ತುಂಬಿ ಹರಿಯುವ ಗಂಗೆಗೆ ಹಾರಿ ಈಜಿದ ವೃದ್ಧೆ: ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಅಜ್ಜಿ

Published : Jun 29, 2022, 01:00 PM IST
ತುಂಬಿ ಹರಿಯುವ ಗಂಗೆಗೆ ಹಾರಿ ಈಜಿದ ವೃದ್ಧೆ: ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಅಜ್ಜಿ

ಸಾರಾಂಶ

ಕೆಲ ದಿನಗಳ ಹಿಂದಷ್ಟೇ 70 ವರ್ಷದ ವೃದ್ಧೆಯೊಬ್ಬರು ಕೈಗಳನ್ನು ಕಟ್ಟಿ ಪೆರೆಯರ್ ನದಿಯ ಈಜಿ ದಾಟುವ ಮೂಲಕ ಸಾಹಸ ಮೆರದಿದ್ದರು. ಈಗ ಹರಿದ್ವಾರದಲ್ಲಿ ವೃದ್ಧೆಯೊಬ್ಬರು ಸೇತುವೆ ಮೇಲಿನಿಂದ ಗಂಗಾನದಿಗೆ ಹಾರಿ ಈಜುವ ಮೂಲಕ ಜನರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಹರಿದ್ವಾರ: ಕೆಲ ದಿನಗಳ ಹಿಂದಷ್ಟೇ 70 ವರ್ಷದ ವೃದ್ಧೆಯೊಬ್ಬರು ಕೈಗಳನ್ನು ಕಟ್ಟಿ ಪೆರೆಯರ್ ನದಿಯ ಈಜಿ ದಾಟುವ ಮೂಲಕ ಸಾಹಸ ಮೆರದಿದ್ದರು. ಈಗ ಹರಿದ್ವಾರದಲ್ಲಿ ವೃದ್ಧೆಯೊಬ್ಬರು ಸೇತುವೆ ಮೇಲಿನಿಂದ ಗಂಗಾನದಿಗೆ ಹಾರಿ ಈಜುವ ಮೂಲಕ ಜನರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಸಾಧಿಸುವುದಕ್ಕೆ ವಯಸ್ಸಿನ ಹಂಗಿಲ್ಲ. ಸಾಧಿಸುವ ಮನಸ್ಸೊಂದಿದ್ದರೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಈಗ 70 ವರ್ಷದ ವೃದ್ಧೆಯೊಬ್ಬರು ಇದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ. ಗಂಗಾನದಿಗೆ ಅಡ್ಡಲಾಗಿ ಇರುವ ಸೇತುವೆ ಮೇಲಿನಿಂದ ವೃದ್ಧೆಯೊಬ್ಬರು ತುಂಬಿ ಹರಿಯುತ್ತಿರುವ ಆಳವಾದ ಗಂಗಾನದಿಗೆ (river Ganga) ಹಾರಿ ಈಜಲು ಶುರು ಮಾಡುತ್ತಾರೆ. ಸೇತುವೆ ಮೇಲಿದ್ದವರೆ ಯಾರೋ ಈ ಘಟನೆಯನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಜ್ಜಿಯ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. 

ಯುವಕರು ಯುವತಿಯರು ಎತ್ತರದಿಂದ ನದಿಗೆ ಹಾರಿ ಈಜುವುದು ದೊಡ್ಡ ವಿಚಾರವಲ್ಲ. ಆದರೆ ಇಲ್ಲಿ ಹಣ್ಣು ಹಣ್ಣು ಅಜ್ಜಿಯೊಬ್ಬರು ಹರಿದ್ವಾರದ ಬ್ರಿಡ್ಜ್‌ನಿಂದ ತುಂಬಿ ಹರಿಯುವ ಗಂಗಾನದಿಗೆ ಹಾರಿದ್ದಾರೆ. ಹರ್‌ ಕಿಪುರಿ ಘಾಟ್‌ನ ಸೇತುವೆಯಲ್ಲಿ ಈ ಸಾಹಸಿ ಘಟನೆ ನಡೆದಿದೆ. ಅವರ ಆತ್ಮವಿಶ್ವಾಸದ ಈಜು ನೋಡುಗರ ಎದೆ ಕೆಲ ಕಾಲ ಝಲ್ ಎನಿಸುವಂತೆ ಮಾಡಿದೆ. ಯಶಸ್ವಿಯಾಗಿ ಈಜುತ್ತಾ ದಡ ತಲುಪಿದ ಅವರು ತನ್ನ ಅತ್ಯುತ್ತಮ ಈಜು ಕೌಶಲ್ಯದಿಂದ ನೋಡುಗರನ್ನು ಬೆರಗುಗೊಳಿಸಿದ್ದಾರೆ. 

ಕೈಗಳನ್ನು ಕಟ್ಟಿ ಪೆರಿಯರ್‌ ನದಿಯುದ್ದಕ್ಕೂ ಈಜಿ ಜೈಸಿದ 70ರ ಅಜ್ಜಿ

ಛತ್ತೀಸ್‌ಗಢದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಬಸೋಯಾ (Ashok Basoy) ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು 'ಅಮ್ಮನ ಜಿಗಿತ' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಹರ್ ಕಿ ಪೈಡಿ ಸೇತುವೆಯಿಂದ ಗಂಗಾ ನದಿಗೆ ಹಾರಿದ ವೃದ್ಧೆ, ಸೇತುವೆಯಿಂದ ಗಂಗೆಗೆ ಹಾರಿದ ನಂತರ ಆಕೆ ಆರಾಮವಾಗಿ ಈಜುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಮಹಿಳೆಯ ವಯಸ್ಸು ಸುಮಾರು 70 ವರ್ಷ ಆಗಿರಬಹುದು ಎಂದು ಅವರು ಬರೆದುಕೊಂಡಿದ್ದಾರೆ. 

Commonwealth Games 2022: ಭಾರತ ಈಜು ತಂಡದಲ್ಲಿ ಸ್ಥಾನ ಪಡೆದ ಶ್ರೀಹರಿ ನಟರಾಜ್
 

ಗಂಗೆಯಲ್ಲಿ ಮುಳುಗಿದರೆ ಪಾಪ ಕಳೆಯುವುದು, ಪುಣ್ಯ ಬರುವುದು ಎಂಬ ನಂಬಿಕೆ ನಮ್ಮ ಹಿಂದೂ ಧರ್ಮದಲ್ಲಿದೆ. ಹೀಗಾಗಿ ಜಗತ್ತಿನಾದ್ಯಂತ ಇರುವ ಅನೇಕರು ಧಾರ್ಮಿಕ ಕ್ಷೇತ್ರ ಹರಿದ್ವಾರಕ್ಕೆ ಬಂದು ಗಂಗೆಯಲ್ಲಿ ಮಿಂದೇಳುತ್ತಾರೆ. ಮೋಕ್ಷಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಈ ವೈರಲ್ ವಿಡಿಯೋದಲ್ಲಿರುವುದು ಕೇವಲ ಒಂದು ಪುಣ್ಯಸ್ನಾನವಲ್ಲ, ಇದೊಂದು ಸಾಹಸವೇ ಸರಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ