ಹೆಣ್ಣು ಸೌಂದರ್ಯಕ್ಕೆ ಮಹತ್ವ ನೀಡ್ತಾಳೆ. ತಾನು ಧರಿಸುವ ಮಂಗಳ ಸೂತ್ರ ಎಲ್ಲರ ಗಮನ ಸೆಳೆಯಬೇಕು ಎಂದುಕೊಳ್ಳೋದು ಸಹಜ. ಹಣವಿರೋರ ಬಳಿ ದುಬಾರಿ ಬೆಲೆಯ ಮಂಗಳಸೂತ್ರವಿದ್ದೇ ಇರುತ್ತೆ. ಬಾಲಿವುಡ್ ಸ್ಟಾರ್ಸ್ ಇದ್ರಲ್ಲಿ ಹಿಂದೆ ಬಿದ್ದಿಲ್ಲ.
ಹಿಂದೂ ಧರ್ಮದಲ್ಲಿ ಮಂಗಳಸೂತ್ರಕ್ಕೆ ಮಹತ್ವದ ಸ್ಥಾನವಿದೆ. ಎರಡು ಆತ್ಮಗಳನ್ನು ಒಟ್ಟಿಗೆ ಬಂಧಿಸುವ ಸೂತ್ರವನ್ನೇ ಮಂಗಳಸೂತ್ರವೆಂದು ಕರೆಯಲಾಗುತ್ತದೆ. ಮದುವೆ ಸಂದರ್ಭದಲ್ಲಿ ಪತಿಯಾದವನು ಪತ್ನಿಯ ಕೊರಳಿಗೆ ಇದನ್ನು ಕಟ್ಟುತ್ತಾನೆ. ಮಂಗಳಸೂತ್ರ ಮುತ್ತೈದೆತನದ ಸಂಕೇತವೆಂದು ಭಾವಿಸಲಾಗುತ್ತದೆ. ಆದ್ರೆ ಈಗಿನ ದಿನಗಳಲ್ಲಿ ಮಂಗಳ ಸೂತ್ರ ಬರೀ ಸಂಪ್ರದಾಯ ಮಾತ್ರವಲ್ಲ ಫ್ಯಾಷನ್ ಕೂಡ ಹೌದು. ಹಿಂದಿನ ಕಾಲದಲ್ಲಿ ಮಹಿಳೆಯರು ಅದನ್ನು ಕೊರಳಿನಿಂದ ತೆಗೆಯುತ್ತಿರಲಿಲ್ಲ. ಈಗ ಮದುವೆಯಾದ ಎಲ್ಲ ಮಹಿಳೆಯರು ಮಂಗಳಸೂತ್ರವನ್ನು ಧರಿಸೋದಿಲ್ಲ. ಕೆಲವರು ಅಗತ್ಯ ಸಮಯದಲ್ಲಿ ಮಾತ್ರ ಅದನ್ನು ಧರಿಸ್ತಾರೆ. ಇನ್ನು ಕೆಲವರು ಅದ್ರಲ್ಲಿಯೇ ಫ್ಯಾಷನ್ ಹುಡುಕ್ತಾರೆ.
ಮಾರುಕಟ್ಟೆ (Market) ಯಲ್ಲಿ ನಾನಾ ವಿಧದ, ನಾನಾ ಡಿಸೈನ್ ಮಂಗಳಸೂತ್ರ (Mangalsutra) ವನ್ನು ನಾವು ನೋಡ್ಬಹುದು. ಕೆಲವೊಂದು ಮಂಗಳಸೂತ್ರದ ಬೆಲೆ ಜನಸಾಮಾನ್ಯರ ಕೈಗೆ ಎಟುಕುವುದಿಲ್ಲ. ಬಾಲಿವುಡ್ ಬೆಡಗಿಯರು ದುಬಾರಿ ಮಂಗಳಸೂತ್ರ ಖರೀದಿಯಲ್ಲಿ ಮುಂದಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ (Bollywood) ನಟಿಯರ ಮದುವೆ ಸಂದರ್ಭದಲ್ಲಿ ಅವರ ಅಲಂಕಾರ (Decoration) , ಅವರು ಧರಿಸಿದ್ದ ಬಟ್ಟೆ ಜೊತೆ ಮಂಗಳಸೂತ್ರದ ಮೇಲೆ ಎಲ್ಲರ ಕಣ್ಣು ಬೀಳುತ್ತದೆ. ನಾವಿಂದು ಯಾವ ನಟಿ ಬಳಿ ಎಷ್ಟು ಬೆಲೆ (Price) ಬಾಳುವ ಮಂಗಳಸೂತ್ರವಿದೆ ಎಂಬುದನ್ನು ನಿಮಗೆ ಹೇಳ್ತೇವೆ.
ಜೀಪ್ ಮೆರಿಡಿಯನ್ SUV ಖರೀದಿಸಿ, ಅದೇ ಕಲರ್ ಬಟ್ಟೆ ತೊಟ್ಟ ಉರ್ಫಿ!
ಅನುಷ್ಕಾ ಶರ್ಮಾ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ನಟನೆಯಿಂದ ಮಾತ್ರವಲ್ಲ ಫ್ಯಾಷನ್ ನಿಂದ ಕೂಡ ಜನರನ್ನು ಸೆಳೆಯುತ್ತಾರೆ. ಟೀಂ ಇಂಡಿಯಾ ಆಟಗಾರ ವಿರಾಟ್ ಕೈ ಹಿಡಿದಿರುವ ಅನುಷ್ಕಾಗೆ ಮುದ್ದಾದ ಮಗುವಿದೆ. ಅನುಷ್ಕಾ – ವಿರಾಟ್ ಕೊಹ್ಲಿ ಜೋಡಿಯನ್ನು ನೋಡಲು ಜನರು ಇಷ್ಟಪಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಮದುವೆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ಅನುಷ್ಕಾ ಶರ್ಮಾ ವಜ್ರದ ಮಂಗಳಸೂತ್ರವನ್ನು ಧರಿಸುತ್ತಾರೆ. ಮಧ್ಯದಲ್ಲಿ ಹೂವಿನ ವಿನ್ಯಾಸವಿದೆ. ಅದ್ರ ಬೆಲೆ 52 ಲಕ್ಷ ರೂಪಾಯಿ ಎನ್ನಲಾಗಿದೆ.
ದೀಪಿಕಾ ಪಡುಕೋಣೆ : ಸದ್ಯ ಪಟಾಣ್ ಚಿತ್ರದ ಮೂಲಕ ಧೂಳೆಬ್ಬಿಸಿದ ನಟಿ ದೀಪಿಕಾ ಪಡುಕೋಣೆ. ರಣಬೀರ್ ಸಿಂಗ್ ಕೈ ಹಿಡಿದಿರುವ ದೀಪಿಕಾ, ಫಿಟ್ನೆಸ್ ವಿಷ್ಯದಲ್ಲಿ ಮುಂದಿದ್ದಾರೆ. ಡಿಂಪಲ್ ಬೆಡಗಿ ಎಂದೇ ಪ್ರಸಿದ್ಧಿ ಪಡೆದಿರುವ ದೀಪಿಕಾ ಲುಕ್ ಆಗಾಗ ಚರ್ಚೆಯಾಗ್ತಿರುತ್ತದೆ. ದೀಪಿಕಾ ಪಡುಕೋಣೆ ಮಂಗಳಸೂತ್ರ ಚಿಕ್ಕದಾಗಿ ತುಂಬಾ ಆಕರ್ಷಕವಾಗಿದೆ. ಕರಿಮಣಿ ಮತ್ತು ಸಣ್ಣ ಡೈಮಂಡ್ ಇದ್ರಲ್ಲಿದೆ. ದೀಪಿಕಾ ಧರಿಸುವ ಮಂಗಳಸೂತ್ರದ ಬೆಲೆ 20 ಲಕ್ಷ ರೂಪಾಯಿಯದ್ದಾಗಿದೆ.
ಯಪ್ಪಾ..ಮಹಿಳೆಯರ ಒಳ ಉಡುಪಿನ ಜಾಹೀರಾತಿಗೆ ಪುರುಷರು!
ಪ್ರಿಯಾಂಕಾ ಚೋಪ್ರಾ : ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯಾದ ಎರಡು ವರ್ಷಗಳವರೆಗೆ ಪ್ರಿಯಾಂಕಾ ಮಂಗಳಸೂತ್ರ ಕಣ್ಣಿಗೆ ಬಿದ್ದಿರಲಿಲ್ಲ. ಎರಡು ವರ್ಷಗಳ ನಂತ್ರ ಫೋಟೋಶೂಟ್ ವೇಳೆ ಪಿಗ್ಗಿ ಮಂಗಳಸೂತ್ರವನ್ನು ಧರಿಸಿದ್ದಳು. ಸಬ್ಯಸಾಚಿ ಹೆರಿಟೇಜ್ ಆಭರಣದಿಂದ ಇದನ್ನು ಮಾಡಲ್ಪಟ್ಟಿದೆ. ಮಂಗಳಸೂತ್ರವಲ್ಲಿ ಕರಿಮಣಿ ಇದೆ. ಇದರ ಬೆಲೆ 52 ಲಕ್ಷ ರೂಪಾಯಿ ಎನ್ನಲಾಗಿದೆ.
ಕತ್ರಿನಾ ಕೈಫ್ : ಬಾಲಿವುಡ್ ನಟಿ ಕತ್ರಿನಾ ಕೈಫ್ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಅವರ ಮಂಗಳಸೂತ್ರ ಎಲ್ಲರ ಗಮನ ಸೆಳೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಕತ್ರಿನಾ ಕೈಫ್ ಅವರ ಮಂಗಳಸೂತ್ರದ ಬೆಲೆ ಸುಮಾರು ಐದು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಐಶ್ವರ್ಯ ರೈ ಬಚ್ಚನ್ : ಮದುವೆಯಾಗಿ ಅನೇಕ ವರ್ಷಗಳ ಕಳೆದ್ರೂ ಬ್ಯೂಟಿ ವಿಷ್ಯಕ್ಕೆ ಸುದ್ದಿಯಲ್ಲಿರುವ ನಟಿ ಅಂದ್ರೆ ಅದು ಐಶ್ವರ್ಯ ರೈ ಬಚ್ಚನ್. ಐಶ್ವರ್ಯ ರೈ ಬಚ್ಚನ್ ಮಂಗಳಸೂತ್ರದಲ್ಲಿ ವಜ್ರದ ಪೆಂಡೆಂಟ್ ಮತ್ತು ಕರಿಮಣಿಯಿದೆ. ಅವರ ಮಂಗಳಸೂತ್ರ 45 ಲಕ್ಷ ರೂಪಾಯಿ ವೆಚ್ಚದ್ದಾಗಿದೆ.