ಪ್ರೆಗ್ನೆನ್ಸಿ ಡಯಾಬಿಟಿಸ್ ಬಗ್ಗೆ ಚಿಂತೆ ಏಕೆ? ಇಲ್ಲಿದೆ ಕಂಟ್ರೋಲ್ ಮಾಡಲು ಈಸಿ ಟಿಪ್ಸ್

Published : Jun 06, 2022, 05:34 PM IST
ಪ್ರೆಗ್ನೆನ್ಸಿ ಡಯಾಬಿಟಿಸ್ ಬಗ್ಗೆ ಚಿಂತೆ ಏಕೆ? ಇಲ್ಲಿದೆ ಕಂಟ್ರೋಲ್ ಮಾಡಲು ಈಸಿ ಟಿಪ್ಸ್

ಸಾರಾಂಶ

ಸಾಮಾನ್ಯವಾಗಿ ಪ್ರೆಗ್ನೆನ್ಸಿಯಲ್ಲಿ(Pregnancy) ಒತ್ತಡ (Stress) ಹೆಚ್ಚು ಇರುತ್ತದೆ. ಮನಸ್ಸು ಎಷ್ಟೇ ಕಂಟ್ರೋಲ್‌ನಲ್ಲಿಇಟ್ಟುಕೊಂಡರೂ ಏನಾದರೊಂದು ಇರಿಸು ಮುರಿಸು, ಸಮಸ್ಯೆಗಳು(Problems) ಬರುತ್ತವೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರಿಗೆ (Woman) ರಕ್ತದ ಶುಗರ್ ಲೆವೆಲ್(Blood Sugar Level) ಹೆಚ್ಚಾಗುತ್ತದೆ. ಇದರಿಂದಾಗುವ ಸಮಸ್ಯೆಗಳೇನು ಅದರ ನಿಯಂತ್ರಣ ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಪ್ರೆಗ್ನೆನ್ಸಿಯಲ್ಲಿ(Pregnancy) ಒತ್ತಡ(Stress) ಹೆಚ್ಚು ಇರುತ್ತದೆ. ಮನಸ್ಸು ಎಷ್ಟೇ ಕಂಟ್ರೋಲ್‌ನಲ್ಲಿ(Controle) ಇಟ್ಟುಕೊಂಡರೂ ಏನಾದರೊಂದು ಇರಿಸು ಮುರಿಸು, ಸಮಸ್ಯೆಗಳು(Problems) ಬರುತ್ತವೆ. ಅದಕ್ಕೆ ಪ್ರೆಗ್ನೆನ್ಸಿ ಸಂದರ್ಭದಲ್ಲಿ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡ, ಖುಷಿಯಿಂದ(Happy) ಇರುವುದು, ಯಾವುದಾದರು ಪುಸ್ತಕ(Book), ಸಂಗೀತ(Music) ಕೇಳುತ್ತಿರುವುದು, ರೆಸ್ಟ್ನಲ್ಲಿರಲು(Rest) ದೊಡ್ಡವರು ಆಗಾಗ್ಗೆ ಹೇಳುತ್ತಾರೆ. ಏಕೆಂದರೆ ಗರ್ಭಿಣಿ(Pregnant Lady) ಬಾಹ್ಯ ಪ್ರಪಂಚದಲ್ಲಿ ಈ ಒಂಭತ್ತು(Nine) ತಿಂಗಳು ಹೇಗಿರುತ್ತಾಳೊ ಅದೆಲ್ಲವೂ ಹೊಟ್ಟೆಯಲ್ಲಿನ ಕೂಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು. ಇದೆಲ್ಲ ಮಾನಸೀಕವಾಗಿ(Mentally) ಹಾಗೂ ದೈಹಿಕವಾಗಿ(Physically) ಒಂದಕ್ಕೊAದು ಸಂಬAಧವಿರುತ್ತದೆ. 

ಗರ್ಭಾವಸ್ಥೆಯ ಸಂದರ್ಭದಲ್ಲಿ ಶೇ.10 ರಷ್ಟು ಮಹಿಳೆಯರಿಗೆ(Woman) ರಕ್ತದಲ್ಲಿನ ಶುಗರ್ ಲೆವೆಲ್(Blood Sugar Level) ಹೆಚ್ಚಾಗುತ್ತದೆ. ಇದು ಹೆಚ್ಚಾದರೆ ಡಯಾಬಿಟಿಸ್‌ಗೆ(Diabetes) ಕಾರಣವಾಗುತ್ತದೆ. ಇದರಿಂದಾಗುವ ಸಮಸ್ಯೆಗಳೇನು ಅದರ ನಿಯಂತ್ರಣ ಹೇಗೆ ಎಂಬುದರ ಮಾಹಿತಿ ಇಲ್ಲಿದೆ. 

ನೀರು ಕುಡಿದರೂ ಗಂಟಲು ಒಣಗಿದ ಅನುಭವವಾಗುತ್ತಿದೆಯೇ ? ಗಂಭೀರ ಆರೋಗ್ಯದ ಸಮಸ್ಯೆಯೂ ಆಗಿರ್ಬೋದು !

ಗರ್ಭಾವಸ್ಥೆಯ ಮಧುಮೇಹ
ಗರ್ಭಿಣಿಯಾದ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ(Body) ಹಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ತೂಕ ಹೆಚ್ಚುವುದು(Weight Gain), ದಪ್ಪಗಾಗುವುದು ಹೀಗೆ. ಅದರಲ್ಲೂ ರಕ್ತದಲ್ಲಿನ ಶುಗರ್ ಲೆವೆಲ್ ಹೆಚ್ಚಾದಲ್ಲಿ ಡಯಾಬಿಟಿಸ್ ಬರುತ್ತದೆ. ಇದಕ್ಕೆ ಗರ್ಭಾವಸ್ಥೆಯ ಮಧುಮೇಹ(Gestational Diabetes) ಎನ್ನುತ್ತಾರೆ. ಅಮೇರಿಕಾದಲ್ಲಿ(America) ಪ್ರತೀ ವರ್ಷ ಶೇ.10ರಷ್ಟು ತಾಯಂದಿರು ಗರ್ಭಾವಸ್ಥೆಯ ಮಧುಮೇಹಕ್ಕೆ ಒಳಗಾಗುತ್ತಾರೆ. 

ಇದರಲ್ಲೂ ಎರಡು ರೀತಿಯಲ್ಲಿದೆ. ಕ್ಲಾಸ್ A1 ಹಾಗೂ ಕ್ಲಾಸ್‌ A2. ಕ್ಲಾಸ್ A1 ಪ್ರಾರಂಭಿಕ ಹಂತವಾಗಿದ್ದು, ಇದನ್ನು ಡಯೆಟ್(Diet) ಹಾಗೂ ವ್ಯಾಯಾಮದಿಂದ(Exercise) ನಿಯಂತ್ರಣಕ್ಕೆ ತರಬಹುದು. ಕ್ಲಾಸ್ A2 ಡಯಾಬಿಟಿಸ್‌ನಲ್ಲಿ ಇರುವವರು ಇನ್ಸುಲಿನ್(Insulin) ಹಾಗೂ ಔಷಧಿಗಳನ್ನು(Medicine) ಪಡೆದು ನಿಯಂತ್ರಿಸಬೇಕಾಗುತ್ತದೆ. ಡೆಲಿವರಿಯ ನಂತರ ಗರ್ಭಾವಸ್ಥೆಯ ಡಯಾಬಿಟಿಸ್ ತಾಯಿಯಿಂದ ದೂರವಾಗಬಹುದು. ಆದರೆ ಮುಂದೆ ಮಗುವಿನ(Baby) ಆರೋಗ್ಯದ ಮೇಲೆ ಪರಿಣಾಮಬೀರಬಹುದು. ಕಾಲ ಕ್ರಮೇಣ ಮಗುವಿಗೆ Type 2 ಡಯಾಬಿಟಿಸ್ ಬರುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಗರ್ಭಾವಸ್ಥೆಯಲ್ಲಿದ್ದಾಗಲೇ ತಾಯಿ ಈ ಬಗ್ಗೆ ಜಾಗೃತಿ ವಹಿಸುವುದು ಬಹಳ ಮುಖ್ಯ.

ರೋಗದ ಲಕ್ಷಣಗಳು
ತಾಯಿ ಗರ್ಭಿಣಿಯಾಗಿದ್ದಾಗ ಡಯಾಬಿಟಿಸ್ ಯಾವುದೇ ರೀತಿಯ ಲಕ್ಷಣಗಳು ಪ್ರಾರಂಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಪ್ರಗ್ನೆನ್ಸಿ ಸಂದರ್ಭದಲ್ಲಿ 2 ಬಾರಿ ರಕ್ತದ(Blood) ಪರೀಕ್ಷೆ ನಡೆಸಲು ಡಾಕ್ಟರ್(Doctor) ಹೇಳುತ್ತಾರೆ. ಬಹುತೇಕರಿಗೆ ಸ್ಕಿçÃನಿಂಗ್(Screening) ಮಾಡಿಸಿದ ಸಂದರ್ಭದಲ್ಲಿ ಶುಗರ್ ಲೆವೆಲ್ ಬಗ್ಗೆ ತಿಳಿಯುತ್ತದೆ. 
1. ಸಾಮಾನ್ಯಕ್ಕಿಂತ ಹೆಚ್ಚು ಬಾಯಾರಿಕೆಯಾಗುವುದು.
2. ಹೊಟ್ಟೆ ಹಸಿವು ಹಾಗೂ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು.
3. ಮೊದಲಿಗಿಂತ ಪ್ರೆಗ್ನೆನ್ಸಿಯಲ್ಲಿ ಪದೇ ಪದೇ ಮೂತ್ರವಿಸರ್ಜನೆ(Urine) ಮಾಡುವುದು. 

ಸ್ವೀಟ್ಸ್ ತಿಂದು ನೀರು ಕುಡಿದ್ರೆ ಸಕ್ಕರೆ ಕಾಯಿಲೆ ಬೇಗ ಬರುತ್ತಂತೆ ನೋಡಿ !

ಡಯಾಬಿಟಿಸ್‌ನಿಂದಾಗುವ ಅಪಯಾಗಳು 
1. ಪ್ರೆಗ್ನೆನ್ಸಿಯ ಸಂದರ್ಭದಲ್ಲಿ ತೂಕ ಹೆಚ್ಚುವುದು(Weight Gain).
2. ಪಾಲಿಸೈಟಿಕ್ ಓವರಿ ಸಿಂಡ್ರೋಮ್‌ಗೆ(Polycystic Ovary Syndrome) ಒಳಗಾಗಬಹುದು. ಇದು  ಇನ್ಸುಲಿನ್(Insulin) ಸಮಸ್ಯೆಗೆ ಸಂಬAಧಿಸಿದ ಮತ್ತೊಂದು ರೂಪವಾಗಿದೆ. 
3. ರಕ್ತದೊತ್ತಡ(Blood Pleassure), ಕೊಬ್ಬು(Cholesterol), ಹೃದಯ(Heart) ಸಂಬAಧಿ ಖಾಯಿಲೆ ಇನ್ನಿತರೆ ರೋಗಗಳು ಹೆಚ್ಚಾಗುವ ಸಾಧ್ಯತೆ.
4. ತಾಯಿಯು ಡೆಲಿವರಿ(Delivery) ಸಂದರ್ಭದಲ್ಲಿ 9 ಪೌಂಡ್‌ಗೂ(Pound) ಹೆಚ್ಚಿನ ತೂಕವಿರುವ ಮಗುವಿಗೆ ಜನ್ಮ ನೀಡಬಹುದು. 
5. ಮಧುಮೇಹದಿಂದಾಗಿ ಗರ್ಭಾಪಾತವಾಗುವ(Miscarriage) ಸಾಧ್ಯತೆಗಳಿವೆ. 
6. ಕುಟುಂಬದಲ್ಲಿ ಯಾರಿಗಾದರು ಡಯಾಬಿಟಿಸ್ ಇರುವ ಇತಿಹಾಸವಿರಬಹುದು. ಅಂದರೆ ವಂಶಪಾರAಪರಿಕವಾಗಿ ಬಂದಿರಬಹುದು. 
7. ಗರ್ಭಧಾರಣೆಯ ಮೊದಲು ಸ್ಥೂಲಕಾಯ ಸಮಸ್ಯೆಗೆ ಒಳಗಾಗಿದ್ದರೂ ಮಧುಮೇಹ ಬರಬಹುದು.
8. ಗರ್ಭದಲ್ಲಿ ಆಮ್ನಿಯಾಟಿಕ್ ದ್ರವ(Aminiotic Liquid) ಹೆಚ್ಚಾಗುವ ಸಾಧ್ಯತೆ.

ಗರ್ಭಾವಸ್ಥೆಯಲ್ಲಿ ಮಧುಮೇಹ ನಿಯಂತ್ರಣ ಹೇಗೆ?
ಪ್ರೆಗ್ನೆನ್ಸಿಯಲ್ಲಿ ಪ್ರತೀ ತಾಯಿಯು ದೈನಂದಿನ ಚಟುವಟಿಕೆಗಳ(Daily Activity) ಜೊತೆಗೆ ಮಗು ಹಾಗೂ ಆಕೆಯ ಆರೋಗ್ಯದಲ್ಲೂ ಎಚ್ಚರಿಕೆಯಿಂದ ಇರಬೇಕು. ಗರ್ಭಿಣಿಯಾಗಿದ್ದಾಗ ಶುಗರ್ ಕಾಣಿಸಿಕೊಂಡಲ್ಲಿ ಮೊದಲು ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.
1. ಪ್ರತೀ ದಿನ ರಕ್ತದ ಶುಗರ್ ಲೆವಲ್ ಅನ್ನು 4 ಬಾರಿ ಪರೀಕ್ಷಿಸಿಕೊಳ್ಳಬೇಕು(Test).
2. ಡಯೆಟ್ ಫ್ರೆಂಡ್ಲಿ(Diet Friendly) ಆಹಾರ ಸೇವನೆ ಬಹಳ ಮುಖ್ಯ. 
3, ಆರೋಗ್ಯಕಾರಿ ಹಣ್ಣು(Fruits), ತರಕಾರಿಗಳಾದ(Vegetables) ಕ್ಯಾರೆಟ್(Carrot), ಬೀಟ್‌ರೂಟ್(Beetroot) ಸೇವನೆ. 
4. ಪ್ರತೀ ದಿನ ಗರ್ಭಿಣಿಯರಿಗಿರುವ ವ್ಯಾಯಾಮ(Exercise) ಮಾಡುವುದು.
5. ದಿನದಲ್ಲಿ 20-35 ಗ್ರಾಂನಷ್ಟು ಫೈಬರ್(Fiber) ಇರುವ ಆಹಾರ ಸೇವಿಸಬೇಕು. ಕೆಂಪು ಅಕ್ಕಿ(Brown rice), ಕಾಡು ಅಕ್ಕಿ(Wild Rice), ಓಟ್‌ಮಿಲ್(Otmill), ಬ್ರೆಡ್, ಸಿರಲಾಕ್, ಪಾಸ್ಟಾ ಸೇವಿಸಬೇಕು.
6. ಪ್ರತೀ ದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಸ್ವಿಮ್ಮಿಂಗ್(Swimming), ರನ್ನಿಂಗ್(Running), ವಾಕಿಂಗ್(Waking), ಬೈಕಿಂಗ್(Biking) ಮಾಡುವುದು ಒಳ್ಳೆಯದು. 

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

ಪ್ರೆಗ್ನೆನ್ಸಿಯಲ್ಲಿ ಶುಗರ್ ಲೆವೆಲ್ ಇಷ್ಟಿರಬೇಕು
ಗರ್ಭಿಣಿ ಮಹಿಳೆಯ ರಕ್ತದಲ್ಲಿ ಶುಗರ್ ಲೆವೆಲ್ ಇಂತಿಷ್ಟಿರಬೇಕು ಎಂದು ಅಮೆರಿಕನ್ ಡಯಾಬಿಟಸ್ ಅಸೋಸಿಯೇಷನ್(American Diabetic Association) ಮಾಹಿತಿ ನೀಡಿದೆ.
ಊಟದ ಮೊದಲು 95Mg/DL ಅಥವಾ ಅದಕ್ಕೂ ಕಡಿಮೆ
ಊಟವಾದ ಒಂದು ಗಂಟೆಯ ನಂತರ 140Mg/DL ಅಥವಾ ಅದಕ್ಕೂ ಕಡಿಮೆ
ಊಟವಾದ ಎರಡು ಗಂಟೆಯ ನಂತರ 120Mg/DL ಅಥವಾ ಅದಕ್ಕೂ ಕಡಿಮೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!