ಒಡಿಶಾ(ಮೇ.29): ಪುಟ್ಟ ಕಂದನ ಬೆನ್ನಿಗೆ ಕಟ್ಟಿಕೊಂಡು ಪ್ರತಿ ದಿನ ನಗರ ಶುಚಿ ಮಾಡುವ ಕೆಲಸ. ಮಗುವಿನ ಊಟ, ನಿದ್ದೆ ಎಲ್ಲವೂ ಅಮ್ಮನ ಬೆನ್ನ ಮೇಲೆ. ಇತ್ತ ತನ್ನ ಕೆಲಸಕ್ಕೂ ಯಾವುದೇ ಭಂಗ ಬರದ ರೀತಿಯಲ್ಲಿ ಎರಡನ್ನು ನಿರ್ವಹಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.
ಒಡಿಶಾದ ಮಯೂರ್‌ಬಂಜ್ ಜಿಲ್ಲೆಯ ಪಾಲಿಕೆಯ ಪೌರ ಕಾರ್ಮಿಕೆಯಾಗಿರುವ ಲಕ್ಷ್ಮೀ ತನ್ನ ಪುಟ್ಟ ಕಂದನ ಜೊತೆಗೆ ಕೆಲಸಕ್ಕೆ ತೆರಳುತ್ತಾರೆ. ರಸ್ತೆ ಗುಡಿಸುವ, ಪಟ್ಟಣವನ್ನು ಶುಚಿಯಾಗಿಡುವ ಲಕ್ಷ್ಮೀ ಮುದ್ದು ಕದ್ದನ ಬೆನ್ನಿಗೆ ಕಟ್ಟಿಕೊಂಡೇ ಕೆಲಸ ಮಾಡುತ್ತಾರೆ.
ಗಂಡ ಬಿಟ್ಟೋದ್ರೂ ಎದೆಗುಂದಲಿಲ್ಲ, ಕಸ ಗುಡಿಸುವ ಮಹಿಳೆ ಈಗ ಆರ್‌ಎಎಸ್ ಅಧಿಕಾರಿ!
ಖಾಸಗಿ ಸುದ್ದಿ ಸಂಸ್ಥೆ ಎಎನ್ಐ ಈ ಲಕ್ಷ್ಮೀ ಕುರಿತ ವಿಡಿಯೋವೊಂದನ್ನು ಪೋಸ್ಟ್ ಮಾಡಿತ್ತು. ಕೆಲ ನಿಮಿಷಗಳಲ್ಲೇ ಈ ವಿಡಿಯೋ ವೈರಲ್ ಆಗಿದೆ. ಮಗುವಿನೊಂದಿಗೆ ಕೆಲಸ ಮಾಡುತ್ತಿರುವ ಹಾಗೂ ಸ್ವಾವಲಂಬಿಯಾಗಿ ಬದುಕುತ್ತಿರುವ ತಾಯಿಗೆ ಜನರು ಸಲಾಂ ಹೇಳಿದ್ದಾರೆ.
ಈ ವಿಡಿಯೋ ಮೂಲಕ ಲಕ್ಷ್ಮೀ ಮನಮಿಡಿಯುವ ಕತೆ ಕೂಡ ಬಹಿರಂಗವಾಗಿದೆ. ಲಕ್ಷ್ಮೀಗೆ ಪತಿ ಇಲ್ಲ, ಪೋಷಕರೂ ಇಲ್ಲ. ಮನೆಯಲ್ಲಿ ಲಕ್ಷ್ಮೀ ಹಾಗೂ ಪುಟ್ಟ ಕಂದ ಇಬ್ಬರೆ. ಹೀಗಾಗಿ ಮನೆಯಲ್ಲಿ ಮಗುವನ್ನು ಬಿಡುವಂತಿಲ್ಲ. ಗುಡಿಸಿ ಶುಚಿ ಮಾಡುವ ಕೆಲಸವಾಗಿರುವ ಕಾರಣ ರಸ್ತೆಯಲ್ಲಿ ಬಿಡುವಂತಿಲ್ಲ. ಹೀಗಾಗಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡುತ್ತೇನೆ ಎಂದು ಲಕ್ಷ್ಮೀ ಹೇಳಿದ್ದಾರೆ.
| Odisha: A lady sweeper, Laxmi cleans the road in Mayurbhanj district with her baby tied to her back. pic.twitter.com/g7rs3YMlFn
— ANI (@ANI)
ನನಗೆ ಕಷ್ಟ ಎನಿಸಿಲ್ಲ. ಕಳೆದ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಬದುಕು ಕಷ್ಟವಾಗಿದೆ. ಆದರೆ ಕೆಲಸ ಎಂದಿಗೂ ಕಷ್ಟವಾಗಿಲ್ಲ, ನನ್ನ ಬದುಕಿಗೆ ಈ ಕೆಲಸವೇ ಆಧಾರವಾಗಿದೆ ಎಂದು ಲಕ್ಷ್ಮೀ ಹೇಳಿದ್ದಾರೆ.
ಪಂಚಾಯತ್‌ನಲ್ಲಿ ಕಸ ಗುಡಿಸುತ್ತಿದ್ದಾಕೆ ಈಗ ಅದೇ ಕಚೇರಿಯ ಅಧ್ಯಕ್ಷೆ
ಲಕ್ಷ್ಮೀ ಕುರಿತು ಪಾಲಿಕೆ ಮುಖ್ಯಸ್ಥ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ವೈಯುಕ್ತಿಕ ಕಾರಣಗಳಿಂದ ಲಕ್ಷ್ಮೀ ತನ್ನ ಮಗುವಿನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೀಗೆ ಯಾವುದೇ ನೆರವು ಬೇಕಾದರು ನೀಡಲು ಸಿದ್ಧ. ಈಗಾಗಲೇ ಲಕ್ಷ್ಮೀಗೆ ಕೆಲಸ ಮಾಡಲು ಸೂಕ್ತ ವಾತಾವರಣ ನಿರ್ಮಿಸಲು ಹಾಗೂ ಕುಟುಂಬಕ್ಕೆ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪಾಲಿಕೆ ಮುಖ್ಯಸ್ಥ ಹೇಳಿದ್ದಾರೆ.
ಸಿಎಂ ಚನ್ನಿ ಸೋಲಿಸಿದ ಆಪ್ ಶಾಸಕನ ತಾಯಿ ಈಗಲೂ ಕಸ ಗುಡಿಸುವ ಕೆಲಸ!
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಲಾಬ್‌ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್, ತಮ್ಮ ಪುತ್ರ ಶಾಸಕನಾಗಿ ಹೊರಹೊಮ್ಮಿದ ಹೊರತಾಗಿಯೂ ಶಾಲೆಯಲ್ಲಿ ತಮ್ಮ ಕಸಗುಡಿಸುವ ಕೆಲಸವನ್ನು ಮುಂದುವರೆಸಿದ್ದಾರೆ. ಮೊಬೈಲ್ ರಿಪೇರಿ ಕೆಲಸ ಮಾಡುವ ಲಾಬ್‌ಸಿಂಗ್‌ರ ತಾಯಿ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ‘ನಾವು ಹಣ ಗಳಿಸಲು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆವು. ನನ್ನ ಮಗನ ಸ್ಥಾನವನ್ನು ಪರಿಗಣಿಸಿದೇ ನನ್ನ ಕೆಲಸವನ್ನು ಮುಂದುವರೆಸುತ್ತೇನೆ’ ಎಂದಿದ್ದಾರೆ ಕೌರ್.
ಕಸ ಗುಡಿಸಿದ ಕಾಗೇರಿ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಗರದ ಬಿಡ್ಕಿ ಬಯಲಿನಲ್ಲಿ ಕಸಬರಿಗೆ ಹಿಡಿದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ಖಾದಿ ಬಟ್ಟೆಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಇಲ್ಲಿಯ ಗಾಂಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ವಿವಿಧ ಕ್ಷೇತ್ರಗಳ ಸಾಧಕರು, ಕಾರ್ಮಿಕರನ್ನು ಸನ್ಮಾನಿಸಿದರು. ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಗೇರಿ, ಬಳಿಕ ಕಸಬರಿಗೆ ಹಿಡಿದು ಕಸ ಗುಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಈ ವೇಳೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿಅವರೂ ಕಸಬರಿಗೆ ಹಿಡಿದು ಗುಡಿಸುವ ಮೂಲಕ ಕಾಗೇರಿಯವರಿಗೆ ಸಾಥ್ ನೀಡಿದರು.