106ನೇ ವಯಸ್ಸಿನಲ್ಲಿ ಫ್ಲೈಟ್ ಹತ್ತಿದ ಅಜ್ಜಿ, ಶತಾಯುಷಿಯ ಕನಸಿಗೆ ರೆಕ್ಕೆ ಕಟ್ಟಿ ಹಾರಾಡಿಸಿದವರಾರು ಗೊತ್ತಾ ?

By Shobha MC  |  First Published Mar 10, 2023, 6:56 PM IST

ಕನಸುಗಳಿಗೆ ವಯಸ್ಸಿಲ್ಲ, ಮಿತಿ ಇಲ್ಲ. ಅದೇ ಕನಸನ್ನು ನನಸಾಗಿಸಲು ವಯಸ್ಸು ನೋಡಬೇಕಿಲ್ಲ. ಹೌದು106ರ ಹರೆಯದ ಅಜ್ಜಿ ಕುಟ್ಟಿಯಮ್ಮ ಇದೀಗ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ಕುಟ್ಟಿಯಮ್ಮ ವಿಮಾನ ಹತ್ತಲೂ ಒಂದು ಕಾರಣವಿದೆ. ಯುವ ಸಮೂಹ ನಾಚವಂತ ಜೀವನೋತ್ಸಾಹದ ಚಿಲುಮೆಯಾಗಿರುವ ಈ ಕುಟ್ಟಿಯಮ್ಮನ ರೋಚಕ ಸ್ಟೋರಿ ಇಲ್ಲಿದೆ.
 


ಆಕೆ ಬದುಕಿನ ಸಂಧ್ಯಾಕಾಲದಲ್ಲಿ ಬದುಕು ಸವೆಸುತ್ತಿರುವ ವಯೋವೃದ್ಧೆ. ಶತಾಯುಷಿಯಾದರೂ, ಆಕೆಯ ಚಟುವಟಿಕೆ ನಿಂತಿಲ್ಲ. ಹದಿಹರೆಯದವರೂ ನಾಚುವಂಥ ಜೀವನೋತ್ಸಾಹ. ಕಲಿಯುವ ಉತ್ಸಾಹ, ಪಾದರಸದಂತೆ ಓಡಾಡುವ ಅಪರಿಮಿತ ಉಲ್ಲಾಸ. ಆಕೆಯ ಒಂದು ಕನಸು ಮಾತ್ರ ನನಸಾಗಿಯೇ ಇರಲಿಲ್ಲ. ಅದು ಅಂತಿಂಥ ಕನಸಲ್ಲ, ಬಾನಂಗಳದಲ್ಲಿ ರೆಕ್ಕೆಬಿಚ್ಚಿ ಹಾರಾಡುವ ಉಕ್ಕಿನಹಕ್ಕಿ ವಿಮಾನ ಏರಬೇಕೆಂಬುದು..! 

ಆ ಕನಸು ಕೊನೆಗೂ ನನಸಾಗಿದ್ದು, 106ನೇ ವಯಸ್ಸಿನಲ್ಲಿ. ಇದು ಕೊಚ್ಚಿನ ಕುಟ್ಟಿಯಮ್ಮ ಕೊಂತಿ ಎಂಬ ವಯೋವದ್ಧೆಯ ಕನಸಿನ ಕಥೆ. ಕೊಚ್ಚಿ ಏರ್​​ಪೋರ್ಟ್​ನಲ್ಲಿ ದೆಹಲಿ ಫ್ಲೈಟ್ ಹತ್ತಿದಾಗ ಕುಟ್ಟಿಯಮ್ಮನ ಕಂಗಳು ಅರಳಿತ್ತು. ಹಲ್ಲಿಲ್ಲದ ಬೊಚ್ಚುಬಾಯಲಲ್ಲಿ ಮಗುವಿನಂಥಾ ನಗು. ಜೀವಮಾನದಲ್ಲಿ ಮೊದಲ ಬಾರಿಗೆ ಫ್ಲೈಟ್ ಹತ್ತಿ ಕುಳಿತ ಕುಟ್ಟಿಯಮ್ಮ, ಆಗಲೇ ಸಂಭ್ರಮದ ಆಗಸದಲ್ಲಿ ತೇಲಾಡುತ್ತಿದ್ರು. 

Tap to resize

Latest Videos

106 ವರ್ಷದ ಕುಟ್ಟಿಯಮ್ಮನ ಕನಸು ಸಾಕಾರಗೊಳಿಸಿದ್ದು ದೆಹಲಿ ಮಹಿಳಾ ಆಯೋಗ. ವುಮೆನ್ಸ್ ಡೇ ಪ್ರಯುಕ್ತ ಕೊಚ್ಚಿಯ ಕುಟ್ಟಿಯಮ್ಮನನ್ನ ಸನ್ಮಾನಿಸಲು ದೆಹಲಿಯ ಮಹಿಳಾ ಆಯೋಗ, ಕೊಚ್ಚಿಯಿಂದ ದೆಹಲಿಗೆ ಫ್ಲೈಟ್​ನಲ್ಲಿ ಕುಟ್ಟಿಯಮ್ಮನನ್ನು ಕರೆಸಿಕೊಂಡು ಸನ್ಮಾನಿಸಿತು. 

Age Just Number: 82 ದಾಟಿದರೂ ಕುಂದದ ಉತ್ಸಾಹ, ಹನುಮಾನ್ ಕತೆ ಹೇಳುವ ಅಜ್ಜಿಗೆ ಇಂಟರ್‌ನೆಟ್ ಫಿದಾ

ಮೂಲತಃ ತಿರುವಾಂಚೂರ್​​ ನಿವಾಸಿಯಾದ ಕುಟ್ಟಿಯಮ್ಮನ ಸಾಧನೆ ಎಲ್ಲರ ಹುಬ್ಬೇರಿಸುವಂಥದ್ದು. ಎರಡು ವರ್ಷದ ಹಿಂದೆ, ತಮ್ಮ 104ನೇ ವಯಸ್ಸಿನಲ್ಲಿ ಕೇರಳದ ಸಾಕ್ಷರತಾ ಮಿಷನ್​ ಭಾಗವಾದ ಸಾಕ್ಷರತಾ ಪರೀಕ್ಷೆಯಲ್ಲಿ ಕುಟ್ಟಿಯಮ್ಮ ಶೇ.89ರಷ್ಟು ಅಂಕ ಗಳಿಸಿ ಪಾಸಾಗುವ ಮೂಲಕ, ದೊಡ್ಡ ಸುದ್ದಿಯಾದ್ರು. ಕಡುಬಡತನದಲ್ಲಿ ಹುಟ್ಟಿ ಬೆಳೆದ ಕುಟ್ಟಿಯಮ್ಮ, ಅರ್ಧದಲ್ಲೇ ತಮ್ಮ ಓದು ನಿಲ್ಲಿಸಿದ್ರು. 16ನೇ ವಯಸ್ಸಿಗೆ ಮದುವೆಯಾಗ ಕುಟ್ಟಿಯಮ್ಮಗೆ ಐವರು ಮಕ್ಕಳು. ಓದಿನ ಬಗ್ಗೆ ವಿಪರೀತ ಆಸಕ್ತಿ ಹೊಂದಿದ್ದ ಕುಟ್ಟಿಯಮ್ಮ, ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶ ಪಡೆದ್ರು. ಮಲಯಾಳಂ ವರ್ಣಮಾಲೆ, ಸಾಮಾನ್ಯ ಗಣಿತದ ಜತೆಗೆ ತಮ್ಮ ವಿಳಾಸವನ್ನು ಬರೆಯುವಷ್ಟನ್ನು ಕಲಿಸಲಾಯಿತು. ಶತಾಯುಷಿ ಕುಟ್ಟಿಯಮ್ಮ, ಕಲಿಕೆಯಲ್ಲಿ ಮುಂದಿದ್ರು. ಓದುವುದನ್ನೂ ಕಲಿತ ಕುಟ್ಟಿಯಮ್ಮ, ತಪ್ಪದೇ ದಿನಪತ್ರಿಕೆ ಓದುತ್ತಿದ್ದರು. ಅದರಲ್ಲೂ ಬ್ಯುಸಿನೆಸ್​ ಪೇಜ್​, ಕೃಷಿ ಉತ್ಪನ್ನಗಳ ಬೆಲೆ ತಿಳಿದುಕೊಳ್ಳುವ ಉತ್ಸಾಹ ಹೊಂದಿದ್ರು.

Wah Beautiful... ಬಾಯಿ ಚಪ್ಪರಿಸಿಕೊಂಡು ಮೊದಲ ಬಾರಿ ಪಾಸ್ತಾ ತಿಂದ ಅಜ್ಜಿ... ವಿಡಿಯೋ ವೈರಲ್
 
ಕುಟ್ಟಿಯಮ್ಮನ ಈ ಸಾಧನೆ ಗಮನಿಸಿದ್ದ ಗಮನಿಸಿದ ದೆಹಲಿ ಮಹಿಳಾ ಆಯೋಗ, ಮಗ ಬಿಜು, ಸೊಸೆ ರಜನಿಯನ್ನು ಸಂಪರ್ಕಿಸಿ, ಕುಟ್ಟಿಯಮ್ಮರನ್ನು ಸನ್ಮಾನಿಸುವ ವಿಷಯ ತಿಳಿಸಿದ್ರು. 104ನೇ ವಯಸ್ಸಿನಲ್ಲೂ ಆರೋಗ್ಯವಾಗಿ, ಚಟುವಟಿಕೆಯಿಂದಿರುವ ಕುಟ್ಟಿಯಮ್ಮ, ಫ್ಲೈಟ್ ಏರುವ ವಿಷಯ ತಿಳಿದು ಥ್ರಿಲ್ ಆಗಿಬಿಟ್ಟಿದ್ರು. ಸಾಧಿಸುವ ಮನಸ್ಸಿದ್ದರೆ ವಯಸ್ಸೂ ಅಡ್ಡಿಯಾಗದು ಅನ್ನೋದಕ್ಕೆ ಕುಟ್ಟಿಯಮ್ಮನೇ ಸಾಕ್ಷಿ. ಫ್ಲೈಟ್​ ಏರಿದ ಕುಟ್ಟಿಯಮ್ಮನಲ್ಲಿ ಈಗ ಹೊಸ ಹೊಸ ಕನಸಿನ ರೆಕ್ಕೆಗಳು ಬಿಚ್ಚಿಕೊಳ್ಳುತ್ತಿವೆ...

click me!