ವರ್ಷ ಸಾಲಿನ ವಾಘ್‌ ವಿಶೇಷ ಬಹುಮಾನ ಪಡೆದ್ದರು. 50 ವರ್ಷದೊಳಗಿನವರ ಪೈಕಿ ಬಿ.ಎನ್‌. ಸಿಂಧು, ಎ.ಎಲ್‌. ಹೇಮ, ಮಲ್ಲಿಕಾ ರಾವ್‌, ಪ್ರಿಯದರ್ಶಿನಿ ಮಹೇಂದ್ರ, ಸುಷ್ಮಾ ಎನ್‌. ಗೌಡ ಬಹುಮಾನ ಪಡೆದರು. 50 ವರ್ಷ ಮೇಲ್ಪಟ್ಟವರ ಪೈಕಿ ವಿ. ವಿಜಯಲಕ್ಷ್ಮೇ, , ಶಾರದಾ, ಕಲಾ ಮೋಹನ್‌, ಕಮಲಾ ವಿಜಯಕುಮಾರ್‌ ಬಹುಮಾನ ಪಡೆದರು. ‘ಮಹಿಳೆಯರು ಒಟ್ಟುಗೂಡಿ- ಆರೋಗ್ಯವಂತ ಮಹಿಳೆ, ನೆಮ್ಮದಿಯ ಮನೆ’ ಎಂಬ ಶೀರ್ಷಿಕೆಯಡಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
 

click me!