ನಿದ್ರೆಗಣ್ಣಲ್ಲಿ 3 ಲಕ್ಷ ಶಾಪಿಂಗ್..! ರಾತ್ರಿ ನಿದ್ರೆ ಮಾಡೋಕೆ ಭಯಪಡುವ ಮಹಿಳೆ

By Roopa Hegde  |  First Published May 30, 2024, 4:54 PM IST

ನಿದ್ರೆಗಣ್ಣಿನಲ್ಲಿ ಜನರು ನಡೆಯೋದು, ಮಾತನಾಡೋದನ್ನು ನಾವು ನೋಡಿದ್ದೇವೆ. ಆದ್ರೆ ಶಾಪಿಂಗ್ ಮಾಡೋದು ನಿಮಗೆ ಗೊತ್ತಾ? ಈ ಮಹಿಳೆಗೆ ಇಂಥಹದ್ದೊಂದು ಖಾಯಿಲೆ ಇದೆ. ಪ್ರತಿ ದಿನ ರಾತ್ರಿ ನಿದ್ರೆ ಮಾಡೋದೆ ಈಕೆಗೆ ಕಷ್ಟವಾಗಿದೆ. 
 


ಶಾಪಿಂಗ್ ಅಂದ್ರೆ ಮಹಿಳೆ ಎನ್ನುವ ಮಾತಿದೆ. ಮಹಿಳೆಯರು ಶಾಪಿಂಗ್ ಮಾಡೋದ್ರಲ್ಲಿ ಹೆಚ್ಚಿನ ಆಸಕ್ತಿ ತೋರಿಸ್ತಾರೆ. ಎಲ್ಲೇ ಶಾಪಿಂಗ್ ಮಾರ್ಕೆಟ್ ಕಂಡ್ರೂ ಒಮ್ಮೆ ನುಗ್ಗಿ ನೋಡುವ ಪ್ರಯತ್ನ ನಡೆಸುತ್ತಾರೆ. ಈಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಜನರು ಮಧ್ಯರಾತ್ರಿಯವರೆಗೆ ಸ್ಕ್ರೋಲ್ ಮಾಡಿ ಶಾಪಿಂಗ್ ಮಾಡ್ತಿರುತ್ತಾರೆ. ಎಚ್ಚರವಿದ್ದಾಗ ವಸ್ತುಗಳ ಖರೀದಿ ಸಾಮಾನ್ಯ. ಆದ್ರೆ ಇಲ್ಲೊಬ್ಬ ಮಹಿಳೆ ನಿದ್ರೆಯಲ್ಲಿ ಶಾಪಿಂಗ್ ಮಾಡ್ತಾಳೆ. ಅದ್ರ ಈ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾತ್ರಿ ನಿದ್ರೆಗಣ್ಣಿನಲ್ಲಿ ಶಾಪಿಂಗ್ ಮಾಡುವ ಮಹಿಳೆ ಒಂದೇ ಬಾರಿ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುವನ್ನು ಖರೀದಿ ಮಾಡಿದ್ದಾಳೆ. ಎಚ್ಚರವಾದಾಗ ತಾನೇನು ಮಾಡಿದ್ದೇನೆ ಎಂಬುದು ಗೊತ್ತಾಗ್ತಿದ್ದಂತೆ ವೈದ್ಯರ ಬಳಿ ಓಡಿದ ಮಹಿಳೆಗೆ ಅಪರೂಪದ ಖಾಯಿಲೆ ಇರೋದು ಗೊತ್ತಾಗಿದೆ.  

ಎಸ್ಸೆಕ್ಸ್ ನಿವಾಸಿ ಕೆಲ್ಲಿ ನಿಪ್ಸ್ ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ. 2006ರಲ್ಲಿ ಕೆಲ್ಲಿ ನಿಪ್ಸ್ ತನ್ನ ಮೊದಲ ಮಗುವಿಗೆ ಜನ್ಮ (Birth ) ನೀಡಿದಳು. ಅಲ್ಲಿಯವರೆಗೆ ಆರೋಗ್ಯವಾಗಿದ್ದ ಮಹಿಳೆಗೆ ಆ ನಂತ್ರ ನಿದ್ರೆ (sleep) ಯಲ್ಲಿ ನಡೆಯುವ ಸಮಸ್ಯೆ ಶುರುವಾಯ್ತು. ಇದು ನಿಧಾನವಾಗಿ ಹೆಚ್ಚಾಗ್ತಾ ಹೋಯ್ತು. ಮಹಿಳೆ ನಿದ್ರೆಯಲ್ಲಿ ನಡೆಯೋದಲ್ಲದೆ ಶಾಪಿಂಗ್ (Shopping) ಮಾಡುವ ಚಟಕ್ಕೆ ಬಿದ್ದಳು. ನಿದ್ದೆಗಣ್ಣಿನಲ್ಲಿ ಶಾಪಿಂಗ್ ಮಾಡುವ ಕೆಲ್ಲಿ ನಿಪ್ಸ್ ಗೆ ತಾನೆಷ್ಟು ಶಾಪಿಂಗ್ ಮಾಡಿದ್ದೇನೆ ಎಂಬುದೇ ಗೊತ್ತಾಗೋದಿಲ್ಲ. 

Tap to resize

Latest Videos

ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!

ಒಂದು ದಿನ ರಾತ್ರಿ ಕೆಲ್ಲಿ ನಿಪ್ಸ್ ನಿದ್ದೆಗಣ್ಣಿನಲ್ಲಿ ಮೊಬೈಲ್ ಹಿಡಿದು ಶಾಪಿಂಗ್ ಸೈಟ್ ಸ್ಕ್ರೋಲ್ ಮಾಡೋಕೆ ಶುರು ಮಾಡಿದ್ದಾಳೆ. ನಂತ್ರ ಒಂದಾದ್ಮೇಲೆ ಒಂದರಂತೆ ವಸ್ತುಗಳ ಆರ್ಡರ್ ಹಾಕಿದ್ದಾಳೆ. ಬಾಸ್ಕೆಟ್ ಬಾಲ್ ಅಂಕಣ, ಒಂದಿಷ್ಟು ಸಿಹಿ ತಿಂಡಿ, ಕಲರ್ ಬುಕ್, ಪುಸ್ತಕ, ಉಪ್ಪು ಮತ್ತು ಮೆಣಸು ತುಂಬುವ ಬಾಕ್ಸ್, ವೆಂಡಿಸ್ ಹೌಸ್, ಫ್ರಿಜ್, ಟೇಬಲ್ ಸೇರಿದಂತೆ ಒಟ್ಟೂ 3000 ಪೌಂಡ್‌ ಮೌಲ್ಯದ ಅಂದ್ರೆ 3 ಲಕ್ಷದ ವಸ್ತುವನ್ನು ಖರೀದಿ ಮಾಡಿದ್ದಾಳೆ.

ಕೆಲ್ಲಿ ನಿಪ್ಸ್ ಗೆ ಈ ವಸ್ತು ಖರೀದಿ ಮಾಡಿದ್ದು ನೆನಪೇ ಇಲ್ಲ. ಬಾಸ್ಕೆಟ್ ಬಾಲ್ ಅಂಕಣ ಮನೆಗೆ ಬರ್ತಿದ್ದಂತೆ ಶಾಕ್ ಗೆ ಒಳಗಾಗಿದ್ದಾಳೆ. ಇಬೇನಲ್ಲಿ ಕೆಲ್ಲಿ ಇದನ್ನು ಆರ್ಡರ್ ಮಾಡಿದ್ದಳು. ಆಹಾರ ವಸ್ತುಗಳನ್ನು ರಿಟರ್ನ್ ಮಾಡುವ ಆಯ್ಕೆ ಇರಲಿಲ್ಲ. ಹಾಗಾಗಿ ಆಕೆ ಆಹಾರ, ವೆಂಡಿಸ್ ಹೌಸ್, ಕಲರ್ ಬುಕ್ ಇಟ್ಟುಕೊಂಡು ಮತ್ತೆಲ್ಲವನ್ನೂ ವಾಪಸ್ ಮಾಡಿದ್ದಾಳೆ.

ಇಷ್ಟೇ ಅಲ್ಲ ಕೆಲ್ಲಿ ಒಂದು ದಿನ ಮತ್ತೊಂದು ಯಡವಟ್ಟು ಮಾಡಿದ್ದಾಳೆ. ಆಕೆಗೆ ರಾತ್ರಿ ಸರ್ಕಾರ 40 ಸಾವಿರ ನೀಡಲಿದೆ ಎನ್ನುವ ಒಂದು ಮೆಸ್ಸೇಜ್ ಬಂದಿದೆ. ಅದ್ರಲ್ಲಿ ಒಂದು ಫಾರ್ಮ್ ತುಂಬುವಂತೆ ಹೇಳಲಾಗಿತ್ತು. ಅದ್ರಂತೆ ಆ ಫಾರ್ಮನ್ನು ಕೆಲ್ಲಿ ಭರ್ತಿ ಮಾಡಿದ್ದಾಳೆ. ಆದ್ರೆ ಅದು ಮೋಸಗಾರರ ಕೈ ಸೇರಿದೆ. ಕೆಲ್ಲಿ ಖಾತೆಯಿಂದ 250 ಪೌಂಡ್ ಹಣವನ್ನು ಡ್ರಾ ಮಾಡಲಾಗಿದೆ. ಬೆಳಿಗ್ಗೆ ವಿಷ್ಯ ಗೊತ್ತಾಗ್ತಿದ್ದಂತೆ ಬ್ಯಾಂಕ್ ಖಾತೆ ಲಾಕ್ ಮಾಡಿದ ಕೆಲ್ಲಿ, ಈ ಹಣವನ್ನು ವಾಪಸ್ ಪಡೆದಿದ್ದಾ. ಅನೇಕ ಬಾರಿ ಆಕೆ ಅಕೌಂಟ್ ಹ್ಯಾಕ್ ಮಾಡುವ ಪ್ರಯತ್ನ ನಡೆದಿದೆ.

ಮದ್ವೆಯಾದ ಎರಡನೇ ದಿನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ, ವರನ ಮನೆಯವರಿಗೆ ಶಾಕ್‌!

ಪ್ರತಿ ದಿನ ರಾತ್ರಿ ಇಂದು ಯಾವುದೇ ತಪ್ಪು ನಡೆಯದಿರಲಿ ಎನ್ನುತ್ತಲೇ ಕೆಲ್ಲಿ ಮಲಗುತ್ತಾಳೆ. ಲ್ಯಾಪ್ ಟಾಪ್, ಮೊಬೈಲ್ ಎಷ್ಟೇ ದೂರದಲ್ಲಿರಲಿ ರಾತ್ರಿ ಕೆಲ್ಲಿ ಅದನ್ನು ತೆಗೆದುಕೊಳ್ತಾಳೆ. ಆಕೆ ಪರೀಕ್ಷೆ ನಡೆಸಿದ ವೈದ್ಯರು, ಕೆಲ್ಲಿ ಪ್ಯಾರಾಸೋಮ್ನಿಯಾ (Parasomnia) ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎಂದಿದ್ದಾರೆ. ನಿದ್ರೆಯಲ್ಲಿ ಅವರು ಉಸಿರುಗಟ್ಟುವಿಕೆಗೆ ಒಳಗಾಗ್ತಾರೆ. ಇದ್ರಿಂದ ಭಾಗಶಃ  ಮೆದುಳು ಎಚ್ಚರಗೊಂಡಿರುತ್ತದೆ. ಇದ್ರಿಂದ ನಿದ್ರೆಯಲ್ಲೇ ಅವರು ಅನೇಕ ಕೆಲಸಗಳನ್ನು ಮಾಡ್ತಾರೆ. ಸದ್ಯ ಕೆಲ್ಲಿಗೆ ಚಿಕಿತ್ಸೆ ನಡೆಯುತ್ತಿದೆ.  

click me!