ವ್ಯಕ್ತಿಯ ಗುಪ್ತಾಂಗದಲ್ಲಿ, ಗುದನಾಳದಲ್ಲಿ ವಸ್ತುಗಳು ಸಿಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಇಂಥಾ ಘಟನೆಗಳು ನಡೆದಿದ್ದು, ವೈದ್ಯರು ಸರ್ಜರಿ ಮಾಡಿ ಬುಲೆಟ್ ಹೊರತೆಗೆದಿದ್ದರು. ಹಾಗೆಯೇ ಸೋಮಾಲಿಯಾದಲ್ಲಿ ಮಹಿಳೆಯ ಗುಪ್ತಾಂಗದಲ್ಲಿ ಬುಲೆಟ್ ಸಿಕ್ಕಿದೆ.
ಮಹಿಳೆಯೊಬ್ಬರು ತಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಆಕಸ್ಮಿಕವಾಗಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿರುವ ಘಟನೆ ಸೋಮಾಲಿಯಾದಲ್ಲಿ ನಡೆದಿದೆ. ಬಳಿಕ ಸ್ಥಳೀಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಬುಲೆಟ್‌ನ್ನು ಗುಪ್ತಾಂಗದಿಂದ ಹೊರ ತೆಗೆದರು. 24 ವರ್ಷದ ರೋಗಿಯು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ, ಎಲ್ಲಿಂದಲೋ ಹಾರಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿದೆ. ಗಾಬರಿಗೊಂಡ ಮಹಿಳೆ ತಕ್ಷಣ ಮೊಗಾಡಿಶುವಿನ ಎರ್ಡೋಕನ್ ಆಸ್ಪತ್ರೆಗೆ ತೆರಳಿದ್ದಾನೆ. ಅಲ್ಲಿ ಸಿಟಿ ಸ್ಕ್ಯಾನ್ ನಲ್ಲಿ ಬುಲೆಟ್ ಗುಪ್ತಾಂಗದಲ್ಲಿ ಇರುವುದು ತಿಳಿದುಬಂದಿದೆ. ನಂತರ ವೈದ್ಯರು ಸರ್ಜರಿ ಮಾಡಿ ಗುಂಡನ್ನು ಹೊರತೆಗೆದರು. ಈ ರೀತಿಯ ಪ್ರಕರಣ ಕಂಡು ಬಂದಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.
'ಬುಲೆಟ್ ಅದೃಷ್ಟವಶಾತ್ ಕಡಿಮೆ ವೇಗದಲ್ಲಿ ತಗುಲಿದ್ದರಿಂದ ಅವಳಿಗೆ ಏನು ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 'ರೋಗಿಯನ್ನು ಸ್ಥಳೀಯ ಅರಿವಳಿಕೆಯ ಅಡಿಯಲ್ಲಿ ಇರಿಸಿ ಅವಳ ಖಾಸಗಿ ಭಾಗದಿಂದ ಬುಲೆಟ್ ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವಳು ಯಾವುದೇ ತೊಂದರೆ ಅನುಭವಿಸಲಿಲ್ಲ, ಬಳಿಕ ಮರುದಿನ ಅವಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ನಂತರ ಫಾಲೋ-ಅಪ್ ಅಪಾಯಿಂಟ್‌ಮೆಂಟ್‌ನಲ್ಲಿ, ಮಹಿಳೆಯ ಆರೋಗ್ಯ ಉತ್ತಮವಾಗಿದೆ ಎಂಬುದನ್ನು ವೈದ್ಯರು ಗುರುತಿಸಿದರು.
ಅಬ್ಬಬ್ಬಾ.ಎರಡು ಶಿಶ್ನದೊಂದಿಗೆ ಜನಿಸಿದ ಮಗು, ಗುದದ್ವಾರವೇ ಇಲ್ಲ, ಬೆಚ್ಚಿಬಿದ್ದ ವೈದ್ಯರು!
ಸೋಮಲಿಯಾದಲ್ಲಿ ಗುಂಡೇಟಿನ ಗಾಯಗಳು ಸಾಮಾನ್ಯವಾಗಿ ಯುದ್ಧಭೂಮಿ ಪ್ರದೇಶಗಳಲ್ಲಿ ಅಥವಾ ಯುದ್ಧದಿಂದ ಹಾನಿಗೊಳಗಾದ ವಸತಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೀಗೆ ಮನುಷ್ಯನ ದೇಹದಲ್ಲಿ ಬುಲೆಟ್ ಸಿಕ್ಕಿರುವುದು ಮೊದಲ ಬಾರಿಯಲ್ಲ . ಕಳೆದ ವರ್ಷ, ಸೂಲಗಿತ್ತಿಯೊಬ್ಬರು ಮಹಿಳೆಯ ಗುಪ್ತಾಂಗದಿಂದ ಫೇಕ್ ನೈಲ್ಸ್, ಪೆನ್ ಮುಚ್ಚಳ ಮೊದಲಾದವುಗಳನ್ನು ಹೊರತೆಗೆದಿದ್ದರು. ಈ ತಿಂಗಳ ಆರಂಭದಲ್ಲಿ, ಹೊಂಡುರಾಸ್‌ನ ಸ್ತ್ರೀರೋಗತಜ್ಞರು ರೋಗಿಯ ಯೋನಿಯೊಳಗಿಂದ ಜಿರಳೆಯನ್ನು ಹೊರತೆಗೆದಿದ್ದರು.
ಗುದನಾಳದಲ್ಲಿ ಸಿಲುಕಿತ್ತು ಸೌತೆಕಾಯಿ, ಬೀಜ ತಿಂದಿದ್ದೆ ಎಂದ ವ್ಯಕ್ತಿ, ದಂಗಾದ ವೈದ್ಯರು!
ಆಹಾರ ತಿನ್ನುವಾಗ ಸಾಮಾನ್ಯವಾಗಿ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಎಲ್ಲರನ್ನೂ ಕಾಡುವ ಸಮಸ್ಯೆ. ಆದರೆ ಈ ವ್ಯಕ್ತಿಯ ಗುದನಾಳದಲ್ಲಿಯೇ ತಿನ್ನೋ ಆಹಾರ ಸಿಲುಕಿಕೊಂಡಿತ್ತು. ಕೊಲಂಬಿಯಾದ ಬಾರಾನೋವಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬ ತಾನು ವಿಪರೀತ ಹಿಂಬದಿ ನೋವು ಅನುಭವಿಸುತ್ತಿದ್ದು, ನಡೆದಾಡಲು ಕಷ್ಟಪಡುತ್ತಿರುವುದಾಗಿ ಹೇಳಿದ್ದಾನೆ. ವೈದ್ಯರು ಈ ಬಗ್ಗೆ ಪರಿಶೀಲಿಸಿದಾಗ ಗುದನಾಳದಲ್ಲಿ ಸೌತೆಕಾಯಿ ಇರುವುದು ತಿಳಿದುಬಂದಿದೆ. ಈ ಬಗ್ಗೆ ಕೇಳಿದಾಗ ವ್ಯಕ್ತಿ ತಾನು ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಸೇವಿಸುತ್ತೇನೆ. ಹೀಗಾಗಿ ಹೊಟ್ಟೆಯಲ್ಲಿ ಸೌತೆಕಾಯಿ ಬೆಳೆದು ಹೀಗಾಗಿರಬಹುದು ಎಂದಿದ್ದಾನೆ. ಆತನ ಮಾತಿಗೆ ವೈದ್ಯರು ದಂಗಾಗಿದ್ದಾರೆ.
Crime News: ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪ್ ತುರುಕಿದ ಸಹೋದ್ಯೋಗಿ: ವ್ಯಕ್ತಿ ಸಾವು
ಘಟನೆಯ ವಿವರ ಹೀಗಿದೆ?
ಕೊಲಂಬಿಯಾದ ವ್ಯಕ್ತಿ ಹಲವು ವಾರಗಳಿಂದ ಕಾಲುಗಳಲ್ಲಿ ನೋವನ್ನು (Leg pain) ಅನುಭವಿಸುತ್ತಿದ್ದ. ಕೂರಲು, ಏಳಲು, ನಡೆಯಲು ಹೀಗೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಕಷ್ಟವಾಗುತ್ತಿತ್ತು. ಹೀಗಾಗಿ ಆತ ತಕ್ಷಣ ಚಿಕಿತ್ಸೆ (Treatment) ಪಡೆಯಲು ವೈದ್ಯರ ಬಳಿ ಹೋಗಿದ್ದಾನೆ. ವೈದ್ಯರು (Doctor) ಎಕ್ಸ್-ರೇ ಮೂಲಕ ಗುದನಾಳದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಸೌತೆಕಾಯಿ ಸಿಲುಕಿ ಹಾಕಿಕೊಂಡಿರುವುದು ಗೋಚರಿಸಿದೆ. ಶಸ್ತ್ರಚಿಕಿತ್ಸೆಯ (Operation) ನಂತರ, ಸೌತೆಕಾಯಿ ತನ್ನ ದೇಹದೊಳಗೆ ಹೇಗೆ ಸಿಲುಕಿಕೊಂಡಿದೆ ಎಂದು ತನಗೆ ತಿಳಿದಿಲ್ಲ ಎಂದು ವ್ಯಕ್ತಿ ಹೇಳಿದನು. ಮಾತ್ರವಲ್ಲ, ಬಹಳಷ್ಟು ಸೌತೆಕಾಯಿಗಳನ್ನು ತಿನ್ನುವ ಕಾರಣ ಸೌತೆಕಾಯಿ (Cucumber) ಬೀಜದಿಂದಾಗಿ ಜೀರ್ಣಾಂಗ ವ್ಯವಸ್ಥೆಯೊಳಗೆ ಸೌತೆಕಾಯಿ ಬೆಳೆದಿರಬಹುದು ಎಂದು ತಿಳಿಸಿದನು. ವೈದ್ಯರು ವ್ಯಕ್ತಿಯ ಬಾಲಿಶ ಹೇಳಿಕೆಗೆ ಪ್ರತಿಕ್ರಿಯಿಸದೆ ಆತನನ್ನು ಮನೆಗೆ ಕಳುಹಿಸಿದರು.