Fashion: ದಿನದ 24 ಗಂಟೆಯೂ ಚೆಂದ ಕಾಣಿಸ್ಬೇಕಾ? ರಾತ್ರಿ ಈ ಡ್ರೆಸ್ ಒಪ್ಪುತ್ತೆ!

By Suvarna News  |  First Published Jun 6, 2022, 10:37 AM IST

ಹಿಂದೆ ನೈಟಿ ಧರಿಸುವವರ ಸಂಖ್ಯೆ ಕಡಿಮೆಯಿತ್ತು. ಆದ್ರೀಗ ನೈಟಿಯಲ್ಲಿ ಸಾಕಷ್ಟು ವೆರೈಟಿ ಬಂದಿದೆ. ಅನೇಕ ಡಿಸೈನ್ ನೈಟಿಗಳು ಮಹಿಳೆಯರು ಆಕರ್ಷಕವಾಗಿ ಕಾಣಿಸಿಕೊಳ್ಳುವಂತೆ ಮಾಡ್ತಿವೆ. ನೈಟಿ ಧರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂದು ನಾವು ಬೆಸ್ಟ್ ನೈಟಿ ಬಗ್ಗೆ ಹೇಳ್ತೇವೆ ಕೇಳಿ. 
 


ಸುಖಕರ ನಿದ್ರೆ (Sleep) ಪ್ರತಿಯೊಬ್ಬರಿಗೂ ಅತ್ಯಗತ್ಯ. ಅನೇಕ ಬಾರಿ ನಾವು ಧರಿಸುವ ಡ್ರೆಸ್ (Dress) ನಮ್ಮ ನಿದ್ರೆ ಸಮಸ್ಯೆಗೆ ಕಾರಣವಾಗುತ್ತದೆ. ಅನೇಕ ಮಹಿಳೆ (Woman) ಯರು ಸೀರೆ ಅಥವಾ ಟೈಟ್ ಫಿಟ್ಟಿಂಗ್ (Tight Fittings) ಹೊಂದಿರುವ ಜೂಡಿದಾರ್ ಧರಿಸಿ ಮಲಗ್ತಾರೆ. ಆದ್ರೆ ಇದು ಅವರ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. ರಾತ್ರಿ (Night) ಏನು ಧರಿಸಬೇಕೆಂಬ ಗೊಂದಲ ಕೂಡ ಅನೇಕ ಮಹಿಳೆಯರನ್ನು ಕಾಡುತ್ತದೆ. ಗಾಳಿಯಾಡುವ ಬಟ್ಟೆಯನ್ನು ರಾತ್ರಿ ಧರಿಸ್ಬೇಕು. ಬಟ್ಟೆಗಳು ಸಡಿಲವಾಗಿದ್ದರೆ ಆರಾಮದಾಯಕ ನಿದ್ರೆ ಬರುವುದಲ್ಲದೆ ನಮ್ಮ ಇಡೀ ದೇಹದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಪ್ರಿಂಟೆಡ್ ನೈಟಿ (Nighty) ಗಳು ಮಾರುಕಟ್ಟೆ (Market) ಯಲ್ಲಿ ಸಾಕಷ್ಟು ಲಭ್ಯವಿದೆ. ಅದು ನಿಮ್ಮನ್ನು ಮತ್ತಷ್ಟು ಸುಂದರಗೊಳಿಸುವ ಜೊತೆಗೆ ಆರಾಮ ಕೂಡ ನೀಡುತ್ತದೆ. ಇಂದು ನಾವು ಮಹಿಳೆಯರು ರಾತ್ರಿ ಯಾವ ಬಟ್ಟೆ (Clothes) ಧರಿಸಬೇಕೆನ್ನುವ ಬಗ್ಗೆ ನಿಮಗೆ ಸಲಹೆ ನೀಡ್ತೇವೆ.

ಎವೊಲೊವ್ ಲೂಸ್ ಫಿಟ್ ಕಾಟನ್ ಆಂಕಲ್ ಮ್ಯಾಕ್ಸಿ ನೈಟಿ : ಇದು ಅತ್ಯಂತ ಸುಂದರವಾದ ಮತ್ತು ಆಕರ್ಷಕ (Awesome) ವಾಗಿ ಕಾಣುವ ಮಹಿಳೆಯರ ಮ್ಯಾಕ್ಸಿ ನೈಟಿಯಾಗಿದೆ. ಈ ನೈಟಿ ಅತ್ಯಾಕರ್ಷಕ ಮುದ್ರಣ ವಿನ್ಯಾಸದಲ್ಲಿ ಸಿಗುತ್ತದೆ  ನೀವು ಎಸ್ ನಿಂದ 2ಎಕ್ಸ್ ಎಲ್ ವರೆಗಿನ ಗಾತ್ರದ ಆಯ್ಕೆಯನ್ನು ಸಹ ಪಡೆಯುತ್ತೀರಿ. ಇದು ಸಡಿಲವಾಗಿರುತ್ತದೆ. ಇದು ವಿಶ್ರಾಂತಿ ನೀಡುವ ಜೊತೆಗೆ ಆರಾಮವೆನಿಸುತ್ತದೆ.

Latest Videos

undefined

ಮಹಿಳೆಯರನ್ನು ಕಾಡುವ ಮಾರಣಾಂತಿಕ ಕ್ಯಾನ್ಸರ್ ಬಗ್ಗೆ ತಿಳಿಯಿರಿ

ಶ್ರೀ ಡಿಸೈನ್ ಲೇಡಿಸ್ ಕಾಟನ್ ಶಾರ್ಟ್ ಸ್ಲೀವ್ ನೈಟಿ : ಇದು ಫ್ರೀ ಸೈಜ್ ನೈಟಿಯಾಗಿದೆ. ಇದ್ರಲ್ಲಿ ಸಡಿಲವಾದ ಫಿಟ್ಟಿಂಗ್‌ ನಿಮಗೆ ಸಿಗುತ್ತದೆ. ಈ ನೈಟಿ ರೌಂಡ್ ನೆಕ್ ಮತ್ತು ಶಾರ್ಟ್ ಸ್ಲೀವ್ ನಲ್ಲಿ ನಿಮಗೆ ಸಿಗುತ್ತದೆ. ಇದು ಕೆಂಪು ಬಣ್ಣದಲ್ಲಿ ಲಭ್ಯವಿದೆ. ಅದರ ಮೇಲೆ ಬಿಳಿ ಬಣ್ಣದ ಸುಂದರವಾದ ಫ್ಲೋರಲ್ ಪ್ರಿಂಟ್ ಡಿಸೈನಿಂಗ್ ಕೂಡ ನೀಡಲಾಗುತ್ತಿದೆ. ಈ ನೈಟಿಯನ್ನು ಶುದ್ಧ ಹತ್ತಿ ಬಟ್ಟೆಯಿಂದ ತಯಾರಿಸಲಾಗಿದೆ. ಮನೆಯಲ್ಲಿ ಧರಿಸಲು ಇದು ತುಂಬಾ ಆರಾಮದಾಯಕವಾಗಿರುತ್ತದೆ.

ಜಾಯ್ ಡ್ರೀಮ್ಸ್ ಲಾಂಗ್ ಮ್ಯಾಕ್ಸಿ ನೈಟಿ : ಉದ್ದನೆಯ ಅತ್ಯುತ್ತಮ ಮಹಿಳಾ ಮ್ಯಾಕ್ಸಿ ನೈಟಿ ಇದು. ಇದನ್ನು ರಾತ್ರಿಯ ಗೌನ್ ಆಗಿಯೂ ಧರಿಸಬಹುದು. ಈ ಬಹುವರ್ಣದ ಮಾದರಿಯು ಅದ್ಭುತವಾಗಿದೆ. ಕುತ್ತಿಗೆ ಮೇಲೆ ಉತ್ತಮ ಕಸೂತಿಯಿದೆ. ದಿನವಿಡೀ ಲೌಂಜ್ ವೇರ್ ಆಗಿ ಇದನ್ನು ಧರಿಸಬಹುದು.  ಇದು ತುಂಬಾ ಆರಾಮದಾಯಕ ಮತ್ತು ಮೃದುವಾದ ಬಟ್ಟೆಯಾಗಿದೆ. 

ಮೊಡವೆ ಕಲೆ ತೆಗೆಯೊಂದು ಇಷ್ಟೊಂದು ಸುಲಭಾನ ? ನೀವೂ ಟ್ರೈ ಮಾಡಿ

ವೆವಿದ್ ಟ್ರೆಂಡಿ ಕಾಟನ್ ಹಾಫ್ ಸ್ಲೀವ್ ನೈಟಿ : ಫ್ಯಾಷನ್‌ನೊಂದಿಗೆ ಬರುವ ಅತ್ಯುತ್ತಮ ನೈಟಿ ಇದಾಗಿದೆ. ಈ ನೈಟಿಯನ್ನು ಉತ್ತಮ ಗುಣಮಟ್ಟದ ಫ್ಯಾಬ್ರಿಕ್ ವಸ್ತುಗಳಿಂದ ಮಾಡಲಾಗಿದೆ. ಇದನ್ನು ಧರಿಸುವುದರಿಂದ ಹಿತಕರ ಅನುಭವವನ್ನು ನೀವು ಪಡೆಯುತ್ತೀರಿ. ಇದಕ್ಕೆ ಹಾಫ್ ಸ್ಲೀವ್ ಮತ್ತು ಬಟನ್ ಕ್ಲೋಸರ್ ನೀಡಲಾಗುತ್ತಿದೆ. ಈ ರೌಂಡ್ ನೆಕ್ ಮ್ಯಾಕ್ಸಿ ಬೇಸಿಗೆಯ ದಿನಗಳಲ್ಲಿ ಧರಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಎಟಿಜಿ ನೈಟ್ ವೇರ್ ವುಮೆನ್ ಕಾಟನ್ ಫ್ಲಾವರ್ ಪ್ರಿಂಟೆಡ್ ನೈಟಿ : ಇದು ಆಕರ್ಷಕ ನೋಟ ಮತ್ತು ವಿನ್ಯಾಸದೊಂದಿಗೆ ಬರುವ ಮಹಿಳೆಯರ ನೈಟಿಯಾಗಿದೆ. ಈ ನೈಟಿಯ ಮೇಲೆ ಫ್ಲೋರಲ್ ಪ್ರಿಂಟ್ ನೀಡಲಾಗಿದೆ. ಗ್ರೀನ್, ರಾಯಲ್ ಐವರಿ ಮತ್ತು ಬ್ಯೂಟಿಫುಲ್ ಪಿಂಕ್‌ನಂತಹ ಹಲವು ಬಣ್ಣದ ಆಯ್ಕೆಗಳಲ್ಲಿ ಇದನ್ನು ನೀವು ಖರೀದಿ ಮಾಡಬಹುದಾಗಿದೆ. ಇದು ಹಲವು ಗಾತ್ರಗಳಲ್ಲಿಯೂ ಲಭ್ಯವಿದೆ. ಇದನ್ನು ಧರಿಸುವ ಮೂಲಕ ನೀವು ಆಕರ್ಷಕ ನೋಟ ಪಡೆಯುವುದು ಮಾತ್ರವಲ್ಲದೆ ರಾತ್ರಿ ಧರಿಸಲು ಅತ್ಯುತ್ತಮ ನೈಟಿ ಇದಾಗಿದೆ. 

 

 

click me!