ದೇಹದಲ್ಲಿ ಕಬ್ಬಿಣದ ಕೊರತೆಯಾದ್ರೆ ಉಸಿರಾಟದ ತೊಂದರೆ, ಕೂದಲು ಉದುರುವಿಕೆ, ಆಯಾಸ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ಕಬ್ಬಿಣಾಂಶವನ್ನು ಸಮತೋಲನದಲ್ಲಿಟ್ಟುಕೊಳ್ಳೋದು ಮಹಿಳೆಯರಿಗೆ ಅತ್ಯಗತ್ಯ. ಅದಕ್ಕೆ ಏನು ಮಾಡ್ಬೇಕೆಂಬ ಟಿಪ್ಸ್ ಇಲ್ಲಿದೆ.
ಕಬ್ಬಿಣವು ನಮ್ಮ ದೇಹಕ್ಕೆ ಬಹಳ ಮುಖ್ಯ. ನಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸಲು ಕಬ್ಬಿಣದ ಅಂಶ ಅವಶ್ಯಕವಾಗುತ್ತದೆ. ಇದು ಹಿಮೋಗ್ಲೋಬಿನ್‌ನ ಪ್ರಮುಖ ಅಂಶವಾಗಿದೆ. ಇದು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಪ್ರೋಟೀನ್ ಆಗಿದೆ. ಅನೇಕ ಮಹಿಳೆಯರು ಕಬ್ಬಿಣದ ಕೊರತೆಯನ್ನು ಎದುರಿಸುತ್ತಾರೆ. ಕ್ಯಾಲ್ಸಿಯಂ ದೇಹದಲ್ಲಿ ಕಡಿಮೆ ಇದೆ ಎಂದು ವೈದ್ಯರು ಹೇಳೋದನ್ನು ನೀವು ಕೇಳ್ಬಹುದು.
ಪ್ರತಿ ತಿಂಗಳು ನೈಸರ್ಗಿಕ ಕ್ರಿಯೆಯಾದ ಮುಟ್ಟಿಗೆ ಒಳಗಾಗುವ ಮಹಿಳೆಯರು ಬ್ಲೀಡಿಂಗ್ ಸಂದರ್ಭದಲ್ಲಿ ಕಬ್ಬಿಣಾಂಶವನ್ನು ಕಳೆದುಕೊಳ್ತಾರೆ. ಬ್ಲೀಡಿಂಗ್ (Bleeding) ಮೂಲಕ ಹೋದ ಕಬ್ಬಿಣಾಂಶವನ್ನು ಅವರು ಮರು ಪಡೆಯಬೇಕು. ಅದಕ್ಕೆ ಅಗತ್ಯವಿರುವ ಆಹಾರ ಸೇವನೆ ಮಾಡಬೇಕು. ಗರ್ಭಾವಸ್ಥೆ ಸಂದರ್ಭದಲ್ಲೂ ಅನೇಕ ಮಹಿಳೆಯರಿಗೆ ಕಬ್ಬಿಣಾಂಶದ ಕೊರತೆ ಕಾಡುತ್ತದೆ. ಭ್ರೂಣಕ್ಕೆ ಹಾಗೂ ತಾಯಿಯ ರಕ್ತದ ಪರಿಮಾಣವನ್ನು ವಿಸ್ತರಿಸಲು ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಸಸ್ಯ ಮೂಲದಿಂದ ಸಿಗುವ ಕಬ್ಬಿಣಾಂಶಕ್ಕೆ ಹೋಲಿಕೆ ಮಾಡಿದ್ರೆ ಪ್ರಾಣಿ ಮೂಲದಲ್ಲಿ ಸಿಗುವ ಕಬ್ಬಿಣಾಂಶವನ್ನು ದೇಹ ಬೇಗ ಹೀರಿಕೊಳ್ಳುತ್ತದೆ. ಹಾಗಾಗಿ ಸಸ್ಯಹಾರಿ (Vegetarian) ಮಹಿಳೆಯರು ಅಥವಾ ವೆಜ್ ಡಯಟ್ (Veg Diet) ನಲ್ಲಿರುವವರು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಸಮತೋಲನದಲ್ಲಿಡಲು ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ನಾವಿಂದು ದೇಹದಲ್ಲಿ ಕಬ್ಬಿಣಾಂಶವನ್ನು ಸಮತೋಲನದಲ್ಲಿ ಇಡುವುದು ಹೇಗೆ ಎಂಬುದನ್ನು ಹೇಳ್ತೇವೆ.
undefined
ಯಾವಾಗಲೂ ಸುಸ್ತಾದಂತೆ, ತಲೆ ತಿರುಗುವಂತಾಗುತ್ತಾ? ಮಹಿಳೆಯರೇ ನಿಮಗ್ಯಾಕೆ ಹೀಗಾಗುತ್ತೆ ಗೊತ್ತಾ?
ದೇಹದಲ್ಲಿ ಕಬ್ಬಿಣಾಂಶ ಹೆಚ್ಚಿಸಿಕೊಳ್ಳಲು ಏನು ಮಾಡ್ಬೇಕು? :
ಕಬ್ಬಿಣಾಂಶವಿರುವ ಆಹಾರ ಸೇವನೆ : ಇದು ಮೊದಲ ಹಾಗೂ ಅಗತ್ಯ ಕೆಲಸವಾಗಿದೆ. ಮಹಿಳೆಯರು ಕಬ್ಬಿಣಾಂಶವಿರುವ ಆಹಾರವನ್ನು ತಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬೇಕು. ಮಾಂಸ, ಕೋಳಿ ಮಾಂಸ, ಸಮುದ್ರ ಆಹಾರದಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತದೆ. ನೀವು ಸಸ್ಯಹಾರಿಗಳಾಗಿದ್ದರೆ ಬೀನ್ಸ್, ಮಸೂರ, ಪಾಲಕ್, ಬ್ರೋಕೊಲಿ, ಸಿರಿಧಾನ್ಯಗಳು ಮತ್ತು ಬ್ರೆಡ್ ಸೇರಿದಂತೆ ಹೆಚ್ಚು ಕಬ್ಬಿಣವಿರುವ ಆಹಾರವನ್ನು ಸೇವನೆ ಮಾಡಿ.
ವಿಟಮಿನ್ ಸಿ ಸೇವನೆಗೆ ಆದ್ಯತೆ ನೀಡಿ : ವಿಟಮಿನ್ ಸಿನಲ್ಲಿ ಕಬ್ಬಿಣಾಂಶವಿಲ್ಲ. ಆದ್ರೆ ಇದು ಕಬ್ಬಿಣವನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ನೀವು ಕಬ್ಬಿಣಾಂಶವಿರುವ ಆಹಾರ ಸೇವನೆ ಮಾಡುವ ವೇಳೆ ವಿಟಮಿನ್ ಸಿ ಆಹಾರವನ್ನು ತೆಗೆದುಕೊಳ್ಳಬೇಕು. ಕಬ್ಬಿಣ ಸಮೃದ್ಧ ಆಹಾರದ ಜೊತೆ ವಿಟಮಿನ್ ಸಿ ಹಣ್ಣು ಅಥವಾ ಜ್ಯೂಸ್ ಸೇವನೆ ಮಾಡಿ.
Health Tips: ಪಿರಿಯಡ್ಸ್ ಆದಾಗ ವಿಪರೀತ ಕಾಲು ನೋವಿರುತ್ತಾ? ಹಾಗಿದ್ರೆ ನಿಮಗಿದು ಬೆಸ್ಟ್
ಪಾತ್ರೆಗಳ ಬಳಕೆ ಹೀಗಿರಲಿ : ಕಬ್ಬಿಣದ ಪ್ರಮಾಣ ಹೆಚ್ಚಿಸುವಲ್ಲಿ ಅಡುಗೆ ಮಾಡುವ ಪಾತ್ರೆ ಕೂಡ ಮಹತ್ವದ ಪಾತ್ರವಹಿಸುತ್ತದೆ. ನೀವು ಎರಕಹೊಯ್ದ ಕಬ್ಬಿಣದ ಪಾತ್ರೆಗಳು ಮತ್ತು ಹರಿವಾಣಗಳಲ್ಲಿ ಆಮ್ಲೀಯ ಆಹಾರವನ್ನು ಅಡುಗೆ ಮಾಡಿ ಸೇವನೆ ಮಾಡಬೇಕು.
ಕಬ್ಬಿಣದ ವಿರೋಧಿ ಆಹಾರದಿಂದ ದೂರವಿರಿ : ಕಾಫಿ, ಟೀ ಅಲ್ಲದೆ ಕೆಲ ಕ್ಯಾಲ್ಸಿಯಂ ಆಹಾರಗಳು ನಿಮ್ಮ ದೇಹ ಕಬ್ಬಿಣ ಹೀರಿಕೊಳ್ಳುವುದನ್ನು ತಡೆಯುತ್ತದೆ. ನೀವು ಅಂತ ಆಹಾರ ಸೇವನೆ ಕಡಿಮೆ ಮಾಡ್ಬೇಕು ಇಲ್ಲವೆ ಅದನ್ನು ಪ್ರತ್ಯೇಕವಾಗಿ ಸೇವನೆ ಮಾಡಬೇಕು.
ನಿಯಮಿತ ಪರೀಕ್ಷೆ : ಕಬ್ಬಿಣ ನಿಮ್ಮ ದೇಹದಲ್ಲಿ ಕಡಿಮೆಯಾಗಿದೆ ಎನ್ನುವ ಅನುಮಾನ ಬಂದ್ರೆ ಅಥವಾ ಆನುವಂಶಿಕ ಸಮಸ್ಯೆಯಿದ್ದಲ್ಲಿ ನೀವು ಆಗಾಗ ಕಬ್ಬಿಣದ ಪರೀಕ್ಷೆಗೆ ಒಳಪಡಬೇಕು. ಇದ್ರಿಂದ ನಿಮ್ಮ ದೇಹದ ಕ್ಯಾಲ್ಸಿಯಂ ಪ್ರಮಾಣ ಪತ್ತೆಯಾಗುತ್ತದೆ.
ಪೂರಕ ಮಾತ್ರೆ ಸೇವನೆ : ಪರೀಕ್ಷೆಯಲ್ಲಿ ಕಬ್ಬಿಣದ ಪ್ರಮಾಣ ಕಡಿಮೆ ಎಂಬ ಸಂಗತಿ ಗೊತ್ತಾದಲ್ಲಿ ನೀವು ಕೆಲ ಸಮಯ ಕಬ್ಬಿಣದ ಪ್ರಮಾಣ ಹೆಚ್ಚಿಸಲು ಪೂರಕ ಪಾತ್ರೆಗಳನ್ನು ಸೇವನೆ ಮಾಡಬಹುದು.
ವಿಟಮಿನ್ ಬಿ 12 ಗೆ ಆದ್ಯತೆ ನೀಡಿ : ವಿಟಮಿನ್ ಬಿ 12 ಕಬ್ಬಿಣವನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಬಿ 12 ಇರುವಂತೆ ನೋಡಿಕೊಳ್ಳಿ.