ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಇಲ್ಲಿನ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯೇ ನೈಟ್ ಬೀಟ್ ನಡೆಸುವ ಮೂಲಕ ಸೈ ಎನಿಸಿಕೊಂಡರು. ಮಹಾನಗರದ ಇತಿಹಾಸದಲ್ಲೇ ಇಂತಹ ಪ್ರಯತ್ನ ಮೊದಲ ಬಾರಿಯಾಗಿತ್ತು. ಈ ರೀತಿ ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಿದ್ದಕ್ಕೆ ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹುಬ್ಬಳ್ಳಿ (ಮಾ.10) : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಇಲ್ಲಿನ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯೇ ನೈಟ್ ಬೀಟ್ ನಡೆಸುವ ಮೂಲಕ ಸೈ ಎನಿಸಿಕೊಂಡರು. ಮಹಾನಗರದ ಇತಿಹಾಸದಲ್ಲೇ ಇಂತಹ ಪ್ರಯತ್ನ ಮೊದಲ ಬಾರಿಯಾಗಿತ್ತು. ಈ ರೀತಿ ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಿದ್ದಕ್ಕೆ ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮಾ.7ರ ರಾತ್ರಿ 10ರಿಂದ ಮಾ.8ರ ಬೆಳಗ್ಗೆ 6ಗಂಟೆಯವರೆಗೆ ಠಾಣಾಧಿಕಾರಿ, ಠಾಣಾ ಪಹರೆಯವರಾಗಿ, ರಾತ್ರಿ ಗಸ್ತು ಉಸ್ತುವಾರಿಯÞದಿಯÞಗಿ ಹಾಗೂ ಪ್ರಥಮ ಬಾರಿಗೆ ಮಹಿಳಾ ಸಿಬ್ಬಂದಿಯೇ ಪ್ರತ್ಯೇಕವಾಗಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿದ್ದು ವಿಶೇಷ.
undefined
ಮಹಿಳಾ ದಿನಾಚರಣೆ: ಸುವರ್ಣ ನ್ಯೂಸ್ ಆ್ಯಂಕರ್ ಪ್ರತಿಮಾ ಭಟ್‌ಗೆ ಸನ್ಮಾನ
ಪಿಎಸ್‌ಐ ಸುಮನ್ ಪವಾರ(PSI Suman pawar), ಎಎಸ್‌ಐ ರಾಧಾ ಗುಂಗರಗೊಪ್ಪ, ಮಹಿಳಾ ಕಾನ್‌ಸ್ಟೇಬಲ್‌ಗಳಾದ ಯಲ್ಲಮ್ಮ ತಳವಾರ, ಸರಸ್ವತಿ ಹಸರಡ್ಡಿ, ಕಮಲಾಕ್ಷಿ ಹಾಲವರ, ಸಂಗೀತಾ ಭಜಂತ್ರಿ, ಮಂಜುಳಾ ನೇರ್ತಿ, ಬೌರಮ್ಮ ಬಿರಾದಾರ ಒಟ್ಟು 8 ಸಿಬ್ಬಂದಿ ಠಾಣೆಯ ನೈಟ್‌ಬೀಟ್ ನಿರ್ವಹಿಸಿದ್ದಾರೆ. ಈ ಮೂಲಕ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಎರಡೂ ದಿನ ಮೊದಲೇ ಮಹಿಳಾ ಸಿಬ್ಬಂದಿಗೆ ರಾತ್ರಿ ಕೆಲಸ ಮಾಡುವಂತೆ ತಿಳಿಸಲಾಗಿತ್ತು. ಅವರಿಗೆ ಧೈರ್ಯ, ಆತ್ಮಸೈರ್ಯ ತುಂಬುವ ಮೂಲಕ ಅವರನ್ನು ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಒಪ್ಪಿಸಲಾಯಿತು. ಮಹಿಳೆಯರು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದನ್ನು ನಮ್ಮ ಮಹಿಳಾ ಸಿಬ್ಬಂದಿ ಸಾಬೀತು ಪಡಿಸಿದ್ದಾರೆ. ನೈಟ್‌ಬೀಟ್ ನಿರ್ವಹಣೆ ಮಾಡುವುದು ಕಷ್ಟದ ಕೆಲಸ. ಅದನ್ನು ಮಹಿಳಾ ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುತ್ತಾರೆ ಠಾಣೆಯ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ.
ಠಾಣೆಯೊಳಗೆ ಕುಳಿತು ಕೆಲಸ ಮಾಡುತ್ತಿದ್ದೆವು. ರಾತ್ರಿ ಕೆಲಸವನ್ನು ಊಹಿಸಿರಲಿಲ್ಲ. ಮೇಲಧಿಕಾರಿಗಳ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು. ರಾತ್ರಿ ಗಸ್ತಿನಿಂದ ನಮ್ಮಲ್ಲಿಯೂ ಆತ್ಮವಿಶ್ವಾಸ ಹೆಚ್ಚಳವಾಯಿತು. ಎಂತಹ ಸಂದರ್ಭ ಬಂದರೂ ಕೆಲಸ ಮಾಡಬಲ್ಲೆವು ಎಂಬ ಧೈರ್ಯ ಬಂದಿತು ಎನ್ನುತ್ತಾರೆ ಮಹಿಳಾ ಕಾನ್‌ಸ್ಟೇಬಲ್ ಕಮಲಾಕ್ಷಿ ಹಾಲವರ.
ನಾನಲ್ಲದ ವ್ಯಕ್ತಿಯಾಗಿ ಬದುಕಲು ಅಸಾಧ್ಯ; ಎಮೋಷನಲ್ ನಿಂದನೆ ಬಗ್ಗೆ ಮೇಘನಾ ರಾಜ್
ಈ ಹಿನ್ನೆಲೆ ಮಹಿಳಾ ಸಿಬ್ಬಂದಿಯನ್ನು ಸಹಾಯಕ ಪೊಲೀಸ್ ಆಯುಕ್ತ ಬಲ್ಲಪ್ಪ ನಂದಗಾವಿ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಗೌರವಿಸಿದರು.