ಐಬ್ರೋ ಮಾಡಿಸಿಕೊಂಡ ಪತ್ನಿಗೆ ವಿಡಿಯೋ ಕಾಲ್‌ನಲ್ಲೇ ತಲಾಖ್‌ ನೀಡಿದ ಪತಿ!

By Suvarna NewsFirst Published Nov 3, 2023, 10:06 AM IST
Highlights

ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನ ಒಪ್ಪಿಗೆಯಿಲ್ಲದೆ ಪತ್ನಿ ಐಬ್ರೋಸ್ ಮಾಡಿಸಿದುದನ್ನು ನೋಡಿದ ಪತಿ ವಿಡಿಯೋ ಕಾಲ್ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ ಘಟನೆ ನಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಲಖನೌ: ಪತ್ನಿ ಅನುಮತಿ ಕೇಳದೆ ಐಬ್ರೋ ಮಾಡಿಸಿಕೊಂಡಿದ್ದಾಳೆ ಎಂದು ಕೋಪಗೊಂಡ ಪತಿ ಆಕೆಗೆ ವಿಡಿಯೋ ಕಾಲ್‌ನಲ್ಲೇ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಐಬ್ರೋ ಮಾಡಿಸಿದ ಕಾರಣಕ್ಕೆ ಆಕೆಗೆ ಮೂರು ಬಾರಿ ನಿಷೇಧಿತ ತಲಾಖ್‌ ಹೇಳಿದ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಯಾಗ್‌ರಾಜ್‌ ನಿವಾಸಿಯಾಗಿರುವ ಮಹಮ್ಮದ್‌ ಸಲೀಂ ಸದ್ಯ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಆತನ ಪತ್ನಿ ಗುಲ್ಸಾಬಾ ಕಾನ್ಪುರದಲ್ಲಿ ವಾಸವಿದ್ದಾಳೆ. ಹೀಗಿರುವಾಗ ಗುಲ್ಸಾಬಾ ಜತೆ ಸಲೀಂ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆ ಐಬ್ರೋ ಮಾಡಿಸಿದ್ದನ್ನು ನೋಡಿದ್ದಾನೆ.

ನನ್ನ ಅನುಮತಿ ಇಲ್ಲದೇ ಐಬ್ರೋ ಮಾಡಿಸಿಕೊಂಡೆ ಏಕೆ ಎಂದು ಕೋಪಗೊಂಡ ಸಲೀಂ, ವಿಡಿಯೋ ಕಾಲ್‌ನಲ್ಲಿ ಪತ್ನಿಗೆ (Wife) ತಲಾಖ್‌ ನೀಡಿದ್ದಾನೆ. ಬಳಿಕ, ಇನ್ನು ನೀನು ಸ್ವತಂತ್ರಳು, ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದಾನೆ. ಬಳಿಕ ಗುಬ್ಸಾನಾ ಪತಿ (Husband) ವಿರುದ್ಧ ತಲಾಖ್‌ ಕೇಸು, ತನ್ನ ಅತ್ತೆ ಮಾವ ಹಾಗೂ ಪತಿ ವಿರುದ್ಧ ಕ್ರೌರ್ಯ ಮತ್ತು ವರದಕ್ಷಿಣೆ (Dowry) ಕಿರುಕುಳ ಪ್ರಕರಣ ದಾಖಲಿಸಿದ್ದಾಳೆ. 2019ರಲ್ಲಿ ಸರ್ಕಾರವು ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸಿದೆ.

ವಿದೇಶದಿಂದಲೇ ಪತ್ನಿಗೆ ವಾಟ್ಸಾಪ್‌ ಮೂಲಕ ತ್ರಿವಳಿ ತಲಾಖ್‌ ನೀಡಿದ ಪತಿ!

ಅಕ್ಟೋಬರ್ 4 ರಂದು ನಡೆದ ಘಟನೆ ಗುಲ್ಸಾಯಿಬಾ ಎಂಬ ಮಹಿಳೆ ಪೊಲೀಸರಿಗೆ ದೂರು (Complaint) ನೀಡಿದ ನಂತರ ಬೆಳಕಿಗೆ ಬಂದಿದೆ. ತನ್ನ ಅತ್ತೆಯಂದಿರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮುಸ್ಲಿಂ ವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2022 ರ ಜನವರಿಯಲ್ಲಿ ಪ್ರಯಾಗರಾಜ್‌ನ ಮೊಹಮ್ಮದ್ ಸಲೀಂ ಅವರನ್ನು ಗುಲ್ಸಾಯಿಬಾ ವಿವಾಹ (Marriage)ವಾದರು ಮತ್ತು ಪತಿ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಗುಲ್ಸಾಯಿಬಾ ಅವರು ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಆಕೆಯ ಪತಿ ಆಗಸ್ಟ್ 30, 2023 ರಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು ಮತ್ತು ಆಕೆಯ ಅತ್ತೆಯಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದರು. ತನ್ನ ಪತಿ ಓಲ್ಡ್‌ ಜನರೇಷನ್ ಆಗಿದ್ದು, ನನ್ನ ಹೊಸ ಫ್ಯಾಷನ್ ಆಯ್ಕೆಗಳ ಬಗ್ಗೆ ಆಗಾಗ ಆಕ್ಷೇಪಣೆಗಳನ್ನು ಎತ್ತುತ್ತಿದ್ದನು ಎಂದು ಗುಲ್ಸಾಯಿಬಾ ಪೊಲೀಸರಿಗೆ ವಿವರಿಸಿದ್ದಾರೆ.

ಇನ್ಸ್ಟಾಗ್ರಾಂ ರೀಲ್ಸ್‌ ಪೋಸ್ಟ್‌ ಮಾಡಿದ್ದಕ್ಕೆ ಹೆಂಡತಿಗೆ ತಲಾಖ್‌; ಕೊಲೆ ಬೆದರಿಕೆಯನ್ನೂ ಹಾಕಿದ ಪಾಪಿ ಪತಿ

ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಮುಸ್ಲಿಂ ವಿವಾಹ ಕಾಯ್ದೆಯಡಿ ತ್ವರಿತ ವಿಚ್ಛೇದನ ಮತ್ತು ವರದಕ್ಷಿಣೆ ಕಿರುಕುಳ ನೀಡಿದ್ದಕ್ಕಾಗಿ ದೂರನ್ನು ದಾಖಲಿಸಿಕೊಂಡಿದ್ದಾರೆ. ಆಕೆಯ ಪತಿ ಸಲೀಂ ಮತ್ತು ಆಕೆಯ ಅತ್ತೆ ಸೇರಿದಂತೆ ಇತರ ಐದು ವ್ಯಕ್ತಿಗಳ ವಿರುದ್ಧ ಎಫ್‌ಐಆರ್  ದಾಖಲಿಸಲಾಗಿದೆ.

ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ 2019 ರ ಅಡಿಯಲ್ಲಿ, ತ್ರಿವಳಿ ತಲಾಖ್ ಮೂಲಕ ತ್ವರಿತ ವಿಚ್ಛೇದನದ ಅಭ್ಯಾಸವು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು 2019 ರಲ್ಲಿ ಭಾರತದಲ್ಲಿ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಿಸಲಾಯಿತು.

click me!