Female Jobs : ಬಿಡುವಿನ ಸಮಯದಲ್ಲಿ ಈ ಕೆಲಸ ಮಾಡಿ ಹಣ ಗಳಿಸಿ

By Suvarna NewsFirst Published Dec 23, 2022, 4:18 PM IST
Highlights

ಗೃಹಿಣಿಗೆ ಮನೆಯಲ್ಲಿ ಬಿಡುವು ಸಿಗುವುದು ಕಷ್ಟ. ಆದ್ರೆ ಕೆಲ ಮಹಿಳೆಯರು ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಬಯಸ್ತಾರೆ. ಮನೆಯಲ್ಲಿಯೇ ಹಣ ಸಂಪಾದನೆ ಮಾಡುವ ದಾರಿ ಹುಡುಕುತ್ತಾರೆ. ಅಂಥ ಮಹಿಳೆಯರು ಕೆಲ ಕೆಲಸವನ್ನು ಸುಲಭವಾಗಿ ಮಾಡಬಹುದು.
 

ಬೆಳಿಗ್ಗೆ ಎದ್ದು ಕಚೇರಿಗೆ ಹೋಗೋದು ಸುಲಭದ ಕೆಲಸವಲ್ಲ. ಅದಲ್ಲೂ ಮಹಿಳೆ ಮನೆ, ಮಕ್ಕಳು ಎಲ್ಲವನ್ನೂ ಸಂಭಾಳಿಸಿಕೊಂಡು ಕಚೇರಿ ಕೆಲಸ ತೂಗಿಸಿಕೊಂಡು ಹೋಗಬೇಕಾಗುತ್ತದೆ. ಎಲ್ಲವನ್ನೂ ಒಟ್ಟಿಗೆ ಮಾಡಲು ಹೆಚ್ಚಿನ ಸಾಮರ್ಥ್ಯ ಅಗತ್ಯ. ಕೆಲ ಮಹಿಳೆಯರು ಹೊರಗಿನ ಗದ್ದಲ, ಕಚೇರಿಗೆ ಹೋಗುವ ಸಮಯವನ್ನು ಉಳಿಸಿ ಮನೆಯಲ್ಲಿಯೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಆಸಕ್ತಿ ಹೊಂದಿರುತ್ತಾರೆ. 

ಕೊರೊನಾ (Corona) ನಂತ್ರ ಆನ್ಲೈನ್ ಉದ್ಯೋಗ (Employment)ಕ್ಕೆ ಬೇಡಿಕೆ ಹೆಚ್ಚಾಗಿದೆ. ಮನೆ ಕೆಲಸ ಜೊತೆ ಸ್ವಲ್ಪ ಮಟ್ಟಿನ ಆದಾಯ ಗಳಿಕೆ ಮಹಿಳೆಯರನ್ನು ಸ್ವಾವಲಂಬಿ ಮಾಡ್ತಿದೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ಅನೇಕ ಕೆಲಸಗಳನ್ನು ಮಾಡಬಹುದು. ಸಾಮಾನ್ಯವಾಗಿ ಮನೆಯಲ್ಲೇ ಕುಳಿತು ಮಹಿಳೆ ಯಾವ ಕೆಲಸ ಮಾಡ್ಬಹುದು ಎಂದು ನಾವು ಪಟ್ಟಿ ಮಾಡಿದಾಗ ಡಾನ್ಸ್ ಕ್ಲಾಸ್, ಯೋಗಾ ಕ್ಲಾಸ್, ಟ್ಯೂಷನ್, ಸಂಗೀತ ಹಾಗೂ ಪೇಟಿಂಗ್ ಕ್ಲಾಸ್, ಹೊಲಿಗೆ, ಬ್ಯೂಟಿ ಪಾರ್ಲರ್, ಯುಟ್ಯೂಬರ್, ಬ್ಲಾಗರ್ ಹೀಗೆ ಕೆಲ ಪ್ರಸಿದ್ಧ ಕೆಲಸಗಳು ಸಿಗುತ್ತದೆ. ನಾವಿಂದು ಈ ಮೇಲಿನವನ್ನು ಹೊರತುಪಡಿಸಿ ಕಡಿಮೆ ಕಲಿತ ಹೆಣ್ಣು ಮಕ್ಕಳು, ಸಣ್ಣ ಹೂಡಿಕೆಯಲ್ಲಿ  ಮತ್ತೇನು ಮಾಡ್ಬಹುದು ಎಂಬುದನ್ನು ಹೇಳ್ತೆವೆ. 

ಮಹಿಳೆಯರು ಮನೆಯಲ್ಲೇ ಮಾಡಬಹುದಾದ ಕೆಲಸ ಇದು :  

ಬಳೆ ಅಂಗಡಿ : ಮಹಿಳೆಯರು ಬಳೆ ವ್ಯಾಪಾರ ಶುರು ಮಾಡಬಹುದು. ನೀವು ಮನೆಯಲ್ಲಿಯೇ ಬಳೆಗಳನ್ನು ಮಾರಾಟ ಮಾಡಬಹುದು. ಚೆಂದದ ಬಳೆಗಳನ್ನು ನೀವು ಮಾರಾಟ ಮಾಡ್ತಿದ್ದರೆ ಗ್ರಾಹಕರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತದೆ. ನೀವು ಬಳೆಗಳನ್ನು ಆನ್ಲೈನ್ ನಲ್ಲಿ ಕೂಡ ಮಾರಾಟ ಮಾಡಬಹುದು. ಸಾಮಾಜಿಕ ಜಾಲತಾಣಗಳ ಮೂಲಕ ಅದ್ರ ಪ್ರಚಾರ ಮಾಡಬಹುದು. ಈ ವ್ಯವಹಾರದಲ್ಲಿ ಉತ್ತಮ ಆದಾಯವಿದೆ. ಕನಿಷ್ಟ ಹೂಡಿಕೆಯೊಂದಿಗೆ ನೀವು ವ್ಯವಹಾರವನ್ನು ಪ್ರಾರಂಭಿಸಬಹುದು. 

ಬಟ್ಟೆಗೆ ಡಿಸೈನ್ : ಧರಿಸುವ ಬಟ್ಟೆ ಮೇಲೆ ಇಷ್ಟದ ಡಿಸೈಸ್ ಅಥವಾ ಹೆಸರು ಹಾಕಿಸಿಕೊಳ್ಳುವ ಪ್ರವೃತ್ತಿ ಈಗ ಹೆಚ್ಚಾಗಿದೆ. ಜನರು ಪ್ಲೇನ್ ಟೀ ಶರ್ಟ್ ಮೇಲೆ ಫೋಟೋ, ಹೆಸರು ಅಥವಾ ಕಂಪನಿ ಹೆಸರನ್ನು ಹಾಕಿಸಿಕೊಳ್ತಾರೆ. ನೀವು ಇದಕ್ಕೆ ಬೇಕಾದ ತರಬೇತಿ ಪಡೆದು ಈ ವ್ಯವಹಾರ ಶುರು ಮಾಡಬಹುದು. ಗ್ರಾಹಕರಿಂದ ಬಟ್ಟೆ ಪಡೆದು ಅದಕ್ಕೆ ಡಿಸೈನ್ ಮಾಡಿಕೊಡಬೇಕಾಗುತ್ತದೆ. ಡಿಸೈನ್ ಗೆ ತಕ್ಕಂತೆ ನೀವು ಹಣ ಪಡೆಯಬಹುದು.

ಲಾಂಡ್ರಿ ವ್ಯಾಪಾರ : ಲಾಂಡ್ರಿ ವ್ಯವಹಾರ ಮಾಡಲು ಹೆಚ್ಚಿನ ಶಿಕ್ಷಣದ ಅಗತ್ಯವಿಲ್ಲ. ಜನರು ಸ್ವಚ್ಛವಾದ ಬಟ್ಟೆಗಳನ್ನು ಧರಿಸಲು ತುಂಬಾ ಇಷ್ಟಪಡುತ್ತಾರೆ. ಕೆಲವರಿಗೆ ಬಟ್ಟೆ ಕ್ಲೀನಿಂಗ್ ಗೆ ಸಮಯವಿರುವುದಿಲ್ಲ. ಅಂಥವರು ಲಾಂಡ್ರಿ ಮೊರೆ ಹೀಗ್ತಾರೆ.  ನಿಮ್ಮ ಪ್ರದೇಶದಲ್ಲಿ ಲಾಂಡ್ರಿ ಇಲ್ಲವೆಂದ್ರೆ ನೀವು ಈ ವ್ಯಾಪಾರವನ್ನು ಪ್ರಾರಂಭಿಸಬಹುದು. ಬರಿ ಬಟ್ಟೆ ಲಾಂಡ್ರಿ ಮಾತ್ರವಲ್ಲ ನೀವು ಶೂ ಲಾಂಡ್ರಿ ಕೂಡ ಶುರು ಮಾಡಬಹುದು. ಮನೆಯಲ್ಲಿಯೇ ನೀವು ಇದನ್ನು ಸುಲಭವಾಗಿ ಶುರು ಮಾಡಬಹುದು. 

50ನೇ ವಯಸ್ಸಿನಲ್ಲಿ ನಾನು ಒಳ ಉಡುಪು ಮಾಡೆಲ್ ಆದೆ!

ಸ್ವೆಟರ್ ತಯಾರಿಕೆ : ಮಹಿಳೆಯರು ತಮ್ಮ ಭವಿಷ್ಯವನ್ನು ಸುಧಾರಿಸಲು ಮತ್ತು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಸ್ವೆಟರ್ ತಯಾರಿಸುವ ಕೆಲಸ ಮಾಡಬಹುದು. ಸ್ವೆಟರ್ ಮಾಡಲು ಮಾರುಕಟ್ಟೆಯಿಂದ ಉಣ್ಣೆಯ ನೂಲು ತೆಗೆದುಕೊಂಡು ಸ್ವೆಟರ್ ಹೆಣೆಯುವ ಕೆಲಸ ಮಾಡಬೇಕು. ಸುಂದರವಾದ ಸ್ವೆಟರ್ ಗೆ ಬೇಡಿಕೆಯಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಹಣವನ್ನು ಗಳಿಸಬಹುದು.  

ವಯಸ್ಸಾಯ್ತು, ಇನ್ನೇನೂ ಮಾಡಲಾಗೋಲ್ಲ ಅಂತ ಯೋಚಿಸ್ಬೇಡಿ, ಇಲ್ಲಿವೆ ಐಡಿಯಾಸ್!

ಪ್ಯಾಕಿಂಗ್ ಬ್ಯುಸಿನೆಸ್ : ಯಾವುದೇ ಕಂಪನಿಯು ಉತ್ಪನ್ನವನ್ನು ತಯಾರಿಸಿದಾಗ, ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೊದಲು ಉತ್ಪನ್ನವನ್ನು ಪ್ಯಾಕ್ ಮಾಡುತ್ತದೆ. ಪ್ಯಾಕೇಜಿಂಗ್ ಬಗ್ಗೆ ನಿಮಗೆ ಮಾಹಿತಿಯಿದ್ದರೆ ನೀವೂ ಈ ಉದ್ಯೋಗ ಶುರು ಮಾಡಬಹುದು. ಜನರನ್ನು ನೇಮಿಸಿಕೊಂಡು ಪ್ಯಾಕಿಂಗ್ ಮಾಡುವ ಕೆಲ ಕಂಪನಿಗಳಿವೆ. ಅವರ ಜೊತೆ ನೀವು ಒಪ್ಪಂದ ಮಾಡಿಕೊಳ್ಳಬೇಕು. ಕೆಲ ಕಂಪನಿಗಳು ಪ್ಯಾಕಿಂಗ್ ವಸ್ತುಗಳನ್ನು ನಿಮ್ಮ ಮನೆಗೆ ಕೊಟ್ಟು ಹೋಗುತ್ತವೆ. ಪ್ಯಾಕಿಂಗ್ ಪೂರ್ಣಗೊಂಡ ಮೇಲೆ ಅದನ್ನು ತೆಗೆದುಕೊಂಡು ಹೋಗುತ್ತದೆ.  

click me!