
ಹೆಣ್ಮಕ್ಕಳೆ ಸ್ಟ್ರಾಂಗು (Strong) ಗುರು ಎನ್ನುವ ಮಾತು ಮತ್ತೆ ಮತ್ತೆ ಸಾಭೀತಾಗ್ತಲೆ ಇರುತ್ತದೆ. ಪುರುಷರು ಹೊರಗೆ ದುಡಿಬಹುದು ಆದ್ರೆ ಮಹಿಳೆಯರು ಮನೆ ಹೊರಗೆ ಹಾಗೂ ಮನೆ ಒಳಗೆ ಎರಡೂ ಕಡೆ ದುಡಿಯುತ್ತಾರೆ. ಇಡೀ ದಿನ ಕೆಲಸ ಮಾಡುವ ಶಕ್ತಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಹೆಣ್ಮಕ್ಕಳಲ್ಲಿಯೇ ಜಾಸ್ತಿ ಇದೆ. ಆದ್ರೆ ಮಹಿಳೆಯರ ಈ ಕೆಲಸಕ್ಕೆ ಸರಿಯಾದ ಸಂಬಳ (Salary) ಸಿಗ್ತಿಲ್ಲ. ಮನೆ ಕೆಲಸ ಮಾಡುವ ಮಹಿಳೆಯರಿಗೆ ಸಂಬಳ ಕನಸಿನ ಮಾತು ಬಿಡಿ. ಮನೆ, ಮಕ್ಕಳು, ಅಡುಗೆ ಹೀಗೆ ಎಲ್ಲವನ್ನೂ ಸಂಭಾಳಿಸಿದ್ರೂ ಆಕೆ ಆರ್ಥಿಕವಾಗಿ ಅಬಲೆ. ಆದ್ರೆ ಕೆಲಸದ ವಿಷ್ಯದಲ್ಲಿ ಆಕೆ ಪುರುಷರಿಗಿಂತ ಸ್ಟ್ರಾಂಗ್.
ಆಸ್ಟ್ರೇಲಿಯನ್ (Australian) ಜನಗಣತಿ ಏನು ಹೇಳುತ್ತೆ ? :
ಆಸ್ಟ್ರೇಲಿಯನ್ ಜನಗಣತಿಯ ಅಂಕಿ ಅಂಶ ಇದನ್ನು ಮತ್ತೆ ಸಾಭೀತುಪಡಿಸಿದೆ. ಪುರುಷರಿಗಿಂತ ಮಹಿಳೆಯರು ಸಾಮಾನ್ಯವಾಗಿ ವಾರಕ್ಕೆ ಹಲವಾರು ಗಂಟೆಗಳಷ್ಟು ಕಾಲ ಸಂಬಳವಿಲ್ಲದ ಮನೆ ಕೆಲಸವನ್ನು ಮಾಡುತ್ತಾರೆ ಎಂದು ಆಸ್ಟ್ರೇಲಿಯನ್ ಜನಗಣತಿಯಲ್ಲಿ ತೋರಿಸಲಾಗಿದೆ. ಆದ್ರೆ ಇದೇನೂ ಹೊಸದಲ್ಲ. ಆಸ್ಟ್ರೇಲಿಯನ್ ಜನಗಣತಿಯು ಪಾವತಿಸದ ಮನೆಗೆಲಸದ ಸಮಯವನ್ನು 15 ವರ್ಷಗಳಿಂದ ಎಣಿಸುತ್ತ ಬಂದಿದೆ. ಮಹಿಳೆಯರು ಪ್ರತಿ ಬಾರಿ ಪುರುಷರಿಗಿಂತ ಹೆಚ್ಚು ಮನೆಗೆಲಸವನ್ನು ಮಾಡುತ್ತಿರುವುದು ಕಂಡುಬಂದಿದೆ.
ಈ ರೋಗವಿದ್ದರೆ, ಪಿರಿಯಡ್ಸ್ ಆದ್ರೂ ತಾಯಿಯಾಗಲು ಸಾಧ್ಯವಿಲ್ಲ!
ಮಹಿಳೆಯರು ಪುರುಷರಿಗಿಂತ ಹೆಚ್ಚು ಮನೆಗೆಲಸ ಮಾಡ್ತಾರೆ : ಇದಕ್ಕೂ ಮೊದಲು 2006ರಲ್ಲಿಯೂ ಆಸ್ಟ್ರೇಲಿಯಾ ಜನಗಣತಿ ಅಂಕಿಅಂಶವನ್ನು ಬಹಿರಂಗಪಡಿಸಿತ್ತು. ಅದ್ರಲ್ಲೂ ಮನೆ ಕೆಲಸದ ಹೊರೆ ಮಹಿಳೆಯರ ಹೆಗಲ ಮೇಲಿದೆ ಎಂಬುದನ್ನು ಬಹಿರಂಗಪಡಿಸಲಾಗಿತ್ತು. ಈಗ ಹೊರ ಬಿದ್ದ ಅಂಕಿಅಂಶದಲ್ಲೂ ಇದನ್ನೇ ಹೇಳಲಾಗಿದೆ. ಕೊರೊನಾ ಮಹಾಮಾರಿ, ಲಾಕ್ ಡೌನ್ ಸಂದರ್ಭದಲ್ಲೂ ಮಹಿಳೆಯರು ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂಬುದನ್ನು ಹೇಳಲಾಗಿದೆ.
ಸಾಂಕ್ರಾಮಿಕ ಒತ್ತಡ : ಕೊರೊನಾ ಸಾಂಕ್ರಾಮಿಕ ಒತ್ತಡ ಮಹಿಳೆಯರನ್ನು ಅದರಲ್ಲೂ ಮಕ್ಕಳನ್ನು ಹೊಂದಿರುವ ಮಹಿಳೆಯರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ತಾಯಂದಿರ ಜೀವನಕ್ಕೆ ಕೊರೊನಾ ವಿನಾಶಕಾರಿಯಾಗಿದೆ. ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕವಾಗಿ ಸದೃಢರಾಗ್ತಿದ್ದ ಮಹಿಳೆಯರಿಗೆ ಇದು ಶಾಪವಾಗಿದೆ. ಕೆಲಸ ಕಳೆದುಕೊಂಡ ತಾಯಂದಿರು ಮನೆ ಕೆಲಸ, ಮಕ್ಕಳ ಆರೈಕೆ ಮತ್ತು ಮನೆ ಶಿಕ್ಷಣದ ಹೊರೆಯನ್ನು ನಿರ್ವಹಿಸಿದ್ದಾರೆ.
House Wife ಈ ಟಿಪ್ಸ್ ಉಪಯೋಗಿಸಿದ್ರೆ ಬೇಗ ಮುಗಿಯತ್ತೆ ಮನೆ ಕೆಲಸ
ಮನೆ ಕೆಲಸದಲ್ಲಿ ತಂದೆ ಪಾಲು : ಕೊರೊನಾ ಆರಂಭಿಕ ಸಂದರ್ಭದಲ್ಲಿ ಮನೆಯಲ್ಲಿಯೇ ಪುರುಷರು ಕೆಲಸ ಮಾಡಿದ್ದಾರೆ. ಈ ವೇಳೆ ಅವರು ಮನೆ ಕೆಲಸವನ್ನು ಮಾಡಿದ್ದಾರೆ ಎಂದು ಅಂಕಿ ಅಂಶ ಹೇಳುತ್ತದೆ. ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಕೆಲಸವನ್ನು ಈ ಸಂದರ್ಭದಲ್ಲಿ ಮಾಡಿದ್ದಾರೆ. ಆದ್ರೆ ಸಾಂಕ್ರಾಮಿಕ ಸಮಯದಲ್ಲಿ ಪುರುಷರು ಮಾಡಿರುವ ಕೆಲಸವನ್ನು ಪ್ರಶಂಸಿಸಬೇಕು ಎನ್ನುತ್ತಾರೆ ತಜ್ಞರು.
ತಾಯಂದಿರು ಸಾಂಕ್ರಾಮಿಕ ರೋಗದ ನಿಜವಾದ ನಾಯಕರು :
ತಾಯಂದಿರೇ ಸಾಂಕ್ರಾಮಿಕ ರೋಗದ ನಿಜವಾದ ನಾಯಕರು ಎಂದು ಜನಗಣತಿ ಅಂಕಿ ಅಂಶದಲ್ಲಿ ಕಂಡುಹಿಡಿದಿದೆ. ಅವರು ಕುಟುಂಬಸ್ಥರ ಆರೋಗ್ಯ ಮತ್ತು ಯೋಗ ಕ್ಷೇಮದ ಹೊಣೆ ಹೊತ್ತಿದ್ದಲ್ಲದೆ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಹಿಳೆಯರು ಪೂರ್ಣ ಸಮಯದ ಉದ್ಯೋಗದಲ್ಲಿರುವಾಗಲೂ ಮನೆ ಕೆಲಸವನ್ನು ಬಿಡುವುದಿಲ್ಲ. ಕೆಲಸ ಜೊತೆ ಮನೆ ಕೆಲಸವನ್ನೂ ಮಾಡುತ್ತಾರೆ ಎಂದು ತೋರಿಸುವ ದಶಕಗಳ ಸಂಶೋಧನೆಗೆ ಇದು ಸಮಾನಾಂತರವಾಗಿದೆ. ಉನ್ನತ ಶಿಕ್ಷಣ ಪಡೆದು, ಒಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವ ಹುಡುಗಿಯರು ಮದುವೆ ನಂತ್ರ ಇಲ್ಲವೆ ಮಕ್ಕಳಾದ್ಮೇಲೆ ಕೆಲಸ ತೊರೆಯುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಪುರುಷರು ನಿಧಾನವಾಗಿ ಮನೆ ಹಾಗೂ ಮಕ್ಕಳ ಕೆಲಸಕ್ಕೆ ಒಗ್ಗಿಕೊಳ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಮನೆಯಲ್ಲಿ ಸಕ್ರಿಯವಾಗಿರಲು ಬಯಸ್ತಿದ್ದಾರೆಂದು ವರದಿ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.