Kitchen Tips : ತಿಂಗಳಾದರೂ ಹಸಿಮೆಣಸು ಕೆಡ್ಬಾರದು ಅಂದ್ರೆ ಹೀಗ್ ಮಾಡಿ

By Suvarna News  |  First Published Mar 9, 2023, 5:13 PM IST

ಉಪ್ಪಿನ ಜೊತೆ ಹಸಿಮೆಣಸು ನುರಿತಿದ್ರೆ ಅದ್ರಿಂದ ಬರುವ ಸುವಾಸನೆ ಬಾಯಲ್ಲಿ ನೀರು ತರಿಸಿರುತ್ತದೆ. ಹಸಿಮೆಣಸಿನ ಪವರ್ ಅಂತದ್ದು. ರುಚಿ ಖಾರವಿದ್ರೂ ಅಡುಗೆಗೆ ಬೇಕೇಬೇಕು. ನಿನ್ನೆ ತಂದ ಮೆಣಸು ಇಂದು ಕೊಳೆತು ಹೋಗಿರುತ್ತೆ. ಅದನ್ನು ವಾರಗಟ್ಟಲೆ ಇಟ್ಕೊಳ್ಳೋದೆ ಸವಾಲ್ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ.
 


ಅಡುಗೆ ಮಾಡಲು ತರಕಾರಿಗಳು ಬೇಕೇ ಬೇಕು. ಅದರಲ್ಲೂ ಒಗ್ಗರಣೆಗೆ ಹಸಿಮೆಣಸು ಅತೀ ಮುಖ್ಯವಾಗಿರುತ್ತದೆ. ಪಲ್ಯ, ಚಟ್ನಿ ಮುಂತಾದವುಗಳಿಗೆ ಹಸಿಮೆಣಸು ವಿಶೇಷ ರುಚಿ ಮತ್ತು ಪರಿಮಳವನ್ನು ಒದಗಿಸುತ್ತೆ. ನಾಲಿಗೆಗೆ ಖಾರ ಎನಿಸಿದರೂ ಮತ್ತೆ ಮತ್ತೆ ತಿನ್ನಬೇಕು ಎನ್ನುವಷ್ಟು ರುಚಿ ಈ ಹಸಿಮೆಣಸಿಗಿರುತ್ತೆ. ವಾರಕ್ಕೊಮ್ಮೆ ನಮಗೆ ಬೇಕಾದ ತರಕಾರಿಗಳ ಜೊತೆ ಹಸಿಮೆಣಸನ್ನು ಕೂಡ ಕೊಂಡುಕೊಳ್ತೇವೆ. ಆದರೆ ಅದನ್ನು ಹೇಗೆ ತಾಜಾ ಇಟ್ಟುಕೊಳ್ಳುವುದು ಎನ್ನುವುದೇ ದೊಡ್ಡ ಸವಾಲು. ಏಕೆಂದರೆ ಹಸಿಮೆಣಸು ಬಾಡಿಹೋಗುತ್ತೆ ಇಲ್ಲವೆಂದ್ರೆ ಕೊಳೆತುಹೋಗುತ್ತೆ. ಬೇಸಿಗೆಯ ದಿನಗಳಲ್ಲಂತೂ ಹಸಿಮೆಣಸು ಮತ್ತೂ ಬೇಗ ಒಣಗಿಹೋಗುತ್ತೆ ಜೊತೆಗೆ ಅದರ ಸ್ವಾದವೂ ಬದಲಾಗುತ್ತೆ.

ತಿಂಗಳ ತನಕ  ಹಸಿಮೆಣಸ (Chili) ನ್ನು ಕೆಡದಂತೆ ನೀವು ಸ್ಟೋರ್ (Store ) ಮಾಡಬಹುದು. ಅದು ಹೇಗೆ ಹಸಿಮೆಣಸನ್ನು ಕೆಡದಂತೆ ತಾಜಾ ಇಟ್ಕೊಳ್ಳೋದು ಅಂದ್ರಾ? ಇಲ್ಲಿದೆ ಟಿಪ್ಸ್.

Tap to resize

Latest Videos

ಜಿಪ್ ಬ್ಯಾಗ್ (Zip bag ) ಬಳಸಿ :  ಹಸಿಮೆಣಸು ಬಹಳ ದಿನಗಳವರೆಗೆ ಬಾಳಿಕೆ ಬರಲು ಹಸಿಮೆಣಸಿನ ತೊಟ್ಟಿನ ಬಾಗವನ್ನು ತೆಗೆದು ಅದನ್ನು ಜಿಪ್ ಲಾಕ್ ಬ್ಯಾಗ್ ನಲ್ಲಿ ಹಾಕಿಡಿ. ನಂತರ ಆ ಬ್ಯಾಗ್ ಅನ್ನು ರೆಫ್ರಿಜರೇಟರ್ (Refrigerator) ಒಳಗೆ ಇಡಿ. ಹೀಗೆ ಸ್ಟೋರ್ ಮಾಡಿದ ಹಸಿಮೆಣಸನ್ನು ನಿಮಗೆ ಬೇಕಾದಾಗ ಬಳಸಿಕೊಂಡು ಮತ್ತೆ ಫ್ರೀಜರ್ ನಲ್ಲೇ ಇಟ್ಟುಬಿಡಿ. ಹೀಗೆ ಮಾಡುವುದರಿಂದ ಹಸಿಮೆಣಸು ತಾಜಾತನ ಕಳೆದುಕೊಳ್ಳುವುದಿಲ್ಲ. ಇದರಿಂದ ಅಡುಗೆಯ ಘಮವೂ ಹೆಚ್ಚುತ್ತೆ.

KITCHEN TIPS : ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಏನ್ಮಾಡ್ಬೇಕು?

ಹೀಗೆ ಮಾಡಿದ್ರೆ ಹಸಿಮೆಣಸು ತಿಂಗಳಾದರೂ ಹಾಳಾಗೊಲ್ಲ :
• ಮೊದಲು ಹಸಿಮೆಣಸನ್ನು ಚೆನ್ನಾಗಿ ತೊಳೆಯಿರಿ
• ಕೊಳೆತ ಅಥವಾ ಹಾಳಾದ ಹಸಿಮೆಣಸು ಇದ್ದರೆ ಅದನ್ನು ಎಸೆದುಬಿಡಿ. ಏಕೆಂದರೆ ಅದು ಉಳಿದ ಹಸಿಮೆಣಸನ್ನೂ ಕೆಡಿಸಬಹುದು
• ಬೇರ್ಪಡಿಸಿದ ನಂತರ ಅದನ್ನು ಪೇಪರ್ ಟವೆಲ್ ನಲ್ಲಿ ಒಣಗಿಸಿ
• ಹಸಿಮೆಣಸಿನ ತೊಟ್ಟಿನ ಭಾಗವನ್ನು ಕೈಗಳಿಂದ ತೆಗೆಯಿರಿ. ತೊಟ್ಟಿನ ಬಾಗವನ್ನು ತೆಗೆಯಲು ಚಾಕೂ ಬಳಸಬೇಡಿ. ಏಕೆಂದರೆ ಅದರಿಂದ ಹಸಿಮೆಣಸು ಹಾಳಾಗಬಹುದು
• ಒಂದು ಗಾಳಿಯಾಡದ ಡಬ್ಬವನ್ನು ತೆಗೆದುಕೊಂಡು ಅದರ ತಳಭಾಗಕ್ಕೆ ಕಾಗದದ ಟವೆಲ್ ಹಾಕಿ ಅದರ ಮೇಲೆ ಹಸಿಮೆಣಸನ್ನು ಹಾಕಿ ಮೇಲಿನಿಂದ ಮತ್ತೆ ಕಾಗದದ ಟವೆಲ್ ನಿಂದ ಮುಚ್ಚಿ
• ಡಬ್ಬದ ಮುಚ್ಚಲನ್ನು ಗಟ್ಟಿಯಾಗಿ ಹಾಕಿ ಫ್ರಿಜ್ ನಲ್ಲಿಡಿ

ಹಸಿಮೆಣಸು ವರ್ಷಗಟ್ಟಲೆ ಬಾಳಿಕೆ ಬರಲು ಹೀಗೆ ಮಾಡಿ : 
ಹಸಿಮೆಣಸನ್ನು ವರ್ಷಗಟ್ಟಲೆ ಇಡಬಹುದೆಂದರೆ ನಿಮಗೆ ಆಶ್ಚರ್ಯವಾಗಬಹುದು. ಹಸಿಮೆಣಸು ವರ್ಷದ ತನಕ ಹಾಳಾಗದೇ ಇರಲು ನೀರಿಗೆ ಒಂದು ಚಮಚ ವಿನೆಗರ್ ಬೆರೆಸಿ ಹಸಿಮೆಣಸನ್ನು ಅದರಲ್ಲಿ ಹಾಕಿ. ಸ್ವಲ್ಪ ಸಮಯದ ಬಳಿಕ ಹಸಿಮೆಣಸನ್ನು ಶುದ್ಧವಾದ ನೀರಿನಿಂದ ತೊಳೆದು ಒಣಗಿಸಿ. ಹಸಿಮೆಣಸು ಚೆನ್ನಾಗಿ ಒಣಗಿದ ಮೇಲೆ ಅದರ ತೊಟ್ಟುಗಳನ್ನು ತೆಗೆದುಬಿಡಿ. ಕೆಂಪಗಾದ ಮತ್ತು ಹಾಳಾದ ಹಸಿಮೆಣಸುಗಳನ್ನು ಕೂಡ ಬೇರ್ಪಡಿಸಿ. ನಂತರ ಈ ಹಸಿಮೆಣಸುಗಳನ್ನು ಜಿಪ್ ಕವರ್ ನಲ್ಲಿಯೋ ಅಥವಾ ಗಾಳಿಯಾಡದ ಡಬ್ಬದಲ್ಲಿಯೋ ತುಂಬಿಟ್ಟರೆ ವರ್ಷಗಟ್ಟಲೆ ಬಳಸಬಹುದು.

ಈ ಬಾಸ್ಮುತಿ ಅಕ್ಕಿಗೆ ಯಾಕೆ ಅಷ್ಟೊಂದು ದುಡ್ಡು?

ಹಸಿಮೆಣಸಿನ ಪೇಸ್ಟ್  :

• ಹಸಿಮೆಣಸಿನ ತೊಟ್ಟಿನ ಭಾಗ ಮತ್ತು ಹಾಳಾದ ಮೆಣಸನ್ನು ಬೇರ್ಪಡಿಸಿ ನೀರನ್ನು ಹಾಕದೇ ಹಾಗೇ ಪೇಸ್ಟ್ ತಯಾರಿಸಿ
• ತಯಾರಿಸಿದ ಪೇಸ್ಟ್ ಅನ್ನು ಕ್ಲಿಂಗ್ ಫಿಲ್ಮ್ ಟ್ರೇ ಯಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ದೊಡ್ಡ ಆಕಾರದಲ್ಲಿ ಇರಿಸಿ ಅದರ ಮೇಲೆ ಮತ್ತೆ ಕ್ಲಿಂಗ್ ಫಿಲ್ಮ್ ಇರಿಸಿ.
• ಹಸಿಮೆಣಸಿನ ಪೇಸ್ಟ್ ಹೊಂದಿರುವ ಕ್ಲಿಂಗ್ ಫಿಲ್ಮ್ ಟ್ರೇಯನ್ನು ಫ್ರೀಜ್ ಮಾಡುವುದಕ್ಕೋಸ್ಕರ ಫ್ರಿಜ್ ನಲ್ಲಿ ಇರಿಸಿ
• ಫ್ರೀಜ್ ಆದ ಹಸಿಮೆಣಸಿನ ಪೇಸ್ಟ್ ಅನ್ನು ತೆಗೆದು ಯಾವುದಾದರೂ ಒಂದು ಬ್ಯಾಗ್ ಗೆ ಹಾಕಿ
• ಈ ಪೇಸ್ಟ್ ಅನ್ನು ನೀವು ಹಲವು ದಿನಗಳ ತನಕ ಅಡುಗೆಯಲ್ಲಿ ಬಳಸಬಹುದು

click me!