ಈರುಳ್ಳಿ ಕತ್ತರಿಸೋದು ಕಷ್ಟಕಷ್ಟ. ಕೆಲವೊಮ್ಮೆ ಕೈ ಜಾರುತ್ತೆ, ಮತ್ತೊಮ್ಮೆ ನಾವಂದುಕೊಂಡಂತೆ ಕಟ್ ಆಗಲ್ಲ. ಕಣ್ಣಲ್ಲಿ ನೀರಂತೂ ಖಾಯಂ. ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಿ ಸುಲಭವಾಗಿ ಈರುಳ್ಳಿ ಕತ್ತರಿಸಬೇಕು ಎನ್ನುವವರು ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಒಳ್ಳೆಯದು.
ಮನೆಯಲ್ಲಿ ಈರುಳ್ಳಿ ಇಲ್ಲ ಅಂದ್ರೆ ಅಡಿಗೆನೇ ಆಗಲ್ಲ ಎನ್ನುವವರಿದ್ದಾರೆ. ಬಹುತೇಕ ಎಲ್ಲ ಮಸಾಲೆ ಆಹಾರಕ್ಕೆ ಈರುಳ್ಳಿ ಬೇಕು. ಈರುಳ್ಳಿ ಆಹಾರದ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಈರುಳ್ಳಿ ಕತ್ತರಿಸೋದು ದೊಡ್ಡ ಸಮಸ್ಯೆ. ಕಣ್ಣಲ್ಲಿ ನೀರು ತರಿಸುವ ತರಕಾರಿ ಈರುಳ್ಳಿ. ಹಾಗಾಗಿಯೇ ಮಹಿಳೆಯರು ಈರುಳ್ಳಿ ಕತ್ತರಿಸಬೇಕೆಂದಾಗ ಸ್ವಲ್ಪ ಬೇಸರ ವ್ಯಕ್ತಪಡಿಸ್ತಾರೆ. ಇನ್ನೊಂದು ಕಾರಣವೆಂದ್ರೆ ಈರುಳ್ಳಿಯನ್ನು ನಾವಂದುಕೊಂಡಂತೆ ಕತ್ತರಿಸೋಕೆ ಬರದೆ ಇರೋದು. ಎಲ್ಲ ಆಹಾರಕ್ಕೂ ಒಂದೇ ರೀತಿ ಈರುಳ್ಳಿ ಕತ್ತರಿಸಿದ್ರೆ ಆಗೋದಿಲ್ಲ. ನೀವು ಈರುಳ್ಳಿ ಬಜ್ಜಿಗೆ ಬೇರೆ, ಈರುಳ್ಳಿ ಸಾಂಬಾರ್ ಗೆ ಬೇರೆ, ಪಲ್ಯಕ್ಕೆ ಬೇರೆ ಹೀಗೆ ಬೇರೆ ಬೇರೆ ಅಡುಗೆಗೆ ಬೇರೆ ಬೇರೆ ಆಕಾರದಲ್ಲಿ ಈರುಳ್ಳಿ ಕತ್ತರಿಸಬೇಕು. ಇಲ್ಲವೆಂದ್ರೆ ಅದು ನಿಮ್ಮ ಆಹಾರದ ರುಚಿ ಹಾಳು ಮಾಡುತ್ತದೆ. ನಿಮಗೆ ಬೇಕಾದಂತೆ ಈರುಳ್ಳಿ ಕತ್ತರಿಸೋದು ಹೇಗೆ ಹಾಗೆ ಕಣ್ಣಲ್ಲಿ ನೀರು ಬರದಂತೆ ಈರುಳ್ಳಿ ಕತ್ತರಿಸಲು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಈರುಳ್ಳಿ (Onion) ನಿಮ್ಮಿಷ್ಟದಂತೆ ಕಟ್ ಆಗ್ಬೇಕೆಂದ್ರೆ ಈ ಟಿಪ್ಸ್ (Tips) ಫಾಲೋ ಮಾಡಿ :
ತಾಜಾತನಕ್ಕೆ ಮಹತ್ವ ನೀಡಿ : ಈರುಳ್ಳಿ ಕತ್ತರಿಸುವಾಗ ಯಾವ ಈರುಳ್ಳಿ ಆಯ್ಕೆ ಮಾಡಬೇಕು ಎಂಬದನ್ನು ತಿಳಿದಿರಬೇಕು. ತಾಜಾ ಈರುಳ್ಳಿಯನ್ನು ನೀವು ತೆಗೆದುಕೊಳ್ಳಬೇಕು. ಈರುಳ್ಳಿಯನ್ನು ಬಳಸುವ ಮೊದಲು ಸ್ವಲ್ಪ ಸಮಯದವರೆಗೆ ತೆರೆದ ಗಾಳಿಯಲ್ಲಿ ಇಡಬೇಕು. ಆ ನಂತರ ಈರುಳ್ಳಿಯನ್ನು ಕತ್ತರಿಸಿ. ಹೀಗೆ ಮಾಡಿದ್ರೆ ಈರುಳ್ಳಿ ಕತ್ತರಿಸುವಾಗ ಕೈ ಜಾರುವುದಿಲ್ಲ. ಕೈನೋವು ಬರೋದಿಲ್ಲ.
ರಸ್ತೆ ಮೇಲೆ ಪೊಂಗಲ್ ಮಾಡಿದ ಸುಧಾಮೂರ್ತಿ.. ಸರಳತೆಯೇ ಶಕ್ತಿ, ಸೇವೆಯೇ ಭಕ್ತಿ
ಈರುಳ್ಳಿ ಸಿಪ್ಪೆ (Peel) ಮೊದಲು ತೆಗೆಯಿರಿ : ಈರುಳ್ಳಿಯನ್ನು ನುಣ್ಣಗೆ ಕತ್ತರಿಸಬೇಕಾದ ಸಂದರ್ಭದಲ್ಲಿ ನೀವು ಅದರ ಸಿಪ್ಪೆಗಳನ್ನು ಸರಿಯಾಗಿ ತೆಗೆಯಬೇಕು. ಸಿಪ್ಪೆ ಸಮೇತ ಈರುಳ್ಳಿ ಕತ್ತರಿಸಿದ್ರೆ ಅದನ್ನು ಸರಿಯಾಗಿ ಕತ್ತರಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಯಾವಾಗ್ಲೂ ಸಿಪ್ಪೆ ತೆಗೆದೇ ಕತ್ತರಿಸಬೇಕು.
ಎರಡೂ ಕಡೆ ಸ್ವಲ್ಪ ಕತ್ತರಿಸಿದ ತೆಗೆಯಿರಿ : ಈರುಳ್ಳಿಯನ್ನು ಸಣ್ಣಗೆ ಕತ್ತರಿಸುವ ಮೊದಲು, ಈರುಳ್ಳಿಯ ಮೇಲಿನ ಮತ್ತು ಕೆಳಗಿನ ಭಾಗವನ್ನು ಕತ್ತರಿಸಿ. ಆಗ ನಿಮಗೆ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ. ಹಾಗೆಯೇ ನೀವು ಸರಿಯಾಗಿ ಅದನ್ನು ಹಿಡಿದುಕೊಳ್ಳಬಹುದು.
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದ್ರೆ ಹೀಗೆ ಮಾಡಿ : ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಲು ರಾಸಾಯನಿಕ ಕಾರಣ. ಸಿನ್ ಪ್ರೊಪನೆಥಿಯಲ್ ಆಕ್ಸೈಡ್ (Syn Propanethial Oxide) ಎಂಬ ರಾಸಾಯನಿಕವು ಈರುಳ್ಳಿಯಲ್ಲಿ ಕಂಡುಬರುತ್ತದೆ. ಈ ರಾಸಾಯನಿಕವು ಕಣ್ಣುಗಳಲ್ಲಿ ನೀರು ಬರುವಂತೆ ಮಾಡುತ್ತದೆ.
'ನಾನು ಹುಡುಗನಾಗಿದ್ರೆ ರಸ್ತೆ ಬದೀಲಿ ನಿಂತು ಸುಸ್ಸು ಮಾಡ್ಬಹುದಿತ್ತು!'
ಚಾಕುವಿಗೆ ನಿಂಬೆ ರಸ ಹಚ್ಚಿ : ಈರುಳ್ಳಿ ಕತ್ತರಿಸುವಾಗ ಸ್ವಲ್ಪ ನಿಂಬೆರಸವನ್ನು ಚಾಕುವಿನ ಮೇಲೆ ಹಚ್ಚಿಕೊಳ್ಳಬೇಕು. ನಂತ್ರ ಈರುಳ್ಳಿಯನ್ನು ಕತ್ತರಿಸಬೇಕು. ಅದು ಈರುಳ್ಳಿಯಿಂದ ಬಿಡುಗಡೆಯಾಗುವ ರಾಸಾಯನಿಕದ ಕಟುತನವನ್ನು ಕಡಿಮೆ ಮಾಡುತ್ತದೆ. ಇದ್ರಿಂದಾಗಿ ಕಣ್ಣಿನಿಂದ ನೀರು ಬರುವುದಿಲ್ಲ.
ವಿನೇಗರ್ ನಲ್ಲಿ ಅದ್ದಿಡಿ : ಈರುಳ್ಳಿಯನ್ನು ಕತ್ತರಿಸುವ ಮೊದಲು ವಿನೆಗರ್‌ನಲ್ಲಿ ಈರುಳ್ಳಿಯನ್ನು ಅದ್ದಿ ಇಡಬೇಕು. ಸ್ವಲ್ಪ ಸಮಯದ ನಂತ್ರ ಈ ಈರುಳ್ಳಿ ಕತ್ತರಿಸಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರೋದಿಲ್ಲ.
ಮೈಕ್ರೊವೇವ್ ನಲ್ಲಿಟ್ಟು ನೋಡಿ : ಈರುಳ್ಳಿ ಕತ್ತರಿಸೋದು ತುಂಬಾ ಕಷ್ಟ, ಕಣ್ಣಲ್ಲಿ ನೀರು ಬಂದು ಉರಿ ಶುರುವಾಗುತ್ತೆ ಎನ್ನುವವರು ಮೈಕ್ರೊವೇವ್ ಬಳಕೆ ಮಾಡ್ಬಹುದು. 30 ರಿಂದ 45 ಸೆಕೆಂಡುಗಳ ಕಾಲ ಮೈಕ್ರೊವೇವ್ ನಲ್ಲಿ ಈರುಳ್ಳಿ ಇಟ್ಟು ಬಿಸಿ ಮಾಡಿದ ನಂತ್ರ ಕತ್ತರಿಸಬೇಕು.
ಫ್ರಿಜ್ ನಲ್ಲಿ ಈರುಳ್ಳಿ ಇಡಿ : ನೀವು ಬಳಸುವ ಅರ್ಧಗಂಟೆ ಮೊದಲು ಈರುಳ್ಳಿಯನ್ನು ಫ್ರಿಜ್ ನಲ್ಲಿ ಇಡಿ. ಇದು ಗಾಳಿಯಲ್ಲಿ ಆಮ್ಲ ಕಿಣ್ವಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಕಣ್ಣೀರು ಬರುವುದಿಲ್ಲ.