ಹಿಂದಿನ ತಿಂಗಳು ಯಾವಾಗ ಪಿರಿಯಡ್ಸ್ ಆಗಿತ್ತು ಅಂತಾ ಕೆಲವರು ಲೆಕ್ಕ ಹಾಕ್ತಾ ಕೂರುತ್ತಾರೆ. ಇನ್ನು ಕೆಲವರಿಗೆ ಮರೆತೇ ಹೋಗಿರುತ್ತೆ. ಇದ್ರಿಂದ ಕೆಲ ಸಮಸ್ಯೆ ಎದುರಾಗುತ್ತದೆ. ಆರೋಗ್ಯ,ಅಂಡೋತ್ಪತ್ತಿ ಎಲ್ಲದರ ಬಗ್ಗೆ ಮಾಹಿತಿ ಸಿಗಬೇಕೆಂದ್ರೆ ನೀವು ಪಿರಿಯಡ್ಸ್ ಡೇಟ್ ಟ್ರ್ಯಾಕ್ ಮಾಡ್ಬೇಕಾಗುತ್ತದೆ.
ಮುಟ್ಟು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದೆ. ಸಾಮಾನ್ಯವಾಗಿ ಮುಟ್ಟು ತಿಂಗಳಿಗೊಮ್ಮೆ ಬರುತ್ತದೆ. ಮಹಿಳೆಯರ ದೇಹದಲ್ಲಿನ ಕೆಲವು ರೀತಿಯ ಹಾರ್ಮೋನ್ ಬದಲಾವಣೆಗಳಿಂದಾಗಿ ಗರ್ಭಾಶಯದಿಂದ ರಕ್ತ ಹರಿಯುತ್ತದೆ. ಇದು ಯೋನಿಯ ಒಳಭಾಗದಿಂದ ಸ್ರವಿಸುತ್ತದೆ.ಈ ರಕ್ತದ ಹರಿವನ್ನು ಮುಟ್ಟು ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ 28 ರಿಂದ 35 ದಿನಗಳಿಗೊಮ್ಮೆ ಬರುತ್ತದೆ. ಮೂರು ದಿನಗಳಿಂದ ಐದು ಅಥವಾ ಏಳು ದಿನಗಳವರೆಗೆ ಇದು ಇರುತ್ತದೆ. ಹದಿಹರೆಯದಿಂದ ಇದು ಶುರುವಾಗುತ್ತದೆ. ಆದ್ರೆ ಹುಡುಗಿಯರ ದೇಹವನ್ನು ಅವಲಂಭಿಸಿದೆ. 8 ವರ್ಷದಿಂದ 17 ವರ್ಷದೊಳಗೆ ಹುಡುಗಿಯರಲ್ಲಿ ಮುಟ್ಟು ಕಾಣಿಸಿಕೊಳ್ಳುತ್ತದೆ.
ಹುಡುಗಿಯ ಜಿನ್, ಆಹಾರ ಪದ್ಧತಿ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಸುತ್ತಲಿನ ಪರಿಸರ, ದೈಹಿಕ ಸ್ಥಿತಿ ಇವೆಲ್ಲವೂ ಆಕೆ ಯಾವಾಗ ಮುಟ್ಟಾಗ್ತಾಳೆ ಎಂಬುದನ್ನು ನಿರ್ಧರಿಸುತ್ತದೆ. ಮುಟ್ಟಿ (Periods) ನ ದಿನಾಂಕವನ್ನು ನೀವು ಟ್ರ್ಯಾಕ್ (Track) ಮಾಡುವುದು ಬಹಳ ಮುಖ್ಯ. ನಾವಿಂದು ಮುಟ್ಟಿನ ದಿನಾಂಕದ ಟ್ರ್ಯಾಕ್ ಅಂದ್ರೇನು ಹಾಗೆ ಅದ್ರ ಪ್ರಯೋಜನ (Benefit) ವೇನು ಎಂಬುದನ್ನು ನಿಮಗೆ ಹೇಳ್ತೆವೆ.
undefined
ಮುಟ್ಟಿನ ದಿನಾಂಕದ ಟ್ರ್ಯಾಕ್ ಅಂದ್ರೇನು ? : ನಿಮಗೆ ಯಾವ ದಿನ ಪಿರಿಯಡ್ಸ್ ಆಗಿದೆ ಎಂಬುದನ್ನು ಗುರುತು ಹಾಕಿಕೊಳ್ಳಿ. ಅಲ್ಲಿಂದ ಮುಂದಿನ 28 ದಿನ ಲೆಕ್ಕ ಹಾಕಿ. ಸಾಮಾನ್ಯವಾಗಿ ಮುಂದಿನ ಪಿರಿಯಡ್ಸ್ ಮೊದಲ ದಿನದಿಂದ 28 ದಿನಗಳ ನಂತರ ಬರುತ್ತದೆ. ಐದು ದಿನ ಮೊದಲು ಅಥವಾ ಐದು ದಿನ ನಂತರವೂ ಪಿರಿಯಡ್ಸ್ ಆಗಬಹುದು. ನೀವು ಪಿರಿಯಡ್ಸ್ ಆದ ದಿನಾಂಕವನ್ನು ಕ್ಯಾಲೆಂಡರ್ (Calendar) ನಲ್ಲಿ ಮಾರ್ಕ್ ಮಾಡಿ. ಅಲ್ಲಿಂದ 28 ದಿನ ಲೆಕ್ಕ ಹಾಕಿ. ನಂತ್ರ ಐದು ದಿನ ಹಿಂದೆ ಹಾಗೂ ಐದು ದಿನ ಮುಂದಿನ ದಿನಾಂಕವನ್ನು ಕೂಡ ಗುರುತು ಹಾಕಿ. ಆಗ ನಿಮಗೆ ನಿಮ್ಮ ಮುಟ್ಟು ಯಾವ ಸಮಯದಲ್ಲಿ ಆಗ್ಬಹುದು ಎಂಬ ಮಾಹಿತಿ ಸಿಗುತ್ತದೆ. ಈಗ ಪಿರಿಯಡ್ಸ್ ಟ್ರ್ಯಾಕ್ ಮಾಡಲು ಸಾಕಷ್ಟು ಅಪ್ಲಿಕೇಷನ್ ಗಳು ಲಭ್ಯವಿದೆ. ಆ ಅಪ್ಲಿಕೇಷನ್ (Application) ಡೌನ್ಲೋಡ್ (Download) ಮಾಡಿಕೊಂಡು ಅಲ್ಲಿ ನಿಮ್ಮ ಮುಟ್ಟಿನ ದಿನಾಂಕವನ್ನು ಟ್ರ್ಯಾಕ್ ಮಾಡಬಹುದು.
ಮಹಿಳೆಯರು ಪುರುಷರಷ್ಟೇ ನಿದ್ದೆ ಮಾಡಿದ್ರೆ ಸಾಕಾಗಲ್ಲ, ಒಂಚೂರು ಜಾಸ್ತೀನೆ ಬೇಕು
ಮುಟ್ಟಿನ ದಿನಾಂಕ ಟ್ರ್ಯಾಕ್ ಮಾಡುವುದ್ರಿಂದ ಆಗುವ ಲಾಭಗಳು :
ಅಂಡೋತ್ಪತ್ತಿ ಬಗ್ಗೆ ಮಾಹಿತಿ ಸಿಗುತ್ತದೆ : ನೀವು ಮಕ್ಕಳನ್ನು ಪಡೆಯುವ ಪ್ಲಾನ್ ನಲ್ಲಿದ್ದರೆ ಮುಟ್ಟಿನ ದಿನಾಂಕ ಟ್ರ್ಯಾಕ್ ಮಾಡುವುದು ಹೆಚ್ಚು ಪ್ರಯೋಜನಕಾರಿ. ಅಂಡೋತ್ಪತ್ತಿ ಮೊದಲು ಮತ್ತು ನಂತರದ ದಿನಗಳಲ್ಲಿ ಗರ್ಭಧಾರಣೆ ಸಾಧ್ಯತೆಯಿರುತ್ತದೆ.ಪಿರಿಯಡ್ಸ್ ಟ್ರ್ಯಾಕ್ ಮಾಡುವ ಮೂಲಕ ಗರ್ಭಧಾರಣೆಯ ಸಾಧ್ಯತೆಗಳು ಯಾವ ಸಮಯದಲ್ಲಿ ಗರಿಷ್ಠವಾಗಿರುತ್ತವೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪರಿಣಾಮಕಾರಿ : ಈಗಾಗಲೇ ಹೇಳಿದಂತೆ ಒಂದು ಮುಟ್ಟಿನಿಂದ ಇನ್ನೊಂದು ಮುಟ್ಟಿಗೆ ಎಷ್ಟು ದಿನ ಅಂತರವಿರಬೇಕೆಂಬುದು ನಿಮಗೆ ತಿಳಿದಿದೆ. ಅದಕ್ಕಿಂತ ತುಂಬಾ ಮೊದಲೇ ಪಿರಿಯಡ್ಸ್ ಆದ್ರೆ ಅಥವಾ ತುಂಬಾ ತಡವಾಗಿ ಪಿರಿಯಡ್ಸ್ ಆದ್ರೆ ಆಗ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆಯಿದೆ ಎಂದೇ ಅರ್ಥ. ಆ ಸಮಯದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
Health Tips : ಉರ್ಫಿ ಜಾವೇದ್ ಗೆ ಕಾಡ್ತಿರುವ ಲಾರಿಂಜೈಟಿಸ್ ಅಪಾಯಕಾರಿಯೇ?
ಮನಸ್ಥಿತಿ ನಿರ್ವಹಿಸಲು ಸಹಕಾರಿ : ಹಾರ್ಮೋನ್ ಬದಲಾವಣೆಯಿಂದ ಪೀರಿಯಡ್ಸ್ ನಲ್ಲಿ ಕಿರಿಕಿರಿ, ಆತಂಕ ಸೇರಿದಂತೆ ಮೂಡ್ ಸ್ವಿಂಗ್ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ. ಕೆಲವರಿಗೆ ಅತಿಯಾದ ಕೋಪ, ಅಳು ಬರಲು ಶುರುವಾಗುತ್ತದೆ. ನೀವು ಮೊದಲೇ ನಿಮ್ಮ ಪಿರಿಯಡ್ಸ್ ದಿನಾಂಕ ತಿಳಿದಿದ್ದರೆ ಇದಕ್ಕೆ ಸಿದ್ಧರಾಗಬಹುದು. ಮನಸ್ಥಿತಿಯನ್ನು ನಿರ್ವಹಿಸಲು ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು.