
ಬರ್ಲಿನ್(ಮಾ.11): ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಲು, ಸ್ವಚ್ಚಂದವಾಗಿ ವಿಹರಿಸಲು ಎಲ್ಲರು ಬಯಸುತ್ತಾರೆ. ಇದೀಗ ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ತೆಗೆದುಕೊಂಡಿರುವ ಒಂದು ನಿರ್ಧಾರದಿಂದ ಇದೀಗ ಎಲ್ಲರೂ ಈಜುಕೊಳದತ್ತ ಧಾವಿಸುವಂತೆ ಮಾಡಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯರು ಟಾಪ್‌ಲೆಸ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳಬಹುದು. ಈಜಾಡಬಹುದು. ಶೀಘ್ರದಲ್ಲೇ ಈ ನಿಯಮ ಜಾರಿಯಾಗುತ್ತಿದೆ. ಮಹಿಳೆಯರು ಇನ್ನು ಮುಂದೆ ಟಾಪ್‌ಲೆಸ್ ಆಗಿ ಸ್ವಚ್ಚಂದವಾಗಿ ಈಜುಕೊಳದ ಸುತ್ತ ಇರಬಹುದು ಅಥವಾ ಈಜಾಡಬಹುದು. ಈ ಮಾಹಿತಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮೇಮ್ಸ್ ಹರಿದಾಡುತ್ತಿದೆ. ಇದೀಗ ಬರ್ಲಿನ್‌ನಲ್ಲಿ ಎಲ್ಲರೂ ಸ್ವಿಮ್ಮಿಂಗ್ ಪೂಲ್ ನೋಂದಣಿಗೆ ಸಜ್ಜಾಗಿದ್ದಾರೆ. ಇತ್ತ ಈಜುಕೊಳದತ್ತ ಜನಸಾಗರವೇ ಹರಿದು ಬರುತ್ತಿದೆ ಅನ್ನೇ ಮೇಮ್ಸ್ ಹರಿದಾಡುತ್ತಿದೆ.
ಬರ್ಲಿನ್ ಅಧಿಕಾರಿಗಳು ಶೀಘ್ರದಲ್ಲೇ ಹೊಸ ನಿಯಮ ಜಾರಿಗೊಲಿಸಲಿದ್ದಾರೆ. ಅಷ್ಟಕ್ಕೂ ಮಹಿಳಯರಿಗೆ ಟಾಪ್‌ಲೆಸ್ ಆಗಿ ಸ್ವಿಮ್ಮಿಂಗ್ ಪೂಲ್ ಪ್ರವೇಶಿಸಲು ಅನುಮತಿ ನೀಡುವ ಮಹತ್ತರ ನಿರ್ಧಾರದ ಹಿಂದೆ ಪ್ರಮುಖ ಘಟನೆಯೊಂದು ನಡೆದಿದೆ. ಇತ್ತೀಚೆಗೆ ಬರ್ಲಿನ್‌ನಲ್ಲಿ ಮಹಿಳೆ, ಈಜುಕೊಳ ಆವರಣದಲ್ಲಿ ಟಾಪ್‌ಲೆಸ್ ಆಗಿ ಸೂರ್ಯಕಿರಣಗಳ ಸ್ನಾನ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಟಾಪ್‌ಲೆಸ್ ಆಗಿ ಮನೆಕೆಲಸ ಮಾಡೋದಕ್ಕೆ ಈಕೆ ಪಡೆಯೋ ಸ್ಯಾಲರಿ ಕೇಳಿದ್ರೆ ತಲೆತಿರುಗುತ್ತೆ!
ಸಾರ್ವಜನಿಕ ಈಜುಕೊಳದಲ್ಲಿ ಟಾಪ್‌ಲೆಸ್ ಆಗಿ ಮಹಿಳೆ ಕಾಣಿಸಿಕೊಂಡ ಬೆನ್ನಲ್ಲೇ ಹಲವರು ಗರಂ ಆಗಿದ್ದರು. ಸಾರ್ವಜನನಿಕ ಸ್ಥಳದಲ್ಲಿ ಮಹಿಳೆ ಟಾಪ್‌ಲೆಸ್ ಆಗಿದ್ದಾಳೆ ಅನ್ನೋ ಆರೋಪ ಬಲವಾಗಿತ್ತು. ಆದರೆ ಮಹಿಳೆ ಈ ಕುರಿತು ಮಹಿಳೆಯರು ಪುರುಷರಷ್ಟ ಸಮಾನರು. ಪುರುಷರು ಈಜುಕೊಳದಲ್ಲಿ ಟಾಪ್‌ಲೆಸ್ ಆಗಿ ಈಜಾಡಲು, ಸನ್ ಬಾತ್ ಪಡೆಯಲು ಅರ್ಹರು ಎಂದರೆ, ಮಹಿಳೆಯರಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವಾದ ಆಲಿಸಿದ ಸೆನೆಟ್ ಒಂಬಡ್ಸ್‌ಮನ್, ಮಹಿಳೆಯರನ್ನು ಸಮಾನವಾಗಿ ಕಾಣಲು ಆದೇಶ ನೀಡಿದ್ದಾರೆ.
ಬರ್ಲಿನ್ ನಗರದಲ್ಲಿರುವ ಎಲ್ಲಾ ಸಾರ್ವಜನಿಕ ಈಜುಕೊಳದಲ್ಲಿ ಮಹಿಳೆಯರು ಟಾಪ್ ಲೆಸ್ ಆಗಿ ಪ್ರವೇಶಬಹುದು. ಹೊಸ ನೀತಿಯಲ್ಲಿ ಈ ವಿಚಾರ ಉಲ್ಲೇಖಸಲಾಗಿದೆ. ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಬರ್ಲಿನ್‌ನಲ್ಲಿ ಪುರುಷ ಹಾಗೂ ಮಹಿಳೆಯರನ್ನು ಸಮಾನವಾಗಿ ನೋಡಲಾಗುತ್ತದೆ. ಪುರುಷರಂತೆ ಮಹಿಳೆಯರಿಗೂ ಅಷ್ಟೇ ಅವಕಾಶ ನೀಡಲಾಗಿದೆ. ಹೀಗಾಗಿ ಮಹಿಳೆ ತಾನು ಟಾಪ್‌ಲೆಸ್ ಆಗಿ ಈಜುಕೊಳ ಪ್ರವೇಶಿಸಲು ಬಯಸಿದರೆ ತಪ್ಪಲ್ಲ, ಅನುಮತಿ ನೀಡಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.ಬರ್ಲಿನ್ ಮುನ್ಸಿಪಲ್ ಆಡಳಿತದಲ್ಲಿರುವ ಎಲ್ಲಾ ಈಜುಕೊಳಕ್ಕೆ ಹೊಸ ನೀತಿ ಅನ್ವಯವಾಗಲಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ.
ಅಯ್ಯೋ..! ಸರಿಯಾಗಿ ಬಟ್ಟೆ ಹಾಕಳಮ್ಮ; ಅರೆಬೆತ್ತಲಾದ ಉರ್ಫಿಗೆ ನೆಟ್ಟಿಗರ ಕ್ಲಾಸ್
ಟಾಪ್‌ಲೆಸ್ ಸ್ವಿಮ್ಮಿಂಗ್ ಹೆಸರಿನಲ್ಲಿ ಅಶ್ಲೀಲತೆ ಪ್ರದರ್ಶನವಾಗಬಾರದು. ಟಾಪ್‌ಲೆಸ್ ಸ್ವಿಮ್ಮಿಂಗ್ ಮಕ್ಕಳಲ್ಲಿ ವ್ಯತಿರಿಕ್ತ ಪರಿಣಾಮ ಬೀರದಂತಿರಬೇಕು ಅನ್ನೋ ಕೆಲ ನಿಯಮಗಳನ್ನು ರೂಪಿಸಿದೆ. ಇದೀಗ ಬರ್ಲಿನ್ ಟಾಪ್‌ಲೆಸ್ ಸ್ಪಿಮ್ಮಿಂಗ್ ಭಾರಿ ಸದ್ದು ಮಾಡುತ್ತಿದೆ. ಈ ನಿಯಮಕ್ಕೆ ಹಲವು ಪ್ರತಿಕ್ರಿಯೆ ನೀಡಿದ್ದಾರೆ. ಟಾಪ್‌ಲೆಸ್ ಸ್ವಿಮ್ಮಿಂಗ್ ನಿಯಮದ ಪರಿಣಾಣ, ಇದೀಗ ಬರ್ಲಿನ್ ಮುನ್ಸಿಪಾಲಿಟಿ ಈಜುಕೊಳದತ್ತ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.
ಬರ್ಲಿನ್ ಮಹಿಳಾ ಘಟಕಗಳು ಈ ನಿರ್ಧಾರವನ್ನು ಸ್ವಾಗತಿಸಿದೆ. ಮಹಿಳೆ ತನಗಿಷ್ಟವಿದ್ದರೆ ಟಾಪ್‌ಲೆಸ್ ಆಗಿ ಸನ್ ಬಾತ್ ಅಥವಾ ಈಜಾಡಬಹುದು. ಇದು ಮಹಿಳೆಯರ ಸ್ವಾತಂತ್ರ್ಯವಾಗಿದೆ. ಪುರುಷರು ತಮಗಿಷ್ಟ ಬಂದಂತೆ ಟಾಪ್‌ಲೆಸ್ ಆಗಿ ಸನ್ ಬಾತ್ ಪಡೆಯಲು ಅವಕಾಶವಿದ್ದರೆ ಮಹಿಳೆಯರಿಗೂ ಬೇಕು. ಇಲ್ಲಿ ಮಾನದ ಪ್ರಶ್ನೆಯಲ್ಲ, ಪುರುಷರ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಮಹಿಳಾ ಸಂಘಟನೆಗಳು ಹೇಳಿವೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.