
ಮಹಿಳೆ (Woman) ಯರು ತುಂಬಾ ಭಾವುಕ ಸ್ವಭಾವದವರು. ಆದ್ರೆ ಮಹಿಳೆಯರು ಬುದ್ಧಿವಂತರು ಹೌದು. ತಮ್ಮ ಜೀವನವನ್ನು ಹೇಗೆ ಬ್ಯಾಲೆನ್ಸ್ ಮಾಡ್ಬೇಕು ಎಂಬುದು ಅವರಿಗೆ ಗೊತ್ತು. ವೃತ್ತಿ (Career), ಮನೆ, ಕುಟುಂಬ (Family) , ಮಕ್ಕಳು, ಸ್ನೇಹಿತರು (Friends) ಎಲ್ಲರನ್ನು ಸಂತೋಷವಾಗಿಡುವುದು ಹೇಗೆ ಎಂಬುದು ಮಹಿಳೆಯರಿಗೆ ತಿಳಿದಿರುತ್ತದೆ. ಈ ಎಲ್ಲ ಜಂಜಾಟದ ಮಧ್ಯೆಯೇ ಮಹಿಳೆಯರು ತಮ್ಮ ಬಗ್ಗೆಯೂ ಗಮನ ನೀಡ್ತಾರೆ ಎನ್ನುವುದೇ ವಿಶೇಷ. ಮಹಿಳೆಯರು ಎಲ್ಲ ಕೆಲಸದ ಮಧ್ಯೆ ಸಮಯ ಹೊಂದಿಸಿಕೊಂಡು ತಮ್ಮ ಜೀವನವನ್ನು ಎಂಜಾಯ್ ಮಾಡ್ತಾರೆ. ಮಹಿಳೆಯರು ತಮಗಾಗಿ ಸಮಯವನ್ನು ಮೀಸಲಿಡುವುದು ಹಾಗೂ ತಾವು ಇಷ್ಟಪಡುವದನ್ನು ಮಾಡುವುದನ್ನು ನೋಡಿದ್ರೆ ಅನೇಕ ಬಾರಿ ಪುರುಷರೂ ಅಸೂಯೆಪಟ್ಟುಕೊಳ್ತಾರೆ. ಇಂದು ಮಹಿಳೆಯರು ಖುಷಿಯಾಗಿರಲಿ ಏನು ಮಾಡ್ತಾರೆ? ಹಾಗೆ ಪುರುಷರು ಯಾವುದಕ್ಕೆ ಅಸೂಯೆಪಡ್ತಾರೆ ಎಂಬುದನ್ನು ಇಂದು ನೋಡೋಣ.
ಶಾಪಿಂಗ್ (Shopping) : ಬಹುತೇಕ ಮಹಿಳೆಯರಿಗೆ ಶಾಪಿಂಗ್ ಬಹಳ ಖುಷಿ ನೀಡುವ ಸಂಗತಿ. ಅದ್ರಲ್ಲೂ ಕೆಲ ಮಹಿಳೆಯರ ಮೂಡ್ ಹಾಳಾಗಿದ್ದರೆ ಅನೇಕ ಬಾರಿ ಅವರು ತಮ್ಮ ಮನಸ್ಸ ಶಾಂತಗೊಳಿಸಲು ಶಾಪಿಂಗ್ ಆಯ್ಕೆ ಮಾಡಿಕೊಳ್ತಾರೆ. ಕೆಲ ಮಹಿಳೆಯರು ಬಟ್ಟೆ ಖರೀದಿ ಮಾಡಿದ್ರೆ ಮತ್ತೆ ಕೆಲ ಮಹಿಳೆಯರು ವಿಂಡೋ ಶಾಪಿಂಗ್ ಮಾಡಿ ಮನಸ್ಸನ್ನು ಹಗುರಗೊಳಿಸಿಕೊಳ್ತಾರೆ. ಶಾಪಿಂಗ್ ಅನ್ನು ಅವರ ಅತ್ಯುತ್ತಮ ಭಾಗವೆಂದು ಪರಿಗಣಿಸಿದ್ದಾರೆ. ತಮ್ಮ ಮನಸ್ಸನ್ನು ತಾಜಾಗೊಳಿಸಲು, ಮಹಿಳೆಯರು ವಿವೇಚನೆಯಿಲ್ಲದೆ ಶಾಪಿಂಗ್ ಮಾಡುತ್ತಾರೆ ಮತ್ತು ಆ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ಅನೇಕ ಬಾರಿ ಇವರ ಜೊತೆ ಶಾಪಿಂಗ್ ಗೆ ಸಂಗಾತಿ ಹೋಗ್ಬೇಕಾಗುತ್ತದೆ. ಗಂಟೆಗಟ್ಟಲೆ ಅವರ ಜೊತೆ ಶಾಪಿಂಗ್ ಮಾಡೋದು ಪುರುಷರಿಗೆ ಬೋರ್. ಹಾಗೆ ಬಿಲ್ ಹೆಚ್ಚಾಗ್ತಿದ್ದಂತೆ ಅವರ ಹೊಟ್ಟೆ ಉರಿಯುತ್ತದೆ. ಕೆಲವೊಮ್ಮೆ ಮಹಿಳೆಯರ ಈ ಶಾಪಿಂಗ್ ಖಯಾಲಿಗೆ ಪುರುಷರು ಅಸೂಯೆಪಡುವುದೂ ಇದೆ.
ಬೀದಿ ಆಹಾರ ಅಥವಾ ನೆಚ್ಚಿನ ಆಹಾರವನ್ನು ಆನಂದಿಸುವುದು: ಸಂಗಾತಿ ನನ್ನ ಜೊತೆ ಆಹಾರ ಸೇವನೆ ಮಾಡಲು ಇಷ್ಟಪಡ್ತಾಳೆ ಎಂದು ಪುರುಷರು ತಪ್ಪು ಭಾವಿಸುತ್ತಾರೆ. ಕೆಲವೊಮ್ಮೆ ಮಹಿಳೆಯರು ತಮ್ಮ ನೆಚ್ಚಿನ ಆಹಾರವನ್ನು ಮಾತ್ರ ಆನಂದಿಸಲು ಬಯಸುತ್ತಾರೆ. ಅದು ಕಾಫಿಯಾಗಿರಲಿ, ಬೀದಿ ಆಹಾರವಾಗಿರಲಿ ಅಥವಾ ರೆಸ್ಟೋರೆಂಟ್‌ನಲ್ಲಿನ ನೆಚ್ಚಿನ ಆಹಾರವಾಗಿರಲಿ. ಕೆಲವೊಮ್ಮೆ ಮಹಿಳೆಯರು ಏಕಾಂಗಿಯಾಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಆ ಸಂದರ್ಭದಲ್ಲಿ ಗೋಲ್ಗಪ್ಪ ಅವರ ಫೆವರೆಟ್ ಅಂದ್ರೆ ತಪ್ಪಾಗಲಾರದು. ಏಕಾಂಗಿಯಾಗಿ ನೆಚ್ಚಿನ ಆಹಾರ ಸೇವನೆ ಮಾಡ್ತಿದ್ದಂತೆ ಅವರ ಮೂಡ್ ಬದಲಾಗುತ್ತದೆ. ಬೇಸರದಲ್ಲಿದ್ದವರು ಖುಷಿಯಾಗ್ತಾರೆ.
ಅತ್ತೆ-ಸೊಸೆ ಅಂದ್ರೆ ಎಣ್ಣೆ-ಸೀಗೆಕಾಯಂತೇ ಇರ್ಬೇಕಾ ? ಸುಧಾಮೂರ್ತಿ ಮಾತು ಕೇಳಿಯೊಮ್ಮೆ
ನೃತ್ಯ (Dance) ಅಥವಾ ಹಾಡು (Singing) : ನೃತ್ಯ ಮತ್ತು ಹಾಡುವುದು ಕೆಲವರ ವೃತ್ತಿಯಾಗಿದೆ, ಆದರೆ ಕೆಲವರು ಅದನ್ನು ತಮ್ಮ ಹವ್ಯಾಸಕ್ಕಾಗಿ ಮಾಡುತ್ತಾರೆ. ನಮಗೆ ಸಂತೋಷವನ್ನು ನೀಡುವ ಹವ್ಯಾಸಗಳನ್ನು ನಾವು ಮಾಡ್ಬೇಕೆಂದು ಮನೋವೈದ್ಯರು ಸಲಹೆ ನೀಡುತ್ತಾರೆ. ಮಹಿಳೆಯರು ಸಹ ತಮ್ಮ ಮನಸ್ಸನ್ನು ರಿಫ್ರೆಶ್ ಮಾಡಲು ಅಥವಾ ಸಂಗಾತಿಯೊಂದಿಗೆ ಜಗಳದ ನಂತರ ನೃತ್ಯ, ಹಾಡು, ಚಿತ್ರಕಲೆ ಸೇರಿದಂತೆ ತಮಗಿಷ್ಟವಾದ ಕೆಲಸ ಮಾಡ್ತಾರೆ. ಜಗಳವಾಡಿದ ನಂತ್ರವೂ ಸಂಗಾತಿಯು ಅಸಮಾಧಾನಗೊಳ್ಳುವ ಬದಲು ಸಂತೋಷವಾಗಿದ್ದಾಳೆ ಎಂಬುದು ತಿಳಿದಾಗ ಪುರುಷರು ಅಸೂಯೆಗೊಳ್ತಾರೆ.
WOMEN EMPOWERMENT ಪುಟ್ಟ ಕಂದನ ಬೆನ್ನಿಗೆ ಕಟ್ಟಿ ಕಸಗುಡಿಸುವ ಮಹಿಳೆ, ತಾಯಿ ಸ್ವಾವಲಂಬಿ ಬದುಕಿಗೆ ಜನರ ಸಲಾಂ!
ಏಕಾಂಗಿ ಪ್ರಯಾಣ (Solo Trip) : ಏಕಾಂಗಿಯಾಗಿ ಪ್ರಯಾಣಿಸುವುದು ಸುಲಭವಲ್ಲ. ಆದರೆ ಅನೇಕ ಜನರು ಒಂಟಿ ಪ್ರವಾಸವನ್ನು ಇಷ್ಟಪಡ್ತಾರೆ. ಮಹಿಳೆಯರು ತಮ್ಮ ಸಂತೋಷಕ್ಕಾಗಿ ಒಂಟಿಯಾಗಿ ಪ್ರಯಾಣ ಬೆಳೆಸ್ತಾರೆ. ಈ ಸಮಯದಲ್ಲಿ ಅವರು ತಮ್ಮನ್ನು ತಾವು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ತಮ್ಮ ಆತ್ಮವಿಶ್ವಾಸದ ಮಟ್ಟವನ್ನು ದ್ವಿಗುಣಗೊಳಿಸುವ ಮೂಲಕ ಹಿಂದಿರುಗುತ್ತಾರೆ. ಸ್ನೇಹಿತರು, ಸಂಬಂಧಿಕರ ಜೊತೆ ಪ್ರಯಾಣ ಬೆಳೆಸುವುದು ಬೇರೆ ಆನಂದ ನೀಡುತ್ತದೆ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವುದು ಭಿನ್ನ ಅನುಭವ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.